For Quick Alerts
  ALLOW NOTIFICATIONS  
  For Daily Alerts

  BBK9: ಕ್ಯಾಪ್ಟನ್ ಅವಧಿಯಲ್ಲಿ ಸೇಫ್ ಆದ ಸಂಬರ್ಗಿಗೆ ಈ ವಾರ ಕಳಪೆ ಪಟ್ಟ!

  By ಎಸ್ ಸುಮಂತ್
  |

  ವಾರದ ಕೊನೆಯಲ್ಲಿ ಯಾರು ಕಳಪೆ ಯಾರು ಉತ್ತಮ ಎಂಬುದು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಅಭಿಪ್ರಾಯ ಪಡೆಯಲಾಗುತ್ತದೆ. ಅದರಂತೆ ಈ ವಾರವೂ ಮನೆಯ ಕಳಪೆ ಮತ್ತು ಉತ್ತಮ ನೀಡಲು ಮನೆ ಮಂದಿಯೆಲ್ಲಾ ಸೇರಿದ್ದರು. ಎಲ್ಲರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

  ಅದರಲ್ಲೀ ಈ ವಾರ ಅಮೂಲ್ಯ ಅವರಿಗೆ ಉತ್ತಮದ ಅವಾರ್ಡ್ ಹೋಗಿದ್ದರೆ, ಸಂಬರ್ಗಿಗೆ ಕಳಪೆ ಅವಾರ್ಡ್ ಹೋಯಿತು. ಸಂಬರ್ಗಿ ನಡೆದುಕೊಂಡ ರೀತಿಯನ್ನು, ರೂಪೇಶ್ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದ ರೀತಿಗೆ ಕಳಪೆ ಕೊಟ್ಟರು. ಸಂಬರ್ಗಿ ಕ್ಯಾಪ್ಟನ್ ಆಗಿದ್ದಾಗ ಮಿಸ್ ಆಗಿದ್ದರು. ಆದ್ರೆ ಈ ಬಾರಿ ತಗಲಾಕಿಕೊಂಡರು.

  BBK9: ಸುದೀಪ್ ರಿಪೇರಿ ಮಾಡಿದ್ರೂ, ರಾಜಣ್ಣನ ದೂರವಿಟ್ಟ ಸದಸ್ಯರು!BBK9: ಸುದೀಪ್ ರಿಪೇರಿ ಮಾಡಿದ್ರೂ, ರಾಜಣ್ಣನ ದೂರವಿಟ್ಟ ಸದಸ್ಯರು!

  ಸಂಬರ್ಗಿಯ ದ್ವೇಷಕ್ಕೆ ರಾಕೇಶ್ ಕೋಪ

  ಸಂಬರ್ಗಿಯ ದ್ವೇಷಕ್ಕೆ ರಾಕೇಶ್ ಕೋಪ

  ರಾಕೇಶ್ ತನಗೆ ತಾನೇ ಕಳಪೆ ಕೊಟ್ಟುಕೊಂಡಿದ್ದಾರೆ. ನಾನು ಯಾವತ್ತು ತಾಳ್ಮೆ ಕಳೆದುಕೊಂಡಿರಲಿಲ್ಲ. ಕಿರುಚಾಡಿರಲಿಲ್ಲ. ಈ ಸಲ ನನ್ನ ಕಡೆಯಿಂದ ಒಂದಷ್ಟು ತಪ್ಪುಗಳಾಗಿದ್ದಾವೆ. ದೀಪಿಕಾಗೆ ಕ್ಷಮೆ ಕೇಳ್ತೀನಿ. ಒಂದು ಕಾರಣ ಕೊಡಲೇಬೇಕು ಎಂದಾಗ ನಾನು ಪ್ರಶಾಂತ್ ಬ್ರೋ ಹೆಸರು ತೆಗೆದುಕೊಳ್ಳುತ್ತೇನೆ. ರೂಪೇಶ್ ಶೆಟ್ಟಿ ಹೊಡೆದುಬಿಟ್ರೆ ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಲೈನ್ ಗೊತ್ತಾಯ್ತು. ಆ ಇಂಟೆನ್ಶನ್ ನನಗೆ ಬೇಸರ ಆಯ್ತು. ಒಂದು ವೇಳೆ ಕೈ ಮಾಡಿ ಬಿಟ್ಟಿದ್ದರೆ ಅವನ ಇಡೀ ಜರ್ನಿ ಹಾಳಾಗ್ತಾ ಇತ್ತು. ಅದಕ್ಕೆ ನಾನು ಕಳಪೆ ಕೊಡುತ್ತಿದ್ದೇನೆ ಎಂದಿದ್ದಾರೆ.

