BBK9: ಮನೆಯವರಿಗೆಲ್ಲಾ ಕಿರಿಕಿರಿ ಕೊಟ್ಟ ರಾಜಣ್ಣ : ಟೈಗರ್ ಪ್ರಭಾಕರ್ ಸ್ಟೈಲ್‌ನಲ್ಲಿ ಫುಲ್ ಹವಾ..!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಪ್ರತಿನಿತ್ಯ ವಿಭಿನ್ನ ಎನಿಸುವಂತ ಟಾಸ್ಕ್ ಗಳು ಇದ್ದೆ ಇರುತ್ತವೆ. ಅದರಲ್ಲಿ ಫಿಸಕಲಿ ಆಡಿ ಗೆಲ್ಲುವಂತ ಟಾಸ್ಕ್ ಗಳು, ಇನ್ನು ಕೆಲವು ಸದಸ್ಯರ ನಡುವಿನ ಬಾಂಧವ್ಯದ ಟಾಸ್ಕ್ ಗಳು. ಅದರಲ್ಲಿ ಇತ್ತೀಚೆಗೆ ಬಿಗ್ ಬಾಸ್ ನೀಡಿದ ರಿಯಲ್ ಆರ್ ಫೇಕ್ ಎಂಬ ಟಾಸ್ಕ್ ಇಡೀ ಮನೆ ಮಂದಿಯ ನಿದ್ದೆಯನ್ನೇ ಕೆಡಿಸಿದೆ. ರಾಜಣ್ಣನ ವರ್ತನೆಗೆ ಎಲ್ಲರೂ ಸುಸ್ತಾಗಿ ಹೋಗಿದ್ದಾರೆ.

ರಿಯಲ್ ಆರ್ ಫೇಕ್‌ನಲ್ಲಿ ದಿವ್ಯಾ ಉರುಡುಗರನ್ನು ಫೇಕ್ ಲೀಸ್ಟ್‌ನಲ್ಲಿಯೇ ಹಾಕಿದ್ದರು. ಈ ವೇಳೆ ದಿವ್ಯಾ ಬಗ್ಗೆ ನಾನು ಬರೆದ ಹಾಡಿನ ಕ್ರೆಡಿಟ್ ಕೊಡಲಿಲ್ಲ ಅಂತ ಬೇರೆ ಬೇರೆ ಕಾರಣವನ್ನು ರೂಪೇಶ್ ರಾಜಣ್ಣ ಹೇಳಿದ್ದರು. ಅದು ದಿವ್ಯಾ ನೋವಿಗೂ ಕಾರಣವಾಗಿತ್ತು. ಅಷ್ಟಕ್ಕೆ ಸುಮ್ಮನಾಗದ ರಾಜಣ್ಣ ಮನೆ ಮಂದಿಯನ್ನೆಲ್ಲಾ ಎದುರು ಹಾಕಿಕೊಂಡಿದ್ದಾರೆ.

ರಾಜಣ್ಣನಿಗೆ ಎಲ್ಲರೂ ದುಷ್ಮನ್‌ಗಳೇ

ರಾಜಣ್ಣನಿಗೆ ಎಲ್ಲರೂ ದುಷ್ಮನ್‌ಗಳೇ

ಬಿಗ್ ಬಾಸ್ ಮನೆಯಲ್ಲಿ ಇಷ್ಟು ಸೀಸನ್ ನಲ್ಲೂ ಪ್ರತಿದಿನ ಜಗಳಗಳು ನಡೆಯುತ್ತಿದ್ದವು, ಒಬ್ಬರಿಗೊಬ್ಬರು ನಾಮಿನೇಟ್ ಮಾಡುತ್ತಿದ್ದರು. ಆದ್ರೆ ಅದು ಒಬ್ಬರ ಮೇಲಷ್ಟೇ ಕೋಪ, ಮುನಿಸು ಇರುತ್ತಾ ಇತ್ತು. ಆದ್ರೆ ಫಾರ್ ದ ಫಸ್ಟ್ ಟೈಮ್ ಇಡೀ ಮನೆ ಮಂದಿ ರಾಜಣ್ಣನ ಮೇಲೆ ತಿರುಗಿ ಬಿದ್ದಿರುವುದು. ಅದಕ್ಕೆ ಕಾರಣ ಕರ್ತರು ಕೂಡ ಇದೇ ರಾಜಣ್ಣ ಅವರೇ ಆಗಿದ್ದಾರೆ.

ರಾಜಣ್ಣನ ಬಗ್ಗೆ ಮನೆಯವರ ಅಭಿಪ್ರಾಯವೇನು..?

