For Quick Alerts
  ALLOW NOTIFICATIONS  
  For Daily Alerts

  BBK9: ಅನುಪಮಾ ಕ್ಯಾಪ್ಟನ್ ಆದ ಘಳಿಗೆನೇ ಸರಿ ಇಲ್ಲ.. ಯಾವ ಟಾಸ್ಕ್ ಆಡಿಸಿದರೂ ಬರೀ ಜಗಳ!

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಎಂಬುದು ಸದಸ್ಯರ ಕನಸಾಗಿರುತ್ತದೆ. ಕ್ಯಾಪ್ಟನ್ ಆದಾಗ ಒಂದಷ್ಟು ವಿಶೇಷ ಸವಲತ್ತುಗಳು ಸಿಗುತ್ತವೆ. ಸವಲತ್ತಿಗಾಗಿ ಎನ್ನುವುದಕ್ಕಿಂತ ಕ್ಯಾಪ್ಟನ್ ಆದರೆ ಅದೊಂದು ಗತ್ತು ಇದ್ದೆ ಇರುತ್ತದೆ. ಆ ಗತ್ತಿಗಾಗಿಯೂ ಕ್ಯಾಪ್ಟನ್ ಆಗಬೇಕು ಎಂಬ ಬಯಕೆ ಹಲವರದ್ದಾಗಿರುತ್ತದೆ. ಇನ್ನು ಮನೆ ಮಂದಿಯ ಸದಸ್ಯರಿಗೆ ಹಲವರಿಗೆ ಈ ಅವಕಾಶ ಸಿಗುತ್ತದೆ. ಇನ್ನು ಹಲವರಿಗೆ ಈ ಅವಕಾಶ ಸಿಗುವುದಿಲ್ಲ. ಈ ವಾರ ಅನುಪಮಾಗೆ ಈ ಅವಕಾಶ ಸಿಕ್ಕಿದೆ.

  ಕ್ಯಾಪ್ಟನ್ ಆದವರು ಫೇವರಿಸಂ ಎನ್ನುವ ಆರೋಪವನ್ನು ಹೆದರಿಸಿದ್ದಾರೆ. ಈ ವಾರದ ಕ್ಯಾಪ್ಟನ್ ಆಗಿದ್ದ ಅನುಪಮಾಗೂ ಈ ಸಮಸ್ಯೆ ಮೊದಲಿಗೆ ಎದುರಾಗಿತ್ತು. ಅದಕ್ಕೆಂದು ಕಣ್ಣೀರನ್ನು ಹಾಕಿದ್ದಾರೆ. ಆದರೆ, ಅನುಪಮಾ ಅದನ್ನೆಲ್ಲಾ ನಿವಾರಿಸಿಕೊಂಡು ಮುಂದೆ ಸಾಗಿದ್ದಾರೆ. ಆದರೂ ಅನುಪಮಾ ಕ್ಯಾಪ್ಟನ್ ಆದಾಗಿನಿಂದಲೂ ಬರೀ ಜಗಳವೇ ಆಗುವಂತ ಟಾಸ್ಕ್ ಎದುರಾಗುತ್ತಿರುವುದು ನೋಡುಗರಿಗೆ ಪಾಪ ಎನಿಸಿದೆ.

  ಕನ್ನಡಪರ ಹೋರಾಟಗರರ ಬಗ್ಗೆ ಮಾತು: ಪ್ರಶಾಂತ್ ಸಂಬರ್ಗಿ ವಿರುದ್ಧ ಪ್ರತಿಭಟನೆ!ಕನ್ನಡಪರ ಹೋರಾಟಗರರ ಬಗ್ಗೆ ಮಾತು: ಪ್ರಶಾಂತ್ ಸಂಬರ್ಗಿ ವಿರುದ್ಧ ಪ್ರತಿಭಟನೆ!

