BBK9 : ರೂಪೇಶ್ ತಡೆಯಲು ಯತ್ನಿಸಿದರು ರಾಜಣ್ಣನ ಮೈಮೇಲೆ ಬಿದ್ದು ಜಗಳಕ್ಕೆ ನಿಂತ ಕಾವ್ಯಶ್ರೀ!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಈ ವಾರದ ಕ್ಯಾಪ್ಟನ್ ರೀತಿ ನೀತಿಯೇ ಚೇಂಜ್ ಆಗಿದೆ. ಇಷ್ಟು ಸೀಸನ್‌ನಲ್ಲಿ ಕ್ಯಾಪ್ಟನ್ ಆದವರು ಬರೀ ಗೇಮ್ ವಿಚಾರಕ್ಕೆ, ನಿಯಮ ಉಲ್ಲಂಘನೆ ವಿಚಾರಕ್ಕಷ್ಟೇ ಕ್ಯಾಪ್ಟನ್ ತಲೆ ಹಾಕುತ್ತಾ ಇದ್ರು. ಕೂರುವುದು, ನಿಲ್ಲುವುದು, ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಯಾರು ಹೇಳ್ತಾ ಇರಲಿಲ್ಲ. ಆದ್ರೆ ಕಾವ್ಯಾ ಕ್ಯಾಪ್ಟನ್ ಆದಾಗಿನಿಂದ ಈ ಎಲ್ಲಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. ತನ್ನದೇ ಆದ ಸಾಮ್ರಾಜ್ಯ ಸೃಷ್ಟಿಸಿಕೊಂಡಿದ್ದಾರೆ.

ಮನೆ ಸದಸ್ಯರೆಲ್ಲ ಒಂದು ಕಡೆ ನಿಂತಿದ್ದರು ಕಾವ್ಯಾ ಮಾತ್ರ ಸುಮ್ಮನೆ ಇರುತ್ತಿಲ್ಲ. ಬದಲಿಗೆ ಅಲ್ಲಿ ಇರಿ ಇಲ್ಲಿ ಇರಿ ಎಂದೇ ಹೇಳುತ್ತಾರೆ. ಇದು ಮನೆಯವರಿಗೆ ಕಿರಿಕಿರಿಯಾಗುತ್ತಿದೆ. ನಿನ್ನೆ ಕೂಡ ಕಾವ್ಯಶ್ರೀ ನಡೆಗೆ ಅರುಣ್ ಸಾಗರ್ ಬೇಸತ್ತಿದ್ದರು. ಇವತ್ತು ದೀಪಿಕಾ ದಾಸ್.

ಕಾವ್ಯಶ್ರಿಗೆ ಎಲ್ಲರನ್ನೂ ಕಂಟ್ರೋಲ್‌ನಲ್ಲಿಡಬೇಕೆಂಬ ಆಸೆ

ಕಾವ್ಯಶ್ರಿಗೆ ಎಲ್ಲರನ್ನೂ ಕಂಟ್ರೋಲ್‌ನಲ್ಲಿಡಬೇಕೆಂಬ ಆಸೆ

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದರೆ ಸ್ಪೆಷಲ್ ರೂಮ್ ಸಿಗುತ್ತೆ. ಒಂದಷ್ಟು ಅಧಿಕಾರ ಸಿಗುತ್ತೆ. ಆದ್ರೆ ಕಾವ್ಯಾ ಕ್ಯಾಪ್ಟನ್ ಆದ ಮೇಲೆ ಬೇರೆಯದ್ದೇ ಅಧಿಕಾರ ತೆಗೆದುಕೊಂಡಂತೆ ಕಾಣುತ್ತಿದೆ. ಎಲ್ಲರನ್ನು ಅಲ್ಲಿ ನಿಲ್ಲಬೇಡಿ, ಇಲ್ಲಿ ನಿಲ್ಲಬೇಡಿ, ಅದು ಮಾಡಬೇಡಿ, ಇದು ಮಾಡಬೇಡಿ ಎಂದೇ ಹೇಳುತ್ತಿದ್ದಾರೆ. ಆಟವಾಡುವುದಕ್ಕೂ ಮುನ್ನ ಹೀಗೆ ಇರಿ ಎಂದು ಆರ್ಡರ್ ಮಾಡುತ್ತಿದ್ದಾರೆ.