ರಾಜಣ್ಣನ ಬಗ್ಗೆ ಮನೆಯವರ ಅಭಿಪ್ರಾಯವೇನು..?

ರಾಜಣ್ಣ ರಿಯಲ್ ಆರ್ ಫೇಕ್ ವಿಚಾರಕ್ಕೆ ಈಗ ಮನೆ ಮಂದಿ ಒಂದಾಗಿದ್ದಾರೆ. ಆರ್ಯವರ್ಧನ್ ಮತ್ತು ರಾಕೇಶ್ ಮಾತನಾಡುತ್ತಿದ್ದರು. ಈ ವೇಳೆ ರಾಕೇಶ್, ನಂಗೆ ನೋವಾಯ್ತು ಅಂದ್ರೆ ಇರೋದನ್ನೇ ಮರ್ತೆ ಬಿಡುತ್ತೀನಿ. ಓಟಿಟಿಯಲ್ಲಿ ಸಾನ್ಯಾ ಹೀಗೆ ಮಾಡಿದ್ಲು ಒಂದು ವಾರ ಮಾತು ಬಿಟ್ಟಿದ್ದೆ. ಈಗ ರಾಜಣ್ಣ ಎಂದು ಬೇಸರ ಮಾಡಿಕೊಂಡಿದ್ದಾರೆ. ದಿವ್ಯಾ ಕೂಡ ಆರ್ಯವರ್ಧನ್ ಬಳಿ ಇದೆ ಮಾತನಾಡಿದ್ದು, ಗ್ಯಾಸ್ ಹೊಡೆದು ಅವರ ಕೈಗೆ ಕೊಟ್ಟನಂತೆ. ಆಮೇಲೆ ಅದನ್ನ ಮರೆಸೋದಕ್ಕೆ ದೀಪಿಕಾ ಹತ್ತಿರ ಜಗಳ ಆಡಿದ್ನಂತೆ ಎಂದಿದ್ದಾರೆ. ರೂಪೇಶ್ ಮತ್ತು ಗೊಬ್ಬರಗಾಲ ಕೂಡ ರಾಜಣ್ಣನ ಬಗ್ಗೆ ಬೇಸರ ಮಾಡಿಕೊಂಡಿದ್ದಾರೆ.

ಇಲ್ಲಿ ರಾಜಣ್ಣನೇ ಟಾರ್ಗೆಟ್

ಇಲ್ಲಿ ರಾಜಣ್ಣನೇ ಟಾರ್ಗೆಟ್

ಇನ್ನು ದೀಪಿಕಾ ಮಾತನಾಡಿ, ಕೆಲವೊಂದು ವಿಚಾರದಲ್ಲಿ ಸರಿ ಇದ್ರು ಕೂಡ ಒಂದೊಂದು ವಿಚಾರದಲ್ಲಿ ಹೆಚ್ಚು ಮಾಡಿ ಬಿಡುತ್ತಾರೆ. ಏನು ಮಾಡುವುದಕ್ಕೆ ಆಗಲ್ಲ ಒಪ್ಪಿಕೊಳ್ಳುತ್ತಾ ಇರಬಹುದು ಎಂದಿದ್ದಾರೆ. ಅಡುಗೆ ಮನೆಯಲ್ಲಿ, ರೂಪೇಶ್ ಶೆಟ್ಟಿ ಮತ್ತು ಆರ್ಯವರ್ಧನ್ ಮಾತನಾಡುತ್ತಾ ಇದ್ದರು. ನಾವೂ ಇಲ್ಲಿ ಆಡುವುದಕ್ಕೆ ತಾನೇ ಬಂದಿರೋದು. ಎಷ್ಟು ಅಂತ ಸಹಿಸಿಕೊಳ್ಳುವುದು. ಹಾಡಿನ ವಿಚಾರದಲ್ಲೂ ಹಾಗೇ ಆಗಿದ್ದಾರೆ ಎಂದು ರೂಪೇಶ್ ಹೇಳುತ್ತಿದ್ದಾಗ ಅದೇ ಸಮಯಕ್ಕೆ ರಾಜಣ್ಣ ಬಂದಿದ್ದಾರೆ.

