BBK9: ಓಟಿಟಿಯ ಚಿತ್ರ-ವಿಚಿತ್ರ ಗೇಮ್ ಟಿವಿಯಲ್ಲೂ ರಿಪೀಟ್ : ಆರ್ಯವರ್ಧನ್ ಗರಂ!

By ಎಸ್ ಸುಮಂತ್

ಬಿಗ್ ಬಾಸ್‌ನಲ್ಲಿ ಈಗ ಸ್ನೇಹಕ್ಕೂ ಮೀರಿದ ಆಟಗಳು ಶುರುವಾಗಿದೆ. ಇನ್ನು ಒಂದು ತಿಂಗಳು ಕೂಡ ತುಂಬಿಲ್ಲ. ಆದರೂ ಯಾವಾಗಲೂ ಜಗಳ ಆಡುತ್ತಲೇ ಇರುತ್ತಾರೆ. ಅದರಲ್ಲೂ ಆರ್ಯವರ್ಧನ್ ಮಾತಿಗೆ ಮುಂಚೆ ಜೋರು ಧ್ವನಿಯಲ್ಲಿಯೇ ಮಾತನಾಡುತ್ತಾರೆ. ಓಟಿಟಿಯಲ್ಲಿ ನೋಡಿದ ಆರ್ಯವರ್ಧನ್ ಗುರೂಜಿ ಇದರಲ್ಲಿ ತದ್ವಿರುದ್ಧವಾಗಿ ನಿಂತಿದ್ದಾರೆ. ಇವತ್ತು ನಡೆದ ಗೇಮ್‌ನಲ್ಲೂ ಅದೇ ಧ್ವನಿಯನ್ನು ಬಳಸಿದ್ದಾರೆ.

ಸದ್ಯ ಈ ವಾರ ದೀಪಿಕಾ ದಾಸ್ ಮನೆಯ ಸಾರಥ್ಯ ವಹಿಸಿದ್ದಾರೆ. ಅಂದರೆ ಕ್ಯಾಪ್ಟನ್ ಜಾಗದಲ್ಲಿ ನಿಂತಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಶುರುವಿನಲ್ಲಿಯೇ ದೀಪಿಕಾ ದಾಸ್‌ಗೆ ಕ್ಯಾಪ್ಟನ್ ಆಗುವ ಚಾನ್ಸ್ ಸಿಕ್ಕಿತ್ತು. ಆದರೆ ಅದನ್ನು ಬಿಟ್ಟುಕೊಟ್ಟಿದ್ದರು. ಆಗ ಪ್ರಶಾಂತ್ ಸಂಬರ್ಗಿ ಸಿಕ್ಕಾಪಟ್ಟೆ ರೈಸ್ ಆಗಿದ್ದರು. ದೀಪಿಕಾಗೆ ಬುದ್ದಿ ಮಾತಿನ ಸುರಿಮಳೆಯನ್ನೇ ಸುರಿಸಿದ್ದರು. ಈಗ ಆ ಅದೃಷ್ಟವನ್ನು ದೀಪಿಕಾ ಈ ಬಾರಿ ಬಿಟ್ಟುಕೊಟ್ಟಿಲ್ಲ.