ದೀಪಿಕಾ ಮೇಲೆ ಕಾವ್ಯಶ್ರೀ ವಾಗ್ಯುದ್ಧ

ದೀಪಿಕಾ ಮೇಲೆ ಕಾವ್ಯಶ್ರೀ ವಾಗ್ಯುದ್ಧ

ದೀಪಿಕಾ ದಾಸ್ ತುಂಬಾನೇ ಕೇರ್ ಫುಲ್ ಆಗಿ ಎಲ್ಲರನ್ನು ಹ್ಯಾಂಡಲ್ ಮಾಡುತ್ತಿದ್ದಾರೆ. ಆಟದಲ್ಲಿ ಪೆಟ್ಟಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜಗಳವಾಡಲು ಶುರು ಮಾಡಿದರೆ ಅದನ್ನು ಬಿಡಿಸಿ, ಬುದ್ದಿ ಹೇಳುತ್ತಾರೆ. ಆದ್ರೆ ಈಗ ಕಾವ್ಯಶ್ರೀ ದೀಪಿಕಾ ದಾಸ್‌ಗೆ ಬುದ್ಧಿ ಹೇಳುತ್ತಿದ್ದಾರೆ. ನೀವೂ ಅಲ್ಲಿ ಕೈ ಹಾಕಬೇಡಿ ಎಂದಿದ್ದಾರೆ. ಇದು ದೀಪಿಕಾ ದಾಸ್‌ಗೆ ಬೇಸರ ತರಿಸಿದೆ. ಆಗ ಸಮಾಧಾನವಾಗಿಯೇ ಹೇಳಿದ್ದಾರೆ. ನೋಡಿ ನಾನೊಬ್ಬಳೆ ಅಲ್ಲ, ಅವರು ಇಟ್ಟಿದ್ದರು. ಅವರಿಗೂ ಹೇಳಿ ಎಂದಿದ್ದಾರೆ. ಆಗ ಕಾವ್ಯಾ ನಾನು ನೋಡಿಲ್ಲ ಎಂದಾಗ ಹಾಗಾದ್ರೆ ಸುಮ್ಮನೆ ಇರಿ ನನಗೂ ಹೇಳಬೇಡಿ ಎಂದು ದೀಪಿಕಾ ಹೇಳಿದ್ದಾರೆ. ಆಗ ರೊಚ್ಚಿಗೆದ್ದ ಕಾವ್ಯ ನಾನು ಕ್ಯಾಪ್ಟನ್. ನನಗೆ ಹೇಳುವ ಅಧಿಕಾರವಿದೆ ಎಂದಿದ್ದಾರೆ.

ಮತ್ತೆ ರಾಜಣ್ಣನ ಜೊತೆ ಕಾವ್ಯಾ ಜಗಳ

ಮತ್ತೆ ರಾಜಣ್ಣನ ಜೊತೆ ಕಾವ್ಯಾ ಜಗಳ

ದೀಪಿಕಾ ದಾಸ್ ಜೊತೆ ಜಗಳ ಮಾಡುತ್ತಿರುವಾಗ ರೂಪೇಶ್ ರಾಜಣ್ಣ ಏನೋ ಹೇಳುತ್ತಾರೆ. ಆಗ ರೂಪೇಶ್ ಶೆಟ್ಟಿ ಇದ್ದವರು ಸುಮ್ಮನೆ ಇರಿ ರಾಜಣ್ಣ ನೀವೂ ಮಾತನಾಡಬೇಡಿ ಎಂದಿದ್ದಾರೆ. ಆಗ ಕಾವ್ಯಶ್ರೀ ರೈಸ್ ಆಗಿದ್ದಾರೆ. ಇದನ್ನು ಕೇಳಿಸಿಕೊಂಡ ರಾಜಣ್ಣ, ನಿನ್ನ ಲಾರ್ಡ್ ಎಲ್ಲಾ ಇಲ್ಲಿ ಇಟ್ಟುಕೊಳ್ಳಬೇಡ ಕಾವ್ಯಶ್ರೀ. ಬಾಯಿ ಮೇಲೆ ಹಿಡಿತ ಇರಲಿ ಎಂದಿದ್ದಾರೆ. ಆಗ ಕಾವ್ಯಾ, ನಿಮಗೂ ಹಿಡಿತ ಇರಲಿ. ನಿಮಗೆ ಒಬ್ಬರಿಗೆ ಅಲ್ಲ ಎಂದು ರೈಸ್ ಆಗಿದ್ದಾರೆ.

ಕಾವ್ಯಾಳ ವರ್ತನೆ ಮನೆ ಗಡಗಡ

ಕಾವ್ಯಾಳ ವರ್ತನೆ ಮನೆ ಗಡಗಡ

ಕಾವ್ಯಶ್ರೀ ಮತ್ತು ರಾಜಣ್ಣನ ಮಾತಿಗೆ ಮಾತು ಬೆಳೆದು ಯುದ್ಧದ ತನಕ ಹೋಗಿದೆ. ನಾನು ಕ್ಯಾಪ್ಟನ್ ಎಂಬುದು ಕಾವ್ಯಶ್ರೀ ವಾದ. ಕ್ಯಾಪ್ಟನ್ ಆದರೆ ಎಲ್ಲವನ್ನು ಕಂಟ್ರೋಲ್ ಮಾಡಬಹುದಾ ಎಂಬುದು ರಾಜಣ್ಣನ ವಾದ. ಕ್ಯಾಪ್ಟನ್ ಆಗಿರೋದು ನಾನು. ನೀನು ಹೇಳಿದ ಹಾಗೆ ನಾನು ಕೇಳುವುದಕ್ಕೆ ಬಂದಿಲ್ಲ ಎಂದು ಕಾವ್ಯಶ್ರೀ ಹೇಳಿದರೆ, ರಾಜಣ್ಣ ಆಟ ಆಡು ಹೋಗು, ಕಾಮನ್ ಸೆನ್ಸ್ ಇಲ್ವಾ ನಿನಗೆ ಅಂತ ಕಿಡಿಕಾರಿದ್ದಾರೆ. ಅದಕ್ಕೆ ರೊಚ್ಚುಗೆದ್ದ ಕಾವ್ಯಶ್ರೀ ಯಾಕೆ ನಿಮಗಿಲ್ವಾ ಕಾಮನ್ ಸೆನ್ಸ್ ಅಂತ ಮೈಮೇಲೆಯೆ ಬೀಳುವಂತೆ ಹೋಗಿದ್ದಾರೆ. ಇಬ್ಬರನ್ನು ತಡೆಯುವುದಕ್ಕೆ ರೂಪೇಶ್ ಶೆಟ್ಟಿ ಹರಸಾಹಸ ಪಟ್ಟಿದ್ದಾರೆ.

More from Filmibeat

English summary
Bigg Boss Kannada November 17th Episode Written Update. Here is the details about Kavyashree and Roopesh Rajanna war.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X