BBK9: ಬಿಗ್ ಬಾಸ್ ಸದಸ್ಯರಿಗೆ ವಧು-ವರ ಬೇಕಾಗಿದ್ದಾರೆ: ವಧು-ವರಾನ್ವೇಷಣೆ ಮಾಡಿದ ಕಿಚ್ಚ!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಮದುವೆ, ಹುಡುಗಿ, ಪ್ರೀತಿ, ಪ್ರೇಮ ಅಂತ ಆಗಾಗ ಸದ್ದು ಮಾಡುತ್ತಾನೆ ಇರುತ್ತೆ. ಸದ್ಯ ರಾಕಿ ಅಂಡ್ ಅಮೂಲ್ಯ ಬಿಟ್ಟರೆ ಈ ಸೀಸನ್‌ನಲ್ಲಿ ಬೇರೆ ಪ್ರೇಮಿಗಳು ಕಾಣಿಸಿಕೊಳ್ಳುತ್ತಿಲ್ಲ. ಹಾಗಂತ ರಾಕಿ ಅಂಡ್ ಅಮೂಲ್ಯ ಪ್ರೇಮಿಗಳಂತ್ತಲ್ಲ. ಹೆಚ್ಚು ಆತ್ಮೀಯರಾಗಿದ್ದಾರೆ ಅಷ್ಟೇ. ಆದರೆ ವಾರದ ಕಥೆ ಕಿಚ್ಚನ ಜೊತೆ ವೇದಿಕೆಯಲ್ಲಿ ಹುಡುಗನಿಗೆ ಹುಡುಗಿ, ಹುಡುಗಿಗೆ ಹುಡುಗ ಹೇಗಿರಬೇಕು ಎಂಬ ಚರ್ಚೆಗಳು ನಡೆದಿವೆ.

ಸಾನ್ಯಾ ಹೋದ ಮೇಲೆ ರೂಪೇಶ್ ಶೆಟ್ಟಿ ಮೊದ ಮೊದಲಿಗೆ ಕೊಂಚ ಡಲ್ ಆಗಿ ಬಿಟ್ಟಿದ್ದರು. ಹುಡುಗಿಯರ ಸಹವಾಸವೇ ಬೇಡ ಎನ್ನುತ್ತಿದ್ದ ರೂಪೇಶ್ ಶೆಟ್ಟಿಗೆ ಅವರನ್ನು ಬಿಟ್ಟಿರುವುದಕ್ಕೆ ಆಗದಷ್ಟು ಆತ್ಮೀಯರೆನಿಸಿದ್ದು, ಸಾನ್ಯಾ ಸಹವಾಸ. ಈಗ ಮನೆಯವರಿಗೂ ಕಿಚ್ಚ ಸುದೀಪ್ ವಧು-ವರಾನ್ವೇಷಣೆಯನ್ನು ನಡೆಸಿದ್ದಾರೆ.

