For Quick Alerts
  ALLOW NOTIFICATIONS  
  For Daily Alerts

  BBK9: ಈ ವಾರ ಸಂಬರ್ಗಿಗೆ ಕಳಪೆ ಪಟ್ಟ ಫಿಕ್ಸ್..? ಕಿಚ್ಚನ ಮಾತಿಗೆ ನಗೆಗಡಲಲ್ಲಿ ತೇಲಿದ ಮನೆ ಮಂದಿ!

  By ಎಸ್ ಸುಮಂತ್
  |

  ವಾರದ ಕಥೆ ಕಿಚ್ಚನ ಜೊತೆ ಹಾಗೂ ಸೂಪರ್ ಸಂಡೇ ವಿತ್ ಸುದೀಪ ಸಂಚಿಕೆಗಳು ನೋಡುಗರಿಗೆ ಸಖತ್ ಮಜಾ ನೀಡುತ್ತವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆಂದ್ರೆ ವಾರ ಪೂರ್ತಿ ನಡೆದ ಘಟನೆಗಳನ್ನು ತೆಗೆದುಕೊಂಡು ಸುದೀಪ್ ಒಂದಷ್ಟು ಬುದ್ದಿ ಹೇಳುತ್ತಾರೆ. ಒಂದಷ್ಟು ಕಾಲೆಳೆಯುತ್ತಾರೆ. ಒಂದಷ್ಟು ಸೀರಿಯಸ್ ಮಾತುಕತೆಗಳು ಕೂಡ ನಡೆಯುತ್ತವೆ. ಈ ವಾರವೂ ಅಂತಹ ಸ್ವಾರಸ್ಯಕರ ವಿಚಾರಗಳೇ ನಡೆದಿವೆ.

  ಅದರಲ್ಲೂ ಈ ವಾರ ಪ್ರಶಾಂತ್ ಸಂಬರ್ಗಿಯ ವಿಚಾರಕ್ಕೆ ಮನೆ ಸದಸ್ಯರು ಮಾತ್ರ ಅಲ್ಲ ನೋಡುಗರನ್ನು ನಕ್ಕು ನಲಿಸಿತ್ತು. ಈ ವಾರ ಸಂಬರ್ಗಿಯ ಕ್ಯಾಪ್ಟನ್ಸಿಯಲ್ಲಿ ಮನೆ ಮಂದಿ ಹೇಗೆ ವಾರದೂಡುವುದು ಎಂಬ ಚಿಂತೆಯಲ್ಲಿದ್ದಾರೆ. ಅದನ್ನು ಈಗ ಕಿಚ್ಚನ ಮುಂದೆ ಹೊರ ಹಾಕಿದ್ದಾರೆ.

  ಸಂಬರ್ಗಿಗಿಗೂ ಕಳಪೆ ಪಟ್ಟ ಸಿಗುತ್ತಾ..?

  ಸಂಬರ್ಗಿಗಿಗೂ ಕಳಪೆ ಪಟ್ಟ ಸಿಗುತ್ತಾ..?

  ಇಷ್ಟು ಸೀಸನ್‌ನಲ್ಲಿ ಯಾವತ್ತಿಗೂ ಕ್ಯಾಪ್ಟನ್ ಆದವರು ಕಳಪೆ ಪಟ್ಟ ತೆಗೆದುಕೊಂಡಿದ್ದೇ ಇಲ್ಲ. ಯಾಕೆಂದರೆ ಕ್ಯಾಪ್ಟನ್ ಆದವರನ್ನು ಕಳಪೆ ಅಂತ ಆಯ್ಕೆ ಮಾಡಿಕೊಳ್ಳುತ್ತಾ ಇರಲಿಲ್ಲ. ಆದ್ರೆ ಓಟಿಟಿ ಸೀಸನ್ ಮುಗಿದ ಮೇಲೆ ಕ್ಯಾಪ್ಟನ್ ಅನ್ನು ಕಳಪೆ, ಉತ್ತಮ ಎರಡಕ್ಕೂ ಆಯ್ಕೆ ಮಾಡುತ್ತಿದ್ದು, ಈ ಎರಡು ವಾರದಿಂದ ಕ್ಯಾಪ್ಟನ್ ಆದವರೇ ಕಳಪೆ ಪಟ್ಟ ಹೊತ್ತು ಜೈಲು ಸೇರಿದ್ದಾರೆ. ದೀಪಿಕಾ ದಾಸ್, ಅನುಪಮಾ ಈಗಾಗಲೇ ಶಿಕ್ಷೆ ಅನುಭವಿಸಿದ್ದು, ಈಗ ಪ್ರಶಾಂತ್ ಸಂಬರ್ಗಿ ಸರದಿಯಾಗಿದೆ.

