For Quick Alerts
  ALLOW NOTIFICATIONS  
  For Daily Alerts

  ಸಾನ್ಯಾಗೆ ಶಾಪ ಹಾಕಿದ ಪ್ರಶಾಂತ್ ಸಂಬರ್ಗಿ: ಅಷ್ಟಕ್ಕೂ ಮೂವರ ನಡುವೆ ನಡೆದಿದ್ದೇನು..?

  By ಎಸ್ ಸುಮಂತ್
  |

  ಇವತ್ತು ಬಿಗ್ ಬಾಸ್‌ನಲ್ಲಿ ಸಾನ್ಯಾ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ದೊಡ್ಡ ಬೆಂಕಿಯೇ ಹೊತ್ತಿಕೊಂಡಿದೆ. ಇದು ಎಲ್ಲಿ ಹೋಗಿ ನಿಲ್ಲುತ್ತೆ ಗೊತ್ತಿಲ್ಲ. ಫ್ರೆಂಡ್ಸ್ ಆಗಿದ್ದ ಸಾನ್ಯಾ ಈಗ ಪ್ರಶಾಂತ್‌ಗೆ ಪಕ್ಕಾ ದುಶ್ಮನ್ ಆಗಿದ್ದಾಳೆ. ಎಷ್ಟರ ಮಟ್ಟಿಗೆ ಎಂದರೆ ಪ್ರಶಾಂತ್, ನೀನು ಉದ್ದಾರ ಆಗಲ್ಲ ಎಂದು ಹೇಳುವ ಮಟ್ಟಿಗೆ ಆ ಒಂದು ಘಟನೆ ಇಬ್ಬರ ನಡುವೆ ಬೆಂಕಿ ಹತ್ತಿಸಿದೆ.

  ಬಿಗ್ ಬಾಸ್ ಸೀಸನ್ 9 ಟಿವಿ ಶೋ ಶುರುವಾದ ಪ್ರಾರಂಭದಲ್ಲಿ ಸಾನ್ಯಾಗೂ ಮತ್ತು ಪ್ರಶಾಂತ್‌ಗೂ ಅಷ್ಟಕಷ್ಟೇ. ಆದರೆ ದಿನ ಕಳೆದಂತೆ ಇಬ್ಬರು ಬದಲಾಗಿದ್ದರು. ಎಷ್ಟರ ಮಟ್ಟಿಗೆ ಎಂದರೆ ಪ್ಲ್ಯಾನ್ ಮಾಡಿ, ರೂಪೇಶ್ ರಾಜಣ್ಣರನ್ನು ಎದುರಿಸಿದ್ದರು.

  ಅರ್ಧಾಂಗಿ: ಸೌಭಾಗ್ಯ ಕಳ್ಳಾಟ ಅದಿತಿಗೆ ತಿಳಿದೇ ಹೋಯ್ತು: ಮುಂದೇನು?ಅರ್ಧಾಂಗಿ: ಸೌಭಾಗ್ಯ ಕಳ್ಳಾಟ ಅದಿತಿಗೆ ತಿಳಿದೇ ಹೋಯ್ತು: ಮುಂದೇನು?

  ಪ್ರಶಾಂತ್ ಸಂಬರಗಿ ಮತ್ತು ಸಾನ್ಯಾ ಸಮಯ ಸಿಕ್ಕಾಗಲೆಲ್ಲಾ ಚೆನ್ನಾಗಿಯೇ ಮಾತನಾಡಿಕೊಂಡು ಇದ್ದವರು. ಆದರೆ ಅದೇನಾಯ್ತೊ ಏನೋ? ಈಗ ಶಾಪ ಹಾಕಿಕೊಂಡು ಇಬ್ಬರೂ ಓಡಾಡಿಕೊಂಡಿದ್ದಾರೆ.

