BBK 9: ಅಮೂಲ್ಯಾರನ್ನು ಒಪ್ಪಿಕೊಂಡ ರಾಕೇಶ್ ತಾಯಿ ಹೇಳಿದ್ದೇನು..?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮುಖದಲ್ಲೂ ಸಂತಸವೇ ಕಾಣುತ್ತಾ ಇತ್ತು. ಅದಕ್ಕೆ ಕಾರಣ ಬಿಗ್ ಬಾಸ್ ನೀಡಿದ ಸ್ಪೆಷಲ್ ಗಿಫ್ಟ್. ಆ ಗಿಫ್ಟ್‌ಗಾಗಿ ಬಿಗ್ ಬಾಸ್ ಮಂದಿ ಸಾಕಷ್ಟು ದಿನದಿಂದ ಕಾಯುತ್ತಾ ಇದ್ದರು. ಅದು ಬೆಲೆ ಕಟ್ಟಲಾಗದ ಗಿಫ್ಟ್ ಆಗಿಯೇ ಇತ್ತು. ಬೇಕು ಬೇಕು ಅಂತ ಬಯಸಿದಾಗಲೂ ಅದು ಸಿಕ್ಕಿರಲಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಈ ವಾರ ರಾಕಿ ಕ್ಯಾಪ್ಟನ್ ಆಗಿದ್ದಾರೆ. ಈ ಕ್ಯಾಪ್ಟನ್ ಆದಾಗ ಹಲವು ವಿಶೇಷತೆಗಳು ಸಿಗುತ್ತವೆ. ಆ ವಿಶೇಷತೆಗಳನ್ನು ಅನುಭವಿಸುವುದಕ್ಕೋಸ್ಕರ ಆದರೂ ಕ್ಯಾಪ್ಟನ್ ಆಗಬೇಕು ಎಂಬುದು ಹಲವರ ಅಭಿಪ್ರಾಯ. ಆದ್ರೆ ಈ ಬಾರಿ ಎಲ್ಲರಿಗೂ ಬಿಗ್ ಬಾಸ್ ಆ ಗಿಫ್ಟ್ ನೀಡಿದೆ. ಅದುವೆ ಪೇರೆಂಟ್ಸ್ ನೋಡುವುದು.

ಅರುಣ್ ಸಾಗರ್ ವೈಫ್ ಎಂದುಕೊಂಡಿದ್ದರು

ಅರುಣ್ ಸಾಗರ್ ವೈಫ್ ಎಂದುಕೊಂಡಿದ್ದರು

ರಾಕಿ ಊಟ ಮಾಡುತ್ತಾ ಕುಳಿತಿದ್ದರು. ಆಗ ಮನೆಗೆ ಹೊಸ ವ್ಯಕ್ತಿಯ ಆಗಮನವಾಯಿತು. ಅದನ್ನು ಕಂಡು ಮನೆ ಮಂದಿಯೆಲ್ಲಾ ಓಡೋಡಿ ಬಂದರು. ಅವರನ್ನು ಅರುಣ್ ಸಾಗರ್ ಹೆಂಡತಿ ಎಂದೇ ದೀಪಿಕಾ, ದಿವ್ಯಾ ಭಾವಿಸಿದ್ದರು. ಯಾಕಂದ್ರೆ ಎರಡನೇ ಬಾರಿ ಅರುಣ್ ಸಾಗರ್, ಬಣ್ಣದ ಆಯ್ಕೆ ಬಂದಿತ್ತು. ಆದ್ರೆ ಆಮೇಲೆ ರಾಕಿಗೆ ಅನುಮಾನ ಬಂದಿದ್ದು, ಓಡೋಡಿ ಬಂದಾಗ ಅಮ್ಮ ಎಂದು ಗೊತ್ತಾಗಿದೆ.

ರಾಕಿಗೆ ಎಷ್ಟು ನಿಮಿಷ

ರಾಕಿಗೆ ಎಷ್ಟು ನಿಮಿಷ

ಇವತ್ತು ಬಿಗ್ ಬಾಸ್ ಮನೆಗೆ ಅಮ್ಮನನ್ನು ಕರೆಸುವುದಕ್ಕೆ ಎಷ್ಟು ನಿಮಿಷಗಳ ಕಾಲಾವಕಾಶ ತೆಗೆದುಕೊಳ್ಳುತ್ತೀರಾ ಅಂತ ಬಿಗ್ ಬಾಸ್ ಆಫರ್ ನೀಡಿತ್ತು. ಅದನ್ನು ರಾಕಿ ಏಳು ನಿಮಿಷ ಎಂದು ತೆಗೆದುಕೊಂಡಿದ್ದರು. ಲತಾ ಅವರು ಬಂದ ಕೂಡಲೇ ಎಲ್ಲರನ್ನು ಮಾತನಾಡಿಸಿದರು. ನೀನು ಕ್ಯಾಪ್ಟನ್ ಆಗುವುದೇ ಇಲ್ಲವೇನೋ ಎಂದುಕೊಂಡಿದ್ದೆ. ಆದ್ರೆ ಕ್ಯಾಪ್ಟನ್ ಆದೆ. ಈ ನನ್ ಮಗನದ್ದು ಇಷ್ಟೆ ಎಂದುಕೊಂಡಿದ್ದೆ ಎಂದರು. ಎಲ್ಲರನ್ನು ಮಾತನಾಡಿಸುತ್ತಾ ಇದ್ದಾಗ ಸಮಯ ಜಾಸ್ತಿ ಇಲ್ಲ. ಬಾ ಮಾತನಾಡೋಣಾ ಅಂತ ರಾಕಿ ಕರೆದುಕೊಂಡು ಹೋಗಿ, ಮನೆಯನ್ನೆಲ್ಲಾ ತೋರಿಸಿದರು.

