For Quick Alerts
  ALLOW NOTIFICATIONS  
  For Daily Alerts

  BBK9: ಊಟಕ್ಕಾಗಿ ಸ್ಪರ್ಧಿಗಳ ಪರದಾಟ: ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಮಾಡಿದ್ದೇನು?

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ಗೊತ್ತಿದ್ದು ತಪ್ಪು ಮಾಡಿದರೆ ಶಿಕ್ಷೆ ಸಿಗುವುದು ಖಚಿತ. ಸಾಕಷ್ಟು ಬಾರಿ ಟಾಸ್ಕ್ ಕೊಡುವುದಕ್ಕೂ ಮುನ್ನ ಬಿಗ್ ಬಾಸ್ ನಿಯಮಗಳನ್ನು ನೀಡಿರುತ್ತೆ. ಆ ನಿಯಮಗಳನ್ನು ಎಲ್ಲರೂ ಗಮನದಲ್ಲಿಟ್ಟುಕೊಂಡು ನಡೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಯಮದಲ್ಲಿರುವುದನ್ನು ಮೀರಿದರೆ ಸಿಗುವ ಸೌಲಭ್ಯದಲ್ಲಿ ಕಡಿತ ಮಾಡಲಾಗುತ್ತದೆ.

  ಇದೀಗ ಬಿಗ್ ಬಾಸ್ ಮನೆಯಲ್ಲಿ ನಿಯಮ ಮೀರಿದ್ದರಿಂದ ದೊಡ್ಡ ಶಿಕ್ಷೆಯೊಂದು ಸಿಕ್ಕಿದೆ. ಇದನ್ನು ಕಂಡು ಮನೆಯವರೆಲ್ಲ ಗೊಳೋ ಎನ್ನುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಬ್ಬರು ತಪ್ಪು ಮಾಡಿದರೆ ಒಬ್ಬರಿಗೆ ಮಾತ್ರ ಶಿಕ್ಷೆ ಕೊಡುವುದಿಲ್ಲ. ಎಲ್ಲರಿಗೂ ಸೇರಿಯೇ ಶಿಕ್ಷೆ ವಿಧಿಸಲಾಗುತ್ತದೆ. ಈ ಬಾರಿಯೂ ಆಗಿರುವುದು ಅದೇ.

  BBK9: ಸುದೀಪ್ ರಿಪೇರಿ ಮಾಡಿದ್ರೂ, ರಾಜಣ್ಣನ ದೂರವಿಟ್ಟ ಸದಸ್ಯರು!BBK9: ಸುದೀಪ್ ರಿಪೇರಿ ಮಾಡಿದ್ರೂ, ರಾಜಣ್ಣನ ದೂರವಿಟ್ಟ ಸದಸ್ಯರು!

   ಮೈಕೈ ನೋವಿನ ಜೊತೆಗೆ ದೊಡ್ಡ ಶಿಕ್ಷೆ..!

  ಮೈಕೈ ನೋವಿನ ಜೊತೆಗೆ ದೊಡ್ಡ ಶಿಕ್ಷೆ..!

  ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಟಾಯ್ ಫ್ಯಾಕ್ಟಿ ಟಾಸ್ಕ್ ನೀಡಲಾಗಿತ್ತು. ಎರಡು ಟೀಂ ಮಾಡಿ ಆ ಟೀಂನಿಂದ ಇಂತಿಷ್ಟು ಟಾಯ್ಸ್ ತಯಾರಿಸುವ ಟಾರ್ಗೆಟ್ ನೀಡಲಾಗಿತ್ತು. ಆದ್ರೆ ಈ ಆಟದ ನಡುವೆ ಬರೀ ಟಾಯ್ಸ್ ಮಾಡುವುದಷ್ಟೆ ಅಲ್ಲ, ಮನೆಯ ಸದಸ್ಯರಿಗೆ ಸಂಪೂರ್ಣವಾಗಿ ಮೈಕೈ ನೋವಾಗಿತ್ತು. ಬರೀ ಮೈಕೈ ನೋವಷ್ಟೆ ಅಲ್ಲ. ಕೆಲವೊಂದು ಕಡೆ ಗಾಯಗಳನ್ನು ಮಾಡಿಕೊಂಡಿದ್ದಾರೆ. ದೀಪಿಕಾ ದಾಸ್‌ಗೆ ಒಂದು ಕೈ ಫ್ರಾಕ್ಚರ್ ಆಗಿದೆ. ಅರುಣ್ ಸಾಗರ್‌ಗೆ ಕೂಡ ಒಂದು ಕೈಗೆ ಏಟು ಬಿದ್ದಿದೆ. ಇದರ ನಡುವೆ ಉಪವಾಸದ ಶಿಕ್ಷೆ ಸಿಕ್ಕಿದೆ.

