BBK9: ಅರ್ಜೆಂಟ್ ಅಂದ್ರು ಸಂಬರ್ಗಿಯನ್ನ ಬಿಡುತ್ತಿಲ್ಲ.. ಪ್ರಶಾಂತ್-ರೂಪೇಶ್ ಜಗಳ ನಿಲ್ತಿಲ್ಲ!

By ಎಸ್ ಸುಮಂತ್

ಬಿಗ್ ಬಾಸ್‌ನಲ್ಲಿ ಮನರಂಜನೆ ನೀಡುವುದು ಬರೀ ಕಾಮಿಡಿ ಮಾತ್ರವಲ್ಲ. ಕೆಲವೊಬ್ಬರ ಜಗಳ ಕೂಡ ನಗುವಿಗೆ ಕಾರಣವಾಗುತ್ತೆ. ಅಂಥದ್ದೊಂದು ಘಟನೆ ಈಗ ಬಿಗ್ ಬಾಸ್ ಮನೆಯಲ್ಲೂ ಅಂಥದ್ದೊಂದು ಘಟನೆ ನಡೆಯುತ್ತಿದೆ. ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ನಡುವೆ ಆಗಾಗ ಅಲ್ಲ, ಯಾವಾಗಲೂ ಜಗಳ ನಡೆಯುತ್ತಲೇ ಇದೆ. ಆದರೆ ಇವರ ಜಗಳವನ್ನು ಬಿಡಿಸುವುದಕ್ಕೆ ಸಾನ್ಯಾ ಯಾವಾಗಲೂ ಮುಂದೆ ಇರುತ್ತಾರೆ.

ಸಂಬರ್ಗಿಗೆ ಜೋರು ಜಗಳ ಮಾಡುವುದು ಗೊತ್ತು. ಅದರಂತೆ ಕೆಲವೊಂದು ವಿಚಾರವನ್ನು ತಮಾಷೆಯಾಗಿ ತೆಗೆದುಕೊಂಡು ಹೋಗುವುದು ಗೊತ್ತು. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದವರಿಗೆ ಅದು ತೀರಾ ಕಷ್ಟವೇನು ಆಗುವುದಿಲ್ಲ. ಅದರಂತೆ ಪ್ರಶಾಂತ್ ಸಂಬರ್ಗಿ ಕೂಡ ಕೆಲವೊಮ್ಮೆ ಎಲ್ಲೆಲ್ಲಿ ರೈಸ್ ಮಾಡಬೇಕೋ ಅಲ್ಲಲ್ಲಿ ಆಗಾಗ ರೈಸ್ ಆಗುತ್ತಾನೆ ಇರುತ್ತಾರೆ. ಇದೀಗ ತಮಾಷೆಯ ಜಗಳವೊಂದು ರಾಜಣ್ಣ ಹಾಗೂ ಸಂಬರ್ಗಿಯ ನಡುವೆ ನಡೆದಿದೆ.

ಸಂಬರ್ಗಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ರಾಜಣ್ಣ!

ಸಂಬರ್ಗಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ರಾಜಣ್ಣ!

ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ ಅವರಿಬ್ಬರನ್ನು ಅರ್ಥ ಮಾಡಿಕೊಳ್ಳುವುದು ಇದೆಯಲ್ಲ ಅದೊಂದು ರೀತಿಯ ತಪಸ್ಸು ಮಾಡಿದಂತೆಯೇ ಸರಿ. ಒಮ್ಮೆ ಒಂಥರ ಇದ್ದವರು ಇನ್ನೊಮ್ಮೆ ಇನ್ನೊಂದು ರೀತಿಗೆ ತಿರುಗಿ ಬಿಡುತ್ತಾರೆ. ಈಗ ರೂಪೇಶ್ ರಾಜಣ್ಣನ ಹಠಮಾರಿತನ ಸಂಬರ್ಗಿಗೆ ಪರ್ಸನಲ್ ಸಂಕಟ ತಂದು ಇಟ್ಟಿದೆ. ಪಾಪ ಸಂಬರ್ಗಿಗೆ ವಾಶ್ ರೂಮಿಗೆ ಹೋಗಬೇಕಾಗಿದೆ. ಆದನ್ನು ಕೈ ಬೆರಳ ಸನ್ನೆಯಲ್ಲಿಯೂ ತೋರಿಸುತ್ತಿದ್ದಾರೆ. ಆದರೆ ರೂಪೇಶ್ ರಾಜಣ್ಣ ಮಾತ್ರ ತನ್ನ ಹಠ ಬಿಡುತ್ತಿಲ್ಲ.