  ಗಂಡಸ್ತನದ ಪದ ಬಳಸಿ ಹರ್ಟ್ ಮಾಡಿ ಬಿಟ್ಟರಾ ಸಂಬರ್ಗಿ..?

  ಗಂಡಸ್ತನದ ಪದ ಬಳಸಿ ಹರ್ಟ್ ಮಾಡಿ ಬಿಟ್ಟರಾ ಸಂಬರ್ಗಿ..?

  ರೂಪೇಶ್ ಶೆಟ್ಟಿ ಕೂಡ ಕಳಪೆಯನ್ನು ಪ್ರಶಾಂತ್ ಸಂಬರ್ಗಿ ಅವರಿಗೆ ನೀಡಿದ್ದಾರೆ. ಈ ಬಗ್ಗೆ ಕಾರಣ ನೀಡಿದ್ದು, ಯಾವುದೇ ಕಾರಣಕ್ಕೂ ಜಗಳ ಆಯ್ತು ಅಂತ ನಾನು ಅವರಿಗೆ ಕಳಪೆ ನೀಡುತ್ತಿಲ್ಲ. ಅತಿರೇಕ ಘರ್ಷಣೆಯಾಗಿದೆ ಎಂದು ನಾನು ಅವರಿಗೆ ಕಳಪೆ ನೀಡುತ್ತಿಲ್ಲ. ಆದ್ರೆ ಅವರು ಒಂದು ಟೈಮ್ ನಲ್ಲಿ ಹೇಳಿದ್ರು, ಈ ಮೀಸೆ ಗಡ್ಡ ಇದ್ದು ಬಿಟ್ರೆ ಗಂಡಸರಾಗಲ್ಲ, ಗಂಡಸ್ತನ ಬಂದು ಬಿಡಲ್ಲ ಎಂದಿದ್ದರು. ಅದು ಎಲ್ಲೋ ಒಂದು ಬೇಸರ ಆಯ್ತು. ನನಗೆ ಆ ಪದ ಕೇಳುವುದಕ್ಕೆ ಹಿಂಸೆ ಆಯ್ತು. ಆಮೇಲೆ ನೀನೂ ಕೈ ಎತ್ತಲಿ ಅಂತಾನೆ ನಾನು ಈ ರೀತಿ ಮಾಡುತ್ತಾ ಇರೋದು ಅಂದ್ರಿ. ಈ ಎರಡು ವಿಚಾರಕ್ಕೆ ನಾನು ಕಳಪೆ ಕೊಡುತ್ತಿದ್ದೇನೆ ಎಂದಿದ್ದಾರೆ.

  ಸಂಬರ್ಗಿಯಿಂದ ಬೇರೊಬ್ಬರ ಲೈಫ್ ಹಾಳಾಗಿದ್ದರೆ..?

  ಸಂಬರ್ಗಿಯಿಂದ ಬೇರೊಬ್ಬರ ಲೈಫ್ ಹಾಳಾಗಿದ್ದರೆ..?

  ಅನುಪಮಾ ಕೂಡ ಸಂಬರ್ಗಿ ಅವರಿಗೆ ಕಳಪೆ ಕೊಟ್ಟಿದು, ನಾನು ಈ ಬಾರಿ ಕಳಪೆಯನ್ನು ಪ್ರಶಾಂತ್ ಸಂಬರ್ಗಿಗೆ ಕೊಡ್ತಾ ಇದ್ದೀನಿ. ಅದಕ್ಕೆ ಕಾರಣ ಒಂದು, ಕತ್ತನ್ನು ಹಿಡಿಬೇಡಿ ಸರ್ ಅಂತ ಹೇಳಿದ್ದೆ. ಆದರೂ ಮೂಲೆಯಲ್ಲಿ ಇದ್ದಾಗ ಕತ್ತು ಹಿಡಿದಿದ್ದೀರಿ. ಏನೋ ಆಗಿ ಹೆಚ್ಚು ಕಡಿಮೆಯಾಗಿದ್ದರೆ, ಒಬ್ಬರ ಲೈಫ್ ಹಾಳಾಗ್ತಾ ಇತ್ತು. ನೀವಿರಬಹುದು, ಅವರಿರಬಹುದು. ಎರಡನೆಯದ್ದು ಏನಂದ್ರೆ ಬಿಗ್ ಬಾಸ್ ಇವತ್ತು ಅನೌನ್ಸ್ ಮಾಡುತ್ತೆ, ಮೌಲ್ಯಮಾಪಕರಿಂದಾನು ತಪ್ಪಾಗಿದೆ ಎಂದಾಗ, ಕ್ಯಾಪ್ಟೆನ್ಸಿ ಬಗ್ಗೆ ಬಂದಾಗಲೂ ನಾನು ಗಮನವಿಟ್ಟದ್ದು ಅಂತ ಹೇಳ್ತಾ ಇದ್ರಿ. ಪ್ರತಿ ಸಲ ಬೇರೆಯವರಿಗೆ ಬ್ಲೇಮ್ ಮಾಡುತ್ತೀವೆ ವಿನಃ ನಮ್ಮದು ತಪ್ಪಿತ್ತು ಎಂದುಕೊಳ್ಳುವುದಿಲ್ಲ. ಅದಕ್ಕೆ ಕಳಪೆ ಕೊಡುತ್ತಿದ್ದೇನೆ ಎಂದಿದ್ದಾರೆ.

