BBK 9: ಓಟಿಟಿಯಲ್ಲಿ ಸಿಗದ ಆರ್ಯವರ್ಧನ್ ನಗು ಕೊನೆಗೂ ಕಿಚ್ಚನಿಗೆ ಟಿವಿ ಶೋನಲ್ಲಿ ಸಿಕ್ತು..!
ಆರ್ಯವರ್ಧನ್ ನಗುವೇ ಭಿನ್ನ ವಿಭಿನ್ನ. ಅದನ್ನ ಓಟಿಟಿ ಸೀಸನ್‌ನಲ್ಲಿ ಅದಾಗಲೇ ಕಿಚ್ವ ಸುದೀಪ್ ಕೂಡ ನೋಡಿ ಆಗಿತ್ತು. ಒಮ್ಮೆ ವಾರದ ಕಥೆಯಲ್ಲಿ ಈ ಬಗ್ಗೆ ಡಿಸ್ಕಷನ್ ಕೂಡ ನಡೆದಿತ್ತು. ಒಮ್ಮೆ ಅದೇಗೆ ನಗುತ್ತೀರಾ ನಕ್ಕು ತೋರಿಸಿ ಅಂತ ಸುದೀಪ್ ಕೇಳಿದ್ದರು. ಆದರೆ ಆ ಸಮಯದಲ್ಲಿ ಆರ್ಯವರ್ಧನ್ ಆ ನಗುವನ್ನು ತೋರಿಸಿರಲಿಲ್ಲ.
ನಗುವುದಕ್ಕೆ ಶುರುವಾದರೆ ಹೆಚ್ಚು ಸಮಯ ಬೇಕಾಗುತ್ತದೆ. ಬಿದ್ದು ಬಿದ್ದು ಉರುಳಾಡಿ ಬಿಡುತ್ತೇನೆ ಎಂದಿದ್ದರು. ಕಿಚ್ಚ ಸುದೀಪ್ ಆ ನಗುವನ್ನು ತರಿಸಲು ಯತ್ನಿಸಿದ್ದರು ಕೂಡ ಅದು ಆಗಿರಲಿಲ್ಲ. ಆದ್ರೆ ಟಿವಿ ಸೀಸನ್‌ನಲ್ಲಿ ಸುದೀಪ್ ಸಕ್ಸಸ್ ಕಂಡಿದ್ದಾರೆ.
'ಸೂಪರ್ ಸಂಡೇ ವಿತ್ ಸುದೀಪ' ಜೊತೆ ವೀಕೆಂಡ್ ಪ್ರೋಗ್ರಾಂ ನೋಡುವುದಕ್ಕೆ ಅದೆಷ್ಟು ಮಂದಿ ಕಾಯುತ್ತಿರುತ್ತಾರೋ. ಅದರಲ್ಲೂ ವಾರದ ಎಪಿಸೋಡ್ ನೋಡುವಾಗ, ಈ ತಪ್ಪಿಗೆ ಕಿಚ್ಚ ಯಾವ ಶಿಕ್ಷೆ ನೀಡಬಹುದು ಅಥವಾ ಈ ನಡವಳಿಕೆಗೆ ಕಿಚ್ಚ ಹೇಗೆ ತಿಳಿಸಿ ಹೇಳುತ್ತಾರೆ ಎಂಬೆಲ್ಲಾ ಪ್ರಶ್ನೆಗಳನ್ನು ಮೊದಲೇ ಹಾಕಿಕೊಳ್ಳುತ್ತಾರೆ. ಅದಕ್ಕೆ ಉತ್ತರವಾಗಿ ಭಾನುವಾರದ ಎಪಿಸೋಡ್ ಮಿಸ್ ಆಗುವುದೇ ಇಲ್ಲ.

ಊಟದ ನೆಪದಲ್ಲಿ ಆರ್ಯವರ್ಧನ್ ಟೀಂ ಮಾಡುವುದೇನು?
ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಡೈನಿಂಗ್ ಟೇಬಲ್ ಮೇಲೆಯೇ ಊಟ ಮಾಡುತ್ತಾರೆ. ಎಲ್ಲರೂ ಒಟ್ಟಿಗೆ ಊಟ ಮಾಡದೆ ಇದ್ದರೂ, ಯಾರು ಯಾರಿಗೆ ಜೊತೆಯಲ್ಲಿ ಕೂತು ಊಟ ಮಾಡಬೇಕು ಎನಿಸಿದರೆ ಅವರೇ ಕೂತು ಅದೇ ಡೈನಿಂಗ್ ಟೇಬಲ್ ಮೇಲೆ ಕೂತು ಊಟ ಮಾಡುತ್ತಿದ್ದರು. ಆದ್ರೆ ಆರ್ಯವರ್ಧನ್ ಗುರೂಜಿ ಈಗ ಅದನ್ನು ಬದಲಾಯಿಸಿದ್ದಾರೆ. ತನ್ನ ಗ್ಯಾಂಗ್ ಕಟ್ಟಿಕೊಂಡು ಬೆಳದಿಂಗಳಲ್ಲಿ ತಿನ್ನುವುದಕ್ಕೆ ಆರಂಭಿಸಿದ್ದಾರೆ.

