For Quick Alerts
  ALLOW NOTIFICATIONS  
  For Daily Alerts

  BBK9: ರೂಪೇಶ್ ಶೆಟ್ಟಿ ಹೇಳಿದ್ದು ಇವತ್ತು ಸುಳ್ಳಾಯ್ತಾ..? ಮನೆ ಮಂದಿ ಕೆಂಗಣ್ಣಿಗೆ ಗುರಿಯಾದ್ರಾ?

  By ಎಸ್ ಸುಮಂತ್
  |

  ಬಿಗ್ ಬಾಸ್‌ನಲ್ಲಿ ದಿನೇ ದಿನೆ ಟಫ್ ಕಾಂಪಿಟೇಷನ್ ಶುರುವಾಗಿದೆ. ಮನೆ ಮಂದಿ, ಮನೆಯಲ್ಲಿಯೇ ಉಳಿಯಬೇಕು ಅಂದ್ರೆ ಟಾಸ್ಕ್ ನಲ್ಲಿ ಸಖತ್ತಾಗಿಯೇ ಆಡಬೇಕಾಗಿದೆ. ಮನೆ ಮಂದಿಯ ಪ್ರೀತಿ ವಿಶ್ವಾಸವನ್ನು ಗಳಿಸಿಕೊಳ್ಳಬೇಕಾಗಿದೆ. ಆದ್ರೆ ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಒಂದಷ್ಟು ಜಗಳವೇ ಶುರುವಾಗುತ್ತಿದೆ. ಒಮ್ಮೊಮ್ಮೆ ನಾವೂ ಹೇಳಿದ್ದು ನಮಗೆ ಉಲ್ಟಾ ಹೊಡೆಯುತ್ತದೆ ಎಂಬ ಮಾತಿದೆ. ಅದಕ್ಕೊಂದು ಸ್ಪಷ್ಟ ಉದಾಹರಣೆ ಇದೀಗ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ.

  ಯಾವುದನ್ನು ನಿರ್ಲಕ್ಷ್ಯ ಮಾಡಬಾರದು. ಸಣ್ಣ ಹುಲ್ಲು ಕಡ್ಡಿಯೂ ಕೆಲಸಕ್ಕೆ ಬರುತ್ತೆ ಎಂಬ ಗಾದೆ ಮಾತಿನಂತೆ ಇದೀಗ ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ವಿಚಾರವಾಗಿದೆ. ಯಾರೂ ನನ್ನ ಕಾಂಪಿಟೇಟರ್ ಅಲ್ಲವೇ ಅಲ್ಲ ಎಂದಿದ್ದರೋ ರೂಪೇಶ್ ಶೆಟ್ಟಿ ಮುಂದೆ ಅವರೇ ಕಾಂಪಿಟೇಟರ್ ಆಗಿ ನಿಂತಿದ್ದಾರೆ. ಇದೊಂದು ರೀತಿಯಲ್ಲಿ ರೂಪೇಶ್ ಶೆಟ್ಟಿಗೆ ಮುಖಭಂಗವಾದಂತೆ ಆಗಿದೆ.

  BBK9: ಪ್ರಶಾಂತ್‌ 'ಬೌಬೌ ಸ್ಟಾರ್'.. ಉಳಿದವರಿಗೆ ಯಾವೆಲ್ಲಾ ಬಿರುದು ಸಿಕ್ಕಿದೆ..?BBK9: ಪ್ರಶಾಂತ್‌ 'ಬೌಬೌ ಸ್ಟಾರ್'.. ಉಳಿದವರಿಗೆ ಯಾವೆಲ್ಲಾ ಬಿರುದು ಸಿಕ್ಕಿದೆ..?

  ಅಷ್ಟಕ್ಕೂ ರೂಪೇಶ್ ಶೆಟ್ಟಿ ಹೇಳಿದ್ದೇನು..?

  ಅಷ್ಟಕ್ಕೂ ರೂಪೇಶ್ ಶೆಟ್ಟಿ ಹೇಳಿದ್ದೇನು..?

