BBK9: ಆರ್ಯವರ್ಧನ್ ಗುರೂಜಿಯನ್ನು ಅಪ್ಪಾಜಿ ಎಂದಿದ್ದೇ ರೂಪೇಶ್ ಶೆಟ್ಟಿಗೆ ಮುಳುವಾಯ್ತು?

By ಎಸ್ ಸುಮಂತ್

ಓಟಿಟಿ ಸೀಸನ್‌ನಲ್ಲಿ ಒಂದು ಹೆಜ್ಜೆ ಮುಂದಿರುವುದಕ್ಕೆ, ಟಿವಿ ಸೀಸನ್ ತನಕ ಬರುವುದಕ್ಕೆ ಆರ್ಯವರ್ಧನ್ ಅವರ ಮುಗ್ಧತೆಯೂ ಒಂದು ಲೆಕ್ಕದಲ್ಲಿ ಕಾರಣವಾಯಿತು. ಅವರನ್ನು ನೋಡಿದವರು, ಜ್ಯೋತಿಷ್ಯ ಹೇಳುವ ಗುರೂಜಿ ಇವರೇನಾ ಎನ್ನುವ ಮಟ್ಟಕ್ಕೆ ಅವರು ತಮ್ಮ ಮುಗ್ಧತೆಯನ್ನು ಬಳಕೆ ಮಾಡಿಕೊಂಡಿದ್ದರು. ಓಟಿಟಿ ಸೀಸನ್ ಕೊನೆ ಕೊನೆಯಲ್ಲಿ ಆ ಮುಗ್ಧತೆ ಹಿಂದಿನ ಮುಖ ಸ್ವಲ್ಪ ಸ್ವಲ್ಪವೇ ಬಯಲಾಗಿತ್ತು.

ಓಟಿಟಿ ಸೀಸನ್‌ನಲ್ಲಿ ರೂಪೇಶ್ ಶೆಟ್ಟಿಯನ್ನು ತನ್ನ ಮಗ ಎಂದೇ ದತ್ತು ಸ್ವೀಕಾರ ಮಾಡಿದ್ದರು. ಇನ್ನು ರೂಪೇಶ್ ಶೆಟ್ಟಿ ಕೂಡ ಅಪ್ಪಾಜಿ ಎಂದೇ ಕರೆಯುತ್ತಿದ್ದರು. ಈಗಲೂ ಕೂಡ ಹಾಗೆಯೇ ಕರೆಯುತ್ತಾರೆ. ಆದರೆ ಕೆಲವೊಮ್ಮೆ ಆರ್ಯವರ್ಧನ್ ಅವರ ರಿಯಾಲಿಟಿ ರೂಪೇಶ್ ಅವರ ಮುಂದೆಯೇ ಬಯಲಾಗುತ್ತಿರುತ್ತದೆ.

ಬೇರೆಯವರ ಬಗ್ಗೆ ಆರ್ಯವರ್ಧನ್ ಡೋಂಟ್ ಕೇರ್

ಬೇರೆಯವರ ಬಗ್ಗೆ ಆರ್ಯವರ್ಧನ್ ಡೋಂಟ್ ಕೇರ್

ಬಿಗ್ ಬಾಸ್ ಮನೆಯಲ್ಲಿ ಇರುವ ಅಷ್ಟು ಮಂದಿಯ ನಡುವೆ ಆಗಾಗ ಜಗಳ, ಮನಸ್ತಾಪ ನಡೆಯುತ್ತಾ ಇರುತ್ತದೆ. ಅದು ಹೊರಗಡೆ ಕುಳಿತು ನೋಡುವವರಿಗೆ ಏನಪ್ಪ ಹೀಗೆ ಕಿತ್ತಾಡುತ್ತಾರೆ ಎನಿಸದೇ ಇರುವುದಿಲ್ಲ. ಅದರಲ್ಲೂ ಅವರವರ ಬೆಂಬಲಿಗರು ಅವರನ್ನ ಬೆಂಬಲಕ್ಕೆ ನಿಲ್ಲುವ ವಿಚಾರಕ್ಕೂ ಇದು ಮ್ಯಾಟರ್ ಆಗುತ್ತೆ. ಹೀಗಾಗಿಯೇ ಆರ್ಯವರ್ಧನ್ ಗುರೂಜಿ ರೂಪೇಶ್ ಬಳಿ ಕಿತ್ತಾಡಿದ್ದಾರೆ. ಆದರೆ ಬೇರೆಯವರ ಬಗ್ಗೆ ಏನನ್ನು ಯೋಚಿಸದೆ ಗುರೂಜಿ ಮಾತ್ರ ಹೇಗೆ ಬೇಕೋ ಹಾಗೇ ಮಾತನಾಡುತ್ತಾರೆ.