ರೂಪೇಶ್ ಶೆಟ್ಟಿಗೆ ಎಸ್ ಅಕ್ಷರದಿಂದಾನೇ ಬೇಕಂತೆ ಹುಡುಗಿ

ರೂಪೇಶ್ ಶೆಟ್ಟಿಗೆ ಎಸ್ ಅಕ್ಷರದಿಂದಾನೇ ಬೇಕಂತೆ ಹುಡುಗಿ

ಸುದೀಪ್ ವೇದಿಕೆಯಲ್ಲಿ ಎಲ್ಲರನ್ನು ನಕ್ಕು ನಲಿಸಿದ್ದಾರೆ. "ಆರ್ಯವರ್ಧನ್ ಅವರೇ ಈ ರೂಪೇಶ್ ಶೆಟ್ಟರು ಸಿಂಗಲ್ ಆಗಿದ್ದಾರೆ. ಅವರಿಗೆ ನನ್ನ ಪ್ರಕಾರ ಅವರಿಗೆ ಸರಿಯಾದ ಹುಡುಗಿ ಬೇಕು ಅಂದ್ರೆ ನಿಮ್ಮ ಪ್ರಕಾರ ಸರಿಯಾದ ಮ್ಯಾಚ್ ಅಂದ್ರೆ ಏನು ಗುಣ ಇರಬೇಕು, ಯಾವ ಅಕ್ಷರದಿಂದ ಇರಬೇಕು" ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆರ್ಯವರ್ಧನ್, ಸರ್ ನಾನು 5 ತಾರೀಖು. ಅವರು 5 ನೇ ತಾರೀಖು. 5 ನೇ ತಾರೀಖಿನವರು ಬೇರೆ ಕಡೆ ಊಟ ಮಾಡುವುದು ಜಾಸ್ತಿ ಎಂದಾಗ ಮನೆಯವರೆಲ್ಲ ನಕ್ಕಿದ್ದಾರೆ. ಅದಕ್ಕೆ ಸುದೀಪ್, ಮಾತನಾಡುವಾಗ ಅವರು ದೋಸೆ ಹಾಕುತ್ತಾರೋ ಚಪಾತಿ ಹಾಕುತ್ತಾರೋ ನೀವೂ ಅಡ್ಡ ಮಾತನಾಡಬೇಡಿ. ಅದು ಅವರ ವೃತ್ತಿ. ನೀವೂ ಹೇಳಿ ಆರ್ಯವರ್ಧನ್ ಎಂದಾಗ, ಅವರಿಗೆ ಪವರ್ ಫುಲ್ ಅಂದ್ರೆ ಎಸ್ ಅಕ್ಷರ. ಅದು ಸಾಧನೆಗೆ ಒಳ್ಳೆಯದು ಎಂದಿದ್ದಾರೆ.

ಹೋಟೇಲ್ ಊಟ ಮಾಡಿದರೂ ಕೇಳುವಂತಿಲ್ಲ

ಹೋಟೇಲ್ ಊಟ ಮಾಡಿದರೂ ಕೇಳುವಂತಿಲ್ಲ

ಹೀಗೆ ರೂಪೇಶ್ ಶೆಟ್ಟಿಗೆ ಬೇಕಾದ ಗುಣವಿರುವ ಹುಡುಗಿಯನ್ನು ಆರ್ಯವರ್ಧನ್ ಹುಡುಕುತ್ತಿದ್ದು, ಮಾತು ಮುಂದುವರೆದಿದೆ. ಅತಿ ಹೆಚ್ಚು ಸುಂದರವಾಗಿರಬೇಕು. ಅತಿ ಹೆಚ್ಚು ಊಟ ಮಾಡುವ ಗುಣವಿರಬೇಕು ಎಂದಾಗ ಸುದೀಪ್, ಸರ್ ನೀವೂ ಒಳ್ಳೆ ಲೈನಿನಿಂದಾನೇ ಸ್ಟಾರ್ಟ್ ಮಾಡಿದ್ದೀರಿ ಸರ್. ಇವ್ರು ಹೊರಗಡೆ ಊಟ ಮಾಡುವುದು ಜಾಸ್ತಿ ಅಂತ ಹೇಳಿದ್ದಾರೆ. "ಸಾಕು ಬಿಡಿ ನಮಗೆ. ಅದು ಯಾವುದೋ ಒಂದು ಫಿಶ್ ಗೆ ಫಿಕ್ಸ್ ಆಗುವ ಕ್ಯಾರೆಕ್ಟರ್ ಅಲ್ಲ. ವೆರೈಟಿ ಕೇಳುತ್ತೆ" ಅಂತ ಕಾಲೆಳೆದಿದ್ದಾರೆ.

