For Quick Alerts
  ALLOW NOTIFICATIONS  
  For Daily Alerts

  BBK9: ಸುದೀಪ್ ರಿಪೇರಿ ಮಾಡಿದ್ರೂ, ರಾಜಣ್ಣನ ದೂರವಿಟ್ಟ ಸದಸ್ಯರು!

  By ಎಸ್ ಸುಮಂತ್
  |

  ಕಳೆದ ವಾರ ರೂಪೇಶ್ ರಾಜಣ್ಣ ಫೇಕ್ ಅಂಡ್ ರಿಯಲ್ ಆಟದಲ್ಲಿ ನೀಡಿದ್ದ ಫೇಕ್ ಅಂಡ್ ರಿಯಲ್ ವಿಚಾರಗಳು ಮನೆಯವರ ಮನಸ್ಸನ್ನೇ ಕದಡಿಸಿತ್ತು. ಅದರಲ್ಲೂ ಒಬ್ಬೊಬ್ಬರು ಒಂದೊಂದು ರೀತಿ ಆಡೋದಕ್ಕೆ ಶುರು ಮಾಡಿದ್ದರು. ಮನೆಯವರೆಲ್ಲ ಒಂದಾಗಿ, ರಾಜಣ್ಣನನ್ನು ಮಾತ್ರ ಬೇರೆ ಮಾಡಿದ್ದರು. ಹೇಗೋ ಕಿಚ್ಚನ ಜೊತೆ ಮಾತುಕತೆಯಾದ ಮೇಲೆ ಎಲ್ಲವೂ ಸರಿಯಾಗಿತ್ತು. ಇದೀಗ ಮತ್ತೆ ರಾಜಣ್ಣನ ವಿರುದ್ಧ ಎಲ್ಲರೂ ತಿರುಗಿ ಬಿದ್ದಿದ್ದಾರೆ.

  ರಾಜಣ್ಣನ ನಡವಳಿಕೆಯಿಂದ ಮನೆ ಮಂದಿ ಬೇಸತ್ತಿರುವಂತೆ ಕಾಣುತ್ತಿದೆ. ಎಲ್ಲರೊಟ್ಟಿಗೆ ಇರುವಷ್ಟು ಆತ್ಮೀಯರಾಗಿ ಅವರೊಟ್ಟಿಗೆ ಇರುತ್ತಿಲ್ಲ. ರೂಪೇಶ್ ಶೆಟ್ಟಿ ಕೂಡ ನಿಮ್ಮನ್ನು ಮಾತನಾಡಿಸಿ ಎಲ್ಲರೂ ಶಿಕ್ಷೆ ಅನುಭವಿಸುವಂತೆ ಆಗಬಾರದು ಎಂದರು. ಎಲ್ಲರಿಗೂ ಫೇಕ್ ಕೊಟ್ಟು ರಾಜಣ್ಣ ತಾವೇ ಫೇಕ್ ರೀತಿ ವರ್ತಿಸುತ್ತಿದ್ದಾರೆ ಎಂಬ ಬೇಸರವೂ ಮನೆಯವರಲ್ಲಿದೆ.

