BBK9: ಕಾವ್ಯಶ್ರೀ ನಗು ರಾಕೇಶ್‌ಗೆ ಕಿರಿಕಿರಿ.. ಅದಕ್ಕೆ ಕಾರಣ ಇದೇನೆ!

By ಎಸ್ ಸುಮಂತ್

ಬಿಗ್ ಬಾಸ್ ಮನೆಗೆ ಹೋದವರು ಅವರವರ ಕೆಲಸವನ್ನು ಅವರವರೇ ಮಾಡಿಕೊಳ್ಳಬೇಕಾಗುತ್ತದೆ. ಮನೆ ಕ್ಲೀನಿಂಗ್‌ನಿಂದ ಹಿಡಿದು, ಅಡುಗೆ ಮಾಡಿ ಬಡಿಸಿಕೊಂಡು ತಿನ್ನಬೇಕು. ಬಳಿಕ ಪಾತ್ರೆ ತೊಳೆಯಬೇಕು, ಕಸ ಗುಡಿಸಬೇಕು. ಅಷ್ಟೇ ಯಾಕೆ ಟಾಯ್ಲೆಟ್ ಕೂಡ ಕ್ಲೀನ್ ಮಾಡಬೇಕಾಗುತ್ತದೆ. ಆದರೆ ಈ ಕೆಲಸಗಳಿಗೆಲ್ಲಾ ಬಿಗ್ ಬಾಸ್ ಮನೆಗೆ ಹೋದವರೆಲ್ಲಾ ಮನಸ್ಸಾರೆ ಮಾಡುತ್ತಾರೆ ಎಂಬುದಿಲ್ಲ. ಎಷ್ಟೋ ಜನ ಅದರಿಂದ ಕಳ್ಳಾಟ ಆಡುವವರೆ ಇದ್ದಾರೆ.

ಪ್ರತಿ ಬಾರಿ ಬಿಗ್ ಬಾಸ್ ಬಂದಾಗಲೂ ಇಂತದ್ದೊಂದು ಪ್ರಸಂಗ ಬಂದೇ ಬರುತ್ತದೆ. ಸೋಮಾರಿಗಳು ಹುಟ್ಟಿಕೊಳ್ಳುತ್ತಾರೆ. ಕೆಲಸ ಮಾಡುವವರು ಮಾಡುತ್ತಲೇ ಇರುತ್ತಾರೆ. ನಾಮಿನೇಷನ್ ಪ್ರಕ್ರಿಯೆ ಶುರುವಾದಾಗ ಈ ಕೆಲಸ ಮಾಡದವರನ್ನು ಅದೊಂದಕ್ಕೆ ನಾಮಿನೇಟ್ ಮಾಡುತ್ತಾರೆ. ಆದರೂ ಮನೆ ಕೆಲಸದಲ್ಲಿ ಆಸಕ್ತಿ ತೋರುವುದಿಲ್ಲ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಇದೀಗ ಕಾವ್ಯಶ್ರೀಯ ವಿರುದ್ಧ ಅದೇ ರೀತಿಯ ದೂರು ಕೇಳಿ ಬರುತ್ತಿದೆ.

ಕಾವ್ಯಾ ನಕ್ಕಿದ್ದು ರಾಕೇಶ್‌ಗೆ ಕೋಪ ತರಿಸಿತಾ?

ಕಾವ್ಯಾ ನಕ್ಕಿದ್ದು ರಾಕೇಶ್‌ಗೆ ಕೋಪ ತರಿಸಿತಾ?

