For Quick Alerts
  ALLOW NOTIFICATIONS  
  For Daily Alerts

  BBK9: ಪ್ಯಾಂಟ್ ಉದುರಿದರೂ ಹೆಂಡತಿ ಬಗ್ಗೆ ಮಾತಾಡಿದವರ ಹಿಂದೆ ಓಡಿದ ಆರ್ಯವರ್ಧನ್!

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ಒಂಥರ ಇನೊಸೆಂಟ್ ಪ್ಲಸ್ ಇಂಟೆಲಿಜೆಂಟ್ ಅಂದ್ರೆ ಅದು ಆರ್ಯವರ್ಧನ್. ಮಾತಾಡ್ತಾ ಇದ್ರೆ ಒಂದಕ್ಕೊಂದು ಲಿಂಕ್ ಇಲ್ಲದೆ ಇದ್ದರೂ ಮಾತಾಡ್ತಾ ಇರುತ್ತಾರೆ. ಹಾಗೇ ಯಾರಾದ್ರೂ ಹೇಳಿದ್ರು ಅದು ಬೇಗ ತಲೆಗೆ ಹೋಗುವುದಿಲ್ಲ. ಅದೊಂತರ ರಿಯಲ್ ಇನೊಸೆನ್ಸ್.

  ಗೇಮ್ ಅಂತ ಬಂದಾಗ ನೋ ಕಾಂಪ್ರಮೈಸ್ ಅನ್ನೋ ಲೆಕ್ಕದಲ್ಲಿ ನಿಂತು ಬಿಡುತ್ತಾರೆ. ಎಲ್ಲರಿಗೂ ಮಸ್ಕಾ ಹೊಡೆಯಲು ಶುರು ಮಾಡಿಬಿಡುತ್ತಾರೆ. ಇದು ಆದಾಗಲೇ ಮನೆ ಮಂದಿಗೆಲ್ಲಾ ತಿಳಿದು ಆಗಿದೆ.

  BBK9: ಚಿಕನ್ ಕದ್ರಾ ರೂಪೇಶ್ ರಾಜಣ್ಣ? ಮನೆ ಮಂದಿ ಕಣ್ಣಲ್ಲೆಲ್ಲಾ ನೀರು!BBK9: ಚಿಕನ್ ಕದ್ರಾ ರೂಪೇಶ್ ರಾಜಣ್ಣ? ಮನೆ ಮಂದಿ ಕಣ್ಣಲ್ಲೆಲ್ಲಾ ನೀರು!

  ಆರ್ಯವರ್ಧನ್ ಗುರೂಜಿಗೆ ಹೆಂಡತಿ, ಮಗಳೆಂದರೆ ಬಲು ಪ್ರೀತಿ. ಅದನ್ನು ಓಟಿಟಿ ಸೀಸನ್‌ನಿಂದಾನೂ ಹೇಳಿಕೊಂಡೆ ಬಂದಿದ್ದಾರೆ. ಮಗಳನ್ನು ಸ್ಟೇಜ್ ಮೇಲೆ ನೋಡಿ, ಬಿಗ್ ಬಾಸ್ ಮನೆಯಲ್ಲಿ ಕೂತು ಕಣ್ಣೀರು ಹಾಕಿದ್ದಾರೆ. ಗೇಮ್ ಆಡುವಾಗ ಐ ಲವ್ ಯೂ ಮಗಳೇ ಅಂತ ಜೋಷ್ ತೆಗೆದುಕೊಂಡಿದ್ದಾರೆ. ಈಗ ಟಿವಿ ಸೀಸನ್‌ನಲ್ಲೂ ಮಗಳು ಮತ್ತು ಹೆಂಡತಿಯನ್ನು ನೆನೆದು ಕಿರಿಕಿರಿ ಮಾಡಿದ್ದಾರೆ.

  ಹೆಂಡತಿ ಬಗ್ಗೆ ಗುಣಗಾನ ಮಾಡಿ ಆರ್ಯವರ್ಧನ್

  ಹೆಂಡತಿ ಬಗ್ಗೆ ಗುಣಗಾನ ಮಾಡಿ ಆರ್ಯವರ್ಧನ್

  ಇತ್ತೀಚೆಗೆ ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಮೂವರು ಜೊತೆ ಜೊತೆಯಾಗಿಯೇ ಕುಳಿತುಕೊಳ್ಳುತ್ತಾರೆ. ಬೆಳದಿಂಗಳ ಊಟ ಮಾಡುತ್ತಾ, ಮನೆಯಿಂದ ಹೋಗುವವರು ಯಾರು? ಇರುವವರು ಯಾರು? ಎಂದು ಚರ್ಚೆ ಮಾಡುತ್ತಾ ಇರುತ್ತಾರೆ. ಇದು ಕಿಚ್ಚನ ವೇದಿಕೆಯಲ್ಲೂ ಚರ್ಚೆಯಾಗಿತ್ತು. ಈಗ ಮತ್ತೆ ಮೂವರು ಕೂತು ಬೇರೆಯವರ ಬಗ್ಗೆ ಅಲ್ಲ, ಆರ್ಯವರ್ಧನ್ ಹೆಂಡತಿ ಬಗ್ಗೆಯೇ ಮಾತನಾಡಿದ್ದಾರೆ.