Bigg Boss Kannada 9 October 20th Episode Written Update

ಓಟಿಟಿ ಗೇಮ್ ಟಿವಿಗೂ ಬಂತು

ಓಟಿಟಿ ಗೇಮ್ ಟಿವಿಗೂ ಬಂತು

ಬಿಗ್ ಬಾಸ್ ಗೇಮ್‌ಗಳನ್ನು ಇಡುವುದಕ್ಕೆ ಫೇಮಸ್ ಎಂದೇ ಹೇಳಬಹುದು. ಎಲ್ಲೆಲ್ಲಿಂದಲೋ ಹುಡುಕಿ ಗೇಮ್‌ಗಳನ್ನು ಇಡುತ್ತೆ. ನೋಡುಗರಿಗೆ ವಾವ್ ಇಂಥದ್ದೊಂದು ಗೇಮ್ ಸಖತ್ ಇಂಟ್ರೆಸ್ಟಿಂಗ್ ಆಗಿ ಇರುತ್ತೆ ಅಲ್ವಾ ಎನಿಸುತ್ತೆ. ಆದರೆ ನೋಡುಗರಿಗೆ ಅದರ ಸೂಕ್ಷ್ಮತೆಯ ಬಗ್ಗೆ ಗೊತ್ತಾಗುತ್ತೆ. ಯಾವ ಸೀಸನ್‌ನಲ್ಲಿಯೂ ಆಟಗಳ ಲಿಸ್ಟ್ ಪುನಾರಾವರ್ತನೆ ಆಗಿಲ್ಲ ಅನ್ನೋದು ಅಭಿಪ್ರಾಯ. ಆದರೆ ಈ ಬಾರಿ ಓಟಿಟಿಯಲ್ಲಿ ನಕ್ಕು ನಲಿಸಿದ್ದ ಗೇಮ್ ಟಿವಿ ಸೀಸನ್‌ಗೂ ಬಂದಿದೆ.

ಓಟಿಟಿಯಲ್ಲಿ ನಗು.. ಟಿವಿಯಲ್ಲಿ ಜಗಳ ತಂದಿಟ್ಟ ಗೇಮ್

ಓಟಿಟಿಯಲ್ಲಿ ನಗು.. ಟಿವಿಯಲ್ಲಿ ಜಗಳ ತಂದಿಟ್ಟ ಗೇಮ್

ಚಿತ್ರ-ವಿಚಿತ್ರ ಗೇಮ್ ಓಟಿಟಿ ಬಿಗ್‌ಬಾಸ್‌ನಲ್ಲೂ ನೀಡಲಾಗಿತ್ತು. ಆದರೆ ಆ ಸೀಸನ್‌ನಲ್ಲಿ ಈ ಗೇಮ್ ಆಡುವವರಿಗೂ ನಗು ತರಿಸಿತ್ತು, ನೋಡುಗರಿಗೂ ನಗು ತರಿಸಿತ್ತು. ಓಟಿಟಿಯಲ್ಲಿ ಟೀಂನಲ್ಲಿ ಚೈತ್ರಾ ಮತ್ತು ಜಯಶ್ರೀ ಮೊದಲಿಗೆ ನಿಂತಿದ್ದರು. ಬಿಡಿಸುವಾಗ ಅಂದವಾಗಿ ಬಿಡಿಸುತ್ತಿದ್ದ ಚಿತ್ರ ಕಡೆಯಲ್ಲಿ ಗುರುತಿಸುವಾಗ ಹಾವು, ಚೇಳು, ಮೂಲಂಗಿ ಎಲ್ಲಾ ಆಗಿ ಹೋಗಿತ್ತು. ಅದರಲ್ಲೂ ಸೋನು ಬಿಡಿಸುತ್ತಿದ್ದ ಚಿತ್ರವನ್ನು ರಾಕೇಶ್ ಗುರುತಿಸುತ್ತಿದ್ದ ರೀತಿಯೇ ಅದ್ಭುತವಾಗಿತ್ತು. ಹೀಗೆ ಸರತಿ ಸಾಲಿನಲ್ಲಿ ನಿಂತವರು ಆ ಆಟವನ್ನು ಎಂಜಾಯ್ ಮಾಡಿ, ನೋಡುಗರಿಗೆ ಫುಲ್ ಮನರಂಜನೆ ನೀಡಿದ್ದರು. ಇಲ್ಲಿ ಹಾಗೇ ಆಗಲಿಲ್ಲ. ಯುದ್ಧವೇ ನಡೆದಿದೆ.