ಬೆಳದಿಂಗಳ ಊಟದ ಕಾರಣ ಬಿಚ್ಚಿಟ್ಟ ಕಿಚ್ಚ
ಎಲ್ಲರೂ ಒಟ್ಟಿಗೆ ಇದ್ದರೆ ಅಥವಾ ಮನೆಯೊಳಗಡೆಯೇ ಕುಳಿತುಕೊಂಡಾಗ ಅಷ್ಟೊಂದು ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಯಾರು ಇಲ್ಲದ, ಯಾರು ಕಿವಿಗೊಡದ ಜಾಗಕ್ಕೆ ಹೋಗಿ ಆ ಬಗ್ಗೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಹೆಸರಿಗೆ, ನೆಪಕ್ಕಷ್ಟೇ ಬೆಳದಿಂಗಳ ಊಟ ಇರುತ್ತದೆ. ಆದರೆ ಅಲ್ಲಿ ಮಾತನಾಡುವುದು ಮನೆಯವರ ಬಗ್ಗೆಯೇ ಆಗಿದೆ.

ಮನೆಯವರ ಮುಂದೆ ಗುರೂಜಿ ಬಣ್ಣ ಬಯಲು
ಯಾರು ಕೇಳಿಸಿಕೊಳ್ಳದ ಜಾಗಕ್ಕೆ ಆರ್ಯವರ್ಧನ್ ಗುರೂಜಿ ತನ್ನ ಗ್ಯಾಂಗ್ ಅಂದ್ರೆ ರೂಪೇಶ್ ರಾಜಣ್ಣ ಮತ್ತು ರೂಪೇಶ್ ಶೆಟ್ಟಿಯನ್ನು ಕರೆದುಕೊಂಡು ಹೋಗಿ ಮಾತನಾಡುವುದಕ್ಕೆ ಕುಳಿತುಕೊಳ್ಳುತ್ತಿದ್ದರು. ಅಲ್ಲಿ ನಡೆಯುವ ಮಾತುಕತೆ ಸಂಪೂರ್ಣವಾಗಿ ಬೇರೆಯವರದ್ದೇ ಆಗಿರುತ್ತಿತ್ತು. ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ, ಯಾರು ಯಾರ ಬಗ್ಗೆ ಹೆಚ್ಚು ಮಾತನಾಡುತ್ತಾರೆ, ಯಾರು ಯಾವ ಥರದವರು ಹೀಗೆ ಅನೇಕ ವಿಚಾರಗಳು ಅಲ್ಲಿ ಬೇರೆಯವರದ್ದೇ ಆಗಿರುತ್ತಾ ಇತ್ತು. ಇದನ್ನೆಲ್ಲಾ ಕಿಚ್ಚ ಎಲ್ಲರ ಮುಂದೆ ಹೇಳಿ, ಮನೆಯವರಿಗೆ ಶಾಕ್ ನೀಡಿದ್ದಾರೆ.

ಬಿದ್ದು ಬಿದ್ದು ನಕ್ಕಿದ ಆರ್ಯವರ್ಧನ್ ಗುರೂಜಿ
ಕಿಚ್ಚ ಸುದೀಪ್ ಇಂದು 'ಸೂಪರ್ ಸಂಡೇ ವಿತ್ ಸುದೀಪ' ಕಾರ್ಯಕ್ರಮದಲ್ಲಿ ಬೆಳದಿಂಗಳ ಊಟದ ಬಗ್ಗೆ ಮಾತನಾಡಿದ್ದರು. ಅಲ್ಲಿ ಹೋಗಿ ಹೀಗೆಲ್ಲಾ ಮಾತಾಡ್ತೀರಾ ಅಲ್ವಾ ಎಂದಾಗ ಗುರೂಜಿ ಆರಾಮವಾಗಿಯೇ ಹೌದು ಎಂದು ಒಪ್ಪಿಕೊಂಡಿದ್ದರು. ಬಳಿಕ ರೂಪೇಶ್ ಶೆಟ್ಟಿ ಬಳಿ ಹೋದಾಗ, ಅಲ್ಲಿ ಏನೆಲ್ಲಾ ಮಾತಾಡಿದ್ರಿ ಎಂದರೆ ಇಲ್ಲ ಇಲ್ಲ ಎನ್ನುತ್ತಿದ್ದವ ಆಮೇಲೆ ಹೌದು ಹೌದು ಎನ್ನುವುದಕ್ಕೆ ಶುರು ಮಾಡಿದರು. ಇದೇ ರೀತಿಯ ಕಾಮಿಡಿ ಮುಂದುವರೆದು ಆರ್ಯವರ್ಧನ್ ಗುರೂಜಿ ಹೆಚ್ಚು ನಗುವುದಕ್ಕೆ ಶುರು ಮಾಡಿದರು. ಅವರನ್ನು ನೋಡಿ ಮನೆ ಮಂದಿಯೆಲ್ಲಾ ನಗುವುದಕ್ಕೆ ಆರಂಭಿಸಿದರು. ಅದಕ್ಕೆ ಕಾರಣ ಆರ್ಯವರ್ಧನ್ ಗುರೂಜಿಯ ನಗು ಆ ರೀತಿ ಇತ್ತು.


Click it and Unblock the Notifications











