For Quick Alerts
  ALLOW NOTIFICATIONS  
  For Daily Alerts

  BBK 9: ಕಾವ್ಯಶ್ರೀ ಕ್ಯಾಪ್ಟನ್ ಆದ್ಮೇಲೆ ಮನೆ ಮಂದಿಗೆಲ್ಲಾ ತಡೆದುಕೊಳ್ಳೋಕೆ ಆಗದಷ್ಟು ಕಿರಿಕಿರಿ!

  By ಎಸ್ ಸುಮಂತ್
  |

  ಈ ವಾರ ಬಿಗ್ ಬಾಸ್ ಮನೆಯಲ್ಲಿ ವಾತಾವರಣವೇ ಬದಲಾಗಿದೆ. ಇಷ್ಟು ವಾರಗಳ ಕಾಲವೂ ಮನೆಯಲ್ಲಿ ವಾರಕ್ಕೊಮ್ಮೆ ಒಬ್ಬೊಬ್ಬರು ಕ್ಯಾಪ್ಟನ್ ಆಗುತ್ತಿದ್ದರು. ಕ್ಯಾಪ್ಟನ್ ಆದವರು ಮನೆಯೊಳಗಿನ ಕೆಲವು ವಿಚಾರಗಳನ್ನು ಬದಲಾಯಿಸುತ್ತಾರೆ. ಆಟದಲ್ಲಿ ಎಲ್ಲರಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತಾರೆ. ಆದ್ರೆ ಈ ವಾರ ನಡೆಯುತ್ತಿರುವುದೇ ಬೇರೆ. ಕ್ಯಾಪ್ಟನ್ ಸ್ಥಾನದಲ್ಲಿ ನಿಂತಿರುವ ಕಾವ್ಯ, ತನ್ನ ಅಧಿಕಾರವನ್ನು ಚಲಾಯಿಸಲು ಮುಂದಾಗಿದ್ದಾರೆ.

  ಈ ವಾರ ಕಾವ್ಯಶ್ರೀ ಕ್ಯಾಪ್ಟನ್ ಸ್ಥಾನದಲ್ಲಿದ್ದಾರೆ. ಆದ್ರೆ ಅವರು ಯಾಕಾದ್ರೂ ಕ್ಯಾಪ್ಟನ್ ಆದರೋ ಎಂದು ಮನೆ ಮಂದಿಗೆ ಎನಿಸಬೇಕು ಅಷ್ಟರಮಟ್ಟಿಗೆ ಕಾವ್ಯ ನಡವಳಿಕೆಯಲ್ಲಿ ಬದಲಾವಣೆಯಾಗಿದೆ. ಇಂದು ಮನೆ ಮಂದಿಯನ್ನು ಇಲ್ಲಿ ನಿಲ್ಲಬೇಡಿ, ಅಲ್ಲಿ ನಿಲ್ಲಬೇಡಿ ಅಂತ ಹೇಳಿ ಕೋಪದ ಕಣ್ಣಿಗೆ ಗುರಿಯಾಗಿದ್ದಾರೆ.

  BBK9: ಸುದೀಪ್ ರಿಪೇರಿ ಮಾಡಿದ್ರೂ, ರಾಜಣ್ಣನ ದೂರವಿಟ್ಟ ಸದಸ್ಯರು!BBK9: ಸುದೀಪ್ ರಿಪೇರಿ ಮಾಡಿದ್ರೂ, ರಾಜಣ್ಣನ ದೂರವಿಟ್ಟ ಸದಸ್ಯರು!

  ಕ್ಯಾಪ್ಟನ್ ಆದ ಮೇಲೆ ಬದಲಾದರಾ ಕಾವ್ಯಾ..?

  ಕ್ಯಾಪ್ಟನ್ ಆದ ಮೇಲೆ ಬದಲಾದರಾ ಕಾವ್ಯಾ..?

  ಕಾವ್ಯಶ್ರೀ ಕ್ಯಾಪ್ಟನ್ ಆದ ಮೇಲೆ ತಮ್ಮ ನಡವಳಿಕೆಯಲ್ಲಿ ಸಂಪೂರ್ಣವಾಗಿ ಬದಲಾವಣೆ ಮಾಡಿಕೊಂಡಿದ್ದಾರೆ. ಅದು ನೋಡುಗರಿಗೂ ಕಾಣುತ್ತಿದೆ. ಕ್ಯಾಪ್ಟನ್ ಆಗುವುದಕ್ಕೂ ಮುನ್ನ, ಎಲ್ಲರೊಟ್ಟಿಗೂ ನಗು ನಗುತ್ತಾ ಮಾತನಾಡುತ್ತಿದ್ದರು. ಈಗ ಅಷ್ಟೊಂದು ಸಲಿಗೆಯನ್ನು ಯಾರಿಗೂ ನೀಡಿಲ್ಲ. ಕ್ಯಾಪ್ಟನ್ ಆದ ಮೊದಲ ದಿನವೇ ತಾನು ಹಾಕಿದ್ದ ಡ್ರೆಸ್ ಹಿಡಿದು ಬರಲು ರಾಕಿಗೆ ಹೇಳಿದ್ದರು. ಇದು ಮನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು. ಇಷ್ಟು ದಿನ ಅಡುಗೆ ಮನೆಯೆಂದರೆ ದೂರ ಓಡುವ ಕಾವ್ಯಾ, ಕ್ಯಾಪ್ಟನ್ ಆದ ಮೇಲೆ ಅಂದೊಂದು ದಿನ ಮನೆ ಬಾಯ್ಸ್ ಎಲ್ಲಾ ದೀಪಿಕಾ ಅವರನ್ನು ರೇಗಿಸುತ್ತಾ ಇದ್ದರು. ಇದನ್ನು ಸಹಿಸದ ಕಾವ್ಯಾ ತಾವೇ ಅಡುಗೆ ಮಾಡಲು ನಿಂತರು. ಇವತ್ತು ನಡೆದುಕೊಂಡ ರೀತಿ ಇದೆಲ್ಲದಕ್ಕೂ ಮೀರಿದ್ದು.

