Don't Miss!
- Sports
IND vs NZ 3rd T20: ಅಹಮದಾಬಾದ್ ಪಿಚ್ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್?
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ಲೈಟ್ಸ್ ಆಫ್ ಆಗಿದ್ದಕ್ಕೆ ತಲೆಕೆಡಿಸಿಕೊಂಡ ರೂಪೇಶ್ ರಾಜಣ್ಣ!
ಮನೆಯಲ್ಲಿ ಎಲ್ಲರ ಪೋಷಕರು ಬಂದು ಹೋಗುತ್ತಿದ್ದಾರೆ. ಆದರೆ ಇನ್ನುಳಿದವರಿಗೆ ನಮ್ಮ ಮನೆಯವರು ಯಾವಾಗ ಬರುತ್ತಾರೆ ಎಂಬ ಕಾತುರ ಕಾಣುತ್ತಿದೆ. ಅದರ ಜೊತೆಗೆ ಮನೆಯೊಳಗೆ ಯಾರೋ ಒಬ್ಬರು ಹೊಸಬರು ಬಂದರಲ್ಲ ಎಂಬ ಖುಷಿ ಎಲ್ಲರ ಮುಖದಲ್ಲೂ ಕಾಣಿಸುತ್ತಿದೆ. ಅದೇ ಖುಷಿಯನ್ನು ಎಲ್ಲರೊಟ್ಟಿಗೂ ಇದ್ದು, ಜೀವಿಸುತ್ತಿದ್ದಾರೆ. ಬಂದ ತಾಯಂದಿರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತಿದ್ದಾರೆ.
ಬಿಗ್ ಬಾಸ್ ಮನೆಯೊಳಗಿನ ಮಂದಿಗೆ ಯಾವೊಂದು ವಸ್ತುವನ್ನಾಗಲಿ, ಪದಾರ್ಥವನ್ನಾಗಲಿ, ಫ್ರೀಯಾಗಿ ನೀಡಿಲ್ಲ. ಅದರಂತೆ ಪೋಷಕರನ್ನು ಕರೆಸುವ ವಿಚಾರಕ್ಕೂ ಅಷ್ಟೇ. ಬ್ಯಾಟರಿ ಡೌನ್ ಟಾಸ್ಕ್ ನೀಡಿದೆ. ಬ್ಯಾಟರಿ ಡೌನ್ ಆಗುತ್ತಲೇ ಇರುತ್ತದೆ. ಅದನ್ನು ನೋಡಿಕೊಂಡು ಮನೆ ಮಂದಿ ತಮ್ಮವರ ಜೊತೆ ಮಾತನಾಡಬೇಕಿದೆ.
BBK9:
ಬಿಗ್
ಬಾಸ್
ಮನೆಯಲ್ಲಿ
ಹಾಲು-ನೀರಿನ
ಕಿತ್ತಾಟ..
ಪ್ರಶಾಂತ್
ಸಂಬರ್ಗಿ
ಫುಲ್
ರಾಂಗ್!

ಕಾದು ಕಾದು ಸುಸ್ತಾದ ರೂಪೇಶ್ ರಾಜಣ್ಣ
ಹೆಂಡತಿ ಬಗ್ಗೆ ರಾಜಣ್ಣ, ಸುದೀಪ್ ಬಳಿ ಹೇಳಿಕೊಂಡಿದ್ದರು. ಬಹಳ ದಿನಗಳೇ ಆಯಿತು ಅವರನ್ನು ಬಿಟ್ಟು ಇದ್ದಿಲ್ಲ. ಹೀಗಾಗಿ ಅವರನ್ನು ನೋಡುವ ಹಂಬಲವನ್ನು ವ್ಯಕ್ತಪಡಿಸಿದ್ದರು. ಇದೀಗ ಆ ಆಸೆ ಈಡೇರುವುದಕ್ಕೆ ಎರಡೇ ಹೆಜ್ಜೆ. ಆದ್ರೆ ಏನು ಮಾಡೋದು ರಾಜಣ್ಣನ ಸಂಕಟಕ್ಕೆ ಬಿಗ್ ಬಾಸ್ ಮತ್ತಷ್ಟು ತುಪ್ಪ ಸುರಿಯುತ್ತಲೇ ಇತ್ತು. ಬಾಗಿಲ ಕಡೆಗೆ ನೋಡುತ್ತಾ ಕುಳಿತಿದ್ದರು ರಾಜಣ್ಣ. ತಲೆ ಕೆಟ್ಟು ಕೊನೆಯಲ್ಲಿ ಬಾಗಿಲು ತೆಗೆಯಿರಿ ಬಿಗ್ ಬಾಸ್ ಎಂದು ಮನವಿ ಮಾಡಿದ್ದಾರೆ.