  ಸಾನ್ಯಾಗೆ ಅನುಪಮಾ ಕಡೆಯಿಂದ ಸಿಕ್ತು ಕ್ಲಾರಿಟಿ

  ಸಾನ್ಯಾಗೆ ಅನುಪಮಾ ಕಡೆಯಿಂದ ಸಿಕ್ತು ಕ್ಲಾರಿಟಿ

  ಪ್ರಶಾಂತ್ ಸಂಬರಗಿ ಕಡೆಯಿಂದ ಇಬ್ಬರ ನಡುವಿನ ಫ್ರೆಂಡ್ಶಿಪ್ ಗೆ ಕಳಂಕ ಬರುವಷ್ಟು ಪ್ರಮಾದ ನಡೆದಿದೆ ಎನಿಸುತ್ತದೆ. ಮನೆ ಮಂದಿಯೆಲ್ಲಾ ಕುಳಿತು ಹೇಳುವಾಗ ಸಾನ್ಯಾ ಈ ವಿಚಾರ ಪ್ರಸ್ತಾಪಿಸಿದ್ದಾಳೆ. ಈ ಬಗ್ಗೆ ಕ್ಲಾರಿಟಿ ನಮ್ಮ ಟೀಂ ಕ್ಯಾಪ್ಟನ್‌ಗೆ ಇಲ್ಲ. ಟೀಂ ಮೋಟಿವೇಶನ್ ಇಲ್ಲ. ಅನುಪಮಾ ಅವರ ಬಾಯಿಂದ ಬರುತ್ತಾ ಇತ್ತು ಎಂದಾಗಲೇ ಅನುಪಮಾ ಶಾಕ್ ಆಗಿದ್ದಾರೆ. ನಾನು ಏನು ಮಾಡಿದೆ ಎಂಬುದು. ಬಳಿಕ ಇಬ್ಬರ ನಡುವೆ ಮಾತುಕತೆ ನಡೆದಾದ ಮೇಲೆ ಅನುಪಮಾ, ಸಾನ್ಯಾಳಿಗೆ ಕ್ಲಾರಿಟಿ ನೀಡಿದ್ದಾಳೆ. ವೇದಿಕೆ ಮುಂಭಾಗ ಬಂದು, ಅವರಿಗೆ ಆ ಥರದ ಯಾವುದೇ ಅಭಿಪ್ರಾಯ ಇಲ್ಲ ಎಂಬುದು ನನಗೆ ಗೊತ್ತಾಗಿದೆ.

  ದೀಪಿಕಾ ಬಳಿ ಪ್ರಶಾಂತ್ ಸಂಬರ್ಗಿ ಹೇಳಿದ್ದೇನು?

  ದೀಪಿಕಾ ಬಳಿ ಪ್ರಶಾಂತ್ ಸಂಬರ್ಗಿ ಹೇಳಿದ್ದೇನು?

  ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಮಾತುಕತೆಗಳು ನಡೆಯುವುದು ಕಾಮನ್. ಯಾರ ಜೊತೆಗೆ ಚೆನ್ನಾಗಿರುತ್ತಾರೋ ಅವರಿಗೇನೆ ಪಿನ್ ಇಡುತ್ತಾರೆ. ಅವರ ಬಗ್ಗೆಯೇ ಹಿಂದೆಯಿಂದ ಮಾತನಾಡುತ್ತಾರೆ. ಆದರೆ ಆ ಮಾತುಗಳು ಕೆಲವೊಮ್ಮೆ ಎಲ್ಲರ ಮುಂದೆ ಬ್ಲಾಸ್ಟ್ ಆಗುತ್ತವೆ. ಈಗ ಪ್ರಶಾಂತ್ ಸಂಬರ್ಗಿ ವಿಚಾರದಲ್ಲೂ ಆಗಿದ್ದು ಅದೇ. ದೀಪಿಕಾ ದಾಸ್ ಬಳಿ ಸಾನ್ಯಾಳೇ, ಅನುಪಮಾ ಗೌಡ ಬಗ್ಗೆ ಹೇಳಿದ್ದು ಎಂದಿದ್ದಾರೆ. ಅನುಪಮಾ ಮತ್ತು ಸಾನ್ಯಾ ಒಂದಾಗಿದ್ದು ನೋಡಿ ಮುಖದಲ್ಲಿ ಆಶ್ಚರ್ಯಕರ ಭಾವನೆ ಮೂಡಿಸಿದ್ದಾರೆ.