  ಆಕೆ ನನ್ನನ್ನು ಗಂಡ ಅಲ್ಲ ಅಂತಾರೆ..!

  ಆಕೆ ನನ್ನನ್ನು ಗಂಡ ಅಲ್ಲ ಅಂತಾರೆ..!

  ಹೀಗೆ ತಮ್ಮ ಜೀವನ, ತಮ್ಮ ಹೆಂಡತಿ ಬಗ್ಗೆ ಆರ್ಯವರ್ಧನ್, ರೂಪೇಶ್ ಶೆಟ್ಟಿ ಮತ್ತು ರಾಜಣ್ಣನ ಬಳಿ ಹೇಳುತ್ತಾ ಇದ್ದರು‌, ಹೊರಗೆ ಹೋದ ಮೇಲೆ ಜೊತೆಗೆ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ನಾನಿದ್ದೀನಿ. ಇಷ್ಟು ವರ್ಷ ಲವ್ ಮಾಡಿರುವುದಕ್ಕಿಂತ ಅತಿ ಹೆಚ್ಚು ಪ್ರೀತಿ ನನ್ನೊಳಗಿದೆ. ಬಿಗ್ ಬಾಸ್ ಮನೆಯೊಳಗೆ ಪ್ರೀತಿ ಮಾಡುವುದಕ್ಕೆ ನನ್ನ ಹೆಂಡತಿ ಇಲ್ಲದೆ ಇರಬಹುದು. ಆದ್ರೆ ಇಲ್ಲಿಂದ ಹೊರಗೆ ಹೋದ ಮೇಲೆ ಅಷ್ಟೇ ಪ್ರೀತಿ ಮಾಡುತ್ತೀನಿ. ನನ್ನ ಹೆಂಡತಿ ಗಾಬರಿಯಾಗಬಹುದು. ನನ್ನ ಗಂಡ ಏನಪ್ಪ ಅಂತ. ತುಂಬಾ ಪ್ರೀತಿ ಮಾಡ್ತೀನಿ. ನನ್ನ ಹೆಂಡತಿ ಮುಂದೆ ತುಂಬಾ ಅಳುತ್ತೀನಿ. ತಪ್ಪು ಮಾಡದೆ ಇದ್ದರೂ ನನ್ನ ಹೆಂಡತಿಗೆ ಕಾಲಿಗೆ ಬೀಳುತ್ತೀನಿ. ಇವ್ರೆಲ್ಲಾ ಮಾತನಾಡಿದರೆ ಬೈಯ್ಯಬೇಕು ಅನ್ಸುತ್ತೆ. ಈಗಲೂ ನನ್ನ ಹೆಂಡತಿ ಯಾರೇ ಬರಲಿ ನನ್ನ ಬಗ್ಗೆ ಅವರು ಮಾತನಾಡುವಾಗ, ನನ್ನ ಪಾಲಿಗೆ ಗಂಡ ಅಲ್ಲ, ತಂದೆ ಅಂತಾರೆ. ಅಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂದಿದ್ದಾರೆ.

  ರಾಜಣ್ಣನಿಗೂ, ರೂಪೇಶ್‌ಗೂ ತಲೆ ಕೆಟ್ಟು ಹೋಗಿತ್ತು

  ರಾಜಣ್ಣನಿಗೂ, ರೂಪೇಶ್‌ಗೂ ತಲೆ ಕೆಟ್ಟು ಹೋಗಿತ್ತು

  ಹೀಗೆ ಆರ್ಯವರ್ಧನ್ ಮುಂದುವರೆಸಿದ್ದ ಹೆಂಡತಿ ವಿಚಾರ ಅದಾಗಲೇ ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿಯ ತಲೆ ಕೆಡಿಸಿತ್ತು. ಆರ್ಯವರ್ಧನ್ ಸೀರಿಯಸ್ ಆಗಿ ಹೇಳುವಾಗ ರಾಜಣ್ಣ ನಕ್ಕಿ ಬಿಟ್ಟರು. ಆದರೂ ಆರ್ಯವರ್ಧನ್ ಮಾತು ಮುಂದುವರೆಸಿದ್ದರು. ನಾವಿಬ್ಬರು ಬಹಳ ಚೆನ್ನಾಗಿದ್ದೀವಿ. ಆದ್ರೆ ಜಾಸ್ತಿ ಮಾತನಾಡಲ್ಲ. ನಮ್ಮ ಮನೆಯಲ್ಲಿ ಯಾವುದಕ್ಕೂ ಕಡಿಮೆ ಇಲ್ಲ. ಹಾಗಂತ ಸುಮ್ಮನೆ ಕೂತು ಮಾತನಾಡಲ್ಲ. ನಾನು ಕೆಲಸದಲ್ಲಿ ಬ್ಯುಸಿ, ಅವರು ಬ್ಯುಸಿ. ನಮ್ಮದು ಹಳ್ಳಿ ಜೀವನ. ಒಂದೇ ಊರಿನಲ್ಲಿ ಇಬ್ಬರಿಗೂ ನೆಂಟರಿಷ್ಟರು ಇರ್ತಾರೆ. ಮಾತಾಡದೆ ಪ್ರೀತಿ ಆಗಲ್ಲ, ಪ್ರೀತಿ ಆಗದೆ ಮದುವೆ ಆಗಲ್ಲ, ಮದುವೆ ಆಗದೆ ಮಕ್ಕಳಾಗಲ್ಲ ಎಂದಾಕ್ಷಣಾ ರೂಪೇಶ್ ಶೆಟ್ಟಿ ಶಾಕ್ ಆಗಿದ್ದಾರೆ.

