For Quick Alerts
  ALLOW NOTIFICATIONS  
  For Daily Alerts

  BBK9: ಆರ್ಯವರ್ಧನ್ ಡಬಲ್ ಗೇಮ್‌ಗೆ ಮನೆಯವರಿಂದ್ಲೇ ಕ್ಲಾಸ್.. ನಗುತ್ತಲೇ ಉತ್ತರಿಸಿದ ಗುರೂಜಿ !

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ಇರುವಂತ ಸದಸ್ಯರಲ್ಲಿ ಕೆಲವರು ಎದುರುಗಿದ್ದಾಗ ಮಾತನಾಡಿ, ಹಿಂದೆ ಹೋದಾಗ ಏನೇನೋ ಮಾತನಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಅದರಲ್ಲೂ ಆರ್ಯವರ್ಧನ್ ಗುರೂಜಿಯದ್ದು ಆ ಬುದ್ಧಿಯಲ್ಲಿ ಕೊಂಚ ಜಾಸ್ತಿಯೇ ಇದೆ ಎಂದರೆ ತಪ್ಪಾಗುವುದಿಲ್ಲ. ತನ್ನ ಆಟ ಆಡುವುದಕ್ಕೆ ಯಾರನ್ನು ಬೇಕದರೂ ಬಳಕೆ ಮಾಡಿಕೊಳ್ಳುವಂಥ ವಾತಾವರಣವನ್ನು ಆರ್ಯವರ್ಧನ್ ಗುರೂಜಿ ಕ್ರಿಯೆಟ್ ಮಾಡಿಕೊಂಡಿದ್ದಾರೆ.

  ಆರ್ಯವರ್ಧನ್ ಗುರೂಜಿ ಎಂದರೆ ಬರೀ ನಂಬರ್ ಅಂದ್ರೆ ನಾನು ಅಂದ್ರೆ ನಂಬರ್ ಅಂತಷ್ಟೆ ಎಲ್ಲರಿಗೂ ತಿಳಿದಿದ್ದ ಗುರೂಜಿ. ಆದರೆ ಬಿಗ್ ಬಾಸ್ ಓಟಿಟಿಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿತ್ತು. ಮೊದ ಮೊದಲಿಗೆ ಮುಗ್ಧತೆಯಿಂದ ಇದ್ದ ಗುರೂಜಿ ಆಮೇಲೆ ತಮ್ಮ ರಿಯಾಲಿಟಿಯನ್ನು ತೋರಿಸಿದ್ದರು.

  BBK9: ರೂಪೇಶ್ ಶೆಟ್ಟಿ ಹೇಳಿದ್ದು ಇವತ್ತು ಸುಳ್ಳಾಯ್ತಾ..? ಮನೆ ಮಂದಿ ಕೆಂಗಣ್ಣಿಗೆ ಗುರಿಯಾದ್ರಾ?BBK9: ರೂಪೇಶ್ ಶೆಟ್ಟಿ ಹೇಳಿದ್ದು ಇವತ್ತು ಸುಳ್ಳಾಯ್ತಾ..? ಮನೆ ಮಂದಿ ಕೆಂಗಣ್ಣಿಗೆ ಗುರಿಯಾದ್ರಾ?

  ಆಟವನ್ನು ಹೇಗೆ ಆಡಬಹುದು ಎಂದು ತೋರಿಸಿದ್ದರು. ಆಟಕ್ಕಾಗಿ ಯಾರನ್ನೆಲ್ಲಾ ಬಳಕೆ ಮಾಡಿಕೊಳ್ಳಬಹುದು ಎಂಬುದು ಗುರೂಜಿಗೆ ಚೆನ್ನಾಗಿಯೇ ಗೊತ್ತು. ಆದರೆ, ಅಂಥದ್ದೇ ಕೆಲಸ ಮಾಡಲು ಹೋದ ಗುರೂಜಿಗೆ ಇದೀಗ ಮನೆ ಸದಸ್ಯರಿಂದಾನೇ ಮುಖಭಂಗವಾಗಿದೆ.

