BBK9: ರೂಪೇಶ್ ರಾಜಣ್ಣನ ಟೊಮ್ಯಾಟೊ ಗೊಜ್ಜಿಗೆ ಮನೆ ಮಂದಿಯೆಲ್ಲಾ ಗಾಬರಿ.. ಆದರೂ ಸಿಕ್ತು ಟೀ ಪಾರ್ಟಿ!
ಬಿಗ್ ಬಾಸ್ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಡುವುದಕ್ಕೆ ಯಾರೂ ಇರುವುದಿಲ್ಲ. ಬದಲಿಗೆ ಮನೆಯ ಸದಸ್ಯರೇ ಮಾಡಿಕೊಳ್ಳಬೇಕು. ಅದು ಟೇಸ್ಟ್ ಆಗಿ ಇರಲಿ ಇಲ್ಲದೆ ಇರಲಿ, ಅವರವರೇ ಮಾಡಿಕೊಂಡು ತಿನ್ನಬೇಕು. ಯಾರಿಗೆ ಅಡುಗೆ ಚೆನ್ನಾಗಿ ಬರುತ್ತೋ ಅವರು ಅಡುಗೆ ಮನೆಯಲ್ಲಿ ಹೆಚ್ಚಿಗೆ ಇರುತ್ತಾರೆ. ಇನ್ನುಳಿದವರು ಅವರಿಗೆ ಸಹಾಯ ಮಾಡುತ್ತಾರೆ.
ಓಟಿಟಿ ಸೀಸನ್‌ನಿಂದಾನು ಆರ್ಯವರ್ಧನ್ ಗುರೂಜಿಗೆ ಅಡುಗೆ ಮನೆಯೆಂದರೆ ತುಂಬಾ ಇಷ್ಟದಂತೆ ಕಾಣುತ್ತೆ. ಅದಕ್ಕೆ ಅಲ್ಲಿಂದ ಬಿಟ್ಟು ಬಂದಿಲ್ಲ. ಆದರೆ, ಈ ವಾರದಲ್ಲಿ ರೂಪೇಶ್ ರಾಜಣ್ಣನಿಗೆ ಅಡುಗೆ ಮಾಡುವ ಟಾಸ್ಕ್ ನೀಡಲಾಗಿದೆ. ಅಡುಗೆ ಇರಲಿ, ಅವರ ಕಷ್ಟ ನೋಡಿ ಮನೆ ಮಂದಿ ಸುಸ್ತೆದ್ದು ಹೋಗಿದ್ದಾರೆ. ತಿಂದರೆ ಏನಪ್ಪ ಗತಿ ಎಂಬಷ್ಟು ಯೋಚನೆಯಲ್ಲಿ ಮುಳುಗಿದ್ದಾರೆ.

ರಾಜಣ್ಣನ ಅಡುಗೆಗಾಗಿ ಕಾದು ಕೂತ ಮನೆ ಮಂದಿ
ಒಮ್ಮೆಯಾದರೂ ಅಡುಗೆ ಮನೆ ಕಡೆ ಹೋಗಿ, ಅಡುಗೆ ಮನೆಯಲ್ಲಿ ಏನೆಲ್ಲಾ ಐಟಂಗಳು ಇರುತ್ತವೆ, ಅಡುಗೆ ಮಾಡಲು ಗ್ಯಾಸ್ ಹೇಗೆ ಆನ್ ಮಾಡಬೇಕು, ಒಗ್ಗರಣೆ ಹಾಕುವಾಗ ಎಷ್ಟು ಎತ್ತರದಿಂದ ಒಗ್ಗರಣೆ ಪದಾರ್ಥಗಳನ್ನು ಎಣ್ಣೆಗೆ ಹಾಕಬೇಕು ಇದೆಲ್ಲವನ್ನು ನೋಡಬೇಕು. ಆಗ ರಾಜಣ್ಣನಿಗೆ ಆದ ಭಯ ಮತ್ಯಾರಿಗೂ ಆಗುವುದಿಲ್ಲ. ಅಡುಗೆ ಮನೆಗೆ ಹೋದ ರಾಜಣ್ಣನಿಗೆ ಗ್ಯಾಸ್ ಸ್ಟೌ ಹಚ್ಚುವುದಕ್ಕೂ ಗೊತ್ತಾಗುತ್ತಿಲ್ಲ. ಆನ್ ಆದ ಕೂಡಲೇ ಹೆದರಿದ್ದಾರೆ. ಎಣ್ಣೆಗೆ ಒಗ್ಗರಣೆ ಹಾಕುವಾಗಲೂ ಅಂಜಿಕೊಂಡೇ ಹಾಕುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ಮನೆಯವರು ನಿಮ್ಮ ಮನೆಯಲ್ಲಿ ಅಡುಗೆ ಮನೆ ಅಂತ ಒಂದಿರುತ್ತೆ, ಅದನ್ನು ನೋಡಿ ಆದ್ರೂ ಬರಬೇಕಿತ್ತು ಎಂದಿದ್ದಾರೆ.