  ಕಾವ್ಯಾ ನಡವಳಿಕೆಗೆ ಬೇಸತ್ತ ಮನೆ ಮಂದಿ..!

  ಕಾವ್ಯಾ ನಡವಳಿಕೆಗೆ ಬೇಸತ್ತ ಮನೆ ಮಂದಿ..!

  ಕಾವ್ಯಾ ಹೇಳುವ ರೀತಿಯಲ್ಲೂ ಬದಲಾವಣೆಯಾಗಿದೆ. ಬಿಗ್ ಬಾಸ್ ನಿನ್ನೆಯಿಂದ ಮನೆಯಲ್ಲಿ ಜಗಳ ಶುರುವಾಗುವಂತ ಗೇಮ್‌ಗಳನ್ನೇ ನೀಡುತ್ತಿದೆ. ಇಂದು ಕೂಡ ಅಂಥದ್ದೇ ಗೇಮ್ ಒಂದನ್ನು ನೀಡಿದೆ. ಅರುಣ್ ಸಾಗರ್, ರೂಪೇಶ್ ರಾಜಣ್ಣ, ರಾಕೇಶ್, ಅಮೂಲ್ಯ, ಗೊಬ್ಬರಗಾಲ ಇಷ್ಟು ಜನ ಸೇರಿ ಬಾಗಿನಲ್ಲಿ ಕಾಯುತ್ತಿದ್ದರು. ಇದನ್ನು ಕಂಡ ಕಾವ್ಯಾಶ್ರೀ, ಎಲ್ಲರೂ ಲೀವಿಂಗ್ ಏರಿಯಾಗೆ ಬನ್ನಿ ಎಂದಿದ್ದಾರೆ. ಡೋರ್ ಹಾಳು ಮಾಡಬೇಡಿ ಎಂದು ವಾರ್ನಿಂಗ್ ಮಾಡಿದ್ದಾರೆ.

  ಕಾವ್ಯಶ್ರೀ ಹೇಳಿಕೆಗೆ ರೊಚ್ಚಿಗೆದ್ದ ಮನೆ ಮಂದಿ..!

  ಕಾವ್ಯಶ್ರೀ ಹೇಳಿಕೆಗೆ ರೊಚ್ಚಿಗೆದ್ದ ಮನೆ ಮಂದಿ..!

  ಇಷ್ಟು ದಿನ ಕ್ಯಾಪ್ಟನ್ ಆದವರು, ಏನಾದರೂ ಬಿಗ್ ಬಾಸ್ ನಿಂದ ಸಂದೇಶ ಬಂದರೆ ಅಥವಾ ಆಟವಾಡುವುದಕ್ಕೆ ನಿಯಮಗಳನ್ನು ಹೇಳುವಾಗ ಲೀವಿಂಗ್ ಏರಿಯಾದಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ಕ್ಯಾಪ್ಟನ್ ಕೂಡ ಈ ಬಗ್ಗೆ ಹೇಳುತ್ತಾ ಇರಲಿಲ್ಲ. ಬದಲಿಗೆ ಎಲ್ಲರೂ ಅವರವರ ಕರ್ತವ್ಯದಂತೆ ಬಂದು ಕುಳಿತುಕೊಳ್ಳುತ್ತಿದ್ದರು. ಆದರೆ ಈ ಬಾರಿ ಆ ರೀತಿ ನಡೆಯುತ್ತಿಲ್ಲ. ಕಾವ್ಯಶ್ರೀ ಆರ್ಡರ್ ಮಾಡಲು ಯತ್ನಿಸುತ್ತಿದ್ದಾರೆ. ಅವರ ಬಳಸೋ ಪದಗಳೂ ಕೂಡ ಕೇಳುಗರಿಗೆ ಕೋಪ ಬರುವಂತೆ ಮಾಡಿದೆ. "ಹೇ ಎಲ್ಲಾ ಬಂದು ಲೀವಿಂಗ್ ಏರಿಯಾದಲ್ಲಿ ಬಂದು ಕುಳಿತುಕೊಳ್ಳಿ" ಎಂದ ಮಾತು ರೂಪೇಶ್ ರಾಜಣ್ಣ ಅವರನ್ನು ಕೆರಳಿಸಿದೆ.

