Bigg Boss Kannada 9: ರಾಕೇಶ್‌ಗಿಂತ ರೂಪೇಶ್ ಶೆಟ್ಟಿನೇ ಬೆಟರ್: ಕಾವ್ಯಶ್ರೀ ಶಾಕಿಂಗ್ ಹೇಳಿಕೆ!

By ಎಸ್ ಸುಮಂತ್

ಬಿಗ್ ಬಾಸ್ ಟಿವಿ ಶೋ ಶುರುವಾಗಿ ಒಂದು ವಾರವಾಗುತ್ತಾ ಬರುತ್ತಿದೆ. ಆದರೆ ಅದ್ಯಾಕೋ ಬಿಗ್ ಬಾಸ್‌ಗೆ ಕಂಟೆಸ್ಟೆಂಟ್‌ಗಳಿಗೆ ಕಟ್ಟಿರುವ ಪಟ್ಟಿಯನ್ನು ಕಟ್ಟುವುದಕ್ಕೆ ಮನಸ್ಸೆ ಆಗುತ್ತಿಲ್ಲ ಎನಿಸುತ್ತಿದೆ. ಒಂದು ರೀತಿಯಲ್ಲಿ ಪಟ್ಟಿ ಇನ್ನು ಇರುವುದು ಉತ್ತಮವೇ ಸರಿ. ಯಾಕೆಂದರೆ ಮೊದ ಮೊದಲಿಗೆ ಒಂದು ಟಾಸ್ಕ್ ಎಂದು ಪಟ್ಟಿಕಟ್ಟಿಕೊಂಡವರು, ಇದೀಗ ತಮ್ಮ ಜೊತೆಯಲ್ಲಿರುವವರನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಅದಕ್ಕೆ ಉದಾಹರಣೆ ಕಾವ್ಯಶ್ರೀ.

ಎಲ್ಲಿಯೇ ಹೋದರೂ, ಎಲ್ಲಿಯೇ ಬಂದರೂ ಪಟ್ಟಿ ಕಟ್ಟಿಕೊಂಡಿರುವವರು ಜೊತೆಯಾಗಿಯೇ ಓಡಾಡಬೇಕಿದೆ. ಕೆಲವರು ಛೇ ಇವರನ್ನಾ ಯಾಕಪ್ಪ ಜೊತೆ ಮಾಡಿದೆ ಎಂದು ಶಪಿಸುತ್ತಿದ್ದಾರೆ. ಇನ್ನು ಕೆಲವರು ಜೊತೆಯಾದವರನ್ನೇ ಫ್ರೆಂಡ್ಸ್ ಮಾಡಿಕೊಂಡು ಅಡ್ಜೆಸ್ಟ್ ಆಗುವುದಕ್ಕೆ ಯತ್ನಿಸುತ್ತಿದ್ದಾರೆ. ಆದರೆ ಇದರ ನಡುವೆ ಸಾನ್ಯಾಗೆ ತುಂಬಾನೇ ಮನಸ್ಸಿನಲ್ಲಿ ಜೆಲಸ್ ಫೀಲ್ ಆಗುತ್ತಿರುವುದು ಆಗಾಗ ಕಾಣುತ್ತಿದೆ.

