For Quick Alerts
  ALLOW NOTIFICATIONS  
  For Daily Alerts

  BBK9: ಕ್ಯಾಪ್ಟನ್ ಆಗಿದ್ದವರಿಗೆ ಜೈಲು ಶಿಕ್ಷೆ ಯಾಕೆ? ಕಣ್ಣೀರಿಟ್ಟ ಅನುಪಮಾ!

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ವಾರಕ್ಕೆ ಒಬ್ಬರಂತೆ ಕ್ಯಾಪ್ಟನ್ ಸ್ಥಾನವನ್ನು ಅಲಂಕರಿಸುತ್ತಾರೆ. ಹೀಗೆ ಅಲಂಕರಿಸಿದವರು ಗೇಮ್ ಆಡುವುದರ ಜೊತೆಗೆ ಮನೆ ಮಂದಿ ಆಡುವುದನ್ನು ನೋಡಬೇಕಾಗುತ್ತದೆ. ಯಾರು ಸೋತರು, ಯಾರು ಗೆದ್ದರು ಎಂಬ ನಿರ್ಧಾರವನ್ನು ಕ್ಯಾಪ್ಟನ್ ತೆಗೆದುಕೊಳ್ಳಬೇಕಾಗುತ್ತದೆ. ಮನೆಯ ಒಂದಷ್ಟು ಜವಾಬ್ದಾರಿ ಕ್ಯಾಪ್ಟನ್ ಮೇಲೆ ಇರುತ್ತದೆ. ಈ ಕ್ಯಾಪ್ಟನ್ ಆದಂತಹ ಸಮಯದಲ್ಲಿ ಮನೆಯವರನ್ನು ಹೇಗೆ ನಿಭಾಯಿಸುತ್ತೀನಿ ಎಂಬುದು ಬಹಳ ಮುಖ್ಯವಾಗುತ್ತದೆ.

  ಹೀಗೆ ಕ್ಯಾಪ್ಟನ್ ಆದವರು ಸರಿಯಾಗಿ ಜವಾಬ್ದಾರಿ ನಿಭಾಯಿಸುತ್ತಿಲ್ಲ ಎಂಬ ಕಾರಣಕ್ಕೆ ಕಳಪೆ ಬೋರ್ಡ್ ಹಾಕಿಕೊಂಡು ಜೈಲು ಸೇರುತ್ತಿದ್ದಾರೆ. ಈ ಬಾರಿ ಅನುಪಮಾ ಗೌಡ ಕಳಪೆ ಬೋರ್ಡ್ ತೊಟ್ಟಿದ್ದಾರೆ. ಅನುಪಮಾ ಕ್ಯಾಪ್ಟನ್ ಆದಾಗಿನಿಂದಲೂ ಕೂಡ ಮನೆಯಲ್ಲಿ ಬಜರ್ ಒತ್ತುವ ವಿಚಾರಕ್ಕೆ ಸಾಕಷ್ಟು ಗಲಾಟೆಗಳು ನಡೆದಿವೆ. ಅನುಪಮಾ ನಿರ್ಧಾರವನ್ನೇ ಗೊಂದಲದಲ್ಲಿ ತೆಗೆದುಕೊಂಡಿರುವುದೇ ಕಳಪೆಗೆ ಕಾರಣವಾಯಿತಾ ಎಂಬ ಪ್ರಶ್ನೆಗಳು ಎದ್ದಿವೆ.

  Kannada Serials TRP : ಈ ವಾರ ನಂಬರ್ ಒನ್ ಸ್ಥಾನದಲ್ಲಿರೋ ಧಾರಾವಾಹಿ ಯಾವುದು?Kannada Serials TRP : ಈ ವಾರ ನಂಬರ್ ಒನ್ ಸ್ಥಾನದಲ್ಲಿರೋ ಧಾರಾವಾಹಿ ಯಾವುದು?

  ಓಟಿಟಿಗಿಂತ ಹಿಂದೆ ಕ್ಯಾಪ್ಟನ್ ಆದವರೇ ಬಚಾವ್..!

  ಓಟಿಟಿಗಿಂತ ಹಿಂದೆ ಕ್ಯಾಪ್ಟನ್ ಆದವರೇ ಬಚಾವ್..!

