For Quick Alerts
  ALLOW NOTIFICATIONS  
  For Daily Alerts

  BBK9: ಗೊಂಬೆಗಾಗಿ ಜಗಳ: ರೂಪೇಶ್, ರಾಕೇಶ್, ಆರ್ಯವರ್ಧನ್, ಅರುಣ್ ಸಾಗರ್ ನಡುವೆ ಬೆಂಕಿ !

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ಸದಸ್ಯರು 50 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದ್ದಾರೆ. ಆದರೆ, ಮನೆಯೊಳಗಿನ ಜಗಳಗಳು ಮಾತ್ರ ಇನ್ನು ಕಡಿಮೆಯಾದಂತೆ ಕಾಣುತ್ತಿಲ್ಲ. ಮಾತು ಮಾತಿಗೂ ಜಗಳಗಳು ಕಾಣಿಸುತ್ತಿವೆ. ಯಾವುದೋ ಒಂದು ಹೊಸ ಟಾಸ್ಕ್ ನೀಡಿದರು ಟಾಸ್ಕ್ ಆಡುವಾಗಲೂ ಜಗಳ, ನಿಂತವರಲ್ಲಿಯೂ ಜಗಳವೇ ಕಾಣಿಸುತ್ತಿದೆ. ಇದೀಗ ಟಾಸ್ಕ್ ವಿಚಾರದಲ್ಲಿ ಬಿಗ್ ಬಾಸ್ ಎರಡು ಟೀಂಗಳಿಗೂ ಒಂದು ಶಿಕ್ಷೆಯನ್ನು ನೀಡಿದೆ.

  ಈ ವಾರ ಬಿಗ್ ಬಾಸ್ ಮನೆಯಲ್ಲಿ ಕಾವ್ಯಾಶ್ರೀ ಗೌಡ ಕ್ಯಾಪ್ಟನ್ ಆಗಿದ್ದು, ಸ್ವಲ್ಪ ಸೀರಿಯಸ್ ಆಗಿದ್ದಾರೆ. ಕ್ಯಾಪ್ಟನ್‌ಗಿಂತ ಮುಂಚೆ ಎಲ್ಲರ ಜೊತೆ ಬೆರೆಯುವವರೊಂದಿಗೆ ಮಾತನಾಡುತ್ತಿದ್ದರು. ಅಡುಗೆ ಕೆಲಸ, ಮನೆ ಕೆಲಸ ಎಂದರೆ ದೂರವೇ ಉಳಿಯುತ್ತಿದ್ದರು. ಆದರೆ, ಕ್ಯಾಪ್ಟನ್ ಆದ ಮೇಲೆ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಯಾರಾದ್ರೂ ಹರಟೆ ಹೊಡೆಯುತ್ತಾ ನಿಂತಿದ್ದರೆ ಅವರೇ ಹೋಗಿ ಅಡುಗೆ ಮಾಡುತ್ತಾರೆ. ಮುಖದಲ್ಲಿಯೂ ಅಷ್ಟೇ ಗಾಂಭೀರ್ಯತೆ ಎದ್ದು ಕಾಣುತ್ತಿದೆ.

  BBK9: ಸುದೀಪ್ ರಿಪೇರಿ ಮಾಡಿದ್ರೂ, ರಾಜಣ್ಣನ ದೂರವಿಟ್ಟ ಸದಸ್ಯರು!BBK9: ಸುದೀಪ್ ರಿಪೇರಿ ಮಾಡಿದ್ರೂ, ರಾಜಣ್ಣನ ದೂರವಿಟ್ಟ ಸದಸ್ಯರು!

  ಬಿಗ್ ಬಾಸ್ ಮನೆ ಈಗ ಗೊಂಬೆ ಮನೆ!

  ಬಿಗ್ ಬಾಸ್ ಮನೆ ಈಗ ಗೊಂಬೆ ಮನೆ!