ಆಡಿಯನ್ಸ್ ಚಿಂತೆಯಲ್ಲಿದ್ದಾರೆ ಆರ್ಯವರ್ಧನ್

ಆಡಿಯನ್ಸ್ ಚಿಂತೆಯಲ್ಲಿದ್ದಾರೆ ಆರ್ಯವರ್ಧನ್

ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಕಾವ್ಯಾ, ಆರ್ಯವರ್ಧನ್ ಗುರೂಜಿ ಡೈನಿಂಗ್ ಟೇಬಲ್ ಮೇಲೆ ಕುಳಿತಿದ್ದರು. ಈ ವೇಳೆ ಗುರೂಜಿ, ರೂಪೇಶ್ ಶೆಟ್ಟಿ ಬಳಿ ಒಂದಷ್ಟು ಕ್ಲಾರಿಟಿ ನೀಡಿದರು. ರಕ್ತಕೊಟ್ಟ ವಿಚಾರಕ್ಕೆ. ಕೈ ಬೆರಳನ್ನು ಕುಯ್ದುಕೊಂಡು ಬಿಟ್ಟಿದ್ದಾರೆ. ಅದಕ್ಕೆ ಒಂದಷ್ಟು ವಿವರಣೆ ನೀಡಿದಾಗ, ರೂಪೇಶ್ ಶೆಟ್ಟಿ ಈಗ ಏನು ನಾವೂ ಆ ಚಾಲೆಂಜ್ ಅನ್ನು ವಾಪಾಸ್ ತೆಗೆದುಕೊಳ್ಳಬೇಕಾ ಎಂದಿದ್ದಕ್ಕೆ "ಹೌದು, ಇದೆಲ್ಲಾ ಆಡಿಯನ್ಸ್ ನೋಡುತ್ತಾ ಇರುತ್ತಾರೆ. ನೀನು ಹೇಳೋ ರೀತಿ ಹೇಗಿರುತ್ತೆ ಎಂದರೆ ನನ್ನ ಫಾಲೋವರ್ಸ್‌ ಸ್ಲೋ ಆಗಿದ್ದಾರೆ. ಅದಕ್ಕೆ ಈ ರೀತಿ ಅಂದುಕೊಂಡು ಬಿಡುತ್ತಾರೆ" ಎಂದಿದ್ದಾರೆ.

ಆರ್ಯವರ್ಧನ್ ಮುಗ್ಧರಲ್ಲ ಬುದ್ಧಿವಂತರು

ಆರ್ಯವರ್ಧನ್ ಮುಗ್ಧರಲ್ಲ ಬುದ್ಧಿವಂತರು

ಹೀಗೆ ಮಾತನಾಡುವಾಗ ಆರ್ಯವರ್ಧನ್ ಮುಖದಲ್ಲಿ ಸೀರಿಯಸ್ ನೆಸ್ ಇತ್ತು. ಆದ್ರೆ ರೂಪೇಶ್ ಶೆಟ್ಟಿ ಒಂದು ಮಾತು ಹೇಳಿದರು ನೋಡಿ "ಹಲೋ ಅಪ್ಪಾಜಿ ನಿಮಗೆ ಇಷ್ಟು ಅಂದಿದ್ದಕ್ಕೆ ನಿಮಗೆ ಫಾಲೋವರ್ಸ್ ತನಕ ತಲೆ ಓಡಿದೆ. ನಿನ್ನೆ ಬಾಯಿಗೆ ಬಂದಂತೆ ಮಾತನಾಡಿದ್ರಿ. ನನ್ನ ಫಾಲೋವರ್ಸ್ ನೋಡಿರುತ್ತಾರೆ" ಎಂದು ರೂಪೇಶ್ ಶೆಟ್ಟಿ ಹೇಳಿದ ಕೂಡಲೇ ಗುರೂಜಿ ನಕ್ಕಿದ್ದಾರೆ. ಈಗ ನಗಬೇಡಿ. ಆಗ್ಲಿಂದ ನಿಮ್ಮ ಫೇಸ್‌ನಲ್ಲಿ ಸೀರಿಯಸ್ ನೆಸ್ ಇತ್ತು ಎಂದಿದ್ದಾರೆ.

ಆರ್ಯವರ್ಧನ್ ಅಪ್ಪಾಜಿ ಆಗಿದ್ದೆ ತಪ್ಪಾ?

ಆರ್ಯವರ್ಧನ್ ಅಪ್ಪಾಜಿ ಆಗಿದ್ದೆ ತಪ್ಪಾ?

ಬಿಗ್ ಬಾಸ್ ಮನೆಯಲ್ಲಿ ಕೆಲವೊಂದು ಸಂಬಂಧಗಳೇ ಒಮ್ಮೊಮ್ಮೆ ನಮ್ಮ ಗೆಲುವಿಗೆ ಸಮಸ್ಯೆಯಾಗಿ ಬಿಡುತ್ತದೆ. ಅದರಲ್ಲೂ ರೂಪೇಶ್ ಶೆಟ್ಟಿಗೆ ಇದು ಸಮಸ್ಯೆಯಾಗಿ ಕಾಡುತ್ತಿದೆ. ಈ ಹಿಂದೆ ಸಾನ್ಯಾಳ ಫ್ರೆಂಡ್‌ಶಿಫ್‌ನಿಂದಾನೂ ರೂಪೇಶ್‌ಗೆ ನೆಗೆಟಿವ್ ಕಮೆಂಟ್ ಹೆಚ್ಚಾಗಿ ಕಾಡಿತ್ತು. ಈಗ ಆರ್ಯವರ್ಧನ್ ಗುರೂಜಿಯನ್ನು ಅಪ್ಪಾಜಿ ಎನ್ನುತ್ತಿರುವುದು ಅಂಥದ್ದೇ ಸೋಲಿಗೆ ಕಾರಣವಾಗಿದೆ. ಅನುಪಮಾ, ರೂಪೇಶ್ ಶೆಟ್ಟಿಯನ್ನು ನಾಮಿನೇಟ್ ಮಾಡುವುದಕ್ಕೆ ಆರ್ಯವರ್ಧನ್ ಅವರ ಕಾರಣವನ್ನೇ ನೀಡಿದ್ದಾರೆ. ಇದಕ್ಕೆ ಸಾನ್ಯಾ, ಇನ್ನು ಮೇಲೆ ಅಪ್ಪಾಜಿ ಎಂದು ಬಳಸಬೇಡ ಎಂದು ಸಲಹೆ ನೀಡಿದ್ದಾರೆ.

More from Filmibeat

English summary
Bigg Boss Kannada 9 October 31st Episode About Aryavardhan And Roopesh Shetty. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X