BBK9: ಚಿಕನ್ ಕದ್ರಾ ರೂಪೇಶ್ ರಾಜಣ್ಣ? ಮನೆ ಮಂದಿ ಕಣ್ಣಲ್ಲೆಲ್ಲಾ ನೀರು!
ಬಿಗ್ ಬಾಸ್ ಮನೆಯಲ್ಲಂತು ಸದ್ಯ ಊಟದ ಚಿಂತೆಯೇ ಆಗಿದೆ. ಮೊದಲೇ ಅಡುಗೆ ಮಾಡುವುದಕ್ಕೆ ಬಾರದವರು ಅದೆಷ್ಟೋ ಜನ. ಇದರ ನಡುವೆ ಹಾಗೋ ಹೀಗೋ ಬಿಗ್ ಬಾಸ್ ನೀಡಿದ ಆಹಾರ ಪದಾರ್ಥಗಳಿಂದ ತಮಗೆ ಬಂದಷ್ಟು ಅಚ್ಚುಕಟ್ಟಾಗಿ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದರು. ಆದ್ರೆ ಈಗ ಎಲ್ಲವೂ ಉಲ್ಟಾ ಆಗಿದೆ. ಇದ್ದ ವಸ್ತುವನ್ನೆಲ್ಲಾ ಮನೆಯಲ್ಲಿಯೇ ಇಟ್ಟು ಬಿಗ್ ಬಾಸ್ ಲಾಕ್ ಹಾಕಿದೆ. ಮನೆ ಮಂದಿಯನ್ನು ಗಾರ್ಡನ್ ಏರಿಯಾದಲ್ಲಿ ಬಿಟ್ಟಿದೆ.
ಕಾಡಿನ ಜನರಂತೆ ವಾಸಿಸುತ್ತಿರುವ ಮಂದಿಗೆ ಅಡುಗೆ ಮಾಡಿಕೊಳ್ಳುವುದಕ್ಕೂ ಏನು ಪದಾರ್ಥಗಳನ್ನು ನೀಡಿಲ್ಲ. ಮಡಕೆಯೊಂದನ್ನು ನೀಡಿ, ರೈಸ್ ಒಂದನ್ನು ಕೊಟ್ಟಿದೆ. ಇದರ ನಡುವೆ ಆಗಾಗ ಟಾಸ್ಕ್ ಕೊಟ್ಟು ಸೌಕರ್ಯಗಳನ್ನು ಪಡೆಯುವ ಅವಕಾಶವನ್ನು ಕೊಟ್ಟಿದೆ. ಇದರ ನಡುವೆ ಬಿಗ್ ಬಾಸ್ ನೀಡಿದ್ದ ಚಿಕನ್ ಕಾಣೆಯಾಗಿ ಮನೆಯವರೆಲ್ಲಾ ಕೋಪಗೊಂಡಿದ್ದಾರೆ.

ಚಿಕನ್‌ನಲ್ಲೂ ಫ್ರಾಂಕ್ ಆಟ
ಬಿಗ್ ಬಾಸ್ ಮನೆಯಲ್ಲಿ ಅವರವರೇ ಆಟಗಳನ್ನು ಆಡಬೇಕು.. ಅವರವರೇ ಮನರಂಜನೆಯನ್ನು ಪಡೆದುಕೊಳ್ಳಬೇಕು. ಮನರಂಜನೆಗಾಗಿ ಬೇರೆ ಯಾವ ಆಯುಧಗಳನ್ನು ನೀಡಲ್ಲ. ಕೇವಲ ಮಾತು ಮತ್ತು ತಮ್ಮಲ್ಲಿರುವ ಟ್ಯಾಲೆಂಟ್‌ನಿಂದ ಮಾತ್ರ ಸಾಧ್ಯವಾಗುತ್ತದೆ. ಹೀಗಾಗಿ ಮನರಂಜನೆಗಾಗಿ ಏನು ಮಾಡಬಹುದು ಎಂದುಕೊಳ್ಳುತ್ತಿರುವಾಗ ರಾಜಣ್ಣನಿಗೆ ಬಂದ ಐಡಿಯಾ ಫ್ರಾಂಕ್ ಮಾಡುವುದು. ಈ ಫ್ರಾಂಕ್ ವಿಚಾರ ಸಾಕಷ್ಟು ಸಲ ಎಡವಟ್ಟನ್ನು ಮಾಡಿದೆ. ಇದೀಗ ರಾಜಣ್ಣನ ಫ್ರಾಂಕ್ ಕೋಪಕ್ಕೆ ಕಾರಣವಾಗಿದೆ.

