twitter
    For Quick Alerts
    ALLOW NOTIFICATIONS  
    For Daily Alerts

    BBK9: ಬಿಗ್ ಬಾಸ್ ಮನೆಯಲ್ಲಿ ಹಾಲು-ನೀರಿನ ಕಿತ್ತಾಟ.. ಪ್ರಶಾಂತ್ ಸಂಬರ್ಗಿ ಫುಲ್ ರಾಂಗ್!

    By ಎಸ್ ಸುಮಂತ್
    |

    ಬಿಗ್ ಬಾಸ್ ಮನೆಯಲ್ಲಿ ಊಟ-ತಿಂಡಿಗೆ ಬೇಕಾದ ಆಹಾರ ಪದಾರ್ಥಗಳನ್ನು ಬಿಗ್ ಬಾಸ್ ಆಗಾಗ ಕಳುಹಿಸಿಕೊಡುತ್ತಾರೆ. ಅದರ ಜೊತೆಗೆ ಒಬ್ಬೊಬ್ಬರಿಗೆ ಇಂತಿಷ್ಟು ಹಾಲು ಅಂತಾನೂ ನೀಡುತ್ತಾರೆ. ಅದರಲ್ಲಿ ಎಲ್ಲರ ಒಪ್ಪಿಗೆ ಪಡೆದು ಎಲ್ಲರ ಹಾಲನ್ನು ಬಳಸಿಕೊಂಡು, ಸ್ವೀಟ್ ಆದ್ರೂ ಮಾಡಬಹುದು, ಮೊಸರಾದ್ರೂ ಮಾಡಬಹುದು, ಟೀ ಕಾಫಿಯಾದರೂ ಕುಡಿಯಬಹುದು. ಆದ್ರೆ ಈಗ ಮನೆಯಲ್ಲಿ ಹಾಲಿಗೆ ನೀರಾಕುವ ವಿಚಾರಕ್ಕೆ ಜಗಳಗಳು ನಡೆಯುತ್ತಿವೆ.

    ಕಳೆದ ಎರಡು ದಿನದ ಹಿಂದಷ್ಟೇ ಹಾಲಿಗೆ ನೀರಾಕಿದರೆ ನನಗೆ ಇಷ್ಟ ಆಗಲ್ಲ ಅಂತ ಅಮೂಲ್ಯ ಹೇಳಿದ್ದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ಸಂಬರ್ಗಿ ಅವರೇ ವಿರೋಧಿಸಿದ್ದರು. ಆಗೋ ಹೀಗೋ ಎಲ್ಲರೂ ಮಾತನಾಡಿ ಅಮೂಲ್ಯಾ ಸೇರಿದಂತೆ ಸಪರೇಟ್ ಯಾರಿಗೆ ಹಾಲು ಬೇಕೋ ಅವರಿಗೆ ಒಂದೊಂದು ಪ್ಯಾಕ್ ಕೊಟ್ಟುಬಿಡೋಣಾ ಅಂತ ನಿರ್ಧಾರ ಮಾಡಿಬಿಟ್ಟಿದ್ದಾರೆ.