  ಬಿಗ್ ಬಾಸ್ ಮನೆಯಲ್ಲಿ ರಾಜಣ್ಣನದ್ದು ಗೇಮ್ ಹಾವ

  ಬಿಗ್ ಬಾಸ್ ಮನೆಯಲ್ಲಿ ರಾಜಣ್ಣನದ್ದು ಗೇಮ್ ಹಾವ

  ದಿವ್ಯಾ ಉರುಡುಗ ಅವರನ್ನು ತುಂಬಾ ಅಳಿಸಿದ್ದು ಅಂದ್ರೆ ಅದು ರಾಜಣ್ಣ ಅವರೇ ಇರಬೇಕು. ಕಳೆದ ವಾರ ದಿವ್ಯಾ ಸುಮ್ಮನೆ ಇದ್ದರು ಬಿಡುತ್ತಿರಲಿಲ್ಲ. ಹಾಡಿನ ಮೂಲಕವೋ, ಮತ್ತೊಂದರ ಮೂಲಕವೋ ದಿವ್ಯಾರನ್ನು ಕೆಣಕುತ್ತಿದ್ದರು. ವಾರದ ಕತೆಯಲ್ಲಿ ಕಿಚ್ಚ ಸುದೀಪ್, ದಿವ್ಯಾ ಉರುಡುಗ ಹಾಗೂ ರಾಜಣ್ಣ ಬಳಿ ಎರಡು ಹಾಡನ್ನು ಹೇಳಿಸಿದ್ದರು. ಆಗ ಇಬ್ಬರಿಗೂ ಟಾಂಗ್ ಕೊಡುವಂತ ಸಾಲುಗಳನ್ನೇ ಹಾಕಿದ್ದರು. ಇದೀಗ ದಿವ್ಯಾ ಮತ್ತೆ ರಾಜಣ್ಣನ ವಿರುದ್ಧ ಗರಂ ಆಗಿದ್ದಾರೆ. ಅನುಪಮಾ ಜೊತೆ ಕೂತು ಸೊಪ್ಪು ಬಿಡಿಸುತ್ತಾ ರಾಜಣ್ಣನ ಬಗ್ಗೆ ಮಾತನಾಡಿದ್ದಾರೆ. "ಅವರು ಹೇಳುತ್ತಿದ್ದರು. ಬಿಡಮ್ಮ ಹೊರಗೆ ಬಂದ ಮೇಲೆ ಏನೇ ಹೆಲ್ಪ್ ಬೇಕಾದರೂ ಕೇಳಮ್ಮ. ನಂಗೆ ನಿನ್ನ ಮೇಲೆ ವೈಯಕ್ತಿಕ ದ್ವೇಷ ಏನೂ ಇಲ್ಲ ಎಂದಿದ್ರು. ಹಾಗಾದ್ರೆ ಇಲ್ಲಿರುವುದು ಬೇರೆ ರಾಜಣ್ಣನಾ? ಆಟ ಆಡುವುದಕ್ಕೆ ಮಾತ್ರ ಈ ರೀತಿ ನಡೆದುಕೊಳ್ಳುತ್ತಿದ್ದಾರಾ..? ಅಂತ ದಿವ್ಯಾ ಅನುಮಾನ ವ್ಯಕ್ತಪಡಿಸಿದ್ದಾರೆ.

  ರಾಕೇಶ್ ಅಂಡ್ ಕಾವ್ಯಾ ಮಾಡಿದ್ದೇನು?

  ರಾಕೇಶ್ ಅಂಡ್ ಕಾವ್ಯಾ ಮಾಡಿದ್ದೇನು?

  ಬಾತ್ ರೂಮಿನ ಬಳಿ ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ಅರುಣ್ ಸಾಗರ್, ಆರ್ಯವರ್ಧನ್ ಕುಳಿತು ಹರಟೆ ಹೊಡೆಯುತ್ತಿದ್ದರು. ಮೈಂಡ್ ಗೇಮ್ ಆಡುವುದಕ್ಕೆ ಅಂತ ಕಾವ್ಯಾ ಹಾಗೂ ರಾಕೇಶ್ ಬಂದಿದ್ದರು. ಈ ನಾಲ್ಕು ಜನರಿರುವಲ್ಲಿಗೆ ಬಂದರು. ಆ ವೇಳೆ ರಾಕೇಶ್, ಕಾವ್ಯಶ್ರೀಯನ್ನು ಕ್ಷಮೆ ಕೇಳುವಂತೆ ನಾಟಕವಾಡಿದರು. ನೋಡು ಕಾವ್ಯಾ ಹಿಂಗೆಲ್ಲ ಮುನಿಸಿಕೊಳ್ಳಬೇಡ. ಇಲ್ಲಿರುವವರು ಜೇಬಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಆಮೇಲೆ ನಮ್ಮಿಬ್ಬರ ಮಧ್ಯೆ ಬೇಗ ಹುಳಿ ಹಿಂಡಿ ಬಿಡುತ್ತಾರೆ ಅಂತೆಲ್ಲಾ ಮಾತಾಡಿ, ತಲೆಗೊಂದಿಷ್ಟು ಹುಳ ಬಿಟ್ಟು ಹೊರಟು ಹೋದರು.