  ನಿನ್ನೆ ಟಾಸ್ಕ್ ಒಂದನ್ನು ನೀಡಲಾಗಿತ್ತು. ಅದು ಬಿಗ್ ಬಾಸ್ ಸದಸ್ಯರು ತಮ್ಮ ಕಾಂಪಿಟೇಟರ್ ಯಾರು ಎಂದು ಹೇಳಬೇಕಾದ ಟಾಸ್ಕ್. ಎಲ್ಲರೂ ಅವರಿಗೆ ಯಾರು ಕಾಂಪಿಟೇಟರ್ ಅಲ್ಲ ಅಂತ ಅನಿಸಿತೋ ಅವರ ಹೆಸರೇಳಿ, ಕಾರಣವನ್ನು ಹೇಳಿದರು. ರೂಪೇಶ್ ಶೆಟ್ಟಿ ಸರದಿ ಬಂದಾಗ ಆರ್ಯವರ್ಧನ್ ಅವರ ಫೋಟೊ ತೆಗೆದುಕೊಂಡು ಇವರು ನನಗೆ ಕಾಂಪಿಟೇಟರ್ ಅಲ್ಲವೇ ಅಲ್ಲ ಅಂತ ಹೇಳಿದ್ದರು. ಇದೇ ವಿಚಾರಕ್ಕೆ ರೂಪೇಶ್ ಶೆಟ್ಟಿ ಹಾಗೂ ಅನುಪಮಾ ನಡುವಿನ ವಾಗ್ವಾದಕ್ಕೂ ಕಾರಣವಾಗಿತ್ತು. ಇದೀಗ ನಿರೀಕ್ಷಿಸದೆ ಇದ್ದದ್ದಕ್ಕಿಂತ ಉಲ್ಟಾ ಆಗಿದೆ.

  ಇಂದು ನಡೆದದ್ದು ಏನು..?

  ಇಂದು ನಡೆದದ್ದು ಏನು..?

  ಇಂದು ಬಜರ್ ಯಾರು ಮೊದಲು ಒತ್ತುತ್ತಾರೋ ಅವರು ಟಾಸ್ಕ್ ಆಡುವುದಕ್ಕೆ ಅವಕಾಶ ನೀಡಲಾಗಿತ್ತು. ಅದರಲ್ಲಿ ರೂಪೇಶ್ ಶೆಟ್ಟಿ ಗೆಲ್ಲುತ್ತಾರೆ. ಆಗ ಅನುಪಮಾ ನಿಮಗೆ ಜೊತೆಗೆ ಆಡುವವರು ಆಯ್ಕೆ ಮಾಡಿಕೊಳ್ಳಿ ಎನ್ನುತ್ತಾರೆ. ಆಗ ರೂಪೇಶ್, ನನ್ನ ಸ್ಟ್ರೆಂಥ್‌ಗೆ ಒಳ್ಳೆ ಕಾಂಪಿಟೇಟರ್ ಅಂದ್ರೆ ಅದು ಗುರೂಜಿ ಎಂದಿದ್ದಾರೆ. ಇದು ಮನೆಯವರಿಗೆ ಫುಲ್ ಗೊಂದಲ ಆಗಿಬಿಟ್ಟಿದೆ. ಅಮೂಲ್ಯ ಕೂಡ ಈ ಬಗ್ಗೆ ಹೇಳಿದ್ದು, ನಿನ್ನೆ ತಾನೇ ಅವರು ಕಾಂಪಿಟೇಟರ್ ಅಲ್ಲ ಅಂತ ಹೇಳಿದ್ರಿ ಎಂದಿದ್ದಾರೆ. ಇನ್ನು ಪ್ರಶಾಂತ್ ಸಂಬರ್ಗಿ, ಗುರೂಜಿಯ ಕಿವಿ ಚುಚ್ಚಿದ್ದಾರೆ. ನಿನ್ನೆ ಹೀಗೆ ಅಂದ. ಈಗ ಹೀಗೆ ಅಂತಿದ್ದಾನೆ. ಇವೆದಲ್ಲದರ ನಡುವೆ ಇಬ್ಬರ ನಡುವೆ ಆಟ ಶುರುವಾಗಿದೆ.