ಕಾವ್ಯಶ್ರೀ & ರೂಪೇಶ್ ಶೆಟ್ಟಿ ದೋಸ್ತಿ

ಕಾವ್ಯಶ್ರೀ & ರೂಪೇಶ್ ಶೆಟ್ಟಿ ದೋಸ್ತಿ

ಎಲ್ಲರೂ ಒಂದು ಟೀಂ ಹೆಣ್ಣು ಮಕ್ಕಳು ಮತ್ತೊಂದು ಟೀಂ ಗಂಡು ಮಕ್ಕಳು ಜೋಡಿಯಾಗಿ ಪಟ್ಟಿ ಕಟ್ಟಿಕೊಂಡಿದ್ದಾರೆ. ಆದರೆ ಕಾವ್ಯಶ್ರೀಗೆ ಸಿಕ್ಕಿದ್ದು ಮಾತ್ರ ಹುಡುಗ. ಮೊದ ಮೊದಲಿಗೆ ಎಲ್ಲರನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದ ಕಾವ್ಯಶ್ರೀ ಇದೀಗ ರೂಪೇಶ್ ಶೆಟ್ಟಿ ಜೊತೆಗೇನೆ ದೋಸ್ತಿಯಾಗಿದ್ದಾಳೆ. ಮೊದಲಿಗೆ ಆಯ್ಕೆ ಮಾಡಿಕೊಂಡಿದ್ದು ರಾಂಗ್ ಆಯ್ತು ಎಂದುಕೊಂಡಿದ್ದೆ. ಆದರೆ ಈಗ ರೂಪೇಶ್ ಬೆಸ್ಟ್ ಎನಿಸುತ್ತಿದೆ ಎಂದಿದ್ದಾಳೆ.

ರಾಕೇಶ್‌ಗಿಂತ ರೂಪೇಶ್ ಬೆಟರ್

ರಾಕೇಶ್‌ಗಿಂತ ರೂಪೇಶ್ ಬೆಟರ್

ರಾಕೇಶ್‌ಗೆ ಸ್ಮೋಕ್ ಮಾಡುವ ಅಭ್ಯಾಸವಿದೆ ಎಂಬುದು ಓಟಿಟಿ ಸೀಸನ್‌ನಲ್ಲಿಯೇ ಗೊತ್ತಾಗಿದೆ. ಅಲ್ಲಿ ರಾಕೇಶ್‌ಗೆ ಸಪೋರ್ಟ್ ಆಗಿ ಸೋನು ಇದ್ದಳು. ಸ್ಮೋಕಿಂಗ್ ಹೋಗುವಾಗೆಲ್ಲಾ ಸೋನು ಜೊತೆಗೆ ಹೋಗುತ್ತಿದ್ದಳು. ಆದರೆ ಈಗ ರಾಕೇಶ್ ಜೊತೆಗೆ ರೂಪೇಶ್ ರಾಜಣ್ಣ ಹೋಗುತ್ತಿದ್ದಾರೆ. ಪಟ್ಟಿ ಕಟ್ಟಿಲ್ಲವಾಗಿದ್ದರೆ ರೂಪೇಶ್ ರಾಜಣ್ಣ ಹೋಗುವ ಅವಶ್ಯಕತೆ ಇರಲಿಲ್ಲ. ಇದೀಗ ಕಾವ್ಯಾ ಇದನ್ನೇ ಪ್ರಸ್ತಾಪಿಸಿದ್ದಾಳೆ. ರೂಪೇಶ್ ಶೆಟ್ಟಿ ಜೊತೆಯಾಗಿದ್ದು ಒಳ್ಳೆಯದ್ದೆ ಆಯಿತು. ಇಲ್ಲ ಅಂದಿದ್ದರೆ ರಾಕೇಶ್ ಜೊತೆಗೆ ಹೋಗಬೇಕಾಗಿತ್ತು. ಆ ಸ್ಮೋಕಿಂಗ್ ರೂಮಿನ ಮುಂದೆ ಹೋಗಿ ಕುಳಿತುಕೊಳ್ಳುವ ಬದಲು ರೂಪೇಶ್ ಶೆಟ್ಟಿ ಜೊತೆ ಟಾಯ್ಲೆಟ್ ಹತ್ತಿರ ಹೋಗಿ ಕುಳಿತುಕೊಳ್ಳುವುದು ಉತ್ತಮ ಎಂದಿದ್ದಾಳೆ.

