For Quick Alerts
  ALLOW NOTIFICATIONS  
  For Daily Alerts

  BBK9: ಇದ್ದಲ್ಲಿಯೇ ನಾಮಿನೇಟ್ ಮಾಡಿ ಅಂದಿದ್ದಕ್ಕೆ ಸ್ಪರ್ಧಿಗಳು ಸೂಚಿಸಿದ ಆ ಹೆಸರು ಯಾರದ್ದು?

  By ಎಸ್ ಸುಮಂತ್
  |

  ಓಟಿಟಿ ಸೀಸನ್ ಮುಗಿದು ಟಿವಿ ಸೀಸನ್ ಶುರುವಾಗಿ 22 ದಿನಗಳು ಕಳೆಯುತ್ತಿದೆ. ಹೊಸಬರು ಮತ್ತು ಹಳಬರನ್ನು ಒಟ್ಟಿಗೆ ಬಿಟ್ಟು ಈ ಬಾರಿ ಬಿಗ್ ಬಾಸ್ ಸೀಸನ್ ನಡೆಸಿಕೊಡಲಾಗುತ್ತಿದೆ. ಈಗಾಗಲೇ ಮೂವರು ಮನೆಯಿಂದ ಹೊರ ಬಂದಿದ್ದಾರೆ. ವಾರದ ಕಥೆಯಲ್ಲಿ ಕಿಚ್ಚನಿಂದಲೂ ಸಖತ್ ಕ್ಲಾಸ್ ನಡೆಯುತ್ತಿದೆ. ಇದರ ನಡುವೆ ಮಾಮೂಲಿಯಂತೆ ಆಟವೂ ಸಾಗುತ್ತಿದೆ.

  ಬಿಗ್ ಬಾಸ್ ಮನೆಯೊಳಗಿರುವ ಹಲವು ಸ್ಪರ್ಧಿಗಳಲ್ಲಿ ಕೆಲವರು ಮನರಂಜನೆ ನೀಡುತ್ತಾರೆ. ಇನ್ನು ಕೆಲವರು ನೋಡುಗರಿಗೆ ಸಪ್ಪೆ ಎನಿಸುತ್ತಿದ್ದಾರೆ. ಅದರ ಜೊತೆಗೆ ಜಗಳ ಕೂಡ ಮನೆಯೊಳಗೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ಮನೆಯೊಳಗಿದ್ದು ಅಭ್ಯಾಸ ಇರುವವರಿಗೆ ಈ ಜಗಳ ಏನೇನು ಅಲ್ಲವೆನಿಸುತ್ತದೆ. ದಿನವಿಡಿ ಅಷ್ಟೇ ಜನರ ನಡುವೆ ಇರಬೇಕು. ಅಷ್ಟೆ ಅಲ್ಲ ಆ ಮನೆಯೇ ಪ್ರಪಂಚ ಆಗಿರುವುದರಿಂದ ಜಗಳ, ಚರ್ಚೆ ಎಲ್ಲಾ ಕಾಮನ್ ಆಗಿ ಬಿಟ್ಟಿದೆ.

  Ashwini: 'ಕಾಂತಾರ' ಲೀಲಾಳ ಮೂಗುತಿ ಫುಲ್ ಟ್ರೆಂಡ್: ಎರಡೂ ಕಡೆ ಬೊಟ್ಟು ಇಟ್ಟ ಕಿರುತೆರೆ ನಟಿ!Ashwini: 'ಕಾಂತಾರ' ಲೀಲಾಳ ಮೂಗುತಿ ಫುಲ್ ಟ್ರೆಂಡ್: ಎರಡೂ ಕಡೆ ಬೊಟ್ಟು ಇಟ್ಟ ಕಿರುತೆರೆ ನಟಿ!

