For Quick Alerts
  ALLOW NOTIFICATIONS  
  For Daily Alerts

  BBK9 : ದಿವ್ಯಾ ಉರುಡುಗಗೆ ತುಂಬಾ ಬೇಕಾದವರಿಗೆ ಹೆಚ್ಚು ಕಡಿಮೆಯಾಗುತ್ತೇನೋ ಅನ್ನೋ ಆತಂಕ!

  |

  ಬಿಗ್ ಬಾಸ್ ಮನೆಯಲ್ಲಿ ಆಗಾಗ ಮನಸ್ಸಿಗೆ ನಾಟುವಂತ ಟಾಸ್ಕ್ ಗಳನ್ನು ನೀಡುತ್ತಾರೆ. ಇದು ಮನೆ ಮಂದಿಗೂ ತುಂಬಾನೇ ಮುಖ್ಯವಾಗುತ್ತದೆ. ಮನೆಯಿಂದ, ಸ್ನೇಹಿತರಿಂದ ಸಾಕಷ್ಟು ದಿನ ದೂರವಿದ್ದು, ಭಾವನೆಗಳನ್ನು ಮನಸ್ಸಲ್ಲಿಯೇ ಅಡಗಿಸಿಕೊಂಡು ಕೂತಿರುತ್ತಾರೆ. ಯಾರಾದರೂ ಮನದೊಳಗಿನ ಭಾವನೆ ಕೆದಕಿದರೆ ನೋವು ಹೊರ ಬರುತ್ತೆ, ಮನಸ್ಸು ಹಗುರವಾಗುತ್ತದೆ.

  ಬಿಗ್ ಬಾಸ್ ಮನೆ ಮಂದಿಯ ಮನಸ್ಸು ನಿರಾಳ ಮಾಡುವುದಕ್ಕೆ ಇವತ್ತು ಬಿಗ್ ಬಾಸ್ ಒಂದು ಟಾಸ್ಕ್ ನೀಡಿತ್ತು. ಅದು ಮನಸ್ಸಿನೊಳಗಿನ ನೋವನ್ನು ಎಕ್ಸ್ ಪ್ರೆಸ್ ಮಾಡುವಂತ ಟಾಸ್ಕ್. ಈ ಟಾಸ್ಕ್ ಶುರುವಾಗಿದ್ದು ರಾತ್ರಿ 11ಕ್ಕೆ ಮನೆ ಮಂದಿ ಅದೆಷ್ಟು ಮಗ್ನರಾಗಿ ತಮ್ಮ ನೋವು ಹೇಳಿಕೊಳ್ಳುತ್ತಾ ಇದ್ದರು ಎಂದರೆ ಮಧ್ಯರಾತ್ರಿ 2.30 ಆದರೂ ಮುಗಿದಿರಲಿಲ್ಲ.

  ಎಮೋಷನ್ಸ್‌ಗೆ ಬೆಲೆ ಕೊಡುವ ದಿವ್ಯಾ

  ಎಮೋಷನ್ಸ್‌ಗೆ ಬೆಲೆ ಕೊಡುವ ದಿವ್ಯಾ

  ದಿವ್ಯಾ ಇದು ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಬರುತ್ತಿರುವುದು. ತಾವೂ ಯಾವ ರೀತಿಯ ಹುಡುಗಿ ಎಂಬುದನ್ನು ಹೇಳಿಕೊಂಡಿದ್ದಾರೆ. ʻನಂಗೆ ಎಮೋಷನ್ಸ್ ಎಲ್ಲಾ ತುಂಬಾ ಇಂಪಾರ್ಟೆಂಟ್. ಒಬ್ಬರ ಜೊತೆ ಕನೆಕ್ಷನ್ ಆಗೋದು ತುಂಬಾ ಇಂಪಾರ್ಟೆಂಟ್. ಅದನ್ನು ಸೇವ್ ಮಾಡಿಕೊಳ್ಳುವುದು ತುಂಬಾ ಇಂಪಾರ್ಟೆಂಟ್. ಜೀವನದಲ್ಲಿ ಅದಕ್ಕೆ ಹೆಚ್ಚು ಬೆಲೆ ಕೊಡುತ್ತೀನಿ. ಯಾಕಂದ್ರೆ, ಎಷ್ಟೋ ಸಲ ನಮ್ಮ ಬಳಿ ಇದ್ದಾಗ ಅದರ ಬೆಲೆ ಗೊತ್ತಾಗಲ್ಲ. ಕಳೆದುಕೊಂಡಾಗ ಅದರ ಬೆಲೆ ತಿಳಿಯುತ್ತೆ. ಇಷ್ಟು ಮುಖ್ಯ ಅಲ್ವಾ, ಇದು ಇಲ್ಲದೆ ಇದ್ದರೆ ಜೀವನದಲ್ಲಿ ಹೇಗೆ ಎನ್ನುವ ಪ್ರಶ್ನೆ ಕಾಡುತ್ತದೆʼ ಎಂದಿದ್ದಾರೆ.

