For Quick Alerts
  ALLOW NOTIFICATIONS  
  For Daily Alerts

  BBK9: ಸ್ವಾರ್ಥಿ ಎಂದಿದ್ದೇ ತಪ್ಪಾಗಿದೆ: ಆರ್ಯವರ್ಧನ್, ರೂಪೇಶ್ ರಾಜಣ್ಣ ಫುಲ್ ಸ್ಕೆಚ್!

  By ಎಸ್ ಸುಮಂತ್
  |

  ಬಿಗ್ ಬಾಸ್‌ನಲ್ಲಿ ನಾಮಿನೇಷನ್ ಮಾಡುವಾಗ, ಇನ್ಯಾವುದೋ ವಿಚಾರಕ್ಕೆ ಸದಸ್ಯರ ಬಗ್ಗೆ ಹೇಳುವಾಗ ಅವರನ್ನು ನೋಡಿ ಅಥವಾ ಅವರ ಜೊತೆಗೆ ತಮ್ಮ ಒಡನಾಟ ಏನಿದೆ ಎಂಬುದರ ಮೇಲೆ ಅಭಿಪ್ರಾಯಗಳನ್ನು ನೀಡುತ್ತಾರೆ. ಅಭಿಪ್ರಾಯ ನೀಡಿದ ಮೇಲೆ ಅದು ಅಲ್ಲಿಗೆ ಮುಗಿದು ಬಿಡುತ್ತದೆ. ಬದಲಾಯಿಸಿಕೊಳ್ಳುವವರು ಬದಲಾಯಿಕೊಳ್ಳುತ್ತಾರೆ. ಅವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದುಕೊಳ್ಳುವವರು ಕಾಯ್ದುಕೊಳ್ಳುತ್ತಾರೆ. ಆದರೆ, ಅದ್ಯಾಕೋ ಏನೋ ಈ ಬಾರಿಯ ಬಿಗ್ ಬಾಸ್‌ನಲ್ಲಿ ತಮ್ಮ ಅಭಿಪ್ರಾಯ ಮಂಡನೆ ಆದ ಮೇಲೆ ಅವರಿಗೆ ಕ್ಲಾಸ್ ತೆಗೆದುಕೊಳ್ಳುವುದೇ ಆಗಿ ಹೋಗಿದೆ.

  'ಸೂಪರ್ ಸಂಡೇ ವಿತ್ ಸುದೀಪ' ಕಾರ್ಯಕ್ರಮದಲ್ಲಿ ಸುದೀಪ್ ಕೂಡ ಇದೇ ವಿಚಾರಕ್ಕೆ ಸ್ವಲ್ಪ ಬೇಸರ ಮಾಡಿಕೊಂಡರು. ಮನೆ ಮಂದಿಗೆ ಆ ಬಗ್ಗೆ ವಿವರಣೆಯನ್ನು ನೀಡಿದರು. ನಿಮ್ಮ ಹೆಸರು ಹೇಳಿದರು ಎಂದರೆ ಅಲ್ಲಿ ನೀವೂ ಚೆನ್ನಾಗಿ ಆಡಿಲ್ಲ ಅಂತ ಅಲ್ಲ. ನಿಮಗಿಂತು ಇವರು ಇನ್ನೊಂದೆಜ್ಜೆ ಚೆನ್ನಾಗಿ ಆಡಿದ್ದಾರೆ ಎಂದು ಅರ್ಥ. ಅಂದ್ರೆ, ಅಭಿಪ್ರಾಯ ಹೇಳಿದ ಮೇಲೆ ಅವರ ಬಗ್ಗೆ ತಪ್ಪುತಿಳಿಯುವ ಅವಶ್ಯಕತೆ ಇಲ್ಲ ಅಂತ ಸುದೀಪ್ ಹೇಳಿದ್ದರೂ ಕೇಳುತ್ತಿಲ್ಲ.

