Don't Miss!
- Sports
Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್ ವರದಿ ನೋಡಿ ತಂಡದಲ್ಲಿ ಬದಲಾವಣೆ
- News
ತ್ರಿಪುರಾ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ಈ ವಾರದ ಕ್ಯಾಪ್ಟನ್ ಆದ ರಾಕೇಶ್: ತಂದೆ ನೀಡಿದ ಸಲಹೆ ಏನು?
ಅಂತು ಇಂತು ತಾನೂ ಕ್ಯಾಪ್ಟನ್ ಆಗಬೇಕೆಂಬ ರಾಕೇಶ್ ಆಸೆ ಈ ವಾರ ನೆರವೇರಿದೆ. ಕಳೆದ ವಾರ ಕ್ಯಾಪ್ಟನ್ ಟಾಸ್ಕ್ ನಲ್ಲಿ ಯಾರು ಭಾಗವಹಿಸಬೇಕೆಂಬುದನ್ನು ಆಯ್ಕೆ ಮಾಡುವುದಕ್ಕೆ ಸಾಧ್ಯವಾಗದೆ ಕ್ಯಾಪ್ಟನ್ ಟಾಸ್ಕ್‌ನಿಂದ ಮನೆ ಮಂದಿ ಹೊರಗುಳಿದಿದ್ದರು. ಆದ್ದರಿಂದ ಕಳೆದ ವಾರ ಕ್ಯಾಪ್ಟನ್ ಯಾರೊಬ್ಬರೂ ಆಗಲಿಲ್ಲ. ಮನೆ ಮಂದಿ ಕಳೆದ ವಾರ ಕ್ಯಾಪ್ಟನ್ ಇಲ್ಲದ ಮನೆಯಾಗಿತ್ತು. ಯಾರು ಯಾರಿಗೂ ಹೇಳುವಂತಿರಲಿಲ್ಲ. ಎಲ್ಲರೂ ಕ್ಯಾಪ್ಟನ್ ಸ್ಥಾನದಲ್ಲಿದ್ದುಕೊಂಡು ಆಟವಾಡಿದರು.
ಆದ್ರೆ ಮನೆಯವರಿಗೆಲ್ಲಾ ನಾನಾದರೂ ಕ್ಯಾಪ್ಟನ್ ಆಗಬಹುದಿತ್ತು ಎಂಬ ಬೇಸರ ಕಾಡಿದ್ದಂತು ಸತ್ಯ. ಇನ್ನು ಕಾಡಿನ ಜೀವನ ಮುಗಿಯುವ ಕೊನೆಯ ಹಂತದಲ್ಲೂ ಒಂದು ಟಾಸ್ಕ್ ಅನ್ನು ಇದೇ ಹಠ, ಗೊಂದಲದಿಂದಾನೇ ಕಳೆದುಕೊಂಡಿದ್ದರು. ಆದ್ರೆ ಅದೆಲ್ಲವನ್ನು ಮರೆತ ಬಿಗ್ ಬಾಸ್ ಇಂದು ಟಾಸ್ಕ್ ಒಂದನ್ನು ನೀಡಿ ಕ್ಯಾಪ್ಟನ್ ಆಯ್ಕೆ ಮಾಡಿದೆ.
BBK9:
ಚಿಕನ್
ಕದ್ರಾ
ರೂಪೇಶ್
ರಾಜಣ್ಣ?
ಮನೆ
ಮಂದಿ
ಕಣ್ಣಲ್ಲೆಲ್ಲಾ
ನೀರು!