  ಈ ಹಿಂದೆಯೆಲ್ಲಾ ಕಳಪೆ ಮತ್ತು ಉತ್ತಮ ಎರಡಕ್ಕೂ ಕ್ಯಾಪ್ಟನ್ ಅನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಈ ಬಾರಿಯ ಓಟಿಟಿ ಸೀಸನ್‌ನಲ್ಲಿ ರೂಪೇಶ್ ಶೆಟ್ಟಿ ಈ ಪ್ರಶ್ನೆ ಎತ್ತಿದ್ದರು. ಅವರಿಗೆ ಎಲ್ಲರೂ ಉತ್ತಮ ಕೊಡಲೇಬೇಕಾದ ಅನಿವಾರ್ಯ ಉಂಟಾಗಿತ್ತು. ಆದರೆ, ಕ್ಯಾಪ್ಟನ್ ಎಂಬ ಕಾರಣಕ್ಕೆ ಅವರ ಹೆಸರನ್ನು ತೆಗೆದುಕೊಂಡು ಬೇರೆಯವರಿಗೆ ಪದಕ ಹಾಕುತ್ತಿದ್ದರು. ಆಗ ವಾರದ ಕಥೆಯಲ್ಲಿ ಸುದೀಪ್ ಅವರನ್ನೇ ಕೇಳಿದಾಗ, ಬಿಗ್ ಬಾಸ್ ಎಲ್ಲಿಯೂ ಕ್ಯಾಪ್ಟನ್ ಹೆಸರು ತೆಗೆದುಕೊಳ್ಳಬೇಡಿ ಎಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಅದಾದ ಬಳಿಕ ಕ್ಯಾಪ್ಟನ್‌ಗೂ ಉತ್ತಮ ಮತ್ತು ಕಳಪೆ ಪರ್ಫಾಮೆನ್ಸ್ ನೀಡಿ ಕ್ರೆಡಿಟ್ ಹೋಗುತ್ತಿದೆ.

  ಅನುಪಮಾಗೆ ಸಿಕ್ತು ಕಳಪೆ ಪಟ್ಟ..!

  ಅನುಪಮಾಗೆ ಸಿಕ್ತು ಕಳಪೆ ಪಟ್ಟ..!

  ವಾರಪೂರ್ತಿ ಅತ್ಯುತ್ತಮವಾಗಿ ಆಡಿದವರನ್ನು ಉತ್ತಮ, ಸರಿಯಾಗಿ ಆಡದವರನ್ನು ಕಳಪೆ ಸ್ಥಾನಕ್ಕೆ ಹಾಕುತ್ತಾರೆ. ಈ ವಾರ ಕ್ಯಾಪ್ಟನ್ ಆಗಿದ್ದ ಅನುಪಮಾ ಕಳಪೆ ಸ್ಥಾನ ಪಡೆದು ಜೈಲು ಸೇರಿದ್ದಾರೆ. ಅವರ ಕ್ಯಾಪ್ಟನ್ಸಿಯಲ್ಲಿ ಮನೆ ಮಂದಿಗೆ ಖುಷಿಯಾದಂತೆ ಕಾಣುತ್ತಿಲ್ಲ. ಹೀಗಾಗಿ ಮನೆಯೊಳಗಿನ ಸಾಕಷ್ಟು ಜನ ಅನುಪಮಾಗೆ ಕಳಪೆ ಪ್ರದರ್ಶನ ಅನ್ನೋ ಪಟ್ಟ ನೀಡಿದ್ದಾರೆ.

  ಅನುಪಮಾ ಕಳಪೆ ಆಟ ಆಡಿದರಾ..?

  ಅನುಪಮಾ ಕಳಪೆ ಆಟ ಆಡಿದರಾ..?

