Don't Miss!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ನಿಯಮ ಮೀರಿದ ಗೊಬ್ಬರಗಾಲ ಹಾಗೂ ಆರ್ಯವರ್ಧನ್ಗೆ ಸುದೀಪ್ ಕ್ಲಾಸ್..!
ಬಿಗ್ ಬಾಸ್ ಮನೆಯಲ್ಲಿ ವಾರ ಪೂರ್ತಿ ಟಾಸ್ಕ್ಗಳನ್ನು ಕೊಟ್ಟು, ಅವರ ತಾಳ್ಮೆ, ಅವರ ಹೊಂದಾಣಿಕೆ, ಅವರ ಬೆಂಬಲವನ್ನು ನೋಡುತ್ತಾರೆ. ಬಂದಿರುವುದು ಆಟಕ್ಕೆ ಆದರೂ ಅಲ್ಲೊಂದು ಒಗ್ಗಟ್ಟು ಇರಲೇಬೇಕು. ಬಿಗ್ ಬಾಸ್ ಮನೆಯಲ್ಲಿ ಸ್ವತಂತ್ರವಾಗಿ ಆಗಿ ಆಡಿದರೂ, ಎಲ್ಲರ ಅನುಮತಿ ಇದ್ದರೇನೆ ಅದು ಸಾಧ್ಯವಾಗುತ್ತದೆ.
ಒಂದು ಮನೆ, ಆ ಮನೆಯಲ್ಲಿ ನೀನು ಆಡು ಅಂತ ಹಿಂದೆ ನಿಂತು ಒಮ್ಮೊಮ್ಮೆ ಒಬ್ಬೊಬ್ಬರಿಗೆ ಬೆನ್ನು ತಟ್ಟಬೇಕು. ಆದ್ರೆ ನಿಯಮಗಳನ್ನು ಮೀರಿದಾಗ, ಮನೆಯವರು ಅದನ್ನು ತಿಳಿಸಿದಾಗ ತಿದ್ದಿಕೊಳ್ಳಬೇಕು. ತಿದ್ದಿಕೊಳ್ಳದೆ ಇದ್ದರೆ ಸುದೀಪ್ ಅವರದ್ದೇ ಸ್ಟೈಲ್ನಲ್ಲಿ ಹೇಳುತ್ತಾರೆ.
BBK9:
ಈ
ವಾರದ
ಕ್ಯಾಪ್ಟನ್
ಆದ
ರಾಕೇಶ್:
ತಂದೆ
ನೀಡಿದ
ಸಲಹೆ
ಏನು?
ಅಂಥದ್ದೇ ಘಟನೆ 'ವಾರದ ಕಥೆ ಕಿಚ್ಚನ ಜೊತೆ' ವೇದಿಕೆಯಲ್ಲಿ ನಡೆದಿದೆ. ಆರ್ಯವರ್ಧನ್ ಅವರು ವಾರಪೂರ್ತಿ ಇದ್ದಷ್ಟು ಲವಲವಿಕೆಯಿಂದ ಇಲ್ಲ. ಅದಕ್ಕೆ ಕಾರಣ ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಆಡದೆ ಇದ್ದಿದ್ದು ಇರಬಹುದು. ಕಳಪೆ ಪಟ್ಟ ನೀಡಿದ್ದು ಅವರನ್ನು ಕುಗ್ಗಿಸಿರಬಹುದು. ಆದರೂ ಮಾಡಿದ ತಪ್ಪಿನ ಬಗ್ಗೆ ಕಿಚ್ಚ ಸುದೀಪ್ ತಿದ್ದಿ ಬುದ್ದಿ ಹೇಳಿದ್ದಾರೆ.