  ರಾಜಣ್ಣನ ಆಯ್ಕೆ ಉಲ್ಟಾ ಆಗಿ ಹೋಯ್ತಾ

  ರಾಜಣ್ಣನ ಆಯ್ಕೆ ಉಲ್ಟಾ ಆಗಿ ಹೋಯ್ತಾ

  ಇವತ್ತು ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೆ ಮಾತ್ರ ಒಂದು ಸ್ಪೆಷಲ್ ಆಫರ್ ನೀಡಿದ್ದರು. ಅದು ಒಂದು ಚೀಟಿಯಲ್ಲಿ ಯಾರಿಗೆ ಟೀ ಹೆಸರು ಬರುತ್ತದೋ ಅವರು, ತಮಗೆ ಬೇಕಾದವರ ಜೊತೆ ಕೂತು, ಟೀ ಕುಡಿಯುತ್ತಾ ಚರ್ಚೆ ಮಾಡಬಹುದು ಎಂದಿತ್ತು. ಆರ್ಯವರ್ಧನ್‌ಗೂ ಬರಲಿಲ್ಲ, ರಾಕೇಶ್‌ಗೂ ಬರಲಿಲ್ಲ. ರಾಜಣ್ಣ ಹೋದಾಗ ಬರಬಹುದು ಎಂದು ಮನೆ ಮಂದಿ ಊಹಿಸಿದ್ದರು. ಅದರಂತೆ ಪ್ರಶಾಂತ್ ಸಂಬರ್ಗಿ ಜೊತೆಗೆ ಕೂತು ಟೀ ಕುಡಿಯುತ್ತಾರೆ ಎಂದುಕೊಂಡಿದ್ದರು. ಆದರೆ, ಮನೆಯವರು ಅಂದುಕೊಂಡಿದ್ದು ಸತ್ಯವಾಯಿತು. ಅದು ಟೀ ಕುಡಿಯುವ ಅವಕಾಶ ರಾಜಣ್ಣನಿಗೆ ಬಂದಿತ್ತು. ಆದರೆ, ರಾಕೇಶ್‌ ಕರೆದು ಶಾಕ್ ಕೊಟ್ಟಿದ್ದರು. ಇದನ್ನು ಕಂಡು ಮನೆಯವರೆಲ್ಲಾ ಕಿರುಚಿಕೊಂಡು ನಗಾಡಿದ್ದರು.

  ರಾಕೇಶ್ ಜೊತೆ ಕ್ಲಾರಿಟಿ ತೆಗೆದುಕೊಂಡ ರಾಜಣ್ಣ

  ರಾಕೇಶ್ ಜೊತೆ ಕ್ಲಾರಿಟಿ ತೆಗೆದುಕೊಂಡ ರಾಜಣ್ಣ

  'ಸೂಪರ್ ಸಂಡೇ ವಿತ್ ಸುದೀಪ' ಕಾರ್ಯಕ್ರಮದಲ್ಲಿ ಕಾಳಜಿ ಮತ್ತು ಸ್ವಾರ್ಥದ ಆಟವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ರಾಜಣ್ಣನಿಗೆ ಸ್ವಾರ್ಥಿ ಎಂಬ ಪಟ್ಟ ಹೋಗಿತ್ತು. ರಾಕೇಶ್ ಕೂಡ ಅದನ್ನು ನೀಡಿದ್ದರು. ಅದಕ್ಕೆ ಕ್ಲಾರಿಟಿ ತೆಗೆದುಕೊಳ್ಳುವುದಕ್ಕೆ ರಾಜಣ್ಣ, ರಾಕೇಶ್‌ರನ್ನು ಆಯ್ಕೆ ಮಾಡಿಕೊಂಡಿದ್ದರು. ಶುಗರ್ ಹಾಕಿ, ಹಾಲನ್ನು ಬೆರೆಸಿ ಟೀ ಕುಡಿಯಲು ನೀಡಿದರು. ಬಳಿಕ ಮ್ಯಾಟರ್‌ಗೆ ಬಂದರು ರಾಜಣ್ಣ, "ನಿಮ್ಮದು ಮಾತ್ರ ನೋಡಿಕೊಳ್ಳುತ್ತೀರಿ ಅಂದ್ರಲ್ಲ. ನಿಮಗೆ ಯಾವ ಪಾಯಿಂಟ್‌ನಲ್ಲಿ ಆ ರೀತಿ ಕಂಡೆ" ಎಂದು ಕೇಳಿದ್ದಾರೆ. ಆಗ ರಾಕೇಶ್, "ಬೇರೆಯವರಿಗೆ ಸಿಗಬಾರದು ನನಗೆ ಮಾತ್ರ ಸಿಗಲಿ ಎಂದು ಯೋಚಿಸುತ್ತೀರಾ ಅಂತ ನಾನು ಹೇಳಲಿಲ್ಲ. ನಾನು ಕಿಚನ್‌ಗೆ ಕರೆದಾಗ ನೀವೂ ಬಾರದೆ, ಯೋಚನೆಯಲ್ಲಿ ಮುಳುಗಿರುವುದು ಕೂಡ ಸ್ವಾರ್ಥವೇ" ಎಂದು ಅಂದಿನ ಘಟನೆಯನ್ನು ವಿವರಿಸಿದ್ದಾರೆ.