  ಸದಸ್ಯರಿಗೆ ಹೊಸ ಟಾಸ್ಕ್ ಕೊಟ್ಟ ಬಿಗ್ ಬಾಸ್

  ಸದಸ್ಯರಿಗೆ ಹೊಸ ಟಾಸ್ಕ್ ಕೊಟ್ಟ ಬಿಗ್ ಬಾಸ್

  ಮನೆಯಲ್ಲಿ ಎಲ್ಲಾ ಸದಸ್ಯರು ಒಟ್ಟಿಗೆ ಇರಬೇಕು. ಟಾರ್ಗೆಟ್ ಮಾಡಲಿ, ದ್ವೇಷಿಸಲಿ, ಪ್ರೀತಿಸಲಿ ಏನೇ ಆದರು ಅವರವರೇ ಜೊತೆಯಾಗಿರಬೇಕು. ಹೀಗಾಗಿ ನಾಮಿನೇಟ್ ಮಾಡುವಾಗ ಎಷ್ಟೋ ಸಲ ನಮ್ಮವರು ಯಾರು? ನಮ್ಮನ್ನು ಯಾವ ಕಾರಣಕ್ಕೆ ಅವರು ದೂರುತ್ತಿದ್ದಾರೆ ಎಂಬುದು ನಾಮಿನೇಷನ್ ಸಮಯದಲ್ಲಿ ಗೊತ್ತಾಗುತ್ತದೆ. ಆದರೆ ಸೀಕ್ರೆಟ್ ರೂಮಿನಲ್ಲಿ ನಾಮಿನೇಟ್ ಆದವರ ಬಗ್ಗೆ ಕಾರಣ ಕೊಡಲಾಗುತ್ತದೆ. ಆಗ ಯಾರು ಯಾರ ಬಗ್ಗೆ ಏನನ್ನು ಹೇಳಿದ್ದಾರೆ ಎಂಬುದು ಅಷ್ಟಾಗಿ ಗೊತ್ತಾಗುವುದಿಲ್ಲ. ಆದರೆ ಈ ಬಾರಿ ಬಿಗ್ ಬಾಸ್ ಹೊಸ ಟಾಸ್ಕ್ ಅನ್ನೇ ನೀಡಿದೆ. ನಿಂತಲ್ಲಿಯೇ ನಾಮಿನೇಟ್ ಮಾಡುವಂತ ಟಾಸ್ಕ್. ಈ ಟಾಸ್ಕ್ ಬಗ್ಗೆ ಕೇಳಿ ಸದಸ್ಯರೆಲ್ಲ ಶಾಕ್ ಆಗಿದ್ದಾರೆ.

  ಬಹುದಿನಗಳ ಬಳಿಕ ಸತ್ಯ ದಿವ್ಯಾಳನ್ನು ನೋಡಿ ಮಾಡಿದ್ದೇನು ಗೊತ್ತಾ?ಬಹುದಿನಗಳ ಬಳಿಕ ಸತ್ಯ ದಿವ್ಯಾಳನ್ನು ನೋಡಿ ಮಾಡಿದ್ದೇನು ಗೊತ್ತಾ?

  ಪ್ರಶಾಂತ್ ಸಂಬರ್ಗಿಯೇ ಟಾರ್ಗೆಟ್?

  ಪ್ರಶಾಂತ್ ಸಂಬರ್ಗಿಯೇ ಟಾರ್ಗೆಟ್?

  ಇನ್ನು ಎಲ್ಲರಿಗೂ ಗೊತ್ತಿರುವಂತೆ ಪ್ರಶಾಂತ್ ಸಂಬರ್ಗಿ ಮಾತು ಮುಂದೆ. ಅವರು ಧ್ವನಿ ಏರಿಸಿದರೆ ಮುಗೀತು ಎದುರಿಗಿದ್ದವರ ಧೈರ್ಯ, ಧ್ವನಿ ಎಲ್ಲವೂ ಅಡಗಿ ಹೋಗಬೇಕು ಆ ರೀತಿಯಲ್ಲಿಯೇ ಮಾತನಾಡುವುದು. ಹೀಗಾಗಿ ನಾಮಿನೇಟ್ ಅಂತ ಬಂದಾಗ ಹೆಚ್ಚು ಸಲ ಸಂಬರ್ಗಿಯೇ ನಾಮಿನೇಟ್ ಆಗುತ್ತಾರೆ. ಈ ಬಾರಿಯೂ ಪ್ರಶಾಂತ್ ಸಂಬರ್ಗಿಯ ಹೆಸರನ್ನು ತೆಗೆದುಕೊಂಡಿದ್ದಾರೆ. ಆರ್ಯವರ್ಧನ್, ಕಾವ್ಯಶ್ರೀ, ಗೊಬ್ಬರಗಾಲ ಹೀಗೆ ಇನ್ನು ಹಲವರ ಹೆಸರನ್ನು ನಾಮಿನೇಷನ್ ಪ್ರಕ್ರಿಯೆಯಲ್ಲಿ ಕೇಳಿ ಬಂದಿದೆ.

