Bigg Boss Kannada 9: ಸಂಬರಗಿಯನ್ನೇ ಅಣಕಿಸಿದ ವಿನೋದ್ : ಸೋಶಿಯಲ್ ಮೀಡಿಯಾದಲ್ಲಿ ಬಹುಪರಾಕ್!

By ಎಸ್ ಸುಮಂತ್

ಬಿಗ್ ಬಾಸ್ ಮನೆ ದಿನೇ ದಿನೇ ಬದಲಾಗುತ್ತಾ ಹೋಗುತ್ತಿದೆ. ಸ್ಪರ್ಧಿಗಳು ತಮ್ಮ ನಿಜವಾದ ಆಟ ತೋರಿಸುವುದಕ್ಕೆ ಶುರು ಮಾಡಿದ್ದಾರೆ. ಕೆಲವೊಮ್ಮೆ ಗೊತ್ತಿಲ್ಲದೆ ಹೇಳುತ್ತಾರೋ, ಗೊತ್ತಿದ್ದು ಹೇಳುತ್ತಾರೋ ಇನ್ನೊಬ್ಬರ ಮನಸ್ಸಿಗೆ ನೋವಾಗುವಂತ ಟಾಕ್‌ಗಳು ಆರಂಭವಾಗಿವೆ. ಹೊರಗಡೆ ಏನೇ ಸ್ನೇಹವಿದ್ದರು, ಒಳಗೆ ಬಂದ ಮೇಲೆ ಅದರ ಸತ್ವ ತಿಳಿಯುತ್ತಿದೆ. ಬಿಗ್ ಬಾಸ್ ಅದ್ಯಾವಾಗ ಸೊಂಟಕ್ಕೆ ಪಟ್ಟಿ ಕಟ್ಟಿದರೋ, ಈಗ ಮಾತುಕತೆಯಲ್ಲ ಅವರವರ ನಡುವೆಯೇ ಸಾಗುತ್ತಿದೆ.

ಬಿಗ್ ಬಾಸ್ ಮೊದ ಮೊದಲಿಗೆ ಒಳ್ಳೆಯ ಕೆಲಸ ಮಾಡಿದೆ. ಸೊಂಟಕ್ಕೆ ಪಟ್ಟಿ ಕಟ್ಟದೆ ಹೋಗಿದ್ದರೆ ಅವರವರಿಗೆ ಬೇಕಾದವರನ್ನು ಹುಡುಕಿಕೊಂಡು ಸಮಯ ಕಳೆಯುತ್ತಿದ್ದರು. ಆದರೆ ಈಗ ಬೇಡವೆಂದರೂ ಪಟ್ಟಿ ಕಟ್ಟಿಕೊಂಡವರ ಜೊತೆಗೇನೆ ಬೆರೆಯಬೇಕಾಗಿದೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಹಾಗೂ ವಿನೋದ್ ಗೊಬ್ಬರಗಾಲ ಅವರ ಬಾಂಧವ್ಯವೇ ಭಿನ್ನವಾಗಿದೆ. ಸಂಬರ್ಗಿಗೆ ಆಗಾಗ ಟಾಂಗ್ ಕೊಡುವ ಟ್ಯಾಲೆಂಟ್ ಗೊಬ್ಬರಗಾಲಗೆ ಸಖತ್ತಾಗಿಯೇ ಇದೆ.

 ನಗು ನಗುತ್ತಲೇ ಟಾಂಗ್ ಕೊಡುವ ಗೊಬ್ಬರಗಾಲ

ನಗು ನಗುತ್ತಲೇ ಟಾಂಗ್ ಕೊಡುವ ಗೊಬ್ಬರಗಾಲ

ಪ್ರಶಾಂತ್ ಸಂಬರ್ಗಿ ತನ್ನದೇ ಆದ ವಾದ ಮಂಡಿಸುವವರು. ಯಾರ ಮಾತನ್ನು ಅಷ್ಟು ಸುಲಭದಲ್ಲಿ ಕೇಳುವವರಲ್ಲ. ಏನಾದರೂ ಹೇಳಿದರೂ ಅದಕ್ಕೆ ಜಗಳ್ಕೆ ಬಂದು ಬಿಡುತ್ತಾರೆ. ಅದರ ಜೊತೆಗೆ ಹೆಚ್ಚು ಕಾನೂನು ಅದು ಇದು ಅಂತಾನೇ ಮಾತನಾಡುತ್ತಾರೆ. ಆದರೆ ಪ್ರಶಾಂತ್ ಸಂಬರಗಿಯನ್ನು ಸಖತ್ತಾಗಿ ನಿಭಾಯಿಸುವುದು ಮಾತ್ರ ವಿನೋದ್ ಗೊಬ್ಬರಗಾಲ ಅನ್ನೋದು ಬಿಗ್ ಬಾಸ್ ಮನೆಯಲ್ಲಿ ಪ್ರೂವ್ ಆಗಿದೆ. ನಗು ನಗುತ್ತಲೇ ಸಂಬರ್ಗಿಯ ಕಾಲೆಳೆಯುವುದನ್ನು ವಿನೋದ್ ಚೆನ್ನಾಗಿಯೇ ಅರಿತಿದ್ದಾರೆ. ಆದರೆ ವಿನೋದ್ ಮಾಡುತ್ತಿರುವುದು ಕಿಂಡಲ್ ಎಂಬುದನ್ನು ಅರಿಯದೆ ನಗುತ್ತಲೇ ಇರುತ್ತಾರೆ ಪ್ರಶಾಂತ್.

 ಬಂಡೆಗೆ ಚಚ್ಚಿದರೆ ಹೇಗೆ?

ಬಂಡೆಗೆ ಚಚ್ಚಿದರೆ ಹೇಗೆ?