ತುಂಬಾ ತಾಳ್ಮೆ ಇದ್ದವರಲ್ಲೂ ಕೋಪ ಇರುತ್ತೆ. ಆದರೆ ಅದು ಬ್ಲಾಸ್ಟ್ ಆಗುವುದಕ್ಕೆ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಈಗ ರಾಕೇಶ್‌ಗೆ ಆಗಿದ್ದು ಅದೇ. ಕಾವ್ಯಶ್ರೀ ವರ್ತನೆಯನ್ನು ನೋಡುವ ತನಕ ನೋಡಿದ್ದಾರೆ. ಆದರೆ ಹೇಳಿದ ಮಾತನ್ನು ಕೇಳದೆ ಇದ್ದಾಗ ಕಾವ್ಯಶ್ರೀ ನಕ್ಕಿದ್ದಕ್ಕೂ ರಾಕೇಶ್ ಕೋಪ ತರಿಸಿದೆ. ಯಾವುದೋ ಒಂದು ಟಾಸ್ಕ್ ಅನ್ನು ಅನುಪಮಾ ಓದಿದಾಗ ಕಾವ್ಯಶ್ರೀ ನಕ್ಕಿದ್ದಾರೆ. ಸೀರಿಯಸ್ ಮ್ಯಾಟರ್ ಇರುವಾಗ ನಕ್ಕು ಇರಿಟೇಟ್ ಮಾಡಬೇಡ ಕಾವ್ಯಾ ಎಂದು ರಾಕೇಶ್ ತನ್ನ ಕೋಪವನ್ನು ಹೊರ ಹಾಕಿದ್ದಾರೆ.

ವಾದ-ಪ್ರತಿವಾದದಲ್ಲಿ ಗೆದ್ದಿದ್ದು ಯಾರು?

ವಾದ-ಪ್ರತಿವಾದದಲ್ಲಿ ಗೆದ್ದಿದ್ದು ಯಾರು?

ರಾಕೇಶ್‌ಗೆ ಓಟಿಟಿಯಲ್ಲೂ ಇದೇ ಸಮಸ್ಯೆ ಆಗಿತ್ತು. ಸೋನು ಒಳ್ಳೆ ಫ್ರೆಂಡ್ ಆಗಿದ್ದರು. ಆದರೆ ಕೆಲಸವನ್ನು ಹೇಳಿ ಹೇಳಿ ಮಾಡಿಸಬೇಕಿತ್ತು. ಈಗ ಟಿವಿ ಸೀಸನ್‌ನಲ್ಲಿ ಕಾವ್ಯಾ ಆ ಸ್ಥಾನ ತುಂಬಿದ್ದಾರೆ. ಆದರೆ ಇಲ್ಲಿಯೂ ಅದೇ ಸಮಸ್ಯೆ. ಎಷ್ಟೇ ಕರೆದರೂ ಕೆಲಸಕ್ಕೆ ಎಂದರೆ ಏನಾದರೊಂದು ನೆಪ ಹೇಳಿಕೊಂಡು ಸುಮ್ಮನೆ ಆಗಿ ಬಿಡುತ್ತಾರೆ ಕಾವ್ಯಾ. ಇದರಿಂದ ರಾಕೇಶ್ ಪಿತ್ತ ನೆತ್ತಿಗೇರಿದ್ದು, ಅದಕ್ಕೆ ಬ್ಲಾಸ್ಟ್ ಆಗಿದ್ದಾರೆ. ರಾಕೇಶ್ ಮಾತಿಗೆ ತಿರುಗೇಟು ನೀಡಿದ ಕಾವ್ಯಾ, "ನಿಂಗೆ ಇರಿಟೇಟ್ ಆಗುತ್ತೆ ಎಂದು ನಾನು ನಗಬಾರದಾ. ನಗುವುದು ನನ್ನ ಹಕ್ಕು. ಎಲ್ಲಿ ಸೀರಿಯಸ್ ಆಗಿರಬೇಕು. ಎಲ್ಲಿ ನಗಬೇಕು ಎಂಬುದನ್ನು ನಂಗೆ ನೀನ್ ಹೇಳಬೇಡ. ಏನು ಅಧಿಕಾರ ಇದೆ ನಿಂಗೆ" ಎಂದು ಪ್ರಶ್ನೆ ಮಾಡಿದ್ದಾರೆ.