  ಬಿಗ್ ಬಾಸ್ ಮನೆಯಲ್ಲಿ ಒಂದು ಸಂಪ್ರದಾಯವಿದೆ. ಕಳಪೆ ಕೊಟ್ಟರು, ಉತ್ತಮ ಕೊಟ್ಟರು, ನಾಮಿನೇಟ್ ಮಾಡಿದರು ವಿತ್ ರೀಸನ್ ಹೇಳಬೇಕು. ಈಗ ಅನುಪಮಾ ವಿಚಾರದಲ್ಲಿ ಮನೆ ಮಂದಿ ಹೇಳಿದ್ದು ಹೀಗೆ, ದಿವ್ಯಾ, ಅರುಣ್ ಸಾಗರ್, ರೂಪೇಶ್ ಶೆಟ್ಟಿ, ಸಂಬರ್ಗಿ ಅನುಪಮಾ ಹೆಸರು ತೆಗೆದುಕೊಂಡಿದ್ದಾರೆ. ಅವರಿಗೆ ಗೊಂದಲ ಆದಾಗ ಬಿಗ್ ಬಾಸ್ ಬಳಿ ಹೋಗುತ್ತಾರೆ. ಆದರೆ, ಅದೇ ರಾಜಣ್ಣ ಅವರ ಹತ್ತಿರ ಇದ್ದಾಗಲೂ ಅವರು ಹೋಗಬಹುದಿತ್ತೇನೋ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಇನ್ನು ಡೈನಿಂಗ್ ಟೇಬಲ್ ಮೇಲೆ ಕೂತಿದ್ದ ಕಾವ್ಯಾ ಹಾಗೂ ಅರುಣ್ ಸಾಗರ್, ಬಜರ್ ಒತ್ತುವುದನ್ನು ಹೇಳುವುದಕ್ಕೆ ಮಾತ್ರ ಅಂತಿಮ ತೀರ್ಮಾನ ಕೊಟ್ಟಿರುವುದು. ಬದಲು ಮಾಡುವ ತೀರ್ಮಾನ ಕೊಟ್ಟಿರಲಿಲ್ಲ ಎಂದಿದ್ದಾರೆ.

  ಗೊಬ್ಬರಗಾಲ ಮತ್ತೆ ಬೆಸ್ಟ್

  ಗೊಬ್ಬರಗಾಲ ಮತ್ತೆ ಬೆಸ್ಟ್

  ಈ ಬಾರಿ ವಿನೋದ್ ಗೊಬ್ಬರಗಾಲ ಅವರಿಗೆ ಬೆಸ್ಟ್ ಸಿಕ್ಕಿದೆ. ಇದು ಎರಡನೇ ಬಾರಿಗೆ ಅವರಿಗೆ ಬೆಸ್ಟ್ ಸಿಗುತ್ತಿರುವುದು. ಕಾಮಿಡಿ ಮಾಡುತ್ತಾ ಎಲ್ಲರನ್ನು ರಂಜಿಸುವ ಗೊಬ್ಬರಗಾಲ ಮನೆ ಕೆಲಸ ಮಾಡುವುದಕ್ಕೂ ಅಷ್ಟೇ ಹುಮ್ಮಸ್ಸು ತೋರಿಸುತ್ತಾರೆ. ಆಟ ಆಡುವುದಕ್ಕೂ ಅಷ್ಟೇ ಜೋಶ್ ನಲ್ಲಿ ಇರುತ್ತಾರೆ. ಹೀಗಾಗಿ ಮನೆ ಮಂದಿಯೆಲ್ಲಾ ಸೇರಿಕೊಂಡು ಗೊಬ್ಬರಗಾಲ ಅವರಿಗೆ ಬೆಸ್ಟ್ ಪರ್ಫಾಮರ್ ಎಂಬ ಪಟ್ಟ ನೀಡಿದ್ದಾರೆ.

  BBK9: ಅನುಪಮಾ ಕ್ಯಾಪ್ಟನ್ ಆದ ಘಳಿಗೆನೇ ಸರಿ ಇಲ್ಲ.. ಯಾವ ಟಾಸ್ಕ್ ಆಡಿಸಿದರೂ ಬರೀ ಜಗಳ!BBK9: ಅನುಪಮಾ ಕ್ಯಾಪ್ಟನ್ ಆದ ಘಳಿಗೆನೇ ಸರಿ ಇಲ್ಲ.. ಯಾವ ಟಾಸ್ಕ್ ಆಡಿಸಿದರೂ ಬರೀ ಜಗಳ!

  English summary
  Bigg Boss Kannada 9 November 4th Episode Written Update. Here is the details about Anupama Poor Performance.
  Friday, November 4, 2022, 19:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X