  ಸಂಬರ್ಗಿಗೆ ಕಳಪೆ ಪಟ್ಟ ಕೊಡುವುದು ಫಿಕ್ಸ್..!

  ಸಂಬರ್ಗಿಗೆ ಕಳಪೆ ಪಟ್ಟ ಕೊಡುವುದು ಫಿಕ್ಸ್..!

  ಸೂಪರ್ ಸಂಡೇ ವಿತ್ ಸುದೀಪ ಶೋನಲ್ಲಿ ಕಿಚ್ಚ ಸುದೀಪ್ ಮನೆ ಮಂದಿಗೆ ಪ್ರಶಾಂತ್ ಸಂಬರ್ಗಿ ಕ್ಯಾಪ್ಟನ್ ಆಗಿದ್ದಾರೆ. ಕಳಪೆ ಪಟ್ಟ ತೆಗೆದುಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಮೊದಲಿಗೆ ಉತ್ತರಿಸಿದ ದಿವ್ಯಾ ಉರುಡುಗ, ನಾರ್ಮಲ್ ಆಗಿದ್ದಾಗಲೇ ಬೇಡದ ಪರಿಸ್ಥಿತಿ ಸೃಷ್ಟಿಸುತ್ತಾರೆ. ಇನ್ನು ಈಗ ಕ್ಯಾಪ್ಟನ್ ಆಗಿದ್ದಾರೆ. ಏನೇನೋ ಮಾಡಲು ಹೋಗಿ ಕಳಪೆ ಪಟ್ಟ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಇನ್ನು ರಾಜಣ್ಣ, ವರವೋ ಶಾಪವೋ ಗೊತ್ತಾಗುತ್ತಿಲ್ಲ. ದೀಪಿಕಾ, ವಿನೋದ್ ಕೊನೆಯಲ್ಲಿ ತಪ್ಪಿಸಿಕೊಂಡಿದ್ದಾರೆ. ಸಂಬರ್ಗಿ ಅದಾಗಲೇ ತಗಲಾಕಿಕೊಂಡಿದ್ದಾರೆ. ಸೋ ಪಕ್ಕ ಈ ವಾರ ತಗಲಾಕಿಕೊಳ್ಳುವ ಪರಿಸ್ಥಿತಿ ಇದೆ ಎಂದಿದ್ದಾರೆ. ಆರ್ಯವರ್ಧನ್, ಬೇಡ ಅಂದ್ರೇನೆ ಕಳಪೆ ಪಟ್ಟ ಬೀಳುತ್ತೆ. ಇನ್ನು ಈಗ ಅವರೇ ಹೋಗಿ ತಗಲಾಕಿಕೊಂಡಿದ್ದಾರೆ ಎಂದಿದ್ದಾರೆ.