ರೂಪೇಶ್ ಶೆಟ್ಟಿ ಚಿಕನ್ ಕದ್ದ ರಾಜಣ್ಣ!
ರೂಪೇಶ್ ಶೆಟ್ಟಿಗೆ ನಾನ್ ವೆಜ್ ಅಂದ್ರೆ ತುಂಬಾನೇ ಇಷ್ಟ. ಆ ಬಗ್ಗೆ ಈಗಾಗಲೇ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ರೂಪೇಶ್ ಶೆಟ್ಟಿಗೆ ಮಾತ್ರವಲ್ಲ, ಮನೆಯಲ್ಲಿರುವ ಸಾಕಷ್ಟು ಜನರಿಗೆ ನಾನ್ ವೆಜ್ ಅಂದ್ರೆ ಪಂಚಪ್ರಾಣ. ಮೊದಲೇ ಸರಿಯಾಗಿ ಅಡುಗೆ ಮಾಡಿಕೊಳ್ಳಲು ಪದಾರ್ಥಗಳಿಲ್ಲದೆ ಸಿಕ್ಕ ಚಿಕನ್ ಪೀಸನ್ನೇ ಒಂದೊಂದೆ ತಿಂದು ಮೂರೊತ್ತಿಗೂ ಇಟ್ಟುಕೊಂಡಿದ್ದಾರೆ. ಇಂಥ ಸಮಯದಲ್ಲಿ ಚಿಕನ್ ಕಳ್ಳತನವಾದರೇ ಏನಾಗಬೇಡ. ರೂಪೇಶ್ ಶೆಟ್ಟಿ ಎಲ್ಲರಿಗೂ ಕಾಣುವಂತೆ ಇಟ್ಟಿದ್ದ ಚಿಕನ್ ಪೀಸ್ ಕಾಣೆಯಾಗಿದೆ. ಅದನ್ನು ರಾಜಣ್ಣ ಕದ್ದು ಇನ್ನೊಂದು ಕಡೆ ಇಟ್ಟಿದ್ದಾರೆ. ಇದು ರೂಪೇಶ್ ಶೆಟ್ಟಿಗೆ ತಿಳಿದು "ನಂಗೆ ಚಿಕನ್ ಎಂದರೆ ಇಷ್ಟ ಅಂತ ನಿಮಗೆ ಗೊತ್ತು ತಾನೇ. ಸುಮ್ಮನೆ ಕೊಟ್ಟು ಬಿಡಿ" ಎಂದು ಕೋಪ, ಬೇಸರ ಎರಡನ್ನು ಮಾಡಿಕೊಂಡಿದ್ದಾರೆ.

ರಾಜಣ್ಣನ ದೃಷ್ಟಿ ವರ್ಕ್ ಆಗುತ್ತಾ..?
ಬಿಗ್ ಬಾಸ್ ಮನೆಯಲ್ಲಿ ರಾಜಣ್ಣನನ್ನು ಬಹಳ ಸುಲಭದಲ್ಲಿ ಫೂಲ್ ಮಾಡಿದ್ದಾರೆ. ಸಾನ್ಯಾಗೆ ಯಾವುದೋ ಒಂದು ಕಾಣದ ಶಕ್ತಿ ಇದೆ ಎಂದು ನಂಬಿಸಿ ಮೋಸ ಮಾಡಿದ್ದರು. ಆರ್ಯವರ್ಧನ್ ಗೂ ಶಕ್ತಿ ಇದೆ ಎಂದು ನಂಬಿಸಿದ್ದರು. ಇದೀಗ ಅದೇ ದಾರಿಯಲ್ಲಿ ರಾಜಣ್ಣ ಹೋಗುತ್ತಿದ್ದಾರೆ. ಚಿಕನ್ ಎಲ್ಲಿದೆ ಎಂಬುದನ್ನು ಪ್ರಶಾಂತ್ ಸಂಬರ್ಗಿ ಮೇಲೆ ಪ್ರಯೋಗ ಮಾಡಿ, ಉತ್ತರ ಹೇಳುತ್ತಿದ್ದಾರೆ. ಸಂಬರ್ಗಿ ತಲೆ ಮೇಲೆ ಮಣ್ಣಿನ ಪ್ಲೇಟ್ ಅನ್ನು ಉಲ್ಟಾ ಇಟ್ಟು ಎಲ್ಲಿದೆ ಎಂಬುದನ್ನು ಮಂತ್ರ ತಂತ್ರದಿಂದ ಹೇಳಲು ಹೊರಟಿದ್ದಾರೆ.

ರಾಜಣ್ಣ ಕದ್ದ ಚಿಕನ್ ಕೂಡ ನಾಪತ್ತೆ
ರೂಪೇಶ್ ಶೆಟ್ಟಿಗೆ ಆಟವಾಡಿಸಬೇಕು ಎಂದುಕೊಂಡು ರಾಜಣ್ಣ, ರೂಪೇಶ್ ಶೆಟ್ಟಿ ಇಟ್ಟಿದ್ದ ಚಿಕನ್ ಎತ್ತಿದ್ದಾರೆ. ಆ ಚಿಕನ್ ಪ್ಲೇಟ್ ಅನ್ನು ಗಿಡದ ಸಂದಿಯಲ್ಲಿ ಇಡಲಾಗಿತ್ತು. ಇದನ್ನು ಕಂಡ ರಾಕೇಶ್ ಅದನ್ನು ಎತ್ತಿಕೊಂಡು ಬಂದು ಅನು ಕೂತಿದ್ದ ಚಾಪೆಯ ಕೆಳಗಡೆ ಇಟ್ಟಿದ್ದಾರೆ. ರೂಪೇಶ್ ರಾಜಣ್ಣ, ಏನೋ ತನ್ನಲ್ಲಿರುವ ಶಕ್ತಿಯನ್ನೆಲ್ಲಾ ಬಳಸಿ ಬನ್ನಿ ನಿಮಗೆ ಚಿಕನ್ ಹುಡುಕಿಕೊಡುತ್ತೀನಿ ಎಂದು ಕರೆದುಕೊಂಡು ಹೋದರೆ ಅಲ್ಲಿ ಚಿಕನ್ ಇಲ್ಲ. ಇದನ್ನು ಕಂಡು ರೂಪೇಶ್ ಶೆಟ್ಟಿ ಕೆಂಡಮಂಡಲರಾಗಿದ್ದಾರೆ. ನಂಗೆ ಚಿಕನ್ ಬೇಕೆ ಬೇಕು ಎಂದು ಹಠ ಹಿಡಿದಿದ್ದಾರೆ.


Click it and Unblock the Notifications











