For Quick Alerts
  ALLOW NOTIFICATIONS  
  For Daily Alerts

  BBK 9: ಬಿಗ್ ಬಾಸ್ ಮನೆಯೊಳಗೆ ಕೈ ಕೈ ಮಿಲಾಯಿಸೋದಲ್ಲ.. ಹಾಕಿದ ಬಟ್ಟೆ ಹರಿಯುವಷ್ಟು ಜಗಳ!

  By ಎಸ್ ಸುಮಂತ್
  |

  ಬಿಗ್ ಬಾಸ್ ನೋಡುವುದು ಒಂದು ಮನರಂಜನೆಗಾಗಿ. ಆದರೆ, ನೋಡುಗರಲ್ಲಿ ಎದೆ ಝಲ್ ಎನಿಸುವಷ್ಟು ಭೀಕರವಾಗಿ ಆಟವಾಡುತ್ತಿದ್ದಾರೆ ಮನೆ ಮಂದಿ. ಅವರವರ ಮನೆಯವರೇ ನೋಡಿದರು ಇವರು ನಮ್ಮ ಮನೆ ಮಕ್ಕಳಾ ಎನಿಸಬೇಕು. ಅಷ್ಟು ರೌದ್ರವತಾರ ತಾಳಿದ್ದಾರೆ. ನೋಡುಗರಿಗಂತು ಕಂಪ್ಲೀಟ್ ಶಾಕ್ ಆಗಿದೆ.

  ಬಿಗ್ ಬಾಸ್ ಟಾಯ್ ಫ್ಯಾಕ್ಟರಿಯನ್ನು ಅದ್ಯಾಕೋ ಇನ್ನು ತೆಗೆಯುತ್ತಿಲ್ಲ. ಓಟಿಟಿ ಬಿಗ್ ಬಾಸ್ ಎರಡು ದಿನಗಳ ಕಾಲ ಒಂದೇ ವಿಚಾರಕ್ಕೆ ಮನೆ ಮಂದಿ ಜಗಳವಾಡಿಕೊಂಡಿದ್ದರು. ಇದೀಗ ಟಾಯ್ ಫ್ಯಾಕ್ಟರಿ ಗೇಮ್ ಕೂಡ ದಿನಗಟ್ಟಲೆ ನಡೆಯುತ್ತಿದೆ. ಅದು ನಿನ್ನೆ (ನವೆಂಬರ್ 15) ಶುರುವಾಗಿರುವುದು ಇಂದಿಗೂ ನಿಂತಿಲ್ಲ. ಜೊತೆಗೆ ದೇಹಕ್ಕೆ ಆಗುತ್ತಿರುವ ತೊಂದರೆಯೂ ಸರಿಯಾಗುತ್ತಿಲ್ಲ.

  ಗುರೂಜಿ ಸಿಕ್ಕಾಪಟ್ಟೆ ರಫ್

  ಗುರೂಜಿ ಸಿಕ್ಕಾಪಟ್ಟೆ ರಫ್

  ಈ ಗೊಂಬೆಗಳ ಕಲೆಕ್ಷನ್ ಆಟವನ್ನು ನಿನ್ನೆಯಿಂದಾನೂ ಆಡುತ್ತಲೇ ಇದ್ದಾರೆ. ಆದರೆ, ಜಗಳ ಮಾತ್ರ ನಿಲ್ಲುತ್ತಿಲ್ಲ. ನಿನ್ನೆಯೇ ಸಮಧಾನದಿಂದ ಆಡೋಣಾ ಅಂತ ತೀರ್ಮಾನ ಮಾಡಲಾಗಿತ್ತು. ಆ ಕ್ಷಣಕ್ಕೆ ಓಕೆ ಓಕೆ ಅಂತಾರೆ ಮತ್ತೆ ಗೊಂಬೆಗಳು ಬಂದ ಕೂಡಲೇ ಒಳಕ್ಕೆ ತಲೆ ಹಾಕಿ ಬಿಡುತ್ತಾರೆ. ಇದು ದೊಡ್ಡ ಸಮಸ್ಯೆಯಾಗಿದೆ. ಆರ್ಯವರ್ಧನ್ ಗುರೂಜಿ ಸ್ವಲ್ಪ ದಪ್ಪ ಇರುವ ಕಾರಣ, ಎಲ್ಲರನ್ನು ತಳ್ಳುತ್ತಿದ್ದಾರೆ. ಇದು ಅಲ್ಲಿಯೇ ನಿಂತಿರುವ ಹೆಣ್ಣು ಮಕ್ಕಳಿಗೂ ತೊಂದರೆಯಾಗುತ್ತಿದೆ. ಗೊಬ್ಬರಗಾಲ, ರಾಕೇಶ್, ರೂಪೇಶ್, ಅರುಣ್ ಸಾಗರ್ ಎಲ್ಲರೂ ಗುರೂಜಿಗೆ ಈ ರೀತಿ ನಡೆದುಕೊಳ್ಳಬೇಡಿ ಎಂದೇ ಹೇಳುತ್ತಿದ್ದಾರೆ.