  ಬದ್ಧ ವೈರಿಗಳಂತೆ ಆಗಿದ್ದಾರೆ ಸಂಬರ್ಗಿ-ರಾಜಣ್ಣ

  ಬದ್ಧ ವೈರಿಗಳಂತೆ ಆಗಿದ್ದಾರೆ ಸಂಬರ್ಗಿ-ರಾಜಣ್ಣ

  ಬಿಗ್ ಬಾಸ್ ಮನೆಯಲ್ಲಿ ಸಂಬರ್ಗಿ ಸಮಾಧಾನವಾಗಿರುವುದೇ ಕಡಿಮೆ. ಯಾವಾಗಲೂ ಧ್ವನಿಯನ್ನುಏರಿಸುತ್ತಲೆ ಇರುತ್ತಾರೆ. ತಾವೂ ಮಾಡಿದ್ದೆ ಸರಿ ಎನ್ನುವ ಸಂಬರ್ಗಿಗೆ, ಯಾರಾದರೂ ಬುದ್ದಿ ಹೇಳುವವರು ಸಿಕ್ಕಿದರೆ ಮುಗೀತು. ಅವರ ಮಾತನ್ನು ಕೇಳಿಸಿಕೊಳ್ಳುವುದಕ್ಕಿಂತ ಅವರ ಜೊತೆ ಯುದ್ಧಕ್ಕೆ ನಿಂತು ಬಿಡುತ್ತಾರೆ. ಸದ್ಯ ಕಳೆದ ಕೆಲವು ದಿನಗಳಿಂದ ಚೆನ್ನಾಗಿದ್ದ ರಾಜಣ್ಣನನ್ನು ಕಂಡರೆ ಈಗ ಹಾವು ಕಂಡ ಮುಂಗುಸಿಯಂತೆ ಆಡುತ್ತಿದ್ದಾರೆ.

  ರಾಜಣ್ಣ-ಸಂಬರ್ಗಿ ಜಗಳಕ್ಕೆ ಬೆಂಕಿ ಸುರಿದ ಗುರೂಜಿ

  ರಾಜಣ್ಣ-ಸಂಬರ್ಗಿ ಜಗಳಕ್ಕೆ ಬೆಂಕಿ ಸುರಿದ ಗುರೂಜಿ

  ಆರ್ಯವರ್ಧನ್ ಗುರೂಜಿ ಮನೆಯಲ್ಲಿ ಯಾರನ್ನೇ ಆಗಲಿ ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಅದರಂತೆ ಎಲ್ಲರ ಜೊತೆ ಒಳ್ಳೆಯವರೇ ಆಗಬೇಕು ಎಂಬ ಕಾರಣಕ್ಕೆ ಎಲ್ಲರ ಬಳಿಯೂ ಅವರವರ ಫೇವರಿಸಂ ಆಗಿ ಮಾತನಾಡುತ್ತಾರೆ. ಸದ್ಯ ಪ್ರಶಾಂತ್ ಸಂಬರ್ಗಿ ಮತ್ತು ರಾಜಣ್ಣ ನಡುವೆ ಬೆಂಕಿ ಹೊತ್ತಿ ಉರಿಯುತ್ತಿದೆ. ಆದರೆ, ಇಬ್ಬರ ನಡುವೆ ಗುರೂಜಿ ಹೋಗಿ ಮತ್ತಷ್ಟು ಮನಸ್ತಾಪಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ. ಪ್ರಶಾಂತ್ ಸಂಬರ್ಗಿ, "ಎಲ್ಲದಕ್ಕೂ ಒಪ್ಪಿಕೊಂಡೆ ಈ ಮನೆಗೆ ಬಂದಿರ್ತೀವಿ. ಇವ್ನಿಗೆ ಬೇಕಾದಾಗ ಹೋಗ್ತೀನಿ ಇರ್ತೀನಿ ಅನ್ನೋದಲ್ಲ" ಎಂದಿದ್ದಾರೆ. ಅದಕ್ಕೆ ಗುರೂಜಿ ಇದು ಮಾವನ ಮನೆಯಲ್ಲ ಎಂದು ಸಂಬರ್ಗಿಗೆ ಮತ್ತಷ್ಟು ಹುಮ್ಮಸ್ಸು ತುಂಬಿದ್ದಾರೆ.

  ಸದಸ್ಯರ ಕ್ಲಾಸ್‌ಗೆ ಗುರೂಜಿ ಕ್ಲಾರಿಟಿ ಏನು..?

  ಸದಸ್ಯರ ಕ್ಲಾಸ್‌ಗೆ ಗುರೂಜಿ ಕ್ಲಾರಿಟಿ ಏನು..?