  ಚಿಕ್ಕಪ್ಪನನ್ನು ನೆನೆದ ದಿವ್ಯಾ ಉರುಡುಗ

  ಚಿಕ್ಕಪ್ಪನನ್ನು ನೆನೆದ ದಿವ್ಯಾ ಉರುಡುಗ

  ಕಳೆದ ಬಾರಿ ಬಿಗ್ ಬಾಸ್ ಮನೆಗೆ ಬರುವಾಗ ಏನಾಯಿತು ಎಂದು ಹೇಳಿಕೊಂಡಿದ್ದಾರೆ. ʻನಾನಿವತ್ತು ಮಾತಾಡುತ್ತಿರುವುದು ನನ್ನ ಚಿಕ್ಕಪ್ಪನ ವಿಚಾರ. ನಾನು ಅವರಿಗೆ ಚಿಕ್ಕು ಅಂತ ಕರೆಯುತ್ತಿದ್ದೆ. ಚಿಕ್ಕವಯಸ್ಸಿನಿಂದಾನು ತುಂಬಾ ಮುದ್ದಾಗಿ ಬೆಳೆಸಿದ್ದರು. ಲಾಸ್ಟ್ ಸೀಸನ್‌ನಲ್ಲಿ ಬಿಗ್ ಬಾಸ್‌ಗೆ ಈ ರೀತಿ ಹೋಗ್ತಿದ್ದೀನಿ ಅಂತ ಗೊತ್ತಾದಾಗ ಎಲ್ಲಾ ಫ್ಯಾಮಿಲಿಯವರೆಲ್ಲಾ ಕೇಕ್ ಎಲ್ಲಾ ತರಿಸಿ, ಪಾರ್ಟಿ ಮಾಡಿ, ಮುದ್ದು ಮಾಡಿ, ಪಪ್ಪಿಕೊಟ್ಟು ಕಳುಹಿಸುತ್ತಾರೆ. ಆ ಸಮಯದಲ್ಲಿ ಕೊರೊನಾ ಎಲ್ಲಾ ಶುರುವಾಗುತ್ತೆ. ಶೋ ಎಂಡ್ ಮಾಡಬೇಕಾದ ಸ್ಥಿತಿ ಬರುತ್ತೆ. ಇದನ್ನು ಎಂಡ್ ಮಾಡಿ, ವಾಪಾಸ್ ಮನೆಗೆ ಹೋಗುವಷ್ಟರಲ್ಲಿ ನಮ್ಮ ಚಿಕ್ಕಪ್ಪ ಅಲ್ಲಿರಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

