For Quick Alerts
  ALLOW NOTIFICATIONS  
  For Daily Alerts

  BBK9: ಇವ್ರು ಆಯ್ಕೆ ಮಾಡ್ಲಿಲ್ಲ.. ಅವ್ರು ತಲೆಕೆಡಿಸಿಕೊಂಡಿಲ್ಲ: ಈ ವಾರ ಕ್ಯಾಪ್ಟನ್ ಇಲ್ಲ!

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಲೇಬೇಕೆಂಬ ಬಯಕೆ ಎಲ್ಲರಲ್ಲೂ ಇರುತ್ತೆ. ಬಿಗ್ ಬಾಸ್ ಮುಗಿಯುವುದರೊಳಗೆ ಒಮ್ಮೆ ಕ್ಯಾಪ್ಟನ್ ಆಗೇಕೆಂಬ ಹಠ ಎಲ್ಲರಲ್ಲಿಯೂ ಇರುತ್ತೆ. ಅದಕ್ಕಾಗಿ ಕೊಟ್ಟ ಟಾಸ್ಕ್ ಗಳನ್ನು ಚೆನ್ನಾಗಿ ಆಡುತ್ತಾರೆ. ಎಲ್ಲರೊಂದಿಗೂ ಆತ್ಮೀಯತೆ ಬೆಳೆಸಿಕೊಳ್ಳುತ್ತಾರೆ. ಆದ್ರೆ ಈ ವಾರ ಮನೆಯವರ ಗೊಂದಲದಿಂದ ಕ್ಯಾಪ್ಟನ್ ಸ್ಥಾನ ಯಾರಿಗೂ ಸಿಕ್ಕಿಲ್ಲ.

  ಇವತ್ತು ಹೊಸ ಕ್ಯಾಪ್ಟನ್ ಆಯ್ಕೆ ಇತ್ತು. ಎಲ್ಲರೂ ಖುಷಿಯಲ್ಲಿಯೇ ಇದ್ದರು. ಯಾಕಂದ್ರೆ ಇವತ್ತು ನಾನು ಕ್ಯಾಪ್ಟನ್ ಆಗಬಹುದು ಎಂಬ ನಿರೀಕ್ಷೆ ಇತ್ತು. ಬಿಗ್ ಬಾಸ್ ಕೇಳಿದಾಗ ಎಲ್ಲರಲ್ಲೂ ಆ ಆಸೆ ಇದ್ದಿದ್ದು ಎದ್ದು ಕಾಣುತ್ತಾ ಇತ್ತು. ಆದ್ರೆ ಈ ವಾರ ಬರೀ ಒಬ್ಬರಲ್ಲ ಮನೆಯವರೆಲ್ಲರೂ ಕ್ಯಾಪ್ಟನ್ ಆಗಿದ್ದಾರೆ.

  BBK 9: ಬಿಗ್ ಬಾಸ್ ಮನೆಯೊಳಗೆ ಕೈ ಕೈ ಮಿಲಾಯಿಸೋದಲ್ಲ.. ಹಾಕಿದ ಬಟ್ಟೆ ಹರಿಯುವಷ್ಟು ಜಗಳ!BBK 9: ಬಿಗ್ ಬಾಸ್ ಮನೆಯೊಳಗೆ ಕೈ ಕೈ ಮಿಲಾಯಿಸೋದಲ್ಲ.. ಹಾಕಿದ ಬಟ್ಟೆ ಹರಿಯುವಷ್ಟು ಜಗಳ!

  ಕ್ಯಾಪ್ಟನ್ಸಿ ಟಾಸ್ಕ್ ಕೊಡುವಂತಿರಲಿಲ್ಲ..!

  ಕ್ಯಾಪ್ಟನ್ಸಿ ಟಾಸ್ಕ್ ಕೊಡುವಂತಿರಲಿಲ್ಲ..!