  ಬಜರ್ ಒತ್ತಿದವರು ಯಾರು ಎಂಬುದೇ ಟೆನ್ಶನ್

  ಬಜರ್ ಒತ್ತಿದವರು ಯಾರು ಎಂಬುದೇ ಟೆನ್ಶನ್

  ಕ್ಯಾಪ್ಟನ್ ಆದವರು ಆಟಗಳ ನಿಯಮವನ್ನು ಹೇಳ ಬೇಕು. ಹಾಗೆ ಮುಂದೆ ನಿಂತು ಆಡಲು ಬಹುದು. ಆಟ ಆಡಿದವರನ್ನು ಸರಿಯಾಗಿ ಅಂದಾಜಿಸಬೇಕು. ಅನುಪಮಾ ಕ್ಯಾಪ್ಟನ್ ಆದಾಗಿನಿಂದ ಇದು ಬಹಳ ಟಫ್ ಎನಿಸಿದೆ. ಯಾಕಂದ್ರೆ ಟಾಸ್ಕ್‌ಗೆ ಹೋಗುವುದಕ್ಕೂ ಮೊದಲು ಬಜರ್ ಒತ್ತಬೇಕು. ಹೀಗೆ ಬಜರ್ ಒತ್ತುವಾಗ, ಒತ್ತಿದವರು ಯಾರು ಎಂಬುದೇ ತಿಳಿಯತ್ತಿಲ್ಲ. ಇದೇ ಕಾರಣಕ್ಕೆ ಜಗಳಗಳು ನಡೆಯುತ್ತಿವೆ.

  ಅನುಪಮಾ ಫುಲ್ ಕನ್ಫ್ಯೂಸನ್

  ಅನುಪಮಾ ಫುಲ್ ಕನ್ಫ್ಯೂಸನ್

  ಇವತ್ತು ಕೂಡ ಬಜರ್ ಒತ್ತುವ ಟಾಸ್ಕ್ ಇತ್ತು. ನಿನ್ನೆ ಮೊನ್ನೆಯೆಲ್ಲಾ ಇಬ್ಬರಿಬ್ಬರೇ ಬಂದು ಮೊದಲು ಯಾರು ಬಜರ್ ಒತ್ತುತ್ತಾರೆ ಎಂಬ ಆಟವಿತ್ತು. ಆದರೆ, ಇಂದು ಎಲ್ಲಾ ಉಲ್ಟಾ. ಎಲ್ಲರೂ ಒಟ್ಟಾಗಿ ಓಡಿ ಬಂದು ಬಜರ್ ಒತ್ತಬೇಕಾಗಿತ್ತು. ಹಾಗೇ ಬಂದಾಗ ಅನುಪಮಾಗೆ ಯಾರು ಬಜರ್ ಒತ್ತಿದವರು ಎಂಬುದನ್ನು ಅಂದಾಜಿಸುವುದಕ್ಕೂ ಆಗುತ್ತಿಲ್ಲ. ಗೊಬ್ಬರಗಾಲ ಒತ್ತಿದ್ದು ಅಂತ ಅನುಪಮಾ ಹೇಳಿದಾಗ ಇಲ್ಲ ನಾನು ಒತ್ತಿದ್ದು ಅಂತ ದೀಪಿಕಾ ದಾಸ್ ಹೇಳುತ್ತಿದ್ದಾರೆ. ಈಗ ಅನುಪಮಾಗೆ ತಲೆ ಮೇಲೆ ಕೈಹೊತ್ತು ಯೋಚನೆ ಮಾಡಬೇಕಾದ ಸ್ಥಿತಿ ಉಂಟಾಗಿದೆ. ಅನುಪಮಾ ಕೂಡ ನೇರವಾಗಿಯೇ ಎಲ್ಲಾ ಒಟ್ಟಿಗೆ ಬಂದಿದ್ದಕ್ಕೆ ನನಗೆ ಗೊತ್ತಾಗಿಲ್ಲ ಎಂದು ಹೇಳಿದ್ದಾರೆ.

  ಅನುಪಮಾಗೆ ರಾಜಣ್ಣನದ್ದೇ ಚಿಂತೆ!

  ಅನುಪಮಾಗೆ ರಾಜಣ್ಣನದ್ದೇ ಚಿಂತೆ!