ಕಾವ್ಯಶ್ರೀಗೆ ಕೆಲಸ ಮಾಡುವ ಮನಸ್ಸಿಲ್ಲ

ಕಾವ್ಯಶ್ರೀಗೆ ಕೆಲಸ ಮಾಡುವ ಮನಸ್ಸಿಲ್ಲ

ಕಾವ್ಯಾಶ್ರೀ ಪಕ್ಕಾ ಎಂಟರ್ಟೈನರ್. ಹಳ್ಳಿ ಭಾಷೆಯಲ್ಲಿ ಮಾಡುವ ಕಾಮಿಡಿಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಿ ಆ ಬಗ್ಗೆ ಹೊಗಳಿದ್ದಾರೆ ಕೂಡ. ಆದರೆ ಮನೆಕೆಲಸದ ವಿಚಾರಕ್ಕೆ ಬಂದರೆ ಕಾವ್ಯಶ್ರೀ ತುಂಬಾ ಹಿಂದೆ ಉಳಿದು ಬಿಡುತ್ತಾರೆ. ಇವತ್ತು ಮಾತ್ರವಲ್ಲ ಈ ಹಿಂದೆ ಕೂಡ ಇದೇ ರೀತಿ ಆಗಿತ್ತು. ಮನೆ ಕೆಲದ ಮಾಡು ಬಾ ಅಂದ್ರೆ ಕಾಲು ನೋವು- ಕೈ ನೋವು ಅಂತ ಕೂತಿದ್ದರು. ಈಗ ರಾಕೇಶ್ ಕರೆದಾಗಲೂ ಅದೇ ಹೇಳುತ್ತಿದ್ದಾರೆ. ರಾಕೇಶ್ ರೈಸ್ ಆಗಿದ್ದಕ್ಕೆ, ಅಲ್ಲಿ ಕೆಲಸ ಮಾಡಲು ಬರಲಿಲ್ಲ ಅಂದ್ರೆ ಇಲ್ಲಿ ನಗಬಾರದು ಅಂತ ಇದೆಯಾ ಎಂದಿದ್ದಾರೆ.

ಅಡುಗೆ ಮನೆಯಲ್ಲಿ ರಾಕೇಶ್ ಗೋಳಾಟ

ಅಡುಗೆ ಮನೆಯಲ್ಲಿ ರಾಕೇಶ್ ಗೋಳಾಟ

ರಾಕೇಶ್ ಮತ್ತು ಅನುಪಮಾ ಇಬ್ಬರು ಅಡುಗೆ ಮನೆಯನ್ನು ಕ್ಲೀನ್ ಮಾಡುತ್ತಿದ್ದರು. ಆಗ ಅಮೂಲ್ಯ ಅಲ್ಲಿಗೆ ಬಂದಿದ್ದಾರೆ. ರಾಕೇಶ್ ತಮಾಷೆಯಾಗಿಯೇ ಅಮೂಲ್ಯಾರನ್ನು ರೇಗಿಸಿದ್ದಾರೆ. ಇಲಲಿ ಕೆಲಸ ಮಾಡಿ ಮಾಡಿ ಸಾಕಾಗಿದೆ. ಎಂದು. ಅದಕ್ಕೆ ಅನುಪಮಾ ಕೂಡ ಮಾತು ಜೋಡಿಸಿದ್ದು, ಹೌದು ಈ ಮನೆಯಲ್ಲಿ ಹೆಚ್ಚು ಕೆಲಸ ಮಾಡುವುದು ನಾವಿಬ್ಬರೆ ಎಂದಿದ್ದಾರೆ. ಅದಕ್ಕೆ ಅಮೂಲ್ಯ ಆಯ್ತು ಬಿಡಿ ಇನ್ನು ಮುಂದೆ ಪಾತ್ರೆ ಕಡೆಗೆ ಮುಖ ಕೂಡ ಹಾಕಿ ಬರಬೇಡಿ ಎಂದಿದ್ದಾರೆ.

More from Filmibeat

English summary
Bigg Boss Kannada 9 October 28th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X