For Quick Alerts
  ALLOW NOTIFICATIONS  
  For Daily Alerts

  BBK9: ನಾನಾ..ನೀನಾ.. : ಗೊಂಬೆ ಆಟದಿಂದ ಅಕ್ಷರಶಃ ಬಿಗ್ ಬಾಸ್ ರಣರಂಗ!

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರಿಗೆ ಒಂದು ಹೊಸ ಟಾಸ್ಕ್ ಕೊಟ್ಟಿದೆ. ಈ ಟಾಸ್ಕ್ ಬರೀ ಆಟವಲ್ಲ ತಮ್ಮ ತಮ್ಮ ನಡವಳಿಕೆಯ ಪ್ರದರ್ಶನವನ್ನು ತೋರುತ್ತಿದೆ. ಆಟ ಎಂಬ ಕಾರಣಕ್ಕೆ ಮನುಷ್ಯತ್ವವನ್ನು ಮರೆತು ಆಡುತ್ತಿರುವಂತೆ ಕಾಣುತ್ತಿದ್ದಾರೆ.

  ಆಟ ಹೋಗಿ ಈಗ ದ್ವೇಷಕ್ಕೆ ತಿರುಗುತ್ತಾ ಇದೆ. ನಾನಾ..ನೀನಾ ಮುಂದಿನ ಪಂದ್ಯದಲ್ಲಿ ನೋಡಿಯೇ ಬಿಡೋಣಾ ಎನ್ನುವಷ್ಟರ ಮಟ್ಟಿಗೆ ಆಟ ಉಗ್ರ ಸ್ವರೂಪವನ್ನು ಪಡೆದುಕೊಂಡಿದೆ. ಹೀಗಾಗಿ ಬಿಗ್‌ ಬಾಸ್‌ನಲ್ಲಿ ಬಿಸಿ ಬಿಸಿ ವಾತಾರವಣವಿದೆ.

  BBK9: ಸುದೀಪ್ ರಿಪೇರಿ ಮಾಡಿದ್ರೂ, ರಾಜಣ್ಣನ ದೂರವಿಟ್ಟ ಸದಸ್ಯರು!BBK9: ಸುದೀಪ್ ರಿಪೇರಿ ಮಾಡಿದ್ರೂ, ರಾಜಣ್ಣನ ದೂರವಿಟ್ಟ ಸದಸ್ಯರು!

  ಗೊಂಬೆಗಳ ಆಟಕ್ಕಾಗಿ ಎರಡು ಟೀಂಗಳಾಗಿ ಮಾಡಲಾಗಿದೆ. ಒಂದು ಟೀಂನಲ್ಲಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ಅರುಣ್ ಸಾಗರ್, ದೀಪಿಕಾ ದಾಸ್, ಗೊಬ್ಬರಗಾಲ, ದಿವ್ಯಾ, ಅರುಣ್ ಸಾಗರ್ ಇದ್ರೆ, ಮತ್ತೊಂದು ಟೀಂನಲ್ಲಿ ಅಮೂಲ್ಯ, ಅನುಪಮಾ, ಪ್ರಶಾಂತ್ ಸಂಬರ್ಗಿ, ರಾಕೇಶ್, ಕಾವ್ಯಾ, ಆರ್ಯವರ್ಧನ್ ಇದ್ದಾರೆ. ಈ ಎಲ್ಲರೂ ಗೊಂಬೆ ಕಲೆಕ್ಟ್ ಮಾಡುವಾಗ ವಿಚಿತ್ರವಾಗಿಯೇ ಆಡಿದ್ದಾರೆ.