  ರೂಪೇಶ್ ಶೆಟ್ಟಿಗೆ ಕನ್ಫ್ಯೂಷನ್

  ರೂಪೇಶ್ ಶೆಟ್ಟಿಗೆ ಕನ್ಫ್ಯೂಷನ್

  ಹೀಗೆ ಮೂವರಲ್ಲಿ ಹುಳಿ ಹಿಂಡುವವರು ಯಾರು ಎಂಬುದನ್ನು ಹೆಸರೇಳದೆ ಹೆಗಲನ್ನು ಮುಟ್ಟಿಕೊಂಡು ನೋಡಿಕೊಳ್ಳುವಂತೆ ಕಾವ್ಯಾ ಮತ್ತು ರಾಕೇಶ್ ಮಾಡಿ ಹೋದರು. ಅರುಣ್ ಸಾಗರ್ ಅದನ್ನು ಕಾಮಿಡಿಯಾಗಿ ತೆಗೆದುಕೊಂಡರು. ಆರ್ಯವರ್ಧನ್ ಅದನ್ನು ಸೀರಿಯಸ್ ಆಗಿ ತೆಗೆದುಕೊಂಡರು. ನೋಡುದ್ರಾ ನಾಮಿನೇಟ್ ಮಾಡಬಾರದು ಅಂತ ಅವಳ ಹಿಂದೆ ಹಿಂದೆ ಸುತ್ತುತ್ತಾ ಇದ್ದಾನೆ ಎಂದುಕೊಂಡರು. ರೂಪೇಶ್ ಶೆಟ್ಟಿ ಈ ಮೂವರಲ್ಲಿ ಹುಳಿ ಹಿಂಡಿದ್ಯಾರು ಅಂತ ಯೋಚಿಸುತ್ತಿದ್ದರು. ರಾಕೇಶ್ ಅಂಡ್ ಕಾವ್ಯಾ ಅಲ್ಲಿ ನಡೆದಿದ್ದನ್ನು ನೆನೆಸಿಕೊಂಡು ನಗುತ್ತಾ ಕೂತರು.

  ಬ್ಲ್ಯಾಕ್ ಕಾರ್ಪೆಟ್ ಮೇಲೆ ದೀಪಿಕಾ ನಡಿಗೆ

  ಬ್ಲ್ಯಾಕ್ ಕಾರ್ಪೆಟ್ ಮೇಲೆ ದೀಪಿಕಾ ನಡಿಗೆ

  ಈ ವಾರ ಕಾವ್ಯಶ್ರೀ ಮನೆಯ ಕ್ಯಾಪ್ಟನ್ ಆಗಿದ್ದಾರೆ. ದೀಪಿಕಾ ಅಡುಗೆ ಮಾಡುವಾಗ ಅರುಣ್ ಸಾಗರ್, ಪ್ರಶಾಂತ್, ಗೊಬ್ಬರಗಾಲ ರೇಗಿಸುತ್ತಾ ಕೂತಿದ್ದರು. ನಾನು ಸಹಾಯ ಮಾಡಲೇ ಎನ್ನುತ್ತಿದ್ದರು. ಇದನ್ನೆಲ್ಲಾ ನೋಡಿದ ಕಾವ್ಯಶ್ರೀಗೆ ಅದೇನಾಯ್ತೋ ಏನೋ, ದೀಪಿಕಾ ಈ ಕಡೆ ಬನ್ನಿ ಎಂದು ಸೌಟ್ ತಾವೇ ತೆಗೆದುಕೊಂಡರು. ದೀಪಿಕಾ ಅಲ್ಲಿಂದ ಹೊರನಡೆದಾಗ ಗ್ಯಾಂಗ್ ಕೂಡ ಅಲ್ಲಿಂದ ದೀಪಿಕಾ ಹಿಂದೆ ಹಿಂದೆಯೇ ಹೋದರು. ಡಸ್ಟ್ ಬಿನ್ ಕವರ್ ಅನ್ನೇ ಕಾರ್ಪೆಟ್ ಮಾಡಿ, ದೀಪಿಕಾರನ್ನು ನಡೆಸಿದರು. ಇದು ಕಾವ್ಯಶ್ರೀಯ ಹೊಟ್ಟೆ ಉರಿಗೆ ಕಾರಣವಾಗಿತ್ತು.

  English summary
  Bigg Boss Kannada 9 November 14th Episode Written Update About Roopesh Rajanna. Here is the details.
  Tuesday, November 15, 2022, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X