  ಈ ಬಾರಿ ಟಾಯ್ಸ್ ಟಾಸ್ಕ್ ನೀಡಿತ್ತು. ಈ ವೇಳೆ ಹಲವು ನಿಯಮಗಳನ್ನು ಹೇಳಿದ್ದರು ಆ ನಿಯಮಗಳನ್ನು ಮನೆ ಮಂದಿ ಮೀರಿದ್ದು. ಕಪ್ಪು ಪಟ್ಟಿ ಒಳಗೆ ತಲೆ ಹಾಕಬಾರದು, ಕೈ ಹಾಕಬಾರದು ಎಂಬ ನಿಯಮವನ್ನು ಹೇಳಿದ್ದರು ಕೂಡ ಆಟದ ಭರದಲ್ಲಿ ಮನೆಯ ಎರಡು ಟೀಂನ ಸದಸ್ಯರು ಆ ನಿಯಮವನ್ನು ಮೀರಿದ್ದರು. ಅದನ್ನು ಬಿಗ್ ಬಾಸ್ ಮೆನ್ಶನ್ ಮಾಡಿದೆ. ಆದರೂ ಮೈಕೈ ನೋಯಿಸಿಕೊಂಡು ಆಟವಾಡಿದ್ದಕ್ಕೆ ಎಕ್ಸ್‌ಕ್ಯೂಸ್ ಕೊಟ್ಟು, ಕ್ಯಾಪ್ಟನ್ ಆಗುವವರನ್ನು ಆಯ್ಕೆ ಮಾಡಲು ಸೂಚನೆ ನೀಡಿತ್ತು.

  ಕ್ಷಮೆ ಕೇಳಿದ ಕಾವ್ಯಶ್ರೀ

  ಕ್ಷಮೆ ಕೇಳಿದ ಕಾವ್ಯಶ್ರೀ

  ಇಂದು ಹೊಸ ಕ್ಯಾಪ್ಟನ್ ಆಯ್ಕೆ ಮಾಡುವ ದಿನ. ಕಾವ್ಯಶ್ರೀ ಕ್ಯಾಪ್ಟನ್ ಮುಗಿದಿತ್ತು. ಅದನ್ನು ಬಿಗ್ ಬಾಸ್ ತಮ್ಮ ಧ್ವನಿಯ ಮೂಲಕ ಸೂಚನೆ ನೀಡಿತ್ತು. ಆಗ ಸ್ಟೋರಿಗೆ ರೂಮಿಗೆ ಹೋದ ಕಾವ್ಯಾ, ತನ್ನ ವಸ್ತುಗಳನ್ನು ತರುತ್ತಾರೆ. ಅದಕ್ಕೂ ಮುನ್ನ ಕ್ಯಾಮೆರಾ ಬಳಿ ನಿಂತು, ಕ್ಷಮೆ ಕೇಳಿದ್ದಾರೆ. ನಾನು ಸ್ವಲ್ಪ ರೇಗಾಡಿಬಿಟ್ಟೆ, ಅವರು ಆಡಿದ ಈತಿಯೇ ನಾನು ಆಡಿಬಿಟ್ಟೆ. ನನ್ನನ್ನು ಟ್ರಿಗರ್ ಮಾಡಿದರು. ಅದಕ್ಕೆ ನಾನು ಅದೇ ರೀತಿ ಆಡಿಬಿಟ್ಟೆ. ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ.

