BBK9: ಸಖತ್ ನಾಮಿನೇಷನ್: ಸ್ವಾರ್ಥ ಬಿಟ್ಟು ಸೇವ್ ಮಾಡಿದ ದೀಪಿಕಾ ಅಂಡ್ ರೂಪೇಶ್ ಶೆಟ್ಟಿ

By ಎಸ್ ಸುಮಂತ್

ಕಳೆದ ವಾರ ನಾಮಿನೇಷನ್ ಪ್ರಕ್ರಿಯೆ ಇರಲಿಲ್ಲ. ಹೀಗಾಗಿ ಮನೆ ಮಂದಿ ಕೊಂಚ ಸಮಾಧಾನವಾಗಿದ್ದರು. ಒಂದು ಗಾಢ ನಂಬಿಕೆಯಲ್ಲೂ ಇದ್ದರು. ಹೇಗೂ ನಾಮಿನೇಷನ್ ನಡೆದಿಲ್ಲ, ಹೀಗಾಗಿ ಈ ವಾರ ಯಾರು ಕೂಡ ಮನೆಯಿಂದ ಹೊರ ಹೋಗುವ ಅವಶ್ಯಕತೆ ಇರಲ್ಲ ಅಂತ. ಆದರೆ,ಕಿಚ್ಚ ಸುದೀಪ್ ಆ ಊಹೆಗೂ ಮೀರಿದ ಉತ್ತರವನ್ನೇ ನೀಡಿದ್ದರು. ನಾಮಿನೇಷನ್ ಇಲ್ಲದೆಯೂ ಮನೆಯಿಂದ ಗೊಬ್ಬರಗಾಲ ಹೊರ ಬಂದಿದ್ದಾಗಿದೆ.

ಇನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಪ್ರತಿ ಸಲ ನಾಮಿನೇಷನ್ ಮಾಡುವಾಗ ಯಾರನ್ನು ನಾಮಿನೇಷನ್ ಮಾಡುತ್ತಾರೋ ಅವರ ಹೆಸರು ಮತ್ತು ಕಾರಣವನ್ನು ತಿಳಿಸಬೇಕಿತ್ತು. ಆದರೆ ಈ ವಾರ ವಿಭಿನ್ನವಾಗಿ ನಾಮಿನೇಷನ್ ನಡೆದಿದೆ. ಟಾಸ್ಕ್ ಅನ್ನು ಹೇಗೆ ವ್ಹಾವ್ ಎನ್ನುವಂತೆ, ರಿಸ್ಕ್ ಎನಿಸುವಂತ ಟಾಸ್ಕ್ ನೀಡುತ್ತೋ ನಾಮಿನೇಷನ್ ಅನ್ನು ಅದೇ ರೀತಿ ನಡೆಸಿದೆ.

ಯಾವ ರೀತಿ ನಡೆಯಿತು ನಾಮಿನೇಷನ್

ಯಾವ ರೀತಿ ನಡೆಯಿತು ನಾಮಿನೇಷನ್

ಇಷ್ಟು ದಿನ ಯಾರು ಮನೆಯಿಂದ ಹೊರ ಹೋಗಬೇಕು ಎಂಬ ಪ್ರಕ್ರಿಯೆಯಲ್ಲಿ ನಾಮಿನೇಷನ್ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಯಾರನ್ನು ಸೇವ್ ಮಾಡಬೇಕು ಎಂಬ ನಾಮಿನೇಷನ್ ನಡೆದಿದೆ. ಅದರಲ್ಲಿ ಮೊದಲಿಗೆ ಅನುಪಮಾ ಹಾಗೂ ಆರ್ಯವರ್ಧನ್ ಅವರನ್ನು ಬಿಗ್ ಬಾಸ್ ಕರೆದಿದೆ. ಆರ್ಯವರ್ಧನ್ ಮತ್ತು ಅನುಪಮಾ ಇಬ್ಬರು ಒಂದೊಂದೊಂದು ರೂಮಿಗೆ ಹೋಗಿ ಸೌಂಡ್ ಪ್ರೂಫ್ ಧರಿಸಿಕೊಂಡು ಕೂತುಕೊಳ್ಳಿ ಎಂದು ನಿಯಮಗಳನ್ನು ತಿಳಿಸಿದೆ. ಅದರಂತೆ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ.