  ದೀಪಿಕಾ ಹೇಳಿದ ಮಾತಿಗೆ ಕಿಚ್ಚ ಬಹುಪರಾಕ್

  ದೀಪಿಕಾ ಹೇಳಿದ ಮಾತಿಗೆ ಕಿಚ್ಚ ಬಹುಪರಾಕ್

  ಇನ್ನು ಪ್ರಶಾಂತ್ ಸಂಬರ್ಗಿ ವಿಚಾರಕ್ಕೆ ತಮ್ಮ ಅಭಿಪ್ರಾಯ ಹೇಳಿದ ದೀಪಿಕಾ ದಾಸ್, ನಾಮಿನೇಷನ್‌ನಲ್ಲಿ ಸಂಬರ್ಗಿ ಹೆಸರು ಮಿಸ್ ಆದ್ರೆ ಅವರ ಹೆಸರಿಗೆ ಒಂದು ಅವಮಾನ. ಟಾಸ್ಕ್ ಶುರುವಾದ್ರೆ ಕಳಪೆ ಅಂತಾಗುತ್ತಾರಾ? ಅಥವಾ ಕಳಪೆ ಪಟ್ಟ ಕೊಟ್ಟು ಯಾರನ್ನಾದರೂ ಕೂರಿಸುವುದಕ್ಕೆ ರೆಡಿಯಾಗಿದ್ದಾರಾ ಎಂದಾಗ, ಕಿಚ್ಚ ಸುದೀಪ್ "ಈಗ ಇಷ್ಟೊಂದು ವೋಟ್ ಬೀಳುತ್ತಾ ಇರುವುದನ್ನು ನೋಡಿದರೆ ನಿಮ್ಮ ಸೆಕೆಂಡ್ ಪಾಯಿಂಟ್ ಅನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ. ನಾನು ಎಸ್ಕೇಪ್ ಆಗ ಬೇಕಾದರೆ ಇನ್ನೊಬ್ಬರನ್ನು ಕಳಪೆ ಸ್ಥಾನಕ್ಕೆ ಕೂರಿಸಬೇಕು ಅಂತ ಯೋಚನೆ ಮಾಡುತ್ತಿದ್ದಾರೆ ಎಂದು ಸುದೀಪ್ ಕಾಮಿಡಿ ಮಾಡಿದಾಗ ದೀಪಿಕಾ, ಆ ಕಳಪೆ ಸ್ಥಾನಕ್ಕೆ ಕೂರುವುದಕ್ಕೆ ಅದಾಗಲೇ ಒಬ್ಬರು ರೆಡಿ ಇದ್ದಾರೆ ಸರ್. ಅವರು ರಾಜಣ್ಣ ಎಂದಾಗ, ರಾಜಣ್ಣ ಅವರು ಸ್ವಲ್ಪ ಬುದ್ಧಿವಂತರಾಗಿದ್ದಾರೆ. ಈ ವಾರ ಉತ್ತಮ ಪ್ರದರ್ಶನ ಬರಲಿಲ್ಲ ಅಂದ್ರು ಚಿಂತೆ ಇಲ್ಲ. ಅಲ್ಲಿ ಮಾತ್ರ ಸಿಕ್ಕಿ ಹಾಕಿಕೊಳ್ಳಲ್ಲ ಅಂತ ಸುದೀಪ್‌ಗೆ ಹೇಳಿದ್ದಾರೆ.

  ಶಾಪ ಮುಕ್ತರಾಗುತ್ತಾರಾ ಸಂಬರ್ಗಿ?

  ಶಾಪ ಮುಕ್ತರಾಗುತ್ತಾರಾ ಸಂಬರ್ಗಿ?

  ಇನ್ನು ಪ್ರಶಾಂತ್ ಸಂಬರ್ಗಿಯನ್ನು ಅದೇ ಪ್ರಶ್ನೆ ಕೇಳಿದಾಗ, ಕ್ಯಾಪ್ಟನ್ ಆದವರಿಗೆ ಇಲ್ಲಿ ಶಾಪ ಇದೆ ಸರ್. ಕಳಪೆ ತೊಟ್ಟು ಜೈಲಿಗೆ ಹೋಗುವುದಕ್ಕೆ. ಉಳಿದುಕೊಂಡರೆ ಈ ವಾರ ಖಂಡಿತ ಶಾಪ ಮುಕ್ತರನ್ನಾಗಿ ಮಾಡುತ್ತೇನೆ ಎಂದಿದ್ದಾರೆ. ಅದಕ್ಕೆ ಸುದೀಪ್ ಮತ್ತೆ ಕಾಲೆಳೆದಿದ್ದದು, ಅಯ್ಯೋ, ಆಲ್ ದಿ ಬೆಸ್ಟ್ ಎಂದಿದ್ದಾರೆ.