  ಬಿಗ್ ಬಾಸ್ ಕಾರ್ಯಕ್ರಮವನ್ನು ಹಲವರು ಹಲವು ವಿಚಾರಕ್ಕೆ ನೋಡುತ್ತಾರೆ. ಕೆಲವೊಂದಿಷ್ಟು ಮಂದಿ ಎಂಟರ್ಟೈನ್ಮೆಂಟ್‌ಗಾಗಿ ನೋಡಿದರೆ ಇನ್ನು ಹಲವರು ಬಿಗ್ ಬಾಸ್‌ನಲ್ಲಿ ನೀಡುವಂತ ಟಾಸ್ಕ್‌ಗಳಿಗಾಗಿಯೇ ನೋಡುತ್ತಾರೆ. ಎಲ್ಲೂ ಸಿಗದ, ಯಾರಿಗೂ ನಿಲುಕದಂತ ಟಾಸ್ಕ್‌ಗಳನ್ನು ಬಿಗ್ ಬಾಸ್‌ನಲ್ಲಿ ನೀಡಲಾಗುತ್ತದೆ. ಈ ಬಾರಿಯೂ ಅಂಥದ್ದೇ ಒಂದು ಟಾಸ್ಕ್ ಅನ್ನು ನೀಡಿದ್ದಾರೆ. ಅದುವೆ ಗೊಂಬೆ ತಯಾರಿ ಮಾಡುವುದು.

  ಗೊಂಬೆಗಳ ನಡುವೆ ಬಿಗ್ ಬಾಸ್ ಸದಸ್ಯರು

  ಗೊಂಬೆಗಳ ನಡುವೆ ಬಿಗ್ ಬಾಸ್ ಸದಸ್ಯರು

  ಕ್ಯಾಪ್ಟನ್ ಆಗಿರುವ ಕಾವ್ಯಾ ಬಿಗ್ ಬಾಸ್‌ನಿಂದ ಬಂದಿರುವ ಪತ್ರವನ್ನು ಓದಿದ್ದಾರೆ. ಬಿಗ್ ಬಾಸ್ ಮನೆಯೀಗ ಟಾಯ್ಸ್ ಫ್ಯಾಕ್ಟರಿ ಆಗಿದೆ ಎಂದು ಹೇಳಿ ಏನೆಲ್ಲಾ ಮಾಡಬೇಕು ಎಂಬ ನಿಯಮಗಳನ್ನು ಹೇಳಿದ್ದಾರೆ. ಕಪ್ಪು ಪಟ್ಟಿಗೆ ಕೈ ತಾಕಿದರೆ ಬಿಗ್ ಬಾಸ್‌ನಿಂದ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಈ ಬಾರಿಯ ಟಾಸ್ಕ್‌ನಲ್ಲಿ ಅಂತಹದ್ದೇ ಘಟನೆ ನಡೆದಿದೆ. ಎರಡು ಟೀಂಗಳು ಮಾಡಿಕೊಂಡ ತಪ್ಪಿಗೆ ಒಬ್ಬೊಬ್ಬರನ್ನು ಹೊರಗಿಡಲಾಗಿದೆ.

  ಗೊಂಬೆಗಾಗಿ ನಡೆದ ಕಾಳಗ

  ಗೊಂಬೆಗಾಗಿ ನಡೆದ ಕಾಳಗ

  ಹೀಗೆ ಮನೆಯೊಳಗೆ ಗೊಂಬೆ ಮಾಡಲು ಬೇಕಾದ ಹತ್ತಿ ಸೇರಿದಂತೆ ಹಲವು ವಸ್ತುಗಳನ್ನು ಬಿಗ್ ಬಾಸ್ ನೀಡಿದ್ದರು. ಆದರೆ, ಆ ವಸ್ತುಗಳನ್ನು ಕಲೆ ಹಾಕುವಾಗ ಎಲ್ಲರೂ ರೊಚ್ಚಿಗೆದ್ದಿದ್ದರು. ಗೊಬ್ಬರಗಾಲ ಮೇಲೆ ಅನುಪಮಾ ಫುಲ್ ಗರಂ ಆಗಿದ್ದರು. ಬನ್ನಿ ಇಲ್ಲಿ ಎಲ್ಲರ ಕೂದಲನ್ನು ನಾನೇ ಹಿಡಿತೀನಿ ಎಂದರು. ಆಮೇಲೆ ಗೊಬ್ಬರ ಗಾಲ ಹತ್ತಿ ತೆಗೆದುಕೊಂಡು ಓಡುವಾಗ, ಅವರ ಹಿಂದೆ ಓಡಿದ ರೂಪೇಶ್ ಶೆಟ್ಟಿ ಗೊಬ್ಬರಗಾಲ ಕೈಯಲ್ಲಿದ್ದ ಎಲ್ಲಾ ಹತ್ತಿಯನ್ನು ಚೆಲ್ಲಾಪಿಲ್ಲಿ ಮಾಡಿದರು. ಇದನ್ನು ಕಂಡು ಸಂಬರ್ಗಿ ಹೌಹಾರಿದರು. ಯಾಕೆ ನಮ್ಮದನ್ನು ಕಿತ್ತುಕೊಂಡು ಹೋಗಿಲ್ಲವ ಎಂದು ಜಗಳವಾಡಿದರು. ಸ್ವಲ್ಪ ಸಮಯ ಅನುಪಮಾ ಮತ್ತು ಸಂಬರ್ಗಿ ನಡುವೆ ಜೋರು ಗಲಾಟೆಯೇ ನಡೆದಿದೆ.