  ಸಾನ್ಯಾಳಿಗೆ ಶಾಪ ಹಾಕಿದ ಸಂಬರ್ಗಿ

  ಸಾನ್ಯಾಳಿಗೆ ಶಾಪ ಹಾಕಿದ ಸಂಬರ್ಗಿ

  ಈ ಎಲ್ಲಾ ಚರ್ಚೆ, ಮಾತುಕತೆಗಳು ಮುಗಿದ ಬಳಿಕ ಅನುಪಮಾ ಹಾಗೂ ಸಾನ್ಯಾ ಬೆಡ್ ರೂಮಿನಲ್ಲಿ ಕೂತು ಮಾತನಾಡುತ್ತಿದ್ದರು. ಅಲ್ಲಿಗೆ ಬಂದ ಪ್ರಶಾಂತ್ ಸಂಬರ್ಗಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. "ನಾನು ಈ ರೀತಿಯ ಚಿಲ್ಲರೆ ಕೆಲಸ ಮಾಡಿ, ಹೆಣ್ಣು ಮಕ್ಕಳ ನಡುವೆ ಜಗಳ ತಂದಿಡುವ ಕೀಳು ಮನಸ್ಸಿನವನು ನಾನಲ್ಲ. ಇನ್ನು ನೀನು ಜೀವನ ನೋಡಿಲ್ಲ. ನನ್ನನ್ನು ಅವಳ ಕಣ್ಣಿಗೆ ಬೀಳಿಸಿದ್ದೀಯಾ ಅಲ್ವಾ? ಅದನ್ನು ದೇವರು ಮೆಚ್ಚುವುದು ಇಲ್ಲ. ನಿಂಗೆ ಒಳ್ಳೆಯದಾಗಲ್ಲ" ಎಂದು ಶಾಪ ಹಾಕಿ ಹೋಗಿದ್ದಾನೆ.

  ಸಂಬರ್ಗಿಗೆ ಜೈ ಎಂದ ಪ್ರಶಾಂತ್ ಬೆಂಬಲಿಗರು

  ಸಂಬರ್ಗಿಗೆ ಜೈ ಎಂದ ಪ್ರಶಾಂತ್ ಬೆಂಬಲಿಗರು

  ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅವರವರ ಬೆಂಬಲಿಗರು ಅವರವರನ್ನು ಸಪೋರ್ಟ್ ಮಾಡುತ್ತಾ ಇರುತ್ತಾರೆ. ಈಗ ಪ್ರಶಾಂತ್ ಸಂಬರ್ಗಿ ಬೆಂಬಲಿಗರು ಸಾನ್ಯಾಳ ವಿರುದ್ಧ ಗರಂ ಆಗಿದ್ದಾರೆ. ಪ್ರಶಾಂತ್ ಅವರು ಸಾನ್ಯಾಗೆ ಹೆಲ್ಪ್ ಮಾಡಿದ್ದು, ಹಾವಿಗೆ ಹಾಲೆರದಂತೆ ಆಗಿದೆ ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಹಾಗೇ ಪ್ರಶಾಂತ್ ಬಗ್ಗೆ ಮಾತನಾಡುವಷ್ಟು ನೈತಿಕತೆ ಇಲ್ಲ ಅಂತ ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಾನ್ಯಾ ವಿರುದ್ಧವಾಗಿಯೇ ಕಮೆಂಟ್‌ಗಳು ಬಂದಿವೆ.

  ಮದುವೆ ಮಾಡಿಸುವ ಯತ್ನದಲ್ಲಿ ಕಂಠಿ, ಮುರಿಯುವ ಯತ್ನದಲ್ಲಿ ರಾಜಿ: ಇಬ್ಬರಿಗೂ ಗೆಲುವು?ಮದುವೆ ಮಾಡಿಸುವ ಯತ್ನದಲ್ಲಿ ಕಂಠಿ, ಮುರಿಯುವ ಯತ್ನದಲ್ಲಿ ರಾಜಿ: ಇಬ್ಬರಿಗೂ ಗೆಲುವು?

  English summary
  Bigg Boss Kannada 9 October 22nd Episode About Prashant Sambargi Sanya And Anupama. Here is the details.
  Saturday, October 22, 2022, 20:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X