ನೋಡ ನೋಡುತ್ತಿದ್ದಂತೆ ಲೈಟ್ಸ್ ಆಫ್
ಕಾದು ಕಾದು ಕುಳಿತಿದ್ದ ರಾಜಣ್ಣನಿಗೆ ಬಿಗ್ ಬಾಸ್ ಲೈಟ್ಸ್ ಆಫ್ ಮಾಡಿ ಶಾಕ್ ನೀಡಿದ್ದಾರೆ. ಅಲ್ಲಿಯೇ ಇದ್ದ ರಾಕಿ, "ಬಹುಶ: ನಾಳೆ ಬರುತ್ತಾರೆ ಎನಿಸುತ್ತೆ. ಲೈಟ್ಸ್ ಆಫ್ ಆಯ್ತಲ್ಲ" ಎಂದಿದ್ದಾರೆ. ಆಗ ರಾಜಣ್ಣ , ಅಲ್ಲ ನಮಗೆ ಇಷ್ಟೊಂದು ತಳಮಳ ಆಗುತ್ತಾ ಇದೆ. ಇನ್ನು ಅಲ್ಲಿರುವ ಅವರಿಗೆ ಇನ್ನೆಷ್ಟು ತಳಮಳವಾಗುತ್ತದೆ ಎಂದಿದ್ದಾರೆ. ಆಗ ರಾಕಿ ನೀವು ಎಷ್ಟೇ ಕಾದರೂ ಅವರು ಬರುವ ಸಮಯಕ್ಕೆ ಬರುತ್ತಾರೆ. ಇಷ್ಟೊಂದು ಓಡಾಡಿದರು ಪ್ರಯೋಜನವಿಲ್ಲ ಎಂದಿದ್ದಾರೆ. ಆಗ ಅನುಪಮಾ, ಅದೇ ಫಿಲಿಂಗ್ನಲ್ಲಿ ಮಲಗಿಕೊಳ್ಳಿ ಸಖತ್ತಾಗಿರುತ್ತೆ ಫೀಲಿಂಗ್ಸ್ ಎಂದಿದ್ದಾರೆ.

ರಾಜಣ್ಣನ ವೈಫ್ ಕಂಡು ಫುಲ್ ಖುಷಿ
ರಾಜಣ್ಣ ಅದೇ ಬೇಸರದಲ್ಲಿ ಮಲಗಿಕೊಂಡೇ ಬಿಟ್ಟರು. ಆದರೂ ನಿದ್ದೆ ಬಂದಂತೆ ಕಾಣಲಿಲ್ಲ. ಲೈಟ್ಸ್ ಆಫ್ ಆಗಿದ್ದಕ್ಕೆ ಮಲಗುವ ಸಮಯವಾಗಿರಬಹುದು ಎಂದು ಥಿಂಕ್ ಮಾಡಿ ಮಲಗಿದ್ದಾರೆ. ಆದರೆ ಮನೆಯ ಇನ್ನೊಂದು ಕಡೆ ಲೈಟ್ಸ್ ಆನ್ ಆಗಿತ್ತು. ರಾಜಣ್ಣ ಅವರ ಹೆಂಡತಿ ಬರುವುದಕ್ಕಾಗಿಯೇ ಆ ರೀತಿಯ ವಾತಾವರಣವನ್ನು ಕ್ರಿಯೇಟ್ ಮಾಡಿದ್ದರು ಎನ್ನುವುದು ಸ್ಪಷ್ಟವಾಗುತ್ತಿದೆ.

ಹೆಂಡತಿಯನ್ನು ಕಂಡ ಖುಷಿಯಲ್ಲಿ ರಾಜಣ್ಣ
ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ'ಯಲ್ಲಿ ಮಾತನಾಡಿಸುತ್ತಿದ್ದಾಗ ನಿಮ್ಮ ಹೆಂಡತಿ, ಈಗ ಒಳಗೆ ಬಂದರೆ ಏನು ಹೇಳಬಹುದು ಎಂದು ಪ್ರಶ್ನಿಸಿದ್ದರು. ಆಗ ರಾಜಣ್ಣ, ನಾನು ದೀಪಿಕಾ ದಾಸ್ ಹಿಂದೆ ಹಿಂದೆ ತಿರುಗುವ ವಿಚಾರಕ್ಕೆ ಪ್ರಶ್ನೆ ಮಾಡಬಹುದು ಎಂದು ಹೇಳಿದ್ದರು. ಇದೀಗ ಮನೆಗೆ ಹೆಂಡತಿಯ ಆಗಮನವಾಗಿದೆ. ಕತ್ತಲಾಗಿದೆ ಎಂದು ಮಲಗಿದ್ದ ರಾಜಣ್ಣನ ಹೆಂಡತಿ ಮನೆಯೊಳಗೆ ಬರುತ್ತಿದ್ದಂತೆ ಎಲ್ಲರೂ ಸ್ವಾಗತ ಮಾಡಿದರು. ನಿಮಗಾಗಿ ಕಾದು ಕಾದು ಸುಸ್ತಾಗಿದ್ದರು ಎಂದು ಹೇಳಿದರು. ಅವರನ್ನು ಒಂದು ಕಡೆ ಕೂರಿಸಿ, ಮನೆಯವರೆಲ್ಲ ಗಲಾಟೆ ಮಾಡುವುದಕ್ಕೆ ಶುರು ಮಾಡಿದರು. ಏನಿದು ಸರಿಯಾಗಿ ಕ್ಲೀನ್ ಮಾಡಿಲ್ಲ ಎಂದರು. ರಾಜಣ್ಣ ಮಲಗಿದ್ದ ಜಾಗದಿಂದ ಎದ್ದು, ಏನಾಗುತ್ತಿದೆ ಎಂದು ಬಂದು ನೋಡಿದರೆ ಎದುರಿಗೆ ಹೆಂಡತಿ ಕೂತಿದ್ದಾರೆ. ಅದನ್ನು ಕಂಡು ಹೌಹಾರಿ ಹೋದ ರಾಜಣ್ಣ, ಹೆಂಡತಿಯನ್ನು ಎತ್ತಿ ಮುದ್ದಾಡಿದ್ದಾರೆ. ಒಂದು ರೋಸ್ ಹಿಡಿದುಕೊಂಡು ಹೆಂಡತಿಯ ಜೊತೆಗೆ ಯೋಗ ಕ್ಷೇಮ ವಿಚಾರಿಸುತ್ತಿದ್ದಾರೆ. "ದೀಪಿಕಾ ಜೊತೆ ಇದ್ರೆ ನಾನ್ಯಾಕೆ ನಿಮಗೆ ಕಾಲೆಳೆಯುತ್ತೀನಿ" ಎಂದು ಕೇಳಿ ನಗಿಸಿದ್ದಾರೆ.