ಗೇಮ್ನಲ್ಲಿ ನಿಯಮ ಮೀರಿದ್ದ ಆರ್ಯವರ್ಧನ್
ಕಾಡಿನ ಒಳಗೆ ಜೀವನ ನಡೆಸುತ್ತಿದ್ದಾಗ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು ಅದುವೆ ಸ್ವಿಮ್ಮಿಂಗ್ ಪೂಲ್ ಒಳಗೆ ಇದ್ದ ಮರದ ದಿಂಬಿಯಲ್ಲಿದ್ದ ನಟ್ಟನ್ನು ಬರೀ ಗೈನಲ್ಲಿ ಬಿಚ್ಚಬೇಕು. ಅದಕ್ಕೆ ಬಟ್ಟೆಯನ್ನು ಬಳಸುವಂತಿಲ್ಲ. ಆದರೆ, ಆರ್ಯವರ್ಧನ್ ಹಾಕಿದ್ದ ಪ್ಯಾಂಟನ್ನೇ ಬಿಚ್ಚಿ, ನಟ್ಟನ್ನು ತೆಗೆಯುವುದಕ್ಕೆ ಯತ್ನಿಸಿದ್ದರು. ಆ ಮಧ್ಯೆ ಮನೆಯವರೆಲ್ಲಾ ಕೂಗಿಕೊಂಡರು, ಡೋಂಟ್ ಕೇರ್ ಎನ್ನದ ಆರ್ಯವರ್ಧನ್ ನಿಯಮವನ್ನು ಸ್ವಲ್ಪ ಜಾಸ್ತಿಯೇ ಮೀರಿದ್ದರು.

ಆರ್ಯವರ್ಧನ್ ನಡವಳಿಕೆಗೆ ಬೇಸತ್ತ ಕಿಚ್ಚ
ಹೀಗೆ ಆಟದಲ್ಲಿ ನಿಯಮ ಮೀರಬಾರದು ಎಂದು ಗೊತ್ತಿದ್ದರೂ ಆರ್ಯವರ್ಧನ್ ತಪ್ಪು ಮಾಡಿದ್ದರು. ಜೊತೆಗೆ ಮನೆಯವರು ಹೇಳಿದರು ಅದಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ಈ ಎಪಿಸೋಡ್ಗೆ ಕಿಚ್ಚ ಬೇಸರ ಹೊರ ಹಾಕಿದ್ದಾರೆ. ಆರ್ಯವರ್ಧನ್ ಬಳಿ ಕೇಳಿದ್ದಾರೆ. ಸ್ವಿಮ್ಮಿಂಗ್ ಫೂಲ್ನಲ್ಲಿ ನಟ್ಟು ತೆಗೆಯುವ ಟಾಸ್ಕ್ನಲ್ಲಿ ಮನೆಯವರೆಲ್ಲ ಸ್ಪಷ್ಟವಾಗಿ ಹೇಳುತ್ತಾರೆ ಬಟ್ಟೆ ಬಳಸಬಾರದು ಅಂತ. ಆದರೂ ನಿಮ್ಮ ಪ್ಯಾಂಟ್ ಮೇಲೆ ಇದ್ದಂತ ಪ್ರೀತಿ ಟಾಸ್ಕ್ ಮೇಲೆ ಯಾಕ್ ಸ್ವಾಮಿ ಬರಲಿಲ್ಲ ಅಂತ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಆರ್ಯವರ್ಧನ್, ಕೈನಲ್ಲಿ ಆದಷ್ಟು ಟ್ರೈ ಮಾಡಿದೆ. ಆಗಲಿಲ್ಲ. ಐದು ನಿಮಿಷದಲ್ಲಿ ಇದು ಆಗಲ್ಲ ಅಂದುಕೊಂಡು ಆ ರೀತಿ ಮಾಡಿದೆ ಎಂದು ಆರ್ಯವರ್ಧನ್ ಹೇಳಿದ್ದಾರೆ.