  ಕ್ಯಾಪ್ಟನ್ ಆಗಬೇಕೆಂದು ಯಾರೆಲ್ಲಾ ಬಯಸಿದರು

  ಕ್ಯಾಪ್ಟನ್ ಆಗಬೇಕೆಂದು ಯಾರೆಲ್ಲಾ ಬಯಸಿದರು

  ಬಿಗ್ ಬಾಸ್ ಎರಡು ಟೀಂನಿಂದ ಕ್ಯಾಪ್ಟನ್ ಆಗಬೇಕೆಂಬುವವರನ್ನು ಒಬ್ಬೊಬ್ಬರನ್ನು ಆಯ್ಕೆ ಮಾಡಿ ಎಂದು ಸೂಚನೆ ನೀಡಿತ್ತು. ಇದಾದ ಮೇಲೆ ಎರಡು ಟೀಂನವರು ಚರ್ಚೆಗೆ ಶುರು ಮಾಡಿದರು. ಆದ್ರೆ ಒಂದೊಂದು ಟೀಂನಲ್ಲೂ ನಾಲ್ಕು ಜನ ಆಕಾಂಕ್ಷಿಗಳಿದ್ದರು. ಈ ಕಡೆ ಅಮೂಲ್ಯ, ರಾಕೇಶ್, ಗೊಬ್ಬರಗಾಲ, ಅನುಪಮಾ, ಸಂಬರ್ಗಿ ಕೂಡ ಆಕಾಂಕ್ಷಿಗಳಾಗಿದ್ದರು. ಆ ಕಡೆ ರೂಪೇಶ್ ಶೆಟ್ಟಿ, ರಾಜಣ್ಣ, ಆರ್ಯವರ್ಧನ್, ದಿವ್ಯಾ ಕೂಡ ಆಕಾಂಕ್ಷಿಗಳಾಗಿದ್ದರು.

  ಸದಸ್ಯರಿಗಿಂತ ಬುದ್ದಿವಂತರೆಂದು ತೋರಿಸಿದ ಬಿಗ್ ಬಾಸ್

  ಸದಸ್ಯರಿಗಿಂತ ಬುದ್ದಿವಂತರೆಂದು ತೋರಿಸಿದ ಬಿಗ್ ಬಾಸ್

  ಹೀಗೆ ಎಲ್ಲರೂ ಆಕಾಂಕ್ಷಿಗಳಾಗಿದ್ದ ಕಾರಣ ಮನೆಯವರಿಗೆ ಒಬ್ಬರನ್ನು ಆಯ್ಕೆ ಮಾಡುವುದಕ್ಕೆ ಕಷ್ಟವಾಯಿತು. ಯಾಕಂದ್ರೆ ಟಾಯ್ಸ್ ಟಾಸ್ಕ್ ನಲ್ಲಿ ಎಲ್ಲರೂ ಸಮಾನವಾಗಿ ಮೈಕೈ ನೋವು ಮಾಡಿಕೊಂಡಿದ್ದರು. ಹೀಗಾಗಿ ಒಬ್ಬರು ಆಯ್ಕೆಯಾದರೆ ಹರ್ಟ್ ಆಗುತ್ತೆ ಎಂದೇ ಮನೆಯವರು ತೀರ್ಮಾನಿಸಿ, ಆ ತೀರ್ಮಾನವನ್ನು ಬಿಗ್ ಬಾಸ್ ಮೇಲೆ ಬಿಟ್ಟಿದ್ದರು. ಇದನ್ನು ಕೇಳಿಸಿಕೊಂಡ ಬಿಗ್ ಬಾಸ್ ಸಖತ್ತಾಗಿ ಉತ್ತರ ನೀಡಿದೆ. ಯಾರನ್ನೂ ಆಯ್ಕೆ ಮಾಡದ ಕಾರಣ, ಈ ವಾರ ಕ್ಯಾಪ್ಟೆನ್ಸಿ ಟಾಸ್ಕ್ ಇರುವುದಿಲ್ಲ. ಹಾಗೇ ಯಾರೂ ಕ್ಯಾಪ್ಟನ್ ಆಗಿರುವುದಿಲ್ಲ ಎಂದಿದೆ. ಇದು ಒಂದು ಕ್ಷಣ ಎಲ್ಲರಿಗೂ ಶಾಕ್ ಆದರೂ, ಎಲ್ಲರೂ ಸಮಾಧಾನಗೊಂಡಿದ್ದಾರೆ. ಯಾರೊಬ್ಬರಿಗೂ ಅನ್ಯಾಯ ಆಗಿಲ್ಲ. ಈಗ ಎಲ್ಲರೂ ಸಮಾನರು ಬಿಡಿ ಎಂದು ಖುಷಿ ಪಟ್ಟಿದ್ದಾರೆ.

  English summary
  Bigg Boss Kannada November 18th Episode Written Update. Here is the details.
  Friday, November 18, 2022, 22:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X