  ಕಳಪೆ ಪಟ್ಟ ಸಿಕ್ಕಿದ್ದಕ್ಕೆ ರೊಚ್ಚಿಗೆದ್ದ ಸಂಬರ್ಗಿ

  ಕಳಪೆ ಪಟ್ಟ ಸಿಕ್ಕಿದ್ದಕ್ಕೆ ರೊಚ್ಚಿಗೆದ್ದ ಸಂಬರ್ಗಿ

  ಎಲ್ಲರು ಕಳಪೆ ಕೊಟ್ಟ ಕಾರಣ ಪ್ರಶಾಂತ್ ಸಂಬರ್ಗಿ ರೊಚ್ಚಿಗೆದ್ದಿದ್ದಾರೆ. ಮನೆಯವರಿಗೆಲ್ಲಾ ಸ್ಪಷ್ಟನೆ ನೀಡಿದ ಸಂಬರ್ಗಿ, ಮನೆಯಲ್ಲಿ ಹೆಚ್ಚಾಗಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕೆ, ಅವರಲ್ಲಿಯೇ ಒನ್ ಟು ಒನ್ ಆಗಿದ್ದರು, ರಾಜಿ ಮಾಡಿಕೊಂಡು ಸಾರಿ ಕೇಳಿ, ಆ ವಿಷಯ ಪ್ರಸ್ತಾಪ ಮಾಡದೆ ಬೇರೆಯವರು ಪರ್ಸನಲ್ಲಾಗಿ ಫೈಟಿಂಗ್ ಆಡಿರುವುದನ್ನು ಪ್ರಸ್ತಾಪ ಮಾಡಿ, ಅವರಿಗೆ ನೋವು ಆಗಿಲ್ಲ, ಅವರು ಆಟದಲ್ಲೂ ಇಲ್ಲ. ನಮ್ಮ ಟೀಂನವರೇ ಕಳಪೆ ಕೊಡುತ್ತಾರಲ್ಲ, ಅದು ದೊಡ್ಡ ಕಳಪೆ. ರೂಪೇಶ್ ಶೆಟ್ಟಿಗೆ ಕ್ಲಾರಿಟಿ ಕೊಡುತ್ತೇನೆ. ಆ ಪ್ರಚೋದನೆ ಕೊಟ್ಟಿದ್ದು ನಾನಲ್ಲ. ಮೌನವಾಗಿರುವುದೇ ನಿಮ್ಮೆಲ್ಲರ ಕಳಪೆ ಎಂದು ಆಕ್ರೋಶಗೊಂಡಿದ್ದಾರೆ. ಬಳಿಕ ಡೋರ್ ಓಪನ್ ಆಗುವುದಕ್ಕೂ ಮುನ್ನ ಹೊರಗೆ ಹೋಗಲು ಸಂಬರ್ಗಿ ಟ್ರೈ ಮಾಡಿದ್ದಾರೆ. ಡೋರ್ ಜೋರಾಗಿ ತೆಗೆದು ಹೊರ ಹೋಗಿದ್ದಾರೆ. ಜೈಲಿಗೆ ಹೋಗುವಾಗಲೂ ಎಲ್ಲರ ಮೇಲೆ ಆಕ್ರೋಶಗೊಂಡಿದ್ದಾರೆ.

  English summary
  Bigg Boss Kannada 9 November 18th Episode On Prashanth Sambargi. Here is the details.
  Friday, November 18, 2022, 23:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X