  ನೆಟ್ಟಿಗರಿಗೆ ಅರ್ಥವಾಗಿದೆ ರೂಪೇಶ್ ಮಾತು

  ನೆಟ್ಟಿಗರಿಗೆ ಅರ್ಥವಾಗಿದೆ ರೂಪೇಶ್ ಮಾತು

  ಇನ್ನು ಬಿಗ್ ಬಾಸ್‌ನಲ್ಲಿ ಇರುವ ಸದಸ್ಯರಿಗೆ ಅವರಿಗೆ ಆದಂತ ಒಂದಷ್ಟು ಫ್ಯಾನ್ ಫಾಲೋವರ್ಸ್ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಪೋರ್ಟ್ ಮಾಡುತ್ತಾ ಇರುತ್ತಾರೆ. ಇದೀಗ ಸಪೋರ್ಟರ್‌ಗಳು ಹೊರತಾಗಿಯೂ ರೂಪೇಶ್ ಶೆಟ್ಟಿಗೆ ಬೆಂಬಲ ಸಿಗುತ್ತಾ ಇದೆ. ಆರ್ಯವರ್ಧನ್ ಗುರೂಜಿ ನನಗೆ ಕಾಂಪಿಟೇಟರ್ ಅಲ್ಲ ಅಂತ ರೂಪೇಶ್ ಶೆಟ್ಟಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದನ್ನು ಕಮೆಂಟ್ ಮಾಡುವ ಮೂಲಕ ವಿವರಣೆ ನೀಡಿ, ರೂಪೇಶ್ ಶೆಟ್ಟಿ ಬೆಂಬಲಕ್ಕೆ ನಿಂತಿದ್ದಾರೆ.

  ರೂಪೇಶ್‌ ಶೆಟ್ಟಿಗೆ ಗುರೂಜಿನೇ ಕಾಂಪಿಟೇಟರ್?

  ರೂಪೇಶ್‌ ಶೆಟ್ಟಿಗೆ ಗುರೂಜಿನೇ ಕಾಂಪಿಟೇಟರ್?

  ಸೇಮ್ ಕಲರ್ ಹಲಗೆಗಳನ್ನು ತೂತ ಇರುವಲ್ಲಿಗೆ ಜೋಡಿಸಬೇಕು ಇದು ಆರ್ಯವರ್ಧನ್ ಹಾಗೂ ರೂಪೇಶ್ ಶೆಟ್ಟಿಗೆ ನೀಡಿರುವಂತ ಟಾಸ್ಕ್. ಹೋಲ್‌ಗೆ ಮ್ಯಾಚ್ ಆಗುವಂತ ಹಲಗೆ ತೆಗೆದುಕೊಳ್ಳುವುದೇ ಟಫ್ ಚಾಲೆಂಜ್. ಆದ್ರೆ ಈ ಟಾಸ್ಕ್ ಅನ್ನು ತೀರಾ ಸಲೀಸು ಎಂಬಂತೆ ಆಡುತ್ತಿದ್ದಾರೆ ಆರ್ಯವರ್ಧನ್ ಗುರೂಜಿ. ಇತ್ತ ರೂಪೇಶ್‌ಗೆ ಸರಿಯಾದ ಹಲಗೆಯೇ ಸಿಗುತ್ತಿಲ್ಲ. ತುಂಬಾ ಟೆನ್ಶನ್ ಆಗಿದ್ದು, ಯಾವುದು ಕೂರುತ್ತಿಲ್ಲ ಎಂದು ಗಾಬರಿಯಾಗಿದ್ದಾರೆ. ಈ ಮೂಲಕ ಈ ಟಾಸ್ಕ್‌ನಲ್ಲಿ ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

  BBK9: 'ಬಾಯಲ್ಲೂ ಫ್ರೀಜರ್ ಇದೆ': ದಿವ್ಯಾ ಉರುಡುಗ ಮಾತು ಕೇಳಿ ದಂಗಾದ ಕಿಚ್ಚ!BBK9: 'ಬಾಯಲ್ಲೂ ಫ್ರೀಜರ್ ಇದೆ': ದಿವ್ಯಾ ಉರುಡುಗ ಮಾತು ಕೇಳಿ ದಂಗಾದ ಕಿಚ್ಚ!

  English summary
  Bigg Boss Kannada November 1st Episode Written Update. Here is the details about Roopesh Shetty and Aryavardhan game.
  Tuesday, November 1, 2022, 19:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X