  'ಈದುಕಾ' ಅಂದ್ರೆ ಏನು ಅಂತಿದ್ದಾರೆ ನೆಟ್ಟಿಗರು

  'ಈದುಕಾ' ಅಂದ್ರೆ ಏನು ಅಂತಿದ್ದಾರೆ ನೆಟ್ಟಿಗರು

  ಲೀವಿಂಗ್ ಏರಿಯಾದಲ್ಲಿ ಬಂದು ಕುಳಿತುಕೊಳ್ಳಿ ಎನ್ನುತ್ತಿದ್ದಂತೆ ಅಲ್ಲಿದ್ದವರೆಲ್ಲಾ ಅದನ್ನು ನಿರಾಕರಿಸಿದ್ದಾರೆ. ಅಲ್ಲಿ ಕೂತುಕೊಳ್ಳಿ ಇಲ್ಲಿ ಕೂತುಕೊಳ್ಳಿ ಎಂದು ನೀವೂ ಹೇಳುವ ಹಾಗಿಲ್ಲ ಎಂದು ರಾಜಣ್ಣ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕಾವ್ಯಾ, ಬಾಗಿಲ ಮೇಲೆ ಬೀಳಬೇಡಿ ಸರ್ ಹಾಳಾಗುತ್ತೆ. ನಾನು ಬಾಗಿಲ ಮೇಲೆ ಬೀಳಬೇಡಿ ಎಂದು ಹೇಳಿದ್ದಷ್ಟೇ ಎಂದು ವಾಯ್ಸ್ ಜೋರು ಮಾಡಿದ್ದಾರೆ. ತಕ್ಷಣ ಮಾತನಾಡಿದ ಅರುಣ್ ಸಾಗರ್, ಎಲ್ಲಿ ನಿಂತುಕೊಳ್ಳಬೇಕು, ಎಲ್ಲಿ ಕುಳಿತುಕೊಳ್ಳಬೇಕು ಎಂದು ಕ್ಯಾಪ್ಟನ್ ಹೇಳುವಂಗಿಲ್ಲ ಎಂದಿದ್ದಾರೆ. ಆಗ ಕಾವ್ಯಾ ಮತ್ತಷ್ಟು ರೊಚ್ಚಿಗೆದ್ದಿದ್ದು, "ನಿಮಗೆ ಹೇಳಿದ್ನಾ, ಎಲ್ಲದೂ ಸರಿ ಎನಿಸಿದರೆ ನೀವೂ ಹಾಗೇ ಮಾಡಿ. ಎಲ್ಲದಕ್ಕೂ ಯಾಕೆ ಯಾಕೆ ಅಂತ ಪ್ರಶ್ನೆ ಮಾಡುತ್ತಾರೆ" ಎಂದು ಕಾವ್ಯ ಕಿರುಚಾಡಿದ್ದಾರೆ. ಆಗ ಅರುಣ್ ಸಾಗರ್, ಏನು ಮಾಡಿದ್ದೀವಿ ಅಂತ ಹೇಳುವುದಕ್ಕೆ ಎಷ್ಟು ದೊಡ್ಡ ವಾಯ್ಸ್ ಬೇಕು ಅಂತ ನನಗೆ ಅರ್ಥವಾಗುತ್ತಿಲ್ಲ ಎಂದಾಗ ಕಾವ್ಯಾ, ಕ್ಯಾಪ್ಟನ್ ಆಗಿ ಏನು ಮಾತನಾಡುವಾಗಿಲ್ಲ ಅಂದ್ಮೇಲೆ ನಾನೇನ್ 'ಈದುಕಾ' ಕ್ಯಾಪ್ಟನ್ ಆಗಿದ್ದೀನಿ ಎಂದಿದ್ದಾರೆ. ಇದೀಗ ನೆಟ್ಟಿಗರು ಏನದು 'ಈದುಕಾ' ಅಂದ್ರೆ ಏನು ಅಂತ ಪ್ರಶ್ನೆ ಮಾಡುತ್ತಿದ್ದಾರೆ.

  BBK9: ಬಿಗ್ ಬಾಸ್ ಫೈನಲ್‌ವರೆಗೂ ಇರ್ತಾರಂತೆ ಆರ್ಯವರ್ಧನ್: ಕಿಚ್ಚ ಹೇಳಿದ್ದೇನು?BBK9: ಬಿಗ್ ಬಾಸ್ ಫೈನಲ್‌ವರೆಗೂ ಇರ್ತಾರಂತೆ ಆರ್ಯವರ್ಧನ್: ಕಿಚ್ಚ ಹೇಳಿದ್ದೇನು?

  English summary
  Bigg Boss Kannada 9 November 16th Episode Written Update About Kavyashree. Here is the details.
  Wednesday, November 16, 2022, 18:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X