  ಚಿಕ್ಕಪ್ಪನನ್ನು ಕಳೆದುಕೊಂಡ ನೋವಲ್ಲಿ ದಿವ್ಯಾ

  ಚಿಕ್ಕಪ್ಪನನ್ನು ಕಳೆದುಕೊಂಡ ನೋವಲ್ಲಿ ದಿವ್ಯಾ

  ಸಾವು ಯಾವತ್ತಿಗೂ ಯಾರಿಗೂ ಹೇಳಿ ಬರುವುದಿಲ್ಲ. ದಿವ್ಯಾ ಚಿಕ್ಕಪ್ಪ ನಿಧನರಾಗುವಾಗ ದಿವ್ಯಾ ಅಲ್ಲಿರಲಿಲ್ಲ. ಆ ನೋವು ದಿವ್ಯಾಗೆ ತುಂಬಾ ಕಾಡಿದೆ. ʻಅವರು ಇನ್ನು ಇರಲ್ಲ ಅಂತ ಗೊತ್ತಾಗಿದ್ದಿದ್ರೆ ನಾನು ಅವರಿಗೆ ಒಂದು ಚೆಂದದ ಗುಡ್ ಬೈ ಹೇಳುತ್ತಾ ಇದ್ನೇನೋ. ಅವರಿಗೆ ಒಂದು ಗಟ್ಟಿ ಹಗ್ ಮಾಡಿ, ಈ ಶೋಗೆ ಹೋಗಲ್ಲ ಅಂತ ಹೇಳ್ತಾ ಇದ್ದೆ. ಬಂದ ತಕ್ಷಣ ಸಿಗುತ್ತಾರೆ. ನಂಗೆ ಸಪೋರ್ಟ್ ಮಾಡ್ತಾರೆ ಅಂದುಕೊಂಡಿರುತ್ತೀವಿ. ಆದ್ರೆ ಅವರು ಇನ್ಯಾವತ್ತು ನಮ್ಮ ಲೈಫ್‌ನಲ್ಲಿ ಇರಲ್ಲ. ಹೊರಗೆ ಬಂದಾಗ ಇಲ್ಲ ಎಂದರೆ ಹೇಗಾಗುತ್ತೆʼ ಎಂದಿದ್ದಾರೆ

  ಅರವಿಂದ್ ಅವರನ್ನು ನೆನೆದು ಮಂಕಾದ ದಿವ್ಯಾ!

  ಅರವಿಂದ್ ಅವರನ್ನು ನೆನೆದು ಮಂಕಾದ ದಿವ್ಯಾ!

  ದಿವ್ಯಾ ಮತ್ತು ಅರವಿಂದ್ ಈಗ ಪ್ರೇಮಿಗಳು ಎಂಬುದು ಗುಟ್ಟಾಗಿ ಉಳಿದಿಲ್ಲ. ಬಿಗ್ ಬಾಸ್ ಮನೆಯಲ್ಲೂ ಸಾಕಷ್ಟು ಬಾರಿ ಅರವಿಂದ್ ಅವರನ್ನು ನೆನೆದು ಮಂಕಾಗಿದ್ದಾರೆ. ಆದ್ರೆ ಇದು ಚಿಕ್ಕಪ್ಪನ ಘಟನೆ ನೆನೆದು ಮತ್ಯಾರಿಗೂ ತೊಂದರೆಯಾಗಬಾರದು ಎಂದು ಆತಂಕಗೊಂಡಿದ್ದಾರೆ. ʻಈಗ ಈ ಸೀಸನ್‌ಗೆ ಬರುವಾಗ ಮತ್ತೆ ಭಯ. ಫೋನ್ ಮಾಡೋಣಾ ಅಂದುಕೊಳ್ಳುತ್ತೀನಿ. ಆದ್ರೆ ಈ ಸೀಸನ್ ಮುಗಿಸಿ ವಾಪಾಸ್ ಆಗುವಾಗ ಇನ್ಯಾರು ಇರುವುದಿಲ್ಲವೋ ಎಂಬ ಭಯ. ಈ ಥರದ್ದು ಕೆಟ್ಟ ಕೆಟ್ಟ ಕನಸು. ನಂಗೆ ಕಷ್ಟ ಎಂದರೆ ಅದೇ. ಹೀಗಾಗಿ ಸಂಬಂಧಗಳಿಗೆ ಬೆಲೆ ಕೊಡೋಣಾ, ಪ್ರೀತಿಸೋಣಾ, ಒಳ್ಳೆ ಮನಸ್ಥಿತಿಯಲ್ಲಿ ಬದುಕೋಣಾ. ಎಮೋಷನ್ಸ್, ಕನೆಕ್ಷನ್ಸ್ ಮೇಲೆನೇ ಜೀವನ ನಿಂತಿರುವುದು" ಎಂದು ಕಣ್ಣೀರು ಹಾಕಿದ್ದಾರೆ.

  English summary
  Bigg Boss Kannada 9 November 23rd Episode About Divya Uruduga Life Tragedy, Know More.
  Thursday, November 24, 2022, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X