ಕ್ಯಾಪ್ಟೆನ್ಸಿಯಲ್ಲಿ ಗೆದ್ದ ರಾಕೇಶ್
ಇವತ್ತು ಹೊಸ ಕ್ಯಾಪ್ಟನ್ ಆಯ್ಕೆ ಮಾಡುವುದಕ್ಕೆ ಬಿಗ್ ಬಾಸ್ ಹೊಸ ಟಾಸ್ಕ್ ಒಂದನ್ನು ನೀಡಿತ್ತು. ಸಿಡಿಯನ್ನು ಲೋಟದಲ್ಲಿ ಕೂರಿಸುವ ಟಾಸ್ಕ್. ಅದು ನಿಂತುಕೊಂಡು ಹಾಕಬೇಕಿತ್ತು. ಆದ್ರೆ ಆ ಟಾಸ್ಕ್ ನಲ್ಲಿ ರಾಕೇಶ್ ಹೆಚ್ಚು ಸಿಡಿ ಹಾಕಿ ಗೆಲುವುನ್ನು ಸಾಧಿಸಿದರು. ಈ ಮೂಲಕ ಈ ವಾರದ ಕ್ಯಾಪ್ಟನ್ ಆಗಿ ರಾಕಿ ಆಯ್ಕೆಯಾಗಿದ್ದಾರೆ. ಬಿಗ್ ಬಾಸ್ ಕೂಡ ಈ ವಾರದ ಕ್ಯಾಪ್ಟನ್ ಆದ ರಾಕೇಶ್ ಅವರಿಗೆ ಅಭಿನಂದನೆ ತಿಳಿಸಿ, ಕ್ಯಾಪ್ಟನ್ ಅಧಿಕಾರವನ್ನು ನೀಡಿದೆ.
BBK9
:
ದಿವ್ಯಾ
ಉರುಡುಗಗೆ
ತುಂಬಾ
ಬೇಕಾದವರಿಗೆ
ಹೆಚ್ಚು
ಕಡಿಮೆಯಾಗುತ್ತೇನೋ
ಅನ್ನೋ
ಆತಂಕ!

ಖುಷಿಯಲ್ಲಿರುವ ರಾಕೇಶ್ ಏನು ಮಾಡುತ್ತಾರೆ..?
ರೂಪೇಶ್ ಶೆಟ್ಟಿ ರಾಕೇಶ್ ಗೆದ್ದಿದ್ದನ್ನು ಹೇಳಿ ಜೋಶ್‌ನಲ್ಲಿ ಕೂಗಿದ್ದಾರೆ. ಸಂಬರ್ಗಿ ಕೂಡ ಕಂಗ್ರಾಟ್ಸ್ ಹೇಳಿದ್ದಾರೆ. ನಂತರ ರಾತ್ರಿ ವೇಳೆ ಮಾತನಾಡುತ್ತಾ ಕುಳಿತಿದ್ದಾಗ ಈ ವಾರದ ಕ್ಯಾಪ್ಟನ್ ರಾಕಿ ಆಗಿದ್ದು ಒಳ್ಳೆಯದ್ದಾಯ್ತು ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಈ ವೇಳೆ ಎಲ್ಲರು ಮಾತನಾಡುತ್ತಾ ಕುಳಿತಿರುವಾಗ ಕ್ಯಾಪ್ಟನ್ ಆದವರಿಗೆ ಮನೆಯಿಂದ ಬರುವ ಕಾಲ್ ಗಾಗಿ ಎಲ್ಲರು ಕಾಯುತ್ತಿದ್ದರು. ಅಣ್ಣನ, ಅಪ್ಪನ, ಅಮ್ಮನ ಎನ್ನುತ್ತಿದ್ದಾಗ ರಾಕೇಶ್, ಅಮ್ಮ ಇರಬೇಕು. ಅಮ್ಮನ ವಾಯ್ಸ್ ಕೇಳಿ ನೂರು ದಿನದ ಮೇಲಾಗಿದೆ ಎಂದಿದ್ದಾರೆ. ಈ ಮಧ್ಯೆ ಅಮೂಲ್ಯ ಮಾತನಾಡಿ ನಂಗೆ ಕ್ಯಾಪ್ಟನ್ ಆಗದೆ ಇರುವುದಕ್ಕೆ ಏನು ಬೇಸರ ಆಗಿಲ್ಲ, ಆದರೆ, ರಾಕಿ ಆಗಿದ್ದು ತುಂಬಾ ಖುಷಿ ಆಯ್ತು ಎಂದಿದ್ದಾರೆ. ಅನುಪಮಾ ಕೂಡ, ನಂಗೆ ಕ್ಯಾಪ್ಟನ್ ಆಗಬೇಕು ಅಂತಿತ್ತು. ಆದ್ರೆ ಇಟ್ಸ್ ಓಕೆ ಎಂದು ರಾಕಿಗೆ ಸಪೋರ್ಟ್ ಮಾಡಿದ್ದಾರೆ.