  ರೂಪೇಶ್‌ಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

  ರೂಪೇಶ್‌ಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

  ನಾಮಿನೇಷನ್ ಮಾಡುವಾಗ ಅದು ಅವರ ವೈಯಕ್ತಿಕ ಅನುಭವಕ್ಕೆ ಬಿಟ್ಟಿದ್ದು. ಹೀಗೆ ರೂಪೇಶ್ ಶೆಟ್ಟಿ ತನಗೆ ಇಷ್ಟವಿಲ್ಲದ ವ್ಯಕ್ತಿಯನ್ನು ನಾಮಿನೇಟ್ ಮಾಡಿದ್ದಾರೆ. ಅವರೇ ಪ್ರಶಾಂತ್ ಸಂಬರ್ಗಿ. ಆದರೆ ರೂಪೇಶ್ ಶೆಟ್ಟಿ, ಪ್ರಶಾಂತ್ ಸಂಬರ್ಗಿಯನ್ನು ನಾಮಿನೇಟ್ ಮಾಡಿದ್ದೆ ತಡ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ವಿಲನ್ ಆಗಿದ್ದಾರೆ. ಪ್ರಶಾಂತ್ ಸಂಬರ್ಗಿ ಬೆಂಬಲಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನೀನು ಎಷ್ಟೆ ಬಾರಿ ಪ್ರಶಾಂತ್ ಸಂಬರ್ಗಿಯನ್ನು ನಾಮಿನೇಟ್ ಮಾಡಿದ್ದರು. ಅವರೇ ಕಡೆಗೆ ಸೇವ್ ಆಗುವುದು ಎಂದು ಒತ್ತಿ ಒತ್ತಿ ಹೇಳಿದ್ದಾರೆ.

  ಕಾವ್ಯಶ್ರೀಗೆ ಒಂದಷ್ಟು ಜನರಿಂದ ಪಾಠ

  ಕಾವ್ಯಶ್ರೀಗೆ ಒಂದಷ್ಟು ಜನರಿಂದ ಪಾಠ

  ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ವಿಚಾರಕ್ಕೆ ಹೆಚ್ಚು ಟಾರ್ಗೆಟ್ ಆಗುತ್ತಿರುವವರ ಲೀಸ್ಟ್ ನಲ್ಲಿ ಕಾವ್ಯಶ್ರೀ ಕೂಡ ಒಬ್ಬಳು. ಆ ಗ್ರೂಪಲ್ಲಿ ಹೋದರೆ ಸುಮ್ಮನೆ ಬೇರೆಯವರ ಬಗ್ಗೆಯೇ ಮಾತನಾಡುತ್ತಾರೆ ಅಂತ ಕಾವ್ಯಾ ಆಗಾಗ ಹೇಳುತ್ತಾಳೆ. ನಾಮಿನೇಷನ್ ಪ್ರಕ್ರಿಯೆಯಲ್ಲೂ ಗ್ರೂಪ್ ಬಗ್ಗೆ ಮಾತನಾಡಿದ್ದಾಳೆ. ಈ ವಿಚಾರವಾಗಿ ಕಮೆಂಟ್ ಹಾಕಿರುವ ನೆಟ್ಟಿಗರು, ಮೊದಲು ನೀನು ಅವರಿವರ ಬಗ್ಗೆ ಮಾತನಾಡುವುದನ್ನು ಬಿಡು. ಅವರೆಲ್ಲಾ ಗ್ರೂಪಿಸಂ ಮಾಡ್ತಾರೆ ಅಂತಿಯಾ ನೀನು ಮೊದಲು ಹುಡುಗರ ಗ್ರೂಪ್ ಬಿಟ್ಟು, ಹುಡುಗಿಯರ ಜೊತೆ ಇರುವುದನ್ನು ಕಲಿ ಎಂದು ಪಾಠ ಮಾಡಿದ್ದಾರೆ.

  English summary
  Bigg Boss Kannada 9 October 17th Episode On Prashanth Sambargi Nomination. Here is the details.
  Tuesday, October 18, 2022, 10:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X