ಅಮೂಲ್ಯ ಪರ ನಿಂತ ರಾಕಿ

ಅಮೂಲ್ಯ ಪರ ನಿಂತ ರಾಕಿ

ಇದೆಲ್ಲಾ ಮುಗಿದ ಮೇಲೆ ಸಂಬರ್ಗಿ ಅವರು ಒಂದು ಮಾತು ಹೇಳಿದರು. ರಾಕಿ ಅಮ್ಮ ಅಮೂಲ್ಯಾರನ್ನು ಹಗ್ ಕೊಡುತ್ತೀನಿ ಬಾ ಅಂತ ಕರೆದರು ಅಂತ ಹೇಳಿದರು. ಅದಕ್ಕೆ ಅಲ್ಲಿಯೇ ಕೂತಿದ್ದ ಅಮೂಲ್ಯ, ಪ್ರಶಾಂತ್ ಸರ್ ಅದಕ್ಕೆ ನಾನು ಕ್ಲಾರಿಟಿ ಕೊಡ್ತೀನಿ. ನೀವೂ ಏನೇನೋ ಹಬ್ಬಿಸಬೇಡಿ. ನಾನು ಮೊದಲು ಹಗ್ ಕೊಡುವುದಕ್ಕೆ ಹೋದಾಗ ಅಲ್ಲಿ ಯಾರೋ ಅಡ್ಡ ಬಂದ್ರು. ಆಗ ಕೊಡುವುದಕ್ಕೆ ಆಗಲಿಲ್ಲ. ಬಳಿಕ ಹಗ್ ಕೊಟ್ಟರು ಎಂದರು. ಅದು ಅಲ್ಲಿಗೆ ನಿಲ್ತು. ರಾತ್ರಿ ಅಮೂಲ್ಯ ಅಡುಗೆ ಮನೆಯಲ್ಲಿ ಬೇಜಾರಾಗಿ ಕೂತಿದ್ದಾಗ ಬಂದ ರಾಕಿ, ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡ ಎಂದು ಸಮಾಧಾನ ಮಾಡಿದ್ದರು. ಅದಕ್ಕೆ ಅಮೂಲ್ಯ "ಇಲ್ಲ, ಈ ಎಪಿಸೋಡ್ ಅಮ್ಮ ನೋಡಿದರೆ ಅವರು ತಪ್ಪು ತಿಳಿದುಕೊಳ್ಳುವುದಿಲ್ಲವಾ" ಎಂದು ಪ್ರಶ್ನಿಸಿದ್ದಾರೆ.

ಅಮೂಲ್ಯ ಪರ ಲತಾ ಬ್ಯಾಟಿಂಗ್

ಅಮೂಲ್ಯ ಪರ ಲತಾ ಬ್ಯಾಟಿಂಗ್

ರಾಕಿ ಅವರ ತಾಯಿ ಲತಾ ಅವರು ಬಂದು ಮನೆಯಲ್ಲೆಲ್ಲಾ ಓಡಾಡಿದ ಮೇಲೆ ಬಿಗ್ ಬಾಸ್ ಕನ್ಶೇಷನ್ ರೂಮಿಗೆ ಕರೆದರು. ಬಿಗ್ ಬಾಸ್ ಮನೆ ಹೇಗೆ ಅನಿಸಿತು ಎಂದು ಕೇಳಿದರು. ಈ ವಾರ ಯಾರು ಕ್ಯಾಪ್ಟನ್ ಆಗಬೇಕು ಇಬ್ಬರ ಹೆಸರನ್ನು ಸೂಚಿಸಿ ಎಂದಾಗ, ಲತಾ ಅವರು ಮನೆ ತುಂಬಾ ಇಷ್ಟ ಆಯ್ತು, ಮುಂದಿನ ವಾರ ಅಮೂಲ್ಯ ಕ್ಯಾಪ್ಟನ್ ಆಗಬೇಕು. ಅವಳಿಗೆ ಮನೆ ನಿಭಾಯಿಸುವ ಕ್ವಾಲಿಟಿ ಇದೆ ಅಂದ್ರು ಎರಡನೇ ಆಪ್ಶನ್ ಆಗಿ ಅರುಣ್ ಸಾಗರ್ ಹೆಸರನ್ನು ಹೇಳಿದರು.

More from Filmibeat

English summary
Bigg Boss Kannada November 29th Episode Written Update. Here is the details about Rakesh mother like Amulya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X