ಟೊಮ್ಯಾಟೊ ಗೊಜ್ಜು ರಾಜಣ್ಣನ ಥರ ಮಾಡಿ ನೋಡಿ
ಇವತ್ತು ಸಂಪೂರ್ಣ ಅಡುಗೆ ಜವಾಬ್ದಾರಿ ರಾಜಣ್ಣನದ್ದು. ಹಾಗೇ ಮನೆಯ ಯಾರೊಬ್ಬರು ಹೇಳಿಕೊಡುವ ಹಾಗೂ ಇಲ್ಲ. ಸಹಾಯ ಮಾಡುವ ಹಾಗೂ ಇಲ್ಲ. ತರಕಾರಿ ಹೆಚ್ಚಿ, ಅವರೇ ಅಡುಗೆ ಮಾಡಬೇಕಿತ್ತು. ಅದರ ಪರಿಣಾಮವಾಗಿ ಟೊಮ್ಯಾಟೊ ಗೊಜ್ಜು ಹಾಗೂ ಚಪಾತಿ ಮಾಡಿದ್ದಾರೆ. ಟೊಮ್ಯಾಟೊ ಗೊಜ್ಜಿಗೆ ಏನು ಹಾಕಬೇಕು ಗೊತ್ತಾಗುತ್ತಿಲ್ಲ. ಸಾಂಬಾರ್ ಪುಡಿ, ಖಾರದ ಪುಡಿ ಹೀಗೆ ಸಿಕ್ಕ ಸಿಕ್ಕದ್ದೆಲ್ಲವನ್ನು ಹಾಕಿ ಒಟ್ಟಾರೆ ಏನೋ ಒಂದು ಮಾಡಿ ಕೊಟ್ಟಿದ್ದಾರೆ.

ಮನೆಯವರ ಸಹಾಯವಿಲ್ಲದೆ ಅಡುಗೆ ಮಾಡಬೇಕು
ಬೆಳಗ್ಗಿನ ತಿಂಡಿಗೆ ಚಪಾತಿ ಹಾಗೂ ಟೊಮ್ಯಾಟೊ ಗೊಜ್ಜನ್ನು ಮಾಡಿದರು. ತಿಂದವರೆಲ್ಲಾ ಸೂಪರ್ ಅಂತ ಹೊಗಳಿದರು. ಆದರೆ ಪಾಪ ಕಾವ್ಯಶ್ರೀ ಗೊಳೋ ಎನ್ನುತ್ತಿದ್ದರು. ಅದಕ್ಕೆ ಕಾರಣ ಸ್ವಾರ್ಥಿ ಪಟ್ಟ ತೆಗೆದುಕೊಂಡು ರಾಜಣ್ಣ, ಕಾವ್ಯಾಗೆ ಕೈತುತ್ತು ತಿನ್ನಿಸಿಯೇ ಊಟ ಮಾಡಬೇಕಿತ್ತು. ಹೀಗಾಗಿ ಕಣ್ಣೀರು ಹಾಕುತ್ತಾ ಕುಳಿತಿದ್ದರು. ಇದಾದ ಮೇಲೆ ಮಧ್ಯಾಹ್ನ ಊಟದ ಸಮಯ ಬಂತು. ಆಗ ಸಾಂಬಾರ್ ಮಾಡಿದ್ದರು. ಅದು ಸಾಂಬಾರೀ ಇಲ್ಲಾ ನೀರೋ ಗೊತ್ತಾಗುತ್ತಿಲ್ಲ. ಒಗ್ಗರಣೆಗೆ ಸಾಂಬಾರ್ ಅನ್ನೇ ಒಂದು ಸ್ಟೌ ಹಾಕಿದ್ದಾರೆ. ಇದರ ರೀತಿ ನೀತಿ ನೋಡಿ ಮನೆ ಮಂದಿ ದಂಗಾಗಿದ್ದಾರೆ.

ಬಿಗ್ ಬಾಸ್ ನಿಂದ ರಾಜಣ್ಣನಿಗೆ ಟೀ ಪಾರ್ಟಿ
ಸುದೀಪ್ ಕೊಟ್ಟ ಟಾಸ್ಕ್ ಅನ್ನು ರಾಜಣ್ಣ ಹೇಗೋ ಕಷ್ಟ ಪಟ್ಟು ಅಡುಗೆ ಮಾಡಿಕೊಟ್ಟಿದ್ದಾರೆ. ಬಳಿಕ ಕೊನೆಯಲ್ಲಿ ನನಗೆ ಅಡುಗೆ ಮಾಡುವುದಕ್ಕೆ ಬರಲ್ಲ. ಎಲ್ಲರೂ ಸಹಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಹಾಗೇ ಚೆನ್ನಾಗಿಲ್ಲ ಅಂದ್ರೆ ಕ್ಷಮಿಸಿ ಎಂದಿದ್ದಾರೆ. ಅದಕ್ಕೂ ಮುನ್ನ ಬಿಗ್ ಬಾಸ್ ಒಂದು ಆಫರ್ ನೀಡಿತ್ತು. ಟೀ ಕುಡಿಯುವ ಆಫರ್. ಅದು ಚೀಟಿಯಲ್ಲಿ ಯಾರ ಹೆಸರು ಬರುತ್ತದೆ ಅವರು ಅವರು ಇಷ್ಟಪಟ್ಟವರ ಜೊತೆ ಕೂತು ಟೀ ಕುಡಿಯುವ ಆಫರ್. ಅದು ರಾಜಣ್ಣನಿಗೆ ಬಂದಿತ್ತು. ಅವರು ರಾಕೇಶ್ ಜೊತೆ ಕೂತು ಟೀ ಎಂಜಾಯ್ ಮಾಡಿದ್ದಾರೆ.


Click it and Unblock the Notifications