  ಆರ್ಯವರ್ಧನ್ ಹೆಂಡತಿ ಕೂಡ ಬ್ಯುಸಿ ಅಂತೆ

  ಆರ್ಯವರ್ಧನ್ ಹೆಂಡತಿ ಕೂಡ ಬ್ಯುಸಿ ಅಂತೆ

  "ಹೀಗೆ ಮಾತು ಮುಂದುವರೆದು, ನಮ್ಮೂರಲ್ಲೂ ಬೀಚ್ ಇದೆ. ನಮ್ ಊರಲ್ಲೂ ದೊಡ್ಡ ಬಿಲ್ಡಿಂಗ್ ಇದೆ" ಎಂದು ಆರ್ಯವರ್ಧನ್ ಹೇಳಿದ್ದಾರೆ. ಆಗ ರೂಪೇಶ್ ಶೆಟ್ಟಿಗೆ ಶಾಕ್ ಆಗಿದೆ. ಹಾಸನದಲ್ಲಿ ಬೀಚ್ ಇದೆಯಾ ಎಂದು ಕೇಳಿದ್ದಾರೆ. ಅದಕ್ಕೆ ಆರ್ಯವರ್ಧನ್, ನಮ್ಮೂರಿನ ಪಕ್ಕದಲ್ಲಿ ಮಂಗಳೂರಿನಲ್ಲಿದೆ ಎಂದಾಗ ಶೆಟ್ಟಿ ಬಿದ್ದು ಬಿದ್ದು ನಕ್ಕಿದ್ದಾರೆ. ನನ್ನ ಹೆಂಡತಿಯನ್ನು ಕೇಳಿ ಪ್ರೀತಿ ಎಂದರೆ ಏನು ಅಂತ ಹೇಳಿಕೊಡುತ್ತಾಳೆ. ಕೇಳುವುದಕ್ಕೆ ಇಬ್ಬರು ಗೂಬೆಗಳು ಬೇಕಿತ್ತು ಅದಕ್ಕೆ ಹೇಳುತ್ತಾ ಇದ್ದೀನಿ ಅಂತ ರೂಪೇಶ ರಾಜಣ್ಣ ಹಾಗೂ ಶೆಟ್ಟಿಯನ್ನು ಗೂಬೆ ಮಾಡಿದ್ದಾರೆ" ಆರ್ಯವರ್ಧನ್.

  ಗುರೂಜಿಯ ಕಾಲಿಗೆ ಬಿದ್ದ ರಾಜಣ್ಣ, ರೂಪೇಶ್

  ಗುರೂಜಿಯ ಕಾಲಿಗೆ ಬಿದ್ದ ರಾಜಣ್ಣ, ರೂಪೇಶ್

  ನೋಡಿ, ನೋಡಿ, ಕೇಳಿ ರೂಪೇಶ್ ಶೆಟ್ಟಿಗೆ ತಲೆ ಕೆಟ್ಟಿತ್ತು. ಅದರ ನಡುವೆ ಕಮ್ಯುನಿಕೇಷನ್ ಎಂಬ ಪದವನ್ನು ಬಳಸಿದರು. ಅದು ಆರ್ಯವರ್ಧನ್ ಅದೇಗೆ ಅರ್ಥವಾಯಿತೀ ಏನೋ. ಕಡ್ಡಿ ತೆಗೆದುಕೊಂಡು ಓಡಾಡಿಸಿದ್ದಾರೆ. ಆ ಕಡೆ ಪ್ಯಾಂಟ್ ಉದುರಿ ಹೋದರು ಡೋಂಟ್ ಕೇರ್, ಹಾಗೇಯೇ ಒಂದು ಕೈನಲ್ಲಿ ಎಳೆದುಕೊಂಡು ಓಡಿದ್ದಾರೆ.

  English summary
  Bigg Boss Kannada 9 November 24th Episode Written Update. Here is the details about Aryavardhan beautiful love story.
  Friday, November 25, 2022, 17:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X