ನಿಯಮ ಗೊತ್ತಿದ್ದರು ಸೇವ್ ಮಾಡಲಿಲ್ಲ

ನಿಯಮ ಗೊತ್ತಿದ್ದರು ಸೇವ್ ಮಾಡಲಿಲ್ಲ

ಅನುಪಮಾ ಹಾಗೂ ಆರ್ಯವರ್ಧನ್ ನಿಮ್ಮಿಬ್ಬರ ಪೈಕಿ ಒಬ್ಬರನ್ನು ಈ ವಾರ ಪಾರು ಮಾಡಬಹುದು. ಬಿಗ್ ಬಾಸ್‌ನಿಂದ ಸೂಚನೆ ಬಂದಾಗ ಭಾವಚಿತ್ರ ತೋರಿಸಿಬಹುದು. ಇಬ್ಬರು ಒಂದೇ ಭಾವಚಿತ್ರ ತೋರಿಸಿದರೆ ಅವರು ಪಾರಾಗುತ್ತಾರೆ. ಇಬ್ಬರು ಬೇರೆ ಬೇರೆ ತೋರಿಸಿದರೆ ಇಬ್ಬರು ನಾಮಿನೇಟ್ ಆಗುತ್ತಾರೆ ಎಂದು ಸೂಚನೆ ನೀಡಿದ್ದರು. ಆದರೆ, ಈ ಟಾಸ್ಕ್‌ನಲ್ಲಿ ಅನುಪಮಾ ತಮ್ಮದೇ ಫೋಟೋ ಹಾಗೇ ಆರ್ಯವರ್ಧನ್ ಕೂಡ ತಮ್ಮದೇ ಫೋಟೋ ತೋರಿಸುವ ಮೂಲಕ ನಾಮಿನೇಟ್ ಆಗಿದ್ದಾರೆ.

ಯಾರೆಲ್ಲಾ ನಾಮಿನೇಟ್ ಆದ್ರು

ಯಾರೆಲ್ಲಾ ನಾಮಿನೇಟ್ ಆದ್ರು

ಆಕ್ಟಿವಿಟಿ ರೂಮಿಗೆ ಅಮೂಲ್ಯ ಹಾಗೂ ದಿವ್ಯಾರನ್ನು ಕರೆಸಿದ ಬಿಗ್ ಬಾಸ್ ಇಬ್ಬರಿಗೂ ಸೇಮ್ ಟಾಸ್ಕ್ ನೀಡಿದೆ. ದಿವ್ಯಾ, ಅಮೂಲ್ಯ ಅವರನ್ನು ಸೇವ್ ಮಾಡಿದ್ದು, ಚೆನ್ನಾಗಿ ಆಟ ಆಡಿದ್ದಾರೆ. ಹಾಗಾಗಿ ಸೇವ್ ಮಾಡಲಾಗಿದೆ ಎಂದಿದ್ದಾರೆ. ಇನ್ನು ಅಮೂಲ್ಯ, ದಿವ್ಯಾ ಅವರನ್ನು ಸೇವ್ ಮಾಡಿದ್ದಾರೆ. ಡೇ ಒನ್ ನಿಂದಾನೂ ಚೆನ್ನಾಗಿ ಆಟವಾಡಿದ್ದಾರೆ ಎಂದಿದ್ದಾರೆ. ದಿವ್ಯಾರನ್ನು ಬೆಡ್ ರೂಮಿಗೆ ತೆರಳಿ ಎಂದು ಹೇಳಿ ಮುಂದಿನ ಆದೇಶದ ತನಕ ಅಲ್ಲಿಯೇ ಇರುವಂತೆ ಸೂಚಿಸಿದ್ದಾರೆ. ಕಾವ್ಯಾಶ್ರೀ ಅಂಡ್ ಅರುಣ್ ಸಾಗರ್ ಬಂದಿದ್ದು, ಕಾವ್ಯಾಶ್ರೀ ತನ್ನನ್ನು ತಾನು ಸೇವ್ ಮಾಡಿಕೊಂಡಿದ್ದಾರೆ. ಅರುಣ್ ಅವರು ಕೂಡ ನನ್ನ ಫೋಟೋವನ್ನೇ ತೆಗೆದುಕೊಂಡಿದ್ದಾರೆ ಎಂಬ ಆಲೋಚನೆಯಿಂದ ನನ್ನ ಫೋಟೋ ತೆಗೆದುಕೊಂಡಿದ್ದೇನೆ ಎಂದಿದ್ದಾರೆ. ಆದ್ರೆ ಅರುಣ್ ಸಾಗರ್ ಕೂಡ ಅವರ ಫೋಟೋವನ್ನೇ ತೆಗೆದುಕೊಂಡಿದ್ದಾರೆ.