  ಧ್ವನಿ ಏರಿಸಿದ ರಾಜಣ್ಣ ಅಂಡ್ ರಾಕೇಶ್

  ಧ್ವನಿ ಏರಿಸಿದ ರಾಜಣ್ಣ ಅಂಡ್ ರಾಕೇಶ್

  ರಾಜಣ್ಣ ಮತ್ತು ರಾಕೇಶ್‌ಗೆ ಹಲವು ದಿನಗಳಿಂದ ಮರ್ಯಾದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ವಿಚಾರಕ್ಕೆ ಸಾಕಷ್ಟು ಬಾರಿ ಚರ್ಚೆಗಳು ಆಗಿದೆ. ಇದೀಗ ಮತ್ತೆ ಅದೇ ಮರ್ಯಾದೆ ವಿಚಾರ ಬಂದಿದೆ. ಗೊಂಬೆ ತೆಗೆಯುವಾಗ, ರಾಕೇಶ್ ಅಲ್ಲಿಗೆ ಬಂದು ರೂಪೇಶ್ ಶೆಟ್ಟಿ ಬಳಿ ಚರ್ಚೆ ಮಾಡುತ್ತಿದ್ದರು. ಎಲ್ಲರೂ ರಫ್ ಆಗಿ ನಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಆಗ ರಾಜಣ್ಣ ಸುಮ್ಮನೆ ಇರದೆ "ನೀನು ಕೂಡ ಸೇಫ್ ಆಟ ಆಡುತ್ತಾ ಇದ್ದಿಯ ಅಲ್ವಾ?" ಎಂದರು. ಆಗ ರಾಕಿ, ಮರ್ಯಾದೆ. ಮರ್ಯಾದೆ ಕೊಡು ಅಂತ ಏಕವಚನದಲ್ಲಿಯೇ ಜೋರಾದರು. ರಾಜಣ್ಣ ಏನು ಸುಮ್ಮನೇನಾ ಅವರು ಅಷ್ಟೇ ಜೋರಾಗಿದ್ದರು.

  ಗೊಬ್ಬರಗಾಲ ಜೊತೆಗೂ ಸಂಬರ್ಗಿ ಜಗಳ

  ಗೊಬ್ಬರಗಾಲ ಜೊತೆಗೂ ಸಂಬರ್ಗಿ ಜಗಳ

  ಇನ್ನು ಎರಡು ಕಡೆ ಗೊಂಬೆಗಳನ್ನು ಆಯ್ದುಕೊಳ್ಳುತ್ತಿದ್ದರು. ಆದರೆ, ಅಲ್ಲಿಗೆ ಓಡಿ ಬಂದ ಪ್ರಶಾಂತ್ ಸಂಬರ್ಗಿ, ಅವರ ವಿರೋದಿ ಟೀಂನವರು ಹುಡುಕಿದ ಹತ್ತಿ ಮತ್ತು ಗೊಂಬೆಯನ್ನು ಎತ್ತಿಕೊಂಡು ಓಡಲು ಶುರು ಮಾಡಿದರು. ಇದನ್ನು ಕಂಡ ರೂಪೇಶ್ ಶೆಟ್ಟಿ ಕಿತ್ತುಕೊಳ್ಳಲು ಯತ್ನಿಸಿದರು. ಆಗ ಇಬ್ಬರು ಒಬ್ಬರ ಮೇಲೊಬ್ಬರು ಬಿದ್ದು ಒದ್ದಾಡಿದರು. ಕಡೆಗೆ ರೂಪೇಶ್ ಶೆಟ್ಟಿ ತಾನು ಹಾಕಿದ್ದ ಬಟ್ಟೆಯನ್ನೇ ಬಿಚ್ಚಿ, ಮತ್ತೆ ಗೊಂಬೆ ತೆಗೆಯಲು ಹೋದರು. ಬಳಿಕ ಗೊಬ್ಬರಗಾಲ ಬಳಿಯೂ ಅಷ್ಟೇ ಕ್ರೂರವಾಗಿ ಸಂಬರ್ಗಿ ಜಗಳವಾಡಿದ್ದಾರೆ.

  ದೀಪಿಕಾ ತಾಳ್ಮೆ ಯಾರು ಪಾಲಿಸಲೇ ಇಲ್ಲ

  ದೀಪಿಕಾ ತಾಳ್ಮೆ ಯಾರು ಪಾಲಿಸಲೇ ಇಲ್ಲ

  ಈ ಆಟ ಶುರುವಾದಾಗಿನಿಂದಲೂ ದೀಪಿಕಾ ಕಂಟ್ರೋಲ್ ಮಾಡುವುದಕ್ಕೆ ಯತ್ನಿಸಿದ್ದಾರೆ. ಮುಂದೆ ನಿಂತು ಜಗಳವಾಗದ ರೀತಿ ನೋಡಿಕೊಂಡಿದ್ದಾರೆ. ಸಮಾಧಾನವಾಗಿ ಆಡೋಣಾ ಅಂತ ಎಲ್ಲರನ್ನು ಮನವೊಲಿಸಿದ್ದಾರೆ. ಆದ್ರೆ ಯಾರು ಅವರ ಮಾತನ್ನು ಕೇಳಲೇ ಇಲ್ಲ. ಅದರಲ್ಲೂ ಸಂಬರ್ಗಿ, ದೀಪಿಕಾ ಅಡ್ಡ ನಿಂತಿದ್ದರು ಕೂಡ ಅವರನ್ನು ದಾಟಿ ಮುಂದೆ ಹೋಗಲು ಯತ್ನಿಸಿದರು. ಎಲ್ಲರೂ ಗೊಂಬೆ ತೆಗೆದುಕೊಳ್ಳಲು ಗಿಜಿಗಿಜಿ ವಾತಾವರಣ ಸೃಷ್ಟಿ ಮಾಡಿಕೊಂಡ ಮೇಲೆ ದೀಪಿಕಾರ ಕೈಗೆ ಜೋರು ಪೆಟ್ಟಾಗಿದೆ.

  English summary
  Bigg Boss Kannada 9 November 16th Episode Written Update. Here is the details about continue toys game.
  Wednesday, November 16, 2022, 23:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X