  ಗೊಂಬೆಗಳಿಗಾಗಿ ಕಿತ್ತಾಡಿದ ಮನೆ ಮಂದಿ

  ಗೊಂಬೆಗಳಿಗಾಗಿ ಕಿತ್ತಾಡಿದ ಮನೆ ಮಂದಿ

  ಬಿಗ್ ಬಾಸ್ ಒಂದು ಮಷಿನ್ ಇಟ್ಟು ಅದರಲ್ಲಿ ಗೊಂಬೆ ಕಳುಹಿಸುತ್ತಿದ್ದರು. ಗೊಂಬೆ ಮಷಿನ್ ನಿಂದ ಹೊರಗೆ ಬಂದ ಮೇಲಷ್ಟೇ ಗೊಂಬೆಗಳನ್ನು ಆ ಕಡೆ ಒಂದು ಟೀಂ ಈ ಕಡೆ ಒಂದು ಟೀಂ ಕಲೆಕ್ಟ್ ಮಾಡಿಕೊಳ್ಳಬೇಕಿತ್ತು. ಆದರೆ, ಮಷಿನ್ ಒಳಗಡೆಯೇ ನುಗ್ಗುತ್ತಿದ್ದರು. ಆಗ ಬಿಗ್ ಬಾಸ್ ಗೊಂಬೆಗಳನ್ನು ನೀಡುವುದನ್ನೇ ಸ್ಟಾಪ್ ಮಾಡಿ ಬಿಡುತ್ತಿದ್ದರು. ಪದೇ ಪದೆ ಅದೇ ರೀತಿ ಆಗುತ್ತಿದ್ದಕ್ಕೆ ಅಮೂಲ್ಯ ಒಂದು ಐಡಿಯಾ ಕೊಟ್ಟಿದ್ದಾರೆ.

  ಗೊಬ್ಬರಗಾಲ ನಡೆಗೆ ಆಕ್ರೋಶ

  ಗೊಬ್ಬರಗಾಲ ನಡೆಗೆ ಆಕ್ರೋಶ


  ಯಾರೊಬ್ಬರು ಒಳಗೆ ತಲೆ ಹಾಕುವಂತಿಲ್ಲ. ಗೊಂಬೆ ಹೊರಗೆ ಬಂದ ಮೇಲೆ ನಮಗೆ ಸೇರುತ್ತೋ, ನಿಮಗೆ ಸೇರುತ್ತೋ ಆಗ ತೆಗೆದುಕೊಳ್ಳೋಣಾ ಅಂತ ಅಮೂಲ್ಯ ಸಲಹೆ ನೀಡಿದರು. ಓಕೆ ಆ ಕಡೆ ಟೀಂನವರಿಗೂ ಆ ಐಡಿಯಾ ಇಷ್ಟವಾಯಿತು. ಹೀಗಾಗಿ ಎಲ್ಲರೂ ಸಮಾಧಾನವಾಗಿ ಗೊಂಬೆಗಳನ್ನು ಆಯ್ದುಕೊಳ್ಳುವಾಗ, ಮರೂನ್ ಕಲರ್ ಬಣ್ಣದ ಟೀಂನ ಒಂದು ಗೊಂಬೆ ಹಸಿರು ಬಣ್ಣದ ಬಟ್ಟೆಯವರ ಕಡೆಗೆ ಬಿದ್ದಿತ್ತು. ಅದನ್ನು ತೆಗೆದುಕೊಂಡು ಬರಲು ಗೊಬ್ಬರಗಾಲ ಹೋದಾಗ ಅನುಪಮಾ ಬಳಿ ಗೊಂಬೆ ಕಿತ್ತುಕೊಳ್ಳುವಾಗ, ತಲೆ ಕೂದಲಿಗೆ ಕೈ ಹಾಕಿದ್ದಾರೆ. ಅತ್ತ ಗೊಂಬೆ ತೆಗೆಯಲು ಮುಂದೆ ನಿಂತಿದ್ದ ಅಮೂಲ್ಯ ಅವರ ಕೈಯ್ಯನ್ನು ನುಲುಚಿದ್ದಾರೆ.