ನಿಮಗೆ ಬಿಟ್ಟಿದ್ದು ಎಂದು ಕೈ ಚೆಲ್ಲಿದ ಕಿಚ್ಚ
ಆರ್ಯವರ್ಧನ್ ಇದಕ್ಕೆ ಸ್ಪಷ್ಟನೆ ನೀಡುವಾಗ ಅದೇ ಸ್ವಾಮಿ ಮೊದಲಿಗೆ ಆಗಲಿಲ್ಲ ಅಂತ ಹೇಳಿ ಆಮೇಲೆ ನಿಯಮವನ್ನೇ ಮೀರಿ ಬಿಡುವುದಾ ಎಂದು ಕೇಳಿದ್ದಾರೆ. ಅದಕ್ಕೆ ಆರ್ಯವರ್ಧನ್, ಕಾಲೆಲ್ಲ ಹಾಕಿ ತೆಗೆದೆ. ಆದ್ರೆ ಅದು ಆಗಲಿಲ್ಲ. ಅದಕ್ಕೆ ಆ ರೀತಿ ಟ್ರೈ ಮಾಡಿದೆ ಅಂತ ಹೇಳಿದ ಉತ್ತರವನ್ನೇ ಹೇಳಿದ್ದಾರೆ. ಇದು ಕಿಚ್ಚನ ಬೇಸರಕ್ಕೆ ಕಾರಣವಾಗಿದ್ದು, ಅದೇ ಸ್ವಾಮಿ ಅದಕ್ಕೆ ನಿಯಮ ಮೀರಿದಿರಾ ಅಂದ್ರೆ ಹೌದು ಅನ್ನೋದಾ. ಆಮೇಲೆ ಕಿಚ್ಚನ ಬಳಿ ಇನ್ನೊಮ್ಮೆ ಆ ರೀತಿ ಮಾಡಲ್ಲ ಅಂತ ಕ್ಷಮೆಯನ್ನು ಕೇಳಿದ್ದಾರೆ. ಅದಕ್ಕೆ ಕಿಚ್ಚ ನೀವೆ ಮನೆ ಸದಸ್ಯರು ನಿಂತ ಜಾಗದಲ್ಲಿ ನಿಂತು ಬೇರೆಯವರು ಆ ರೀತಿ ಮಾಡಿದ್ದರೆ ಬಿಡುತ್ತಿದ್ರಾ..? ನೋಡಿ ಸ್ವಾಮಿ ಇನ್ನು ಮುಂದೆ ಮಾಡುತ್ತೀರೋ ಬಿಡುತ್ತಿರೋ ನಿಮಗೆ ಬಿಟ್ಟಿದ್ದು ಎಂದು ಅಲ್ಲಿಗೆ ನಿಲ್ಲಿಸಿದ್ದಾರೆ.

ಗೊಬ್ಬರಗಾಲ ತಪ್ಪಿನ ಅರಿವು ಮೂಡಿಸಿದ ಕಿಚ್ಚ
ಇನ್ನು ವಿನೋದ್ ಗೊಬ್ಬರಗಾಲ ಕೂಡ ಸ್ವಿಮ್ಮಿಂಗ್ ಪೂಲ್ ಗೇಮ್ ನಲ್ಲಿ ಆರ್ಯವರ್ಧನ್ ರೀತಿಯೇ ಬಟ್ಟೆ ಹಾಕಿ ಟ್ರೈ ಮಾಡಿದ್ದರು. ಆದರೆ, ತಕ್ಷಣ ಅದನ್ನು ಸರಿ ಮಾಡಿಕೊಂಡಿದ್ದರು. ಟಾಸ್ಕ್ ಮುಗಿದ ಮೇಲೆ ಆರ್ಯವರ್ಧನ್ ಅವರದ್ದೇ ತಪ್ಪು ಎಂದಿದ್ದರು. ಅದಕ್ಕೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದು, ಅಲ್ಲ ರೀ ಗೊಬ್ಬರಗಾಲ ಅವರಿಗೆ ಹೇಳುತ್ತೀರಾ ನೀವೂ ಮಾಡಿದ್ದು ಅದೇ ಅಲ್ವಾ ಎಂದು ಎಲ್ಲರಿಗೂ ಅರ್ಥವಾಗುವಂತೆ ಹೇಳಿದ್ದಾರೆ. ಜೊತೆಗೆ ಒಂದು ಆಟದಲ್ಲಿ ಅನುಪಮಾ ಅವರನ್ನು ದೂರಿದ್ದಕ್ಕೂ ಬುದ್ದಿ ಹೇಳಿದ್ದಾರೆ.