ಸ್ವಾರ್ಥ ಬಿಟ್ಟ ದೀಪಿಕಾ ಅಂಡ್ ರೂಪೇಶ್ ಶೆಟ್ಟಿ

ಸ್ವಾರ್ಥ ಬಿಟ್ಟ ದೀಪಿಕಾ ಅಂಡ್ ರೂಪೇಶ್ ಶೆಟ್ಟಿ

ಪ್ರಶಾಂತ್ ಸಂಬರ್ಗಿ ಅಂಡ್ ದೀಪಿಕಾ ಸರದಿ ಬಂದಾಗ, ಸಂಬರ್ಗಿ ತನ್ನದೇ ಫೋಟೋ ತೆಗೆದುಕೊಂಡಿದ್ದಾರೆ. ದೀಪಿಕಾ, ಸಂಬರ್ಗಿಯವರ ಫೋಟೋವನ್ನೇ ತೆಗೆದುಕೊಂಡಿದ್ದು, ಇಬ್ಬರದ್ದು ಒಂದೇ ಫೋಟೋ ಆಗಿರುವ ಕಾರಣ ಒಬ್ಬರು ಸೇವ್ ಆಗಿದ್ದಾರೆ. ರೂಪೇಶ್ ಮತ್ತು ರಾಜಣ್ಣನ ಸರದಿ ಬಂದಾಗ, ರೂಪೇಶ್ ಶೆಟ್ಟಿ, ರಾಜಣ್ಣನ ಫೋಟೋವನ್ನೇ ತೆಗೆದುಕೊಂಡಿದ್ದಾರೆ. ಇಬ್ಬರು ನಾಮಿನೇಟ್ ಆಗುವುದಕ್ಕಿಂತ ಇಬ್ಬರಲ್ಲಿ ಒಬ್ಬರು ಸೇವ್ ಆಗಲಿ ಎಂದುಕೊಂಡು ಆ ಫೋಟೋ ತೆಗೆದಿದ್ದಾರೆ. ಆ ಕಡೆ ರಾಜಣ್ಣ ಕೂಡ ತನ್ನ ಫೋಟೋ ತೆಗೆದುಕೊಂಡು ಸೇವ್ ಆಗಿದ್ದಾರೆ.

ಆಕ್ಟಿವಿಟಿ ರೂಮಿನಿಂದ ಬಂದವರನ್ನು ಕಂಡು ಶಾಕ್

ಆಕ್ಟಿವಿಟಿ ರೂಮಿನಿಂದ ಬಂದವರನ್ನು ಕಂಡು ಶಾಕ್

ಬಿಗ್ ಬಾಸ್ ನಾಮಿನೇಷನ್ ಮುಗಿದ ಮೇಲೆ ಯಾರು ಯಾರ ಜೊತೆಗೂ ಮಾತನಾಡಬಾರದು ಅಂತ ಸೂಚನೆ ಕೊಟ್ಟಿತ್ತು. ಅದರಂತೆ ನಾಮಿನೇಷನ್ ಪ್ರಕ್ರಿಯೆ ಮುಗಿದ ಮೇಲೆ ಬಿಗ್ ಬಾಸ್ ಸೂಚಿಸಿದ ಜಾಗಕ್ಕೆ ಹೋಗಬೇಕು. ಮುಂದಿನ ಸೂಚನೆ ತನಕ ಮಾತನಾಡುವಂತಿಲ್ಲ, ಸನ್ನೆ ಮಾಡುವಂತಿಲ್ಲ ನಿಯಮ ಮೀರಿದರೆ ಮನೆ ಸಮಸ್ಯೆ ಅನುಭವಿಸುತ್ತದೆ. ಆರ್ಯವರ್ಧನ್ ಅವರನ್ನು ಗಾರ್ಡನ್ ಏರಿಯಾಗೆ ಕಳುಹಿಸಿದ್ದಾರೆ. ಅನು ಬೆಡ್ ರೂಮಿಗೆ ಹೋಗಿದ್ದನ್ನು ಕಂಡು ಶಾಕ್ ಆಗಿದ್ದಾರೆ. ಅನುಪಮಾ ಕಡೆಗೆ ನೋಡಿ ನೋಡಿ ಎಲ್ಲರು ಮಾತನಾಡಿಕೊಳ್ಳುತ್ತಿದ್ದಾರೆ. ಬಳಿಕ ನಾಮಿನೇಷನ್ ಮಾಡಿ ಬಂದವರೆಲ್ಲರ ವರ್ತನೆ ಅದೇ ಆಗಿತ್ತು. ಪಕ್ಕಾ ಯಾರ ಜೊತೆಗೂ ಮಾತನಾಡುವ ಹಾಗಿಲ್ಲ. ಸನ್ನೆ ಮಾಡುವಂಗಿಲ್ಲ ಅಂತ ಹೇಳಿದ್ದಾರೆ ಎನಿಸುತ್ತೆ ಎಂದು ರಾಕೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಆರ್ಯವರ್ಧನ್, ಅನುಪಮಾ, ದಿವ್ಯಾ, ಕಾವ್ಯಾ, ಅರುಣ್, ದೀಪಿಕಾ ಹಾಗೂ ರೂಪೇಶ್ ಶೆಟ್ಟಿ ನಾಮಿನೇಟ್ ಆಗಿದ್ದರು. ಆದರೆ, ಕ್ಯಾಪ್ಟನ್ ಆದ ರಾಕಿಗೆ ನೇರ ನಾಮಿನೇಟ್ ಮಾಡುವುದಕ್ಕೆ ಹೇಳಿದಾಗ ಸಂಬರ್ಗಿ ಅವರನ್ನು ನಾಮಿನೇಟ್ ಮಾಡಿದ್ದಾರೆ.

More from Filmibeat

English summary
Bigg Boss Kannada 9 November 28th Episode Deepika And Roopesh Shetty, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X