For Quick Alerts
  ALLOW NOTIFICATIONS  
  For Daily Alerts

  BBK9: ಪ್ರಶಾಂತ್‌ 'ಬೌಬೌ ಸ್ಟಾರ್'.. ಉಳಿದವರಿಗೆ ಯಾವೆಲ್ಲಾ ಬಿರುದು ಸಿಕ್ಕಿದೆ..?

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರೆ ಖಾಲಿಯಾಗುತ್ತಿದ್ದಾರೆ. ಎಲ್ಲೆಲ್ಲೂ ಜನರೇ ತುಂಬಿ ತುಳುಕುತ್ತಿದ್ದ ಮನೆ ಈಗ ಜನಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಕಾಮಿಡಿಗಿಂತ ಮನೆಯಲ್ಲಿ ಜಗಳವೇ ಹೆಚ್ಚಾಗಿದೆ. ಅದರಲ್ಲೂ ಸಂಬರ್ಗಿ ಮಾತಿನಲ್ಲಿ ಸ್ವಲ್ಪ ಮುಂದೆಯೇ ಸರಿ. ಅದರಲ್ಲೂ ರೂಪೇಶ್ ರಾಜಣ್ಣ ಹಾಗೂ ಸಂಬರ್ಗಿ ಮಾತಿಗೆ ನಿಂತು ಬಿಟ್ಟರು ಎಂದರೆ ಅಲ್ಲಿ ಯುದ್ಧವೇ ಆಗಿ ಹೋಗುತ್ತದೆ.

  ಇಂದು (ಅಕ್ಟೋಬರ್ 30) ಸೂಪರ್ ಸಂಡೇ ವಿತ್ ಸುದೀಪ ಜೊತೆ ಕಾರ್ಯಕ್ರಮ ನಡೆದಿದೆ. ಇದರಲ್ಲಿ ಸುದೀಪ್ ಹಲವು ಸ್ವಾರಸ್ಯಕರ ವಿಚಾರಗಳನ್ನು ಚರ್ಚಿಸಿದ್ದಾರೆ. ಮನೆಯ ಸದಸ್ಯರ ಜೊತೆಗೆ ಒಂದಷ್ಟು ವಿಚಾರಗಳನ್ನು ಚರ್ಚಿಸಿದ್ದಾರೆ. ಇಡೀ ವಾರ ನಡೆದ ಘಟನೆಯನ್ನು ನೆನಪಿಸಿ ನಗು ತರಿಸಿದ್ದಾರೆ.

  ಒಬ್ಬೊಬ್ಬರಿಗೆ ಒಂದೊಂದು ಸ್ಟಾರ್ ಗಿರಿ

  ಒಬ್ಬೊಬ್ಬರಿಗೆ ಒಂದೊಂದು ಸ್ಟಾರ್ ಗಿರಿ

  ಬಿಗ್ ಬಾಸ್ ಮನೆಯೊಳಗೆ ಎಷ್ಟು ದಿನ ಇರಬೇಕಾಗುತ್ತದೋ ಅಷ್ಟು ದಿನವೂ ಮನೆಯೊಳಗೆ ಓಡಾಡಬೇಕು, ಮನೆ ಮಂದಿಯ ಜೊತೆಗೆ ಮಾತನಾಡಬೇಕು. ಆಗ ಒಬ್ಬರಿಗೊಬ್ಬರು ಏನು? ಅವರ ಬುದ್ಧಿ ಏನು? ಎಂಬುದು ಅರ್ಥವಾಗುತ್ತದೆ. ಆ ಮೂಲಕ ಅವರನ್ನು ತಮ್ಮ ಮನದೊಳಗೆ ಯಾವ ಸ್ಥಾನ ಕೊಡಬೇಕೋ ಅದನ್ನು ಕೊಡುತ್ತಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಸ್ಟಾರ್‌ಗಳನ್ನು ಕೊಡುವ ವಿಚಾರಕ್ಕೂ ಅದೇ ಆಗಿದ್ದು. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸ್ಟಾರ್ ಪಟ್ಟ ಕೊಟ್ಟಿದ್ದಾರೆ.

  ಪ್ರಶಾಂತ್‌ಗೆ ಸಿಕ್ತು ಬೌಬೌ ಸ್ಟಾರ್

  ಪ್ರಶಾಂತ್‌ಗೆ ಸಿಕ್ತು ಬೌಬೌ ಸ್ಟಾರ್

  ಮನೆ ಮಂದಿಯೆಲ್ಲಾ ಕೂರಿಸಿಕೊಂಡು ವಾರದ ಕತೆಯಲ್ಲಿ ಒಂದಷ್ಟು ಮಜಭೂತವಾದ ವಿಚಾರಧಾರೆಗಳನ್ನು ತೆರೆಮೇಲೆ ತಂದು, ನೋಡುಗರಿಗೆ ಖುಷಿ ಕೊಟ್ಟಿದೆ. ಈ ವೇಳೆ ಕಿಚ್ಚ ಸುದೀಪ್ ಯಾರಿಗೆ ಯಾವ ಸ್ಟಾರ್ ಕೊಡುವುದಕ್ಕೆ ಬಯಸುತ್ತೀರಾ ಎಂದು ಕೇಳಿದಾಗ, ಅರುಣ್ ಸಾಗರ್ ಮೊದಲು ಉತ್ತರ ಕೊಟ್ಟಿದ್ದಾರೆ. ಪ್ರಶಾಂತ್ ಸಂಬರ್ಗಿಗೆ ಬೌಬೌ ಪಟ್ಟ ಕೊಟ್ಟಿದ್ದರೆ, ಕಾವ್ಯಶ್ರೀ ಗೌಡಗೆ ಮಖದ್‌ ಮೇಲೆ ಹೊಡೆಯೋ ಸ್ಟಾರ್ ಎಂದು ಸಾನ್ಯಾ ಹೇಳಿದ ಕೂಡಲೇ ಇದು ಅನುಭವದ ಮಾತು ಎಂದು ಸುದೀಪ್ ಹೇಳಿದ್ದಾರೆ. ಹೀಗೆ ಹಲವು ಸ್ಟಾರ್ ಪಟ್ಟಗಳನ್ನು ಹಲವರಿಗೆ ನೀಡಲಾಗಿದೆ.