    ಸಮಾನತೆ ಬಗ್ಗೆ ಮಾತನಾಡಿದ ಸಂಬರ್ಗಿ

    ಸಮಾನತೆ ಬಗ್ಗೆ ಮಾತನಾಡಿದ ಸಂಬರ್ಗಿ

    ಬಿಗ್ ಬಾಸ್ ಮನೆಯಲ್ಲಿ ಹಾಲಿನ ಮ್ಯಾಟರ್ ಬಂದಿದೆ. ಆದರೆ ಅದು ಸಮಾನತೆಯ ಮ್ಯಾಟರ್ ತನಕ ಹೋಗಿ ಮುಟ್ಟಿದೆ. ರಾಕೇಶ್ ಎಲ್ಲರೂ ಕೂತಿದ್ದಾಗ ಹಾಲಿನ ಬಗ್ಗೆ ಚರ್ಚೆ ಮಾಡಿದ್ದಾರೆ. ಈಗ ಮತ್ತೆ ಹಾಲು ಒಬ್ಬೊಬ್ಬರಿಗೆ ಬೇಕಾಗುತ್ತೆ ಏನು ಮಾಡುವುದು ಎಂದಾಗ ಅಲ್ಲಿಯೇ ಇದ್ದ ಪ್ರಶಾಂತ್ ಸಂಬರ್ಗಿ, ಸ್ಟಡಿ ಮಾಡಿದ್ದಾರೆ. ಅದರ ಬಗ್ಗೆ ಬುಕ್ ಇದೆ. ಬೇರೆಯವರನ್ನು ಎಷ್ಟು ಸಮಾನತೆಯಿಂದ ನೋಡಿಕೊಳ್ಳುತ್ತಾರೆ. ನಾನೆಷ್ಟು ಸಮಾನವಾಗಿರಬೇಕು ಎಂಬ ಮನಸ್ಥಿತಿ ಎದ್ದು ಕಾಣುತ್ತೆ ಎಂದಿದ್ದಾರೆ. ಹಾಲಿಗೆ ನೀರು ಹಾಕುವುದು ಬೇಡ ಎಂದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ.

    ಸಂಬರ್ಗಿ ಸೋಲುವ ಮಾತೇ ಇಲ್ಲ

    ಸಂಬರ್ಗಿ ಸೋಲುವ ಮಾತೇ ಇಲ್ಲ

    ಹೀಗೆ ಈ ಚರ್ಚೆ ಮುಂದುವರೆಯುತ್ತಿದ್ದಾಗ ಅರುಣ್ ಸಾಗರ್ ಕೂಡ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದಿದ್ದಾರೆ. ಒಬ್ಬರಿಂದ ಒಂಭತ್ತು ಜನ ಸಪರೇಟ್ ಆಗುವುದು ಬೇರೆ. ಒಂಭತ್ತು ಜನರಿಂದ ಒಬ್ಬರು ಸಪರೇಟ್ ಆಗುವುದು ಬೇರೆ ಎಂದಿದ್ದಾರೆ. ಆಗ ಪ್ರಶಾಂತ್ ಸಂಬರ್ಗಿ, "ವೀಕೆಂಡ್ ಹಾಲನ್ನು ಡಿವೈಡ್ ಮಾಡು. ಅದೇನು ವೀಕೆಂಡ್ ಮಾತ್ರ ಸ್ಪೆಷಲ್ ಮಾಡುವುದು ಮೂರು ಅಂತ. ಅದನ್ನು ಡಿವೈಡ್ ಮಾಡು. ಬಿಗ್ ಬಾಸ್ ಐಟಂ ಅನ್ನು ರೇಷನ್ ಮಾಡುತ್ತಾ ಇದ್ದೀಯಾ ಅಲ್ವಾ. ಮೊಸರು ಬೇಡ ಕಣೋ ನನಗೆ. ನನಗೆ ಮೊಸರು ಬೇಡ, ವೀಕೆಂಡು ಬೇಡ. ನನ್ನ ಪಾಲಿನ ಹಾಲನ್ನು ನನಗೆ ಕೊಟ್ಟು ಬಿಡಿ" ಎಂದಿದ್ದಾರೆ.