  ಸಂಬರ್ಗಿ ಗೇರ್ ಹಾಕೋ ಬಗ್ಗೆ ಚರ್ಚೆ

  ಸಂಬರ್ಗಿ ಗೇರ್ ಹಾಕೋ ಬಗ್ಗೆ ಚರ್ಚೆ

  ಸುದೀಪ್ ಸಂಬರ್ಗಿ ಬಗ್ಗೆ ಮತ್ತೊಂದು ಪ್ರಶ್ನೆ ಕೇಳಿದ್ದಾರೆ. ಯಾವಾಗ ಯಾವ ಗೇರ್‌ನಲ್ಲಿ ಹೋಗಬೇಕು ಎಂಬುದು ಸಂಬರ್ಗಿಗೆ ಚೆನ್ನಾಗಿ ಗೊತ್ತು ಎಂದಾಗ ಉತ್ತರಿಸಿದ ಅಮೂಲ್ಯ, ಅವರಿಗೆ ಯಾವಾಗ ಯಾವ ಗೇರ್ ಹಾಕಬೇಕು ಅಂತ ಗೊತ್ತು ಅಂದುಕೊಂಡಿದ್ದಾರೆ. ಆದ್ರೆ ಅವರು ರಾಂಗ್ ಗೇರ್ ಹಾಕುತ್ತಾರೆ. ಹೀಗಾಗಿ ಆ ಸ್ಟೆಟ್ಮೆಂಟ್‌ಗೆ ನೋ ಎಂದಿದ್ದಾರೆ. ಕುಳಿತು ಎಲ್ಲಾ ಅಬ್ಸರ್ವ್ ಮಾಡುತ್ತಾರೆ. ಅದರಲ್ಲೂ ನನ್ನನ್ನು ನೋಡುತ್ತಾರೆ. ಅವಕಾಶ ಸಿಕ್ಕಾಗ ಗೇರ್ ಹಾಕುತ್ತಾರೆ ಎಂದು ರಾಜಣ್ಣ ಹೇಳಿದ್ದಾರೆ. ಪ್ರಶಾಂತ್ ಯಾವ ಥರ ಅಂದ್ರೆ ರಾಜಣ್ಣ ಅವರ ಬಳಿ ಗಾಡಿ ತೆಗೆದುಕೊಂಡಿದ್ದು, ರಾಜಣ್ಣಗೆ ನೈಸ್ ಮಾಡಿ ಪೆಟ್ರೋಲ್ ಅವರ ಹತ್ತಿರನೇ ಹಾಕಿಸಿಕೊಂಡು ಮುಂದೆ ಹೋಗುತ್ತಾರೆ ಎಂಬ ಹೇಳಿಕೆಯನ್ನು ಅರುಣ್ ಸಾಗರ್ ಕೊಟ್ಟಾಗ ಕಿಚ್ಚ ಸಖತ್ ಟಾಂಗ್ ಕೊಟ್ಟಿದ್ದಾರೆ. ನೀವೂ ಏನು ಹೇಳುವುದಕ್ಕೆ ಹೊರಟ್ರಿ ಎಂದುಕೊಂಡೆ ಅಂದ್ರೆ, ಇವರ ಗಾಡಿಯಲ್ಲಿ ಪೆಟ್ರೋಲ್ ಇಲ್ಲ. ಅವರ ಗಾಡಿಯಲ್ಲಿ ಪೆಟ್ರೋಲ್ ಇದೆ. ರಾಜಣ್ಣ ನಾವೂ ನೀವೂ ಒಂದು ರೇಸ್‌ಗೆ ಹೋಗೋಣಾ ಅಂತ ಕರೀತಾರೆ. ಸ್ಟಾರ್ಟ್ ಅಂದ ಕೂಡಲೇ ರಾಜಣ್ಣ ನುಗ್ಗುತ್ತಾರೆ ಅಂತ ಕಿಚ್ಚ ನಗುತ್ತಲೇ ಎಲ್ಲರನ್ನು ನಗಿಸಿದ್ದಾರೆ.

  English summary
  Bigg Boss Kannada 9 November 6th Episode Written Update. Here is the details About Sambargi Captainship.
  Sunday, November 6, 2022, 22:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X