ಬಿಗ್ ಬಾಸ್ ಮನೆ ಸದಸ್ಯರಿಗೆ ವಧು-ವರ ಬೇಕಾಗಿದ್ದಾರೆ

ಬಿಗ್ ಬಾಸ್ ಮನೆ ಸದಸ್ಯರಿಗೆ ವಧು-ವರ ಬೇಕಾಗಿದ್ದಾರೆ

'ವಾರದ ಕಥೆ ಕಿಚ್ಚನ ಜೊತೆ'ಯಲ್ಲಿ ಮನೆ ಮಂದಿಯನ್ನೆಲ್ಲಾ ಕೂರಿಸಿಕೊಂಡು ಸುದೀಪ್ ಮದುವೆಯಾಗುವ ಹುಡುಗಿ ಮತ್ತು ಹುಡುಗನ ಬಗ್ಗೆ ಕೇಳಿದ್ದಾರೆ. ಮದುವೆಯಾದವರಿಗೆ ನಿಮ್ಮ ಹೆಂಡತಿ ಮನೆಯೊಳಗೆ ಬಂದರೆ ಏನು ಮಾಡುತ್ತಾರೆ ಎಂದು ಕೇಳಿದ್ದಾರೆ. ಅದರಲ್ಲಿ ಮೊದಲಿಗೆ ರೂಪೇಶ್ ಶೆಟ್ಟಿಯಿಂದಾನೇ ಸ್ಟಾರ್ಟ್ ಮಾಡಿದ್ದಾರೆ. ನಿಮಗೆ ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಕೇಳಿದ್ದಾರೆ. ಅದಕ್ಕೆ ರೂಪೇಶ್ ಶೆಟ್ಟಿ, ಕ್ಲೀನಿಂಗ್ ಇರಬೇಕು, ತುಂಬಾ ಸುಂದರವಾಗಿ ಏನು ಬೇಡ ಲಕ್ಷಣವಾಗಿರಬೇಕು. ಪರಿಸ್ಥಿತಿ ನಿಭಾಯಿಸುವಂತೆ ಇರಬೇಕು ಎಂದಾಗ ಕಿಚ್ಚ ನೀವೂ ಹೊರಗಡೆ ಊಟ ಮಾಡಿದಾಗಲೂ ಸುಧಾರಿಸಬೇಕಾ ಎಂದಿದ್ದಾರೆ. ಆಗ ರೂಪೇಶ್, ಮನೆಯಲ್ಲಿಯೇ ಊಟ ಮಾಡ್ತೀನಿ ಬೇಕಾದ್ರೆ ಬಾಕ್ಸ್ ತೆಗೆದುಕೊಂಡು ಹೋಗ್ತೀನಿ ಎಂದಿದ್ದಾರೆ. ಮತ್ತೆ ರಾಕೇಶ್ ವಿಚಾರಕ್ಕೆ ಬಂದಿದ್ದು, ಮೆಂಟಾಲಿಟಿ ಓಪನ್ ಮೈಂಡೆಡ್ ಆಗಿರಬೇಕು, ಇಂಟೆಲಿಜೆಂಟ್ ಆಗಿರಬೇಕು, ನನಗೂ ಅಡ್ವೈಸ್ ಮಾಡುವ ರೀತಿ ಇರಬೇಕು ಎಂದಿದ್ದಾರೆ.

ಹೆಣ್ಣು ಮಕ್ಕಳ ಡಿಮ್ಯಾಂಡ್ ಕೇಳ್ರಪ್ಪ..!

ಹೆಣ್ಣು ಮಕ್ಕಳ ಡಿಮ್ಯಾಂಡ್ ಕೇಳ್ರಪ್ಪ..!