  ಆರ್ಯವರ್ಧನ್ ಮೇಲೆ ದಿವ್ಯಾ ಕೋಪ

  ಆರ್ಯವರ್ಧನ್ ಮೇಲೆ ದಿವ್ಯಾ ಕೋಪ

  ಇನ್ನು ಶನಿವಾರ ರಾತ್ರಿ ಆರ್ಯವರ್ಧನ್, ದಿವ್ಯಾ ಬಗ್ಗೆ ತನಗನ್ನಿಸಿದ್ದನ್ನು ಹೇಳಿದ್ದರು. ಈಗ ದಿವ್ಯಾ ಗುರೂಜಿ ಬಳಿ ಬಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನೀಗ ಕೇಳುವುದನ್ನು ನೀವೂ ಆರಾಮವಾಗಿ ತೆಗೆದುಕೊಳ್ಳಿ ನಾನು ಆರಾಮವಾಗಿ ಕೇಳುತ್ತಿದ್ದೀನಿ. ಏನೊಂದು ಎರಡ್ಮೂರು ಟಾಸ್ಕ್ ವಿನ್ ಆಗಿದ್ದಾರಾ..? ಎಲ್ಲಾದ್ರೂ ಎಫರ್ಟ್ ಕಡಿಮೆಯಾಗಿದೆಯಾ..? ನೀವೆಷ್ಟು ಗೆದ್ದಿದ್ದೀರಾ..? ಮತ್ತೆ ಯಾಕೆ ಆ ರೀತಿ ಹೇಳಿಕೆಗಳನ್ನು ಕೊಟ್ಟಿದ್ದೀರಾ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

  ಆರ್ಯವರ್ಧನ್ ಮಾತಿಗೆ ಸಮಾಧಾನಗೊಳ್ಳದ ದಿವ್ಯಾ

  ಆರ್ಯವರ್ಧನ್ ಮಾತಿಗೆ ಸಮಾಧಾನಗೊಳ್ಳದ ದಿವ್ಯಾ


  ಆರ್ಯವರ್ಧನ್ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ತನ್ನ ಬುಡಕ್ಕೆ ಬಂದಾಗ ಸಾಫ್ಟ್ ಆಗಿ ಬಿಡುತ್ತಾರೆ. ಆದ್ರೆ ಅಭಿಪ್ರಾಯ ವ್ಯಕ್ತಪಡಿಸುವುದು ಅವರ ಅಭಿಪ್ರಾಯ ಕೂಡ. ಈಗ ದಿವ್ಯಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರ್ಯವರ್ಧನ್, ಮೊದಲಿಗೆ ಬಾರೋ ಇಲ್ಲಿ ಎಂದು ಕರೆಯುತ್ತಾರೆ. ಆದರೂ ದಿವ್ಯಾ ಬರುವುದಿಲ್ಲ. ಇದಕ್ಕೆ ಉತ್ತರ ಕೊಡುತ್ತಾ ಹೋದ ಆರ್ಯವರ್ಧನ್ "ನೀನು ಒಂದು ಮೂರು ಮ್ಯಾಚ್ ಗೆದ್ದಿರಬಹುದು. ನಾನು ಕ್ಯಾಪ್ಟನ್ ಟಾಸ್ಕ್ ಸೇರಿದಂತೆ ಒಂದು ನಾಲ್ಕು ಗೆದ್ದಿರಬಹುದು. ನೀನೆಷ್ಟು ಗೆದ್ದಿದ್ದಿಯಾ.. ? ನಾನು ಎಲ್ಲಾ ಪರ್ಫಾಮೆನ್ಸ್ ಚೆನ್ನಾಗಿ ಆಡಿದ್ದೀನಿ. ಕೂತುಕೊಂಡು ಮಾತನಾಡಿ" ಎಂದು ಸಮಾಧಾನ ಮಾಡುವುದಕ್ಕೆ ಟ್ರೈ ಮಾಡಿದ್ದಾರೆ.

  English summary
  Bigg Boss Kannada 9 November 20th Episode Written Update. Here is the details about bigg boss house statement war.
  Tuesday, November 22, 2022, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X