ಸಾನ್ಯಾಗೆ ಹೊಟ್ಟೆ ಉರಿ

ಸಾನ್ಯಾಗೆ ಹೊಟ್ಟೆ ಉರಿ

ಸಾನ್ಯಾಗೆ ನಂದಿನಿಯ ಪರಿಸ್ಥಿತಿ ಈಗ ಅರ್ಥ ಆಗುತ್ತಾ ಇದೆ ಎನಿಸುತ್ತಿದೆ. ರೂಪೇಶ್ ಕಾವ್ಯಾ ಜೊತೆಗೆ ಕ್ಲೋಸ್ ಆಗುತ್ತಿರುವುದನ್ನು ಸಹಿಸುವುದಕ್ಕೆ ಆಗುತ್ತಿಲ್ಲ. ನಿನ್ನೆ ರೂಪೇಶ್ ಶೆಟ್ಟಿ ಮತ್ತು ಕಾವ್ಯಶ್ರೀ ತಮಾಷೆ ಮಾಡುತ್ತಾ ನಿಂತಿದ್ದರು. ಇದನ್ನು ನೋಡಿದ ಸಾನ್ಯಾಳ ಮುಖದಲ್ಲಿ ಕೋಪ ಎದ್ದು ಕಾಣುತ್ತಾ ಇತ್ತು. ಇದನ್ನು ಕಂಡ ಆರ್ಯವರ್ಧನ್ ನಕ್ಕು ನಕ್ಕು ಸುಸ್ತಾಗಿದ್ದರು. ಇವತ್ತು ಅಂಥದ್ದೇ ಘಟನೆ ನಡೆಯಿತು. ನೀವೆಲ್ಲಾ ಹುಡುಗಿಯರು ಮಾತಾಡುತ್ತಾ ಹೋಗುತ್ತೀರಾ. ಆದರೆ ನಾನು ಇವನ ಜೊತೆ ಜಾಯಿಂಟ್ ಆಗಿ ಬಿಟ್ಟೆನಲ್ಲ ಅಂತ ಬೇಜಾರಾಗಿತ್ತು ಅಂತ ಕಾವ್ಯಾ ಹೇಳಿದ್ದೆ ತಡ, ಸಾನ್ಯಾ ಆಗ್ಲೇನೆ ಬೇಡ ಅಂತ ರಿಜೆಕ್ಟ್ ಮಾಡಬೇಕಿತ್ತು ಎಂದಿದ್ದಾಳೆ.

ಬಿಗ್ ಬಾಸ್‌ನಿಂದ ಸಿಗುತ್ತಿರುವುದು ಏನು?

ಬಿಗ್ ಬಾಸ್‌ನಿಂದ ಸಿಗುತ್ತಿರುವುದು ಏನು?

ಜನರಿಗೆ ಬಿಗ್ ಬಾಸ್‌ನಿಂದ ಸಿಗಬೇಕಾಗಿದ್ದು ಸಿಗುತ್ತಿಲ್ಲ ಎಂಬುದು ಕನ್ಫರ್ಮ್ ಆಗಿದೆ. ಬರೀ ಮಾತು, ಆಟ, ಓಡಾಟವೇ ಆಯಿತು. ಆದರೆ ಬಿಗ್ ಬಾಸ್‌ನಲ್ಲಿ ಎಂಟರ್ಟೈನ್ಮೆಂಟ್ ಸಿಗುತ್ತಿಲ್ಲ ಎಂದು ಕಮೆಂಟ್ ಬಾಕ್ಸ್‌ನಲ್ಲಿ ಹಲವರು ಕಮೆಂಟ್ ಹಾಕುತ್ತಿದ್ದಾರೆ. ಈಗಾಗಲೇ ಹಲವು ಟ್ಯಾಲೆಂಟ್ ಇರುವವರು ಮನೆಯೊಳಕ್ಕೆ ಹೋಗಿದ್ದಾರೆ. ಸೋ ಆದಷ್ಟು ಅವರವರ ಟ್ಯಾಲೆಂಟ್ ತೋರಿಸುವುದು ಅನಿವಾರ್ಯತೆ ಆಗಿದೆ.

More from Filmibeat

English summary
Bigg Boss Kannada 9 September 29th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X