ಇನ್ನು ವರರಿಗೆ ವಧು ಹೇಗಿರಬೇಕು ಅಂತ ಕೇಳಿದ್ದಾಯಿತು, ಈಗ ವಧುಗಳಿಗೆ ವರರ ಬೇಡಿಕೆ. ಅದರಲ್ಲಿ ಮೊದಲಿಗೆ ಕಾವ್ಯಾ ಬಳಿ ಕೇಳಿದ್ದಾರೆ, ಅದಕ್ಕೆ ಕಾವ್ಯಾ, ಮೊದಲಿಗೆ ಸುಳ್ಳು ಹೇಳಬಾರದು, ಹೇಳಿದರು ನನಗೆ ಗೊತ್ತಾಗದ ರೀತಿ ಮೆಂಟೈನ್ ಮಾಡಬೇಕು. ಹೈಟ್ ಇರಬೇಕು. ಒಳ್ಳೆ ಗುಣ, ಕುಕ್ಕಿಂಗ್ ಸ್ಕಿಲ್ ಇರಬೇಕು. ಚಿಕನ್ ಮಾಡುವುದಕ್ಕೆ ಬರಬೇಕು ಎಂದಿದ್ದಾರೆ. ಅಮೂಲ್ಯಾಗೆ, ಲಾಯೆಲ್ ಆಗಿರಬೇಕು. ಕೇರಿಂಗ್ ಆಗಿರಬೇಕು, ಮ್ಯೂಚ್ಯುಯಲ್ ರೆಸ್ಪೆಕ್ಟ್ ಆಗಿರಬೇಕು ಎಂದಿದ್ದಾರೆ. ಇನ್ನು ಅನುಪಮಾ "ಒಬ್ಬರಿಗೊಬ್ಬರು ಗೌರವ ಕೊಡಬೇಕು. ಫನ್ನಿಯಾಗಿರಬೇಕು, ಅಡುಗೆ ಮಾಡಬೇಕು, ತುಂಬಾ ತುಂಬಾ ಪ್ರೀತಿ ಮಾಡಬೇಕು" ಎಂದಿದ್ದಾರೆ.

ಹುಡುಗಿ ಸಿಗುವುದಿಲ್ಲ ಅಂತ ಭಯವಂತೆ

ಹುಡುಗಿ ಸಿಗುವುದಿಲ್ಲ ಅಂತ ಭಯವಂತೆ

ಇಲ್ಲಿ ಎಲ್ಲರದ್ದು ಒಂದು ರೀತಿಯ ಬೇಡಿಕೆಯಾದರೆ ವಿನೋದ್ ಗೊಬ್ಬರಗಾಲದ್ದು ಮತ್ತೊಂದು ರೀತಿಯ ಬೇಡಿಕೆ. ಒಬ್ಬರಿಗೊಬ್ಬರು ಅಂಡರ್ ಸ್ಟಾಡಿಂಗ್ ಇರಬೇಕು. ಅರ್ಥ ಮಾಡಿಕೊಳ್ಳಬೇಕು. ಮುನಿಸು ಅನ್ನುವುದು ಇರಬಾರದು. ನಮ್ಮ ತಂದೆ ತಾಯಿ ಪ್ರೀತಿಸಿದಂತೆ ಪ್ರೀತಿಸಬೇಕು. ಅಲ್ಲಲ್ಲಿ ಚಿಕ್ ಚಿಕ್ ಜಗಳ ಆಗಬೇಕು. ಬೆಳ್ಳುಳ್ಳಿ ಸುಲಿದುಕೊಟ್ಟಿಲ್ಲ ಅಂತ ಜಗಳ ಆಗಬೇಕು. ಮುಗಿಸುತ್ತಾ ಮುಗಿಸುತ್ತಾ ಜಗಳ ಆಡುತ್ತಾ, ಅಲ್ಲಿಯೇ ಸರಿ ಮಾಡಿಕೊಂಡು ಜೀವನ ನಡೆಸಬೇಕು ಆದ್ರೆ ಅಂತವರು ಸಿಗಲ್ಲ ಅಂತ ಭಯ ಸರ್ ಎಂದಿದ್ದಾರೆ.

More from Filmibeat

English summary
Bigg Boss Kannada 9 November 26th Episode Written Update. Here is the details about Kiccha Sudeep discussed about life partner qualities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X