   ಬಿಗ್ ಬಾಸ್ ಮನೆಯಲ್ಲೂ ಬೆಂಕಿ ಇಲ್ಲ

  ಬಿಗ್ ಬಾಸ್ ಮನೆಯಲ್ಲೂ ಬೆಂಕಿ ಇಲ್ಲ

  ಮೈಕೈ ನೋವಾಗುವಂತ ಆಟವಾಡಿ ಮನೆಮಂದಿಯೆಲ್ಲಾ ಸುಸ್ತಾಗಿದ್ದಾರೆ. ಹೊಟ್ಟೆ ತುಂಬಾ ಊಟ ಮಾಡಿ, ಕಣ್ಣು ತುಂಬಾ ನಿದ್ದೆ ಮಾಡಬೇಕೆಂಬುದು ಮನೆಯವರ ಆಸೆಯಾಗಿತ್ತು. ಆದರೆ ಅದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ಎಷ್ಟೇ ಗ್ಯಾಸ್ ಆನ್ ಮಾಡಿದರು ಆನ್ ಆಗುತ್ತಿಲ್ಲ, ಬೆಂಕಿ ಹೊತ್ತಿಕೊಳ್ಳುತ್ತಿಲ್ಲ. ಇದು ಎಲ್ಲರನ್ನೂ ನಿರಾಸೆ ಮಾಡಿದೆ. ಕಾವ್ಯಶ್ರೀ ಅಂತು ನಾನು ಬಿಗ್ ಬಾಸ್ ಮನೆಯಿಂದ ಹೊರಟು ಹೋಗುತ್ತೇನೆ ಎಂದಿದ್ದಾಳೆ. ಅರುಣ್ ಸಾಗರ್ ಸಮಾಧಾನ ಮಾಡಿದ್ದಾರೆ.

   ರೂಪೇಶ್ ಶೆಟ್ಟಿಯ ಆಮ್ಲೇಟ್‌ನಿಂದ ಊಟ ಕಟ್

  ರೂಪೇಶ್ ಶೆಟ್ಟಿಯ ಆಮ್ಲೇಟ್‌ನಿಂದ ಊಟ ಕಟ್

  ಟಾಯ್ಸ್ ಟಾಸ್ಕ್ ಆಡುವಾಗ ಆಟದಲ್ಲಿ ಇರುವವರು ಅಡುಗೆ ಮನೆಗೆ ಹೋಗುವ ಆಗಿರಲಿಲ್ಲ. ಆದರೆ ರೂಪೇಶ್ ಶೆಟ್ಟಿ ಆ ನಿಯಮವನ್ನು‌ ಮೀರಿದ್ದಾರೆ. ಅಡುಗೆ ಮನೆಗೆ ಹೋಗಿ, ಆರಾಮವಾಗಿ ಆಮ್ಲೇಟ್ ಮಾಡಿಕೊಂಡು ತಿಂದಿದ್ದಾರೆ. ತಿನ್ನುವುದಲ್ಲದೆ ಸ್ನೇಹಿತರಿಗೂ ಹಂಚಿಕೆ ಮಾಡಿದ್ದಾರೆ. ಇದರಿಂದ ಬಿಗ್ ಬಾಸ್ ಎಲ್ಲರಿಗೂ ಶಿಕ್ಷೆ ನೀಡಿದೆ. ಅಡುಗೆ ಮಾಡಿಕೊಳ್ಳುವುದಕ್ಕೆ ಗ್ಯಾಸ್ ಅನ್ನೇ ಕೊಡದೆ ಸತಾಯಿಸಿದೆ.

   ರೂಪೇಶ್ ಶೆಟ್ಟಿ, ರಾಜಣ್ಣನಿಂದ ಬಸ್ಕಿ

  ರೂಪೇಶ್ ಶೆಟ್ಟಿ, ರಾಜಣ್ಣನಿಂದ ಬಸ್ಕಿ

  ಬಿಗ್ ಬಾಸ್ ಗ್ಯಾಸ್ ಆಫ್ ಮಾಡಿ ಎಲ್ಲರಿಗೂ ಶಾಕ್ ಕೊಟ್ಟಿದೆ. ಹಸಿವು ಒಂದು ಕಡೆ.. ನೋವು ಒಂದು ಕಡೆ.. ಎಲ್ಲರೂ ಬಿಗ್ ಬಾಸ್ ಬಳಿ ಮನವಿ ಮಾಡಿದ್ದಾರೆ. ರೂಪೇಶ್ ಶೆಟ್ಟಿ, ನನ್ನಿಂದ ತಪ್ಪಾಗಿದೆ. ಕಾಲು ನೋವಿದೆ. ಆದರೂ ಹತ್ತು ಬಸ್ಕಿ ಹೊಡೆಯುತ್ತೇನೆ ಎಂದು ಹತ್ತು ಬಸ್ಕಿ ಹೊಡೆದಿದ್ದಾರೆ. ಅಲ್ಲಿಯೇ ರಾಜಣ್ಣ ಕೂಡ ಐದು ಬಸ್ಕಿ ಹೊಡೆದಿದ್ದಾರೆ. ಬಳಿಕ ಅಡುಗೆ ಮನೆಗೆ ಹೋಗಿ ಗ್ಯಾಸ್ ಹಚ್ಚಲು ಮತ್ತೆ ಯತ್ನಿಸಿದ್ದಾರೆ ರೂಪೇಶ್ ಶೆಟ್ಟಿ. ಆಗಲು ಹೊತ್ತಿಕೊಂಡಿಲ್ಲ. ಬಳಿಕ ಮನೆಯಲ್ಲಿದ್ದ ತರಕಾರಿಯನ್ನೆಲ್ಲಾ ಬಳಸಿ Sorry Biggboss ಎಂದು ಬರೆದಿದ್ದಾರೆ. ಮತ್ತೆ ಟ್ರೈ ಮಾಡಿದರೂ ಗ್ಯಾಸ್ ಆನ್ ಆಗಿಲ್ಲ.

  English summary
  Bigg Boss Kannada 9 Roopesh Shetty And Roopesh Rajanna Apology to Get Food. Here is the details.
  Friday, November 18, 2022, 12:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X