ಚಪ್ಪಲಿಗಾಗಿ ಲಾಕ್ ಮಾಡಿದ ರಾಜಣ್ಣ

ಚಪ್ಪಲಿಗಾಗಿ ಲಾಕ್ ಮಾಡಿದ ರಾಜಣ್ಣ

ಬೆಡ್ ರೂಮಿನಲ್ಲಿದ್ದ ಸಂಬರ್ಗಿಯನ್ನು ಅಲ್ಲಿಯೇ ಲಾಕ್ ಮಾಡಿದ್ದಾರೆ ರೂಪೇಶ್ ರಾಜಣ್ಣ. ಬಾಗಿಲಿಗೆ ಅಡ್ಡಲಾಗಿ ಕೂತು ಸಂಬರ್ಗಿಗೆ ಹೊರಗೆ ಹೋಗುವುದಕ್ಕೆ ಬಿಡುತ್ತಿಲ್ಲ. ಇದಕ್ಕೆ ಕಾರಣ ಹೇಳಿದ ರೂಪೇಶ್ ರಾಜಣ್ಣ, ನನ್ನ ಚಪ್ಪಲಿಯನ್ನು ಸಂಬರ್ಗಿ ಹಾಕಿಕೊಂಡು ಓಡಾಡುತ್ತಿದ್ದಾರೆ. ಓಡಾಡಲಿ ಬೇಡ ಎನ್ನುವುದಿಲ್ಲ. ಆದರೆ ಎಲ್ಲಿತ್ತೋ ಅಲ್ಲಿಯೇ ಚಪ್ಪಲಿಯನ್ನು ಬಿಡಬೇಕು. ಆದರೆ ಅದನ್ನು ಬಚ್ಚಿಟ್ಟಿದ್ದಾನೆ. ಅದಕ್ಕೆ ಚಪ್ಪಲಿಯನ್ನು ತಂದು ಬಿಡುವ ತನಕ ಅವನನ್ನು ಬಿಡುವುದಿಲ್ಲ ಎಂದು ರೂಪೇಶ್ ರಾಜಣ್ಣ ಹೇಳಿದಾಗ ಸಂಬರ್ಗಿ ಅದಕ್ಕೆ ಉತ್ತರ ಕೊಟ್ಟಿದ್ದು, "ನನ್ನ ಚಪ್ಪಲಿಯನ್ನು ಕದ್ದಿಟ್ಟಿದ್ದ ಅದಕ್ಕೆ" ಎಂದಿದ್ದಾರೆ.

ಸಾನ್ಯಾ ನ್ಯಾಯ ಕೊಡಿಸುತ್ತಾರಾ..?

ಸಾನ್ಯಾ ನ್ಯಾಯ ಕೊಡಿಸುತ್ತಾರಾ..?

ಪಾಪ ಆ ಕಡೆ ಸಂಬರ್ಗಿಗೆ ಟಾಯ್ಲಟ್‌ಗೆ ಅರ್ಜೆಂಟ್ ಆಗಿ ನಿಂತಲ್ಲಿಯೇ ಡ್ಯಾನ್ಸ್ ಮಾಡುತ್ತಿದ್ದಾರೆ. ಅದನ್ನು ಸಾನ್ಯಾ ಗಮನಿಸಿದ್ದು, ಮೊದಲು ಅವರನ್ನು ಹೊರಗೆ ಬಿಡಿ ಎಂದಿದ್ದಾರೆ. ಆದರೂ ಮಾತು ಕೇಳಿಲ್ಲ ರೂಪೇಶ್ ರಾಜಣ್ಣ. ಬಳಿಕ ಸಮಸ್ಯೆ ಏನು ಎಂದು ಸಾನ್ಯಾ ಕೇಳಿದಾಗ ರೂಪೇಶ್ ರಾಜಣ್ಣ ನೀನು ನ್ಯಾಯ ಕೊಡಿಸುತ್ತೀಯಾ ಎಂದು ಕೇಳಿದ್ದಾರೆ. ಅದಕ್ಕೆ ಸಾನ್ಯಾ ಚಿಕ್ಕ ವಿಚಾರವಾದರೆ ಕೊಡಿಸೋಣಾ ಎಂದಿದ್ದಾರೆ. ಅದಕ್ಕೆ ಸಂಬರ್ಗಿ ಆ 20 ವರ್ಷದ ಹುಡುಗಿಗೆ ಅರ್ಥ ಆಗುತ್ತೆ. ನಿನಗೆ ಅರ್ಥವಾಗುವುದಿಲ್ಲವಾ ಎಂದಿದ್ದಾರೆ.

ಮತ್ತೆ ಮತ್ತೆ ಅದೇ ಕಾಮಿಡಿ ನೋಡಲು ಬೋರ್

ಮತ್ತೆ ಮತ್ತೆ ಅದೇ ಕಾಮಿಡಿ ನೋಡಲು ಬೋರ್

ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ ಎಂಬ ಮಾತಿದೆ. ಅದರಂತೆ ಸಂಬರ್ಗಿ ಮತ್ತು ರಾಜಣ್ಣ ಇತ್ತೀಚೆಗಿನ ಕಾಮಿಡಿ ಒಂದೇ ರೀತಿಯಲ್ಲಿದ್ದು ಬೋರ್ ಹೊಡೆಸುತ್ತಿದೆ ಅಂತಿದ್ದಾರೆ ನೋಡಿಗರು. ಇಬ್ಬರು ಹಬ್ಬದ ದಿನ ಟಾಯ್ಲೆಟ್ ವಿಚಾರಕ್ಕೆ ಸಿಕ್ಕಾಪಟ್ಟೆ ಕಿತ್ತಾಡಿಕೊಂಡಿದ್ದರು. ಸಾನ್ಯಾ ನಡುವೆ ಕೂಡ ಜಗಳ ತಾರಕಕ್ಕೇರಿತ್ತು. ಆದರೆ ಇದೀಗ ಮತ್ತೆ ಮೂವರು ಒಂದಾಗಿದ್ದಾರೆ. ಅದೇ ರೀತಿಯ ಕಾಮಿಡಿ ಮಾಡಿಕೊಂಡು ಕೂತಿದ್ದಾರೆ. ಹೀಗಾಗಿ ಬೋರ್ ಹೊಡೆಸುತ್ತಿದೆ ಎಂಬ ಕಮೆಂಟ್‌ಗಳು ಕಾಣಿಸುತ್ತಿವೆ.

More from Filmibeat

English summary
Bigg Boss Kannada 9 October 27th Episode Written Update. Here is the details about Sambargi and Roopesh Rajanna slipper war.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X