  ಮನೆ ಮಂದಿಗೆ ಚರ್ಚಿಸಿ ಎಂದು ಹೇಳುವುದಕ್ಕೆ ಭಯ..!

  ಮನೆ ಮಂದಿಗೆ ಚರ್ಚಿಸಿ ಎಂದು ಹೇಳುವುದಕ್ಕೆ ಭಯ..!

  ಬಿಗ್ ಬಾಸ್ ಪ್ರತಿಯೊಂದು ಟಾಸ್ಕ್ ಗೂ ಒಂದು ಲೆಟರ್ ಕೊಡುತ್ತೆ. ಅದರಲ್ಲಿ ನಿಯಮಗಳಿರುತ್ತವೆ. ಅದರ ಪ್ರಕಾರವೇ ಸದಸ್ಯರು ಟಾಸ್ಕ್ ಆಡಬೇಕಾಗುತ್ತದೆ. ಪತ್ರದಲ್ಲಿ ಮನೆ ಮಂದಿಯೆಲ್ಲಾ ಚರ್ಚಿಸಿ ಎಂದು ಕೂಡ ಬರೆದಿರುತ್ತದೆ. ಆದರೆ ಅದ್ಯಾಕೋ ಇತ್ತೀಚೆಗೆ ಚರ್ಚಿಸಿ ಅಂತ ಹೇಳುವುದಕ್ಕೂ ಭಯವಾಗ್ತಿದೆಯಂತೆ. ಈ ಬಗ್ಗೆ ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮನೆಯವರಿಗೆ ಈ ಮಾತನ್ನು ಕೇಳಿದ್ದಾರೆ. ಆಗ ರೂಪೇಶ್, ಚರ್ಚಿಸಿ ಒಮ್ಮತದ ನಿರ್ಧಾರ ಅಂತ ಬರೆದಿರುತ್ತದೆ. ಆದರೆ ಮತ್ತೊಂದು ಲೆಟರ್ ಬರುತ್ತೆ ನಿಲ್ಲಿಸಿ ಅಂತ. ಹೀಗೆ ಚರ್ಚಿಸಿ ವಿಚಾರವನ್ನು ಹೇಳಿ ನಕ್ಕು ನಕ್ಕು ಸುಸ್ತಾಗಿದ್ದಾರೆ.

  ಯಾರಿಗೂ ಜಗಳ ಮಾಡೋಕೆ ಬರುವುದಿಲ್ಲವಂತೆ

  ಯಾರಿಗೂ ಜಗಳ ಮಾಡೋಕೆ ಬರುವುದಿಲ್ಲವಂತೆ

  ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಮಾತು ಅಂದ್ರೆ ಎಲ್ಲರಿಗೂ ಕಿರಿಕಿರಿ ಎನಿಸುತ್ತದೆ. ಇನ್ನು ಜಗಳಕ್ಕೆ ನಿಂತರೆ ಮನೆ ಮಂದಿಯೆಲ್ಲಾ ಸೈಲೆಂಟ್ ಆಗಿ ಬಿಡುತ್ತಾರೆ. ಆದರೆ ಇಂದು ಸುದೀಪ್ ಮನೆಯಲ್ಲಿ ಜಗಳವೇ ಆಗುವುದಿಲ್ಲ ಅಂತ ಕೇಳಿದ ಪ್ರಶ್ನೆಗೆ ಮೊದಲು ಎಸ್ ಅಂತ ಬೋರ್ಡ್ ತೋರಿಸಿದ್ದಾರೆ. ಯಾಕೆ ಎಂದು ಕೇಳಿದರೆ ಈ ಮನೆಯಲ್ಲಿ ಜಗಳ ಮಾಡುವುದಕ್ಕೆ ಯಾರು ಇಲ್ಲ ಸರ್ ಅಂತ ಉತ್ತರ ಕೊಟ್ಟಿದ್ದಾರೆ. ಈ ಮಾತು ಕೇಳಿ ಮನೆ ಮಂದಿಯೆಲ್ಲಾ ಶಾಕ್ ಆಗಿದ್ದಾರೆ. ಇನ್ನು ಪ್ರಶಾಂತ್ ಸಂಬರ್ಗಿ ಜಗಳ ಅಂತ ಸುದೀಪ್ ಪ್ರಶ್ನೆ ಕಂಪ್ಲೀಟ್ ಮಾಡುವುದಕ್ಕೂ ಮುನ್ನವೇ ರೂಪೇಶ್ ರಾಜಣ್ಣ ಎಸ್ ಅಂತ ಬೋರ್ಡ್ ತೋರಿಸಿದ್ದು, ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದೆ.

  English summary
  Bigg Boss Kannada 9 October 30th Episode On Contestants Nicknames. Here is the details about Super Sunday with Kichcha Sudeepa.
  Sunday, October 30, 2022, 22:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X