  ಇತ್ತೀಚೆಗಷ್ಟೇ ಇದೇ ರೀತಿ ಬಜರ್ ಒತ್ತುವ ವಿಚಾರಕ್ಕೆ ಅನುಪಮಾ ಕೊಟ್ಟ ಸ್ಟೆಟ್ಮೆಂಟ್ ರಾಜಣ್ಣನನ್ನು ಕೆರಳಿಸಿತ್ತು. ಸಂಬರ್ಗಿ ಮೊದಲು ಬಜರ್ ಒತ್ತಿದವರು ಎಂದಾಗ ದೇವರು ಈ ಅನ್ಯಾಯ ನೋಡಿಕೊಳ್ಳುತ್ತಾರೆ ಎಂದು ಹೇಳಿ ತನ್ನ ಲಗೇಜ್ ಪ್ಯಾಕ್ ಮಾಡಿಕೊಂಡು ಹೊರಟು ನಿಂತಿದ್ದರು. ಈಗ ಈ ಬಜರ್ ಒತ್ತಿದ್ದರಲ್ಲಿ ದೀಪಿಕಾ, ಗೊಬ್ಬರಗಾಲ, ರಾಜಣ್ಣ ಮೂವರು ಇದ್ದಾರೆ. ಅನುಪಮಾಗೆ ಇದೊಂದು ದೊಡ್ಡ ಚಾಲೆಂಜ್ ಆಗಿದೆ. ಮೊದಲೇ ನನಗೆ ಅನ್ಯಾಯವಾಗಿರುವುದರಿಂದ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ರಾಜಣ್ಣ ಹೇಳಿದ್ದಾರೆ. ಅದಕ್ಕೆ ಅನುಪಮಾ, ಈಗ ನಾನು ಹೇಳಿದ್ರೆ ನೀವು ಇನ್ನೊಂದು ಬ್ಯಾಗ್ ತೆಗೆದುಕೊಳ್ಳುತ್ತೀರಾ, ನಾನು ಹೋಗ್ತೀನಿ ಅಂತಿರಾ ಎಂದಿದ್ದಾರೆ.

  ಅನುಪಮಾ ಮಾತಾಡುವಾಗ ಆರ್ಯವರ್ಧನ್ ಮಧ್ಯಸ್ಥಿಕೆ..!

  ಅನುಪಮಾ ಮಾತಾಡುವಾಗ ಆರ್ಯವರ್ಧನ್ ಮಧ್ಯಸ್ಥಿಕೆ..!

  ಮೊದಲೇ ಯಾರು ಹೊಡೆದಿದ್ದು ಎಂಬುದನ್ನು ತೀರ್ಮಾನ ತೆಗೆದುಕೊಳ್ಳುವುದಕ್ಕೆ ಆಗದೆ ಅನುಪಮಾ ಗೊಂದಲದ ಗೂಡಿನಲ್ಲಿದ್ದಾರೆ. ಇದರ ನಡುವೆ ಆರ್ಯವರ್ಧನ್ ಇಬ್ಬರು ಹೊಡೆದರು ಎಂದು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ಗೊಬ್ಬರಗಾಲ ಆರ್ಯವರ್ಧನ್ ಮೇಲೆ ಕೋಪಗೊಂಡಿದ್ದಾರೆ. ಕ್ಯಾಪ್ಟನ್ ಆದವರು ಹೇಳುತ್ತಾರೆ ನೀವೇನ್ರಿ ಸುಮ್ಮನೆ ಕೂತುಕೊಳ್ಳಿ ಎಂದಿದ್ದಾರೆ. ಅರುಣ್ ಸಾಗರ್ ಗೆ ಕೂಡ ಕೋಪ ಬಂದಿದ್ದು, ಡಿಸಿಷನ್ ಕೊಡೋಕೆ ಅವರಿದ್ದಾರೆ ಎಂದು ಹೇಳಿದ್ದಾರೆ. ನೀವು ಎಲ್ಲಿದ್ದಿರಾ? ಅಲ್ಲಿದ್ದವರಿಗೆ ಕಾಣಲ್ವ. ಕ್ಯಾಪ್ಟನ್ ಅಲ್ಲಿ ಇರೋದು ಇಲ್ಲಿ ಅಲ್ಲ, ಅಂತ ಗೊಬ್ಬರಗಾಲ ಆಕ್ರೋಶದ ಧ್ವನಿಯಲ್ಲಿ ಹೇಳಿದ್ದಾರೆ.

  BBK9: ಆರ್ಯವರ್ಧನ್ ಡಬಲ್ ಗೇಮ್‌ಗೆ ಮನೆಯವರಿಂದ್ಲೇ ಕ್ಲಾಸ್.. ನಗುತ್ತಲೇ ಉತ್ತರಿಸಿದ ಗುರೂಜಿ !BBK9: ಆರ್ಯವರ್ಧನ್ ಡಬಲ್ ಗೇಮ್‌ಗೆ ಮನೆಯವರಿಂದ್ಲೇ ಕ್ಲಾಸ್.. ನಗುತ್ತಲೇ ಉತ್ತರಿಸಿದ ಗುರೂಜಿ !

  English summary
  Bigg Boss Kannada 9 November 2nd Episode Written Update. Here is the details about Anupama Captaincy, Know More.
  Thursday, November 3, 2022, 20:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X