    ತಾಳ್ಮೆ ಕಳೆದುಕೊಂಡ ರಾಕೇಶ್

    ತಾಳ್ಮೆ ಕಳೆದುಕೊಂಡ ರಾಕೇಶ್

    ಇನ್ನು ಹಾಲಿನ ವಿಚಾರಕ್ಕೆ ಸಂಬರ್ಗಿ ಎತ್ತಿದ ಧ್ವನಿಯನ್ನು ತಗ್ಗಿಸಲೇ ಇಲ್ಲ. ಒಂದೇ ಸಮನೇ ಮಾತನಾಡುತ್ತಾ ಇದ್ದರು. ರಾಕೇಶ್ ಅದಕ್ಕೆ ನಡುವಲ್ಲಿಯೇ ಕ್ಲಾರಿಟಿ ಕೊಡುವುದಕ್ಕೆ ಯತ್ನಿಸಿದರು. ಆದರೂ ಮಧ್ಯದಲ್ಲಿ ಮಾತನಾಡುತ್ತಾ ಅದು ಹಾಗಲ್ಲ, ಹೀಗಲ್ಲ ಅಂತ ಇದ್ದರು. ಆಗ ರಾಕೇಶ್ ಮತ್ತಷ್ಟು ಕೋಪಗೊಂಡು, "ಮೊದಲು ನನ್ನ ಮಾತನ್ನು ಕೇಳಿ. ನೀವೂ ನನ್ನ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಆಯ್ತು, ಸುಮ್ಮನೆ ಇವರಿಗೆ ಏನು ಹೇಳುವುದಕ್ಕೆ ಆಗಲ್ಲ. ತೆಗೆದುಕೊಳ್ಳಿ ಬ್ರೋ. ನಿಮ್ಮಿಷ್ಟ" ಅಂತ ಹೇಳಿ ಸುಮ್ಮನೆ ಆಗಿ ಬಿಟ್ಟಿದ್ದಾರೆ.

    ಮೊಸರು ಬೇಡ ಎಂದರೆ ಊಟದ ಕಥೆ

    ಮೊಸರು ಬೇಡ ಎಂದರೆ ಊಟದ ಕಥೆ

    ಇನ್ನು ಬಿಗ್ ಬಾಸ್ ಮನೆಯಲ್ಲಿ ಅರ್ಜೆಂಟ್ ಗೆ ಏನು ಆಗುತ್ತೋ ಅದನ್ನೇ ಅಡುಗೆ ಮಾಡಬೇಕು. ಆಗ ಮೊಸರು ಇದ್ದರೆ ಹೇಗೋ ಅಡ್ಜೆಸ್ಟ್ ಮಾಡಿಕೊಂಡು ತಿನ್ನಬಹುದಾಗುತ್ತದೆ. ಆದ್ರೆ ಹಾಲಿನ ವಿಚಾರಕ್ಕೆ ಜಗಳ ಬಂದಾಗ ಸಂಬರ್ಗಿ ನಂಗೆ ಮೊಸರು ಬೇಡ ಏನು ಬೇಡ ಎಂದಿದ್ದಾರೆ. ಅದಕ್ಕೆ ಅನುಪಮಾ ಉತ್ತರ ಕೊಟ್ಟಿದ್ದು, ಮೊಸರು ಬೇಡ ಅಂದ್ರೆ ಕ್ಯಾನ್ಸಲ್ ಮಾಡೋಣಾ ಎಂದಾಗ ಎಲ್ಲರೂ ಮೊಸರು ಬೇಕು ಎನ್ನುತ್ತಿದ್ದಾರೆ. ವಾರದಲ್ಲಿ ಸ್ವೀಟ್ ಬೇಡ ಎಂದರೆ ಅದನ್ನು ಎತ್ತಿಡೋಣಾ. ನೀವೂ ಕಿಚನ್ ಗೆ ಹೋಗಿ, ಮೊಸರಿಗೂ ಬೇಡ, ಸ್ವೀಟೂ ಬೇಡ ಅನ್ನೋದಾದ್ರೆ ನೀವೆ ನಿಂತು ಟೀ ಮಾಡಿಕೊಡಿ ಎಂದಾಗ ಮತ್ತೆ ಸಂಬರ್ಗಿ ಸ್ಪಷ್ಟನೆ ನೀಡಿದ್ದಾರೆ. ನೀವೂ ಮೊಸರಿಗಾದ್ರೂ ಹಾಕಿ, ಟೀ ಆದ್ರೂ ಮಾಡಿಕೊಡಿ ಎಂದಿದ್ದಾರೆ. ಸಂಬರ್ಗಿ ಅದಕ್ಕೂ ಪ್ರತಿಕ್ರಿಯೆ ನೀಡಿ, ನಂಗೆ ವೀಕೆಂಡ್ ಕ್ಲಾರಿಟಿ ಬೇಕು ಎಂದಿದ್ದಾರೆ.

    English summary
    Bigg Boss Kannada November 29th Episode Written Update. Here is the details about milk discussion.
    Wednesday, November 30, 2022, 5:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X