ಪ್ರಶಾಂತ್ ಸಂಬರಗಿ ಮತ್ತು ವಿನೋದ್ ಎಲ್ಲಿಯೇ ಹೋದರೂ ಜೊತೆಯಲ್ಲಿಯೇ ಹೋಗಬೇಕು ಅನ್ನೋ ಕಾರಣ ಇಬ್ಬರಿಗೂ ಸೇರಿ ಪಟ್ಟಿ ಹಾಕಲಾಗಿದೆ. ಈ ಪಟ್ಟಿಯಲ್ಲಿನ ಸ್ನೇಹವನ್ನು ಆಯ್ಕೆ ಮಾಡಿಕೊಂಡಿದ್ದು ಈ ಇಬ್ಬರೇ. ಆದರೆ ಪ್ರಶಾಂತ್ ಕಿರಿಕಿರಿಯನ್ನು ಗೊಬ್ಬರಗಾಲ ಸಹಿಸಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ರೇಗಿಸುತ್ತಿದ್ದಾರೆ. ಬಂಡೆ ಎಂದಾದ ಮೇಲೆ ಬಿಗ್ ಬಾಸ್ ಕ್ಯಾಮೆರಾಗೆ ಬಂದು ಹೇಳುತ್ತಿದ್ದಾನೆ. ಹೆಂಗೆ ಪ್ರಶಾಂತ್ ಸಂಬರ್ಗಿಯನ್ನೇ ಬಂಡೆ ಎಂದು ಬಿಟ್ಟೆ. ಇವ ಬಂಡೆ ಇದ್ದಂಗೆನೇ. ಸುಮ್ಮನೆ ಅರಚಾಡುತ್ತವೆ. ಕಿರುಚಾಡುತ್ತವೆ. ಏನೋ ಎಲ್ಲವನ್ನೂ ಉಳಿಸಿಬಿಡುವ ರೀತಿ ಎಂದಿದ್ದಾನೆ.

 ಕಮೆಂಟ್‌ನಲ್ಲಿ ವಿನೋದ್‌ಗೆ ಬೆಂಬಲ

ಕಮೆಂಟ್‌ನಲ್ಲಿ ವಿನೋದ್‌ಗೆ ಬೆಂಬಲ

ಪ್ರಶಾಂತ್ ಸಂಬರ್ಗಿಯನ್ನು ವಿನೋದ್ ಗೊಬ್ಬರಗಾಲ ಆಟವಾಡಿಸುತ್ತಿರುವುದಕ್ಕೆ ಜನರ ಮೆಚ್ಚುಗೆ ಪಡೆದುಕೊಂಡಿದ್ದಾನೆ. ಕಿಲಾಡಿ ಎಂಬ ಬ್ಯಾಂಡ್‌ ಅನ್ನು ನಿನ್ನೆಯಷ್ಟೇ ವಿನೋದ್, ಸಂಬರ್ಗಿಗೆ ನೀಡಿದ್ದರು. ಆದರೆ ಆ ಕಿಲಾಡಿ ಬ್ಯಾಂಡ್ ನಿನ್ನ ಬಳಿಯೇ ಇರಬೇಕಿತ್ತು. ರಿಯಲ್ ಕಿಲಾಡಿ ನೀನೆ ಎನ್ನುತ್ತಿದ್ದಾರೆ. ಇನ್ನೊಂದಷ್ಟು ಜನ ವಿನೋದ್ ನೀನು ಸೂಪರ್ ಎನ್ನುತ್ತಿದ್ದಾರೆ.

 ನೀರು ಉಳಿಸುವ ಮಾತಿಗೆ ಪ್ರಶಾಂತ್ ಸಿಡಿಮಿಡಿ

ನೀರು ಉಳಿಸುವ ಮಾತಿಗೆ ಪ್ರಶಾಂತ್ ಸಿಡಿಮಿಡಿ

ಲೋಟಗಳನ್ನು ತೊಳೆಯುವಾಗ ನೀರು ಪೋಲಾಗುತ್ತಿದ್ದನ್ನು ರೂಪೇಶ್ ರಾಜಣ್ಣ ವಿರೋಧಿಸಿದ್ದರು. ಈ ವಿಚಾರವನ್ನು ಊಟಕ್ಕೆ ಕುಳಿತಾಗ ಎಲ್ಲರಿಗೂ ಸೇರಿಸಿ ಹೇಳದ್ದರು. ಗ್ಲಾಸ್ ತೊಳೆಯುವಾಗ ನಲ್ಲಿಯಲ್ಲಿ ನೀರನ್ನು ಆಫ್ ಮಾಡಿಕೊಳ್ಳಿ ಎಂದಾಗ ಪ್ರಶಾಂತ್ ಸಂಬರಗಿ ರೊಚ್ಚಿಗೆದ್ದಿದ್ದರು. ಹೇಳುವವರು ಮೊದಲು ಸರಿಯಾಗಿರಬೇಕು ಎಂದು ಮಾತಿಗೆ ಮಾತು ಬೆಳೆದು ವೈಯಕ್ತಿಕ ಜಗಳಕ್ಕೂ ತಿರುಗಿತ್ತು. ಈಗ ವಿನೋದ್ ಗೊಬ್ಬರಗಾಲ ಅದನ್ನೇ ಮೆನ್ಶನ್ ಮಾಡಿ ಪ್ರಶಾಂತ್ ಸಂಬರಗಿಗೆ ನಗು ನಗುತ್ತಲೇ ತಿರುಗೇಟು ನೀಡಿದ್ದಾರೆ.

More from Filmibeat

English summary
Bigg Boss Kannada 9 Vinod Gobbaragala teasing with Prashanth Sambargi. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X