ಸಂಬರ್ಗಿಗೆ ಕಿರಿಕಿರಿ ಮಾಡಿದ ರಾಜಣ್ಣ

ಸಂಬರ್ಗಿಗೆ ಕಿರಿಕಿರಿ ಮಾಡಿದ ರಾಜಣ್ಣ

ಇನ್ನು ಕ್ಯಾಪ್ಟನ್ ಸಂಬರ್ಗಿ ಕಡೆಗೆ ಬಂದ ರಾಜಣ್ಣ, ಟೈಗರ್ ಪ್ರಭಾಕರ್ ಸ್ಟೈಲ್ ನಲ್ಲಿ, ಕ್ಯಾಪ್ಟನ್ ಆಗಿ ನೀವೂ ಈ ನಿರ್ಧಾರ ತೆಗೆದುಕೊಂಡಿದ್ದು ಸರಿ ಕಾಣಲಿಲ್ಲ. ಯಾಮಾರಿ ಬಿಟ್ರಿ ನೀವೂ ಖಂಡಿತ ಯಾಮಾರಿದ್ರಿ. ಹಳ್ಳಕ್ಕೆ ಬಿದ್ದು ಬಿಟ್ರಿ. ಫಸ್ಟ್ ಟೈಮ್ ಈ ವಾರದಲ್ಲಿ ಯಾಮಾರಿದ್ರು. ಒಂದೊಂದು ಟೈಮ್‌ನಲ್ಲಿ ನನ್ನನ್ನು ಕುಗ್ಗಿಸುವುದಕ್ಕೆ ನೋಡುತ್ತಾ ಇದ್ರಿ. ಆದ್ರೆ ನನ್ನ ಶಕ್ತಿ ಹೆಚ್ಚಾಗುತ್ತಿದೆ. ನೀವೂ ಒನ್ ಸೈಡ್ ಮಾತು ಕೇಳಿಕೊಂಡು ಹಳ್ಳಕ್ಕೆ ಬಿದ್ರಿ. ಆದ್ರೆ ಐ ಡೋಂಟ್ ಕೇರ್ ಐ ಡೋಂಟ್ ಕೇರ್.. ನಡೆಯಲಿ ನಡೆಯಲಿ ಎಂದಿದ್ದಾರೆ.

ಬಿಗ್ ಬಾಸ್‌ಗೆ ಪದೇ ಪದೆ ರಾಜಣ್ಣ ಹೇಳಿದ್ದೇನು?

ಬಿಗ್ ಬಾಸ್‌ಗೆ ಪದೇ ಪದೆ ರಾಜಣ್ಣ ಹೇಳಿದ್ದೇನು?

ಮಾತಿಗೆ ಮುಂಚೆ ಮುಗ್ಧತೆ ಬಗ್ಗೆ ಮಾತನಾಡಿದ ರಾಜಣ್ಣ, ಸಂಬ್ರಗಿ ಬಳಿ ಮತ್ತೆ ಅದೇ ಮಾತನಾಡಿದ್ದಾರೆ. ಮೊದಲು ಮೂರು ವಾರದಲ್ಲಿಯೇ ನಾನು ಮುಗ್ಧನಂತೆ. ನಾನೀಗ ಮಾತಾಡಿದ್ದಕ್ಕೆ ಫೇಕ್ ಆಗಿ ಬಿಟ್ಟಿದ್ದೀನಂತೆ. ಇಲ್ಲಿ ಇರುವ ನಾಟಕ ಅರ್ಥವಾಗಿರಲಿಲ್ಲ. ಅರ್ಥವಾದ ಮೇಲೆ ನಾನು ಫೇಕ್ ಆಗಿ ಹೋಗಿದ್ದೀನಂತೆ. ನಾನು ಯಾರಿಗೂ ಹೇಳಿಲ್ಲ ಅಣ್ಣ ನಾನು ಮುಗ್ಧ ಅಂತ. ನಾನಿರುವುದೇ ಹೀಗೆ ಅಣ್ಣ ಸಂಬರ್ಗಿಗೆ ಹೇಳಿದ್ದಾರೆ. ನಂತರ ಜೋಕರ್ ವೇಷ ತೊಟ್ಟಿದ್ದ ಅರುಣ್ ಸಾಗರ್‌ಗೆ ಕೈಕಟ್ಟಿ ಬೆಣ್ಣೆ ಹಚ್ಚಿ ಅಂತಲ್ಲ ಜೋಕರ್. ಇದ್ದದ್ದನ್ನು ಹಂಗೆ ತೆಗೆದು ಬಿಡ್ತಾ ಇರಿ ಅಂತ. ಒಳ್ಳೆಯದ್ದನ್ನು ಕಂಡಾಗ ಮುದ್ದು ಮಾಡೋದು, ತಪ್ಪು ಕಂಡಾಗ ಬುದ್ದಿ ಹೇಳೋದು ಮನುಷ್ಯನ ಗುಣ ಎಂದು ಇದನ್ನೆ ಹೇಳಿ ಹೇಳಿ ಮನೆಯವರ ತಲೆ ತಿಂದಿದ್ದಾರೆ.

More from Filmibeat

English summary
Bigg Boss Kannada 9 November 9th Episode Written Update. Here is the details about Roopesh Rajanna irritation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X