ರಾಕಿಗೆ ಬಂತು ಅಪ್ಪನಿಂದ ಕರೆ
ರಾಕಿಗೆ ಕ್ಯಾಪ್ಟನ್ ಆದ ಕಾರಣ ಅವರ ತಂದೆಯಿಂದ ವಾಯ್ಸ್ ನೋಟ್ ಬಂದಿತ್ತು, ಹಾಯ್ ರಾಕೇಶ್ ನೀನು ನಾಯಕನಾದ ಸುದ್ದಿ ಕೇಳಿ ತುಂಬಾ ಖುಷಿ ಆಯ್ತು. ನಾಯಕ ಅಂದ್ರೆ ಏನು, ಮನೆಯಲ್ಲಿರುವ ಎಲ್ಲಾ ಸದಸ್ಯರಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರ ತರುವ ಉದ್ದೇಶ ನಿನ್ನದಾಗಬೇಕು. ಇಡೀ ವಾರ ಎಲ್ಲರೂ ಲವಲವಿಕೆಯಿಂದ ಆಡುವಂತೆ ನೀನು ನೋಡಿಕೊಳ್ಳಬೇಕು. ಅದು ನಿನ್ನ ಮುಖ್ಯ ಉದ್ದೇಶ. ಹಾಗದರೇ ಮಾದರಿಯ ನಾಯಕತ್ವ ನೋಡಿದಂತೆ ಆಗುತ್ತದೆ. ಚೆನ್ನಾಗಿ ಆಡು, ತಾಳ್ಮೆಯಿಂದ ಇರು, ಯಾರಿಗೂ ಬೇಸರ ಆಗದಂತೆ ನೋಡಿಕೊ. ಮನೆಯವರಿಗೆಲ್ಲಾ ಬೇಸರ ಆಗದಂತೆ ನೋಡಿಕೋ ಎಂದಿದ್ದಾರೆ.
BBK9:
ಆರ್ಯವರ್ಧನ್
ಗೊತ್ತಿದ್ದು
ಮಾಡಿದ
ತಪ್ಪಿಗೆ
ಮನೆಮಂದಿಗೆಲ್ಲಾ
ಶಿಕ್ಷೆ..!

ರಾಕಿ ತಂದೆಯ ಪ್ರಾಯಶಃ ಪದಕ್ಕೆ ಮನೆ ಮಂದಿ ಫಿದಾ
ಇನ್ನು ರಾಕಿ ತಂದೆಯ ಕನ್ನಡ ಪದ ಬಳಕೆಗೆ ಮನೆ ಮಂದಿ ಫಿದಾ ಆಗಿದ್ದಾರೆ. ಜೊತೆಗೆ ಗೊಬ್ಬರಗಾಲಾಗೆ ಅನುಮಾನ ಶುರುವಾಗಿದೆ. ಹಾಗಾದ್ರೆ ನೀನು ಇಲ್ಲಿ ಸುಮ್ಮನೆ ತಾಳ್ಮೆಯಿಂದ ಇರೋದಾ ಗುರು. ಮನೆಯಲ್ಲಿ ತಾಳ್ಮೆಯಿಂದ ಇರಲ್ವಾ ಎಂದಾಗ, ಇಲ್ಲ ಹಾಗೇನು ಇಲ್ಲ. ಎರಡು ದಿನ ಅಗ್ರೆಸ್ಸಿವ್ ಆದ್ನಲ್ಲ ಅದಕ್ಕೆ ಆ ರೀತಿ ಹೇಳಿದ್ದಾರೆ ಎಂದು ಕ್ಲಾರಿಟಿ ಕೊಟ್ಟು ತಂದೆಗೆ ಭರವಸೆ ನೀಡಿದ್ದಾರೆ. ಇನ್ನು ಗೊಬ್ಬರಗಾಲ ಅದಕ್ಕೂ ಮುನ್ನ, ರಾಕಿ ಕೂಲ್ ಅಂತಾರಲ್ಲ. ಈ ಸಲ ಕ್ಯಾಪ್ಟನ್ ಆಗಿ ಎಷ್ಟು ಕೂಲಾಗಿ ಇರುತ್ತಾನೆ ನೋಡೋಣಾ ಎಂದು ಗೊಬ್ಬರಗಾಲ ಹೇಳಿದ್ದಾರೆ.