  ನಾನಾ..ನೀನಾ ಎಂದ ಬಿಗ್ ಬಾಸ್ ಸ್ಪರ್ಧಿಗಳು

  ನಾನಾ..ನೀನಾ ಎಂದ ಬಿಗ್ ಬಾಸ್ ಸ್ಪರ್ಧಿಗಳು

  ಹೀಗೆ ಗೊಂಬೆಗಳನ್ನೆಲ್ಲಾ ತೆಗೆದುಕೊಂಡಿದ್ದು ಆಯಿತು. ಆದರೆ, ಅಲ್ಲಿ ಅನುಪಮಾ ಹಾಗೂ ಅಮೂಲ್ಯ ತಲೆಗೂದಲಿಗೆ ಕೈ ಹಾಕಿದ್ದಕ್ಕೆ ಬೇಸರ ಮಾಡಿಕೊಂಡಿದ್ದರು. ಇದೇನು ಆಟನಾ ಅಥವಾ ಮತ್ತೇನು ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿತ್ತು. ಅನುಪಮಾ ಕೋಪಗೊಂಡಿದ್ದರು. "ಗೊಂಬೆಗೋಸ್ಕರ ನನ್ನ ತಲೆಕೂದಲನ್ನೇ ಎಳೆಯುತ್ತೀಯಾ ಅಲ್ವಾ ಗೊಬ್ಬರಗಾಲ. ನಾಳೆಯಿಂದ ನಾನು ನೋಡಿಕೊಳ್ಳುತ್ತೀನಿ" ಅಂತ ಅನುಪಮಾ ಹೇಳಿದರೆ, ಇತ್ತ ಅಮೂಲ್ಯ ಕೂಡ ಚಾಲೆಂಜ್ ಹಾಕಿದರು. "ನನ್ನ ಕೈಯನ್ನು ನುಲುಚಿ, ಜಡೆಯನ್ನು ಎಳೆಯುತ್ತೀರಾ. ನಾಳೆಯಿಂದ ನಾನು ಕೂಡ ಯಾರ ಮುಖ ಮೂತಿ ನೋಡಲ್ಲ. ನಾನಾ.. ನೀವಾ ನೋಡೇ ಬಿಡೋಣಾ" ಎಂದು ಚಾಲೆಂಜ್ ಹಾಕಿದರು.

  ರಾಜಣ್ಣನಿಂದ ಮತ್ತೊಂದು ಎಡವಟ್ಟು

  ರಾಜಣ್ಣನಿಂದ ಮತ್ತೊಂದು ಎಡವಟ್ಟು

  ಮೊದಲೇ ಗೊಂಬೆಗಳ ವಿಚಾರಕ್ಕೆ ಜಗಳವಾಗುತ್ತಿದೆ. ಇದರ ನಡುವೆ ರೂಪೇಶ್ ರಾಜಣ್ಣ, ಆ ಕಡೆ ಟೀಂನ ಗೊಂಬೆಯನ್ನು ಎತ್ತಿಕೊಂಡು ಓಡಿ ಬಂದಿದ್ದಾರೆ. ಬಳಿಕ ಆ ಕಡೆ ಟೀಂನವರು ಓಡಿ ಬಂದು ಇಲ್ಲಿನ ಗೊಂಬೆಗಳನ್ನು ತೆಗೆದುಕೊಂಡಿದ್ದಾರೆ. ಈ ಗುದ್ದಾಟದಲ್ಲಿ ಯಾರಿಗೆ ಹೇಗೆ ಬೇಕಾದರೂ ಪೆಟ್ಟಾಗಬಹುದು. ಅಷ್ಟು ಕೆಟ್ಟದಾಗಿ ಬಡಿದಾಡಿಕೊಂಡಿದ್ದಾರೆ. ಒಬ್ಬರ ಮೇಲೋಬ್ಬರು ಬಿದ್ದಿದ್ದಾರೆ. ಕೈಯ್ಯಲ್ಲಿದ್ದಿದ್ದು ಕಿತ್ತುಕೊಂಡಿದ್ದಾರೆ. ಈ ಗಲಾಟೆಯ ನಡುವೆ ದೀಪಿಕಾ ದಾಸ್ ಸ್ವಲ್ಪ ತಾಳ್ಮೆ ತಂದುಕೊಂಡಿದ್ದಾರೆ. ಎಲ್ಲರಿಂದ ಜಗಳ ಬಿಡಿಸಿ, ಸಮಾಧಾನ ಮಾಡಿದ್ದಾರೆ. ರೂಪೇಶ್ ರಾಜಣ್ಣನದ್ದೇ ತಪ್ಪು ಎಂದು ತಿಳಿಸಿ ಹೇಳಿದ್ದಾರೆ.

  English summary
  Bigg Boss Kannada 9 November 15th Episode Written Update About Gombe Fight. Here is the details.
  Tuesday, November 15, 2022, 23:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X