BBK10: ಭಾಗ್ಯಶ್ರೀ-ಸ್ನೇಹಿತ್ ಮಧ್ಯೆ ಕಿರಿಕ್.. ಕಣ್ಣೀರು ಹಾಕಿದ ಭಾಗ್ಯಶ್ರೀ
ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಜಗಳ ಆಗುತ್ತದೆ. ಅದು ಸಣ್ಣಪುಟ್ಟ ಜಗಳವಾಗಿರಬಹುದು, ಇಲ್