  ಎರಡು ತಂಡದಿಂದ ಇಬ್ಬರಿಗೆ ಶಿಕ್ಷೆ

  ಎರಡು ತಂಡದಿಂದ ಇಬ್ಬರಿಗೆ ಶಿಕ್ಷೆ

  ಈ ಗೊಂಬೆ ಆಟ ಎಲ್ಲರನ್ನು ಜಗಳವಾಡುವಂತೆ ಮಾಡಿದೆ. ಗೊಂಬೆಗಳನ್ನು ಕಲೆಕ್ಟ್ ಮಾಡಿಕೊಳ್ಳಲು ಹೋದಾಗ, ಅರುಣ್ ಸಾಗರ್ ಕೈನಲ್ಲಿ ಗೊಂಬೆ ಸಿಲುಕಿತ್ತು. ಅದನ್ನು ಕಿತ್ತುಕೊಳ್ಳಲು ರೂಪೇಶ್ ರಾಜಣ್ಣ ಹರಸಾಹಸ ಪಟ್ಟರು. ರೂಪೇಶ್ ಶೆಟ್ಟಿ ಮತ್ತು ರಾಕೇಶ್ ನಡುವೆಯೂ ಗೊಂಬೆ ಕೀಳುವುದಕ್ಕೆ ಜಗಳವಾಯಿತು. "ನೀನು ಮಾಡಿದ್ದಕ್ಕೆ ತಾನೇ ನಾನು ಮಾಡಿದ್ದು ಬ್ರೋ" ಎಂದು ಇಬ್ಬರು ಜಗಳವಾಡಿದರು. ಬಳಿಕ ಮತ್ತೊಂದು ಗೊಂಬೆ ಕಾಣೆಯಾಗಿದ್ದಕ್ಕೆ ಆರ್ಯವರ್ಧನ್ ಯಾರೋ ಒಂದು ಬೊಂಬೆ ಕದ್ದಿದ್ದಾರೆ. ನಿಜವಾಗಲೂ ನೀವೆನಾ ಎಂದಾಗ ಅರುಣ್ ಸಾಗರ್, ನೀವೆ ಸುಳ್ಳು ಹೇಳುತ್ತಾ ಇರೋದು. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿದಂತೆ ಎಂದಿದ್ದಾರೆ. ಇದೆಲ್ಲಾ ಮಾತುಕತೆಗಳ ನಡುವೆ ಬಿಗ್ ಬಾಸ್ ಆದೇಶ ಬಂದಿದ್ದು, ಕಪ್ಪು ಪರದೆಯ ಹಿಂದೆ ಕೈಹಾಕಿರುವುದರಿಂದ ಎರಡು ತಂಡದಿಂದ ಒಬ್ಬೊಬ್ಬ ಸದಸ್ಯ ಆಟದಿಂದ ಹೊರಗುಳಿಯುತ್ತಾರೆ ಎಂದಿದ್ದಾರೆ.

  BBK9: ನೋಡುಗರಿಗೆ ಶಾಕ್ ಕೊಟ್ಟ ಬಿಗ್ ಬಾಸ್ : ಗುರೂಜಿ ಎಲಿಮಿನೇಷನ್..!BBK9: ನೋಡುಗರಿಗೆ ಶಾಕ್ ಕೊಟ್ಟ ಬಿಗ್ ಬಾಸ್ : ಗುರೂಜಿ ಎಲಿಮಿನೇಷನ್..!

  English summary
  Bigg Boss Kannada November 15th Episode Written Update. Here is the details about gombe game fight.
  Tuesday, November 15, 2022, 19:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X