ಆರ್ಯವರ್ಧನ್ ಬಳಗದಲ್ಲಿ ಭುಗಿಲೆದ್ದ ಆಕ್ರೋಶ

ಆರ್ಯವರ್ಧನ್ ಬಳಗದಲ್ಲಿ ಭುಗಿಲೆದ್ದ ಆಕ್ರೋಶ

ಇಲ್ಲಿ ಎರಡು ಟೀಂ ಇದೆ. ಎರಡು ಸಾಲು ಇದೆ. ಒಂದು ಕಡೆ ಅರುಣ್ ಸಾಗರ್ ಟೀಂ ಇನ್ನೊಂದು ಕಡೆ ದಿವ್ಯಾ ಉರುಡುಗ ಟೀಂ. ಮೊದಲಿಗೆ ಚಿತ್ರ ನೋಡಿ ಬರೆಯುವುದಕ್ಕೆ ದಿವ್ಯಾ ಮತ್ತು ಅರುಣ್ ಸಾಗರ್ ನಿಂತಿದ್ದಾರೆ. ಅದರಲ್ಲಿ ಅರುಣ್ ಸಾಗರ್ ಟೀಂನವರು ಕಷ್ಟಪಟ್ಟು ಹೇಳಿದ್ದಾರೆ. ಆದರೆ ಅದನ್ನು ಎಂಜಾಯ್ ಮಾಡಿದ್ದಾರೆ. ದಿವ್ಯಾ ಉರುಡುಗ ಟೀಂನಲ್ಲಿ ಆರ್ಯವರ್ಧನ್ ಅದನ್ನು ಎಂಜಾಯ್ ಮಾಡಿಲ್ಲ ಬದಲಿಗೆ ಆಕ್ರೋಶಗೊಂಡಿದ್ದಾರೆ. ದಿವ್ಯಾ ನೋಡಿ ಬರೆದದ್ದು ಒಂದು, ಅಮೂಲ್ಯ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಅರ್ಥ ಮಾಡಿಕೊಂಡಿದ್ದು ಮತ್ತೊಂದು. ಕಡೆಗೆ ಆರ್ಯವರ್ಧನ್ ಅರ್ಥ ಮಾಡಿಕೊಳ್ಳುವಲ್ಲಿ ಠುಸ್ ಪಟಾಕಿ. ಅದನ್ನು ನೇಹಾ ಗುರುತಿಸುವಲ್ಲಿ ತಲೆ ಕೆಟ್ಟಿದೆ.

ಆರ್ಯವರ್ಧನ್ ನಡವಳಿಕೆಗೆ ಎಲ್ಲರ ಬೇಸರ

ಆರ್ಯವರ್ಧನ್ ನಡವಳಿಕೆಗೆ ಎಲ್ಲರ ಬೇಸರ

ಹೀಗೆ ಬರೆದದ್ದು ಒಂದು ಅರ್ಥೈಸಿಕೊಂಡಿದ್ದು ಮತ್ತೊಂದು ಆದ ಮೇಲೆ ಆರ್ಯವರ್ಧನ್ ರೊಚ್ಚಿಗೆದ್ದಿದ್ದಾರೆ. ಯಾರು ಬರೆಯೋದು. ಅಲ್ಲಿ ಹಾವು ಬರೆಯೋದು ಇಲ್ಲಿಗೆ ಬರುವಷ್ಟರಲ್ಲಿ ಜಿರಲೆ ಆಗೋದು ಎಂದು ಧ್ವನಿ ಏರಿಸಿದ್ದಾರೆ. ಇದಕ್ಕೆ ಅಮೂಲ್ಯ, ಏನಕ್ಕೆ ಕಿರುಚಾಡುತ್ತಿದ್ದೀರಾ ಗುರುಗಳೇ ಎಂದಿದ್ದಾಳೆ. ನೇಹಾ ಬಾಯಿ ಮುಚ್ಚಿ ಎಂದು ಸನ್ನೆ ಮಾಡಿದ್ದಾಳೆ. ರೂಪೇಶ್ ರಾಜಣ್ಣ, ಅಲ್ಲಿಯೇ ರಾಂಗ್ ಆಗಿ, "ಏನು ತೋರಿಸುವುದು ನಿಮಗೆ. ಕಾಮನ್ ಸೆನ್ಸ್ ಇದೆಯಾ ನಿಮಗೆ. ಒಳ್ಳೆ ಕೋತಿ ಕೋತಿ ಥರ ಆಡುತ್ತೀರಲ್ಲ" ಎಂದಿದ್ದಾರೆ. ಹೀಗಾಗಿ ಟಾಸ್ಕ್ ವೇಳೆ ಬೆಂಕಿ ಹೊತ್ತಿಕೊಂಡಿದೆ.

More from Filmibeat

English summary
Bigg Boss Kannada October 20th Episode Written Update. Here is the details about Aryavardhan angry on task.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X