  ಪ್ರಶಾಂತ್ ಸಂಬರ್ಗಿಗೆ ರಾಜಣ್ಣನ ಬಗ್ಗೆ ಗುರೂಜಿ ಹಾಕೊಟ್ಟಿದ್ದಾರೆ. ಇದನ್ನು ಅಲ್ಲಿಯೇ ನಿಂತು ಗಮನಿಸಿದ ಕಾವ್ಯಾ ಹಾಗೂ ವಿನೋದ್ ಗೊಬ್ಬರಗಾಲ, ಗುರುಗಳೇ ಅಲ್ಲಿಯೂ ಮಾತಾಡಿ ಇಲ್ಲಿಯೂ ಮಾತನಾಡುತ್ತೀರಲ್ಲ ಅಂತ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಆರ್ಯವರ್ಧನ್ "ಅಲ್ಲಿನೂ ಆರ್ಯವರ್ಧನ್.. ಇಲ್ಲಿಯೂ ಆರ್ಯವರ್ಧನ್" ಅಂತ ನಗುತ್ತಲೇ ಉತ್ತರಿಸಿದ್ದಾರೆ. ಈ ಮಾತು ಕೇಳಿ ರೊಚ್ಚಿಗೆದ್ದ ಕಾವ್ಯಾ & ಗೊಬ್ಬರಗಾಲ, "ಇದೆಲ್ಲ ನಮಗೆ ಇಷ್ಟ ಆಗಲ್ಲ. ಇಲ್ಲ ಒಂದು ಕಡೆ ಇರಿ. ಒಂದು ಇವರಿಗೆ ಸಪೋರ್ಟ್ ಮಾಡಿ ಇಲ್ಲ ಅವರಿಗೆ ಸಪೋರ್ಟ್ ಮಾಡಿ" ಎಂದಾಗ ಗುರೂಜಿ ನಾನು ಅವರಿಗೆ ಸಪೋರ್ಟ್ ಮಾಡಲೇ ಇಲ್ಲ ಎಂದಿದ್ದಾರೆ.

  ಗುರೂಜಿಯದ್ದು ಇದು ಹೊಸ ಆಟವಲ್ಲ..!

  ಗುರೂಜಿಯದ್ದು ಇದು ಹೊಸ ಆಟವಲ್ಲ..!

  ಆರ್ಯವರ್ಧನ್ ಗುರೂಜಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಯಾರಾದರೂ ತಪ್ಪು ಮಾಡಿದರೆ ಅದನ್ನು ಗಟ್ಟಿ ಧ್ವನಿಯಲ್ಲಿ ಹೇಳುತ್ತಾರೆ. ತಮ್ಮನ್ನು ಹೀರೊ ಮಾಡಿಕೊಳ್ಳುವ ವಿಚಾರವಾದರೇ ಜಗಳವನ್ನೇ ಆಡುತ್ತಾರೆ. ಆದ್ರೆ ತಾನೇ ತಪ್ಪಿತಸ್ಥನ ಸ್ಥಾನದಲ್ಲಿ ನಿಂತುಬಿಟ್ಟರೆ ನಗುವೊಂದನ್ನು ಮಂತ್ರ ಮಾಡಿಕೊಂಡು ಬಿಡುತ್ತಾರೆ. ಈಗ ಆಗಿದ್ದು ಅದೇ. ರಾಜಣ್ಣ & ಸಂಬರ್ಗಿ ವಿಚಾರದಲ್ಲಿ ಬುದ್ಧಿವಂತಿಕೆ ಪ್ರದರ್ಶನ ಮಾಡುತ್ತಿದ್ದ ಗುರೂಜಿಗೆ ಅರುಣ್ ಸಾಗರ್, ನೇಹಾ ವಿಚಾರ ತೆಗೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಅರುಣ್ ಸಾಗರ್ ಹೇಳಿದ್ದೆ ತಡ ಗೊಬ್ಬರಗಾಲ ಎಲ್ಲದನ್ನು ತಿರುವಿ ಹಾಕಿ ಕ್ಲಾಸ್ ತೆಗೆದುಕೊಂಡಿದ್ದಾರೆ.

  BBK9: ಆರ್ಯವರ್ಧನ್ ಗುರೂಜಿಯನ್ನು ಅಪ್ಪಾಜಿ ಎಂದಿದ್ದೇ ರೂಪೇಶ್ ಶೆಟ್ಟಿಗೆ ಮುಳುವಾಯ್ತು?BBK9: ಆರ್ಯವರ್ಧನ್ ಗುರೂಜಿಯನ್ನು ಅಪ್ಪಾಜಿ ಎಂದಿದ್ದೇ ರೂಪೇಶ್ ಶೆಟ್ಟಿಗೆ ಮುಳುವಾಯ್ತು?

  English summary
  Bigg Boss Kannada November 2nd Episode Written Update. Here is the details about Kavya and Gobbaragala Taking Class On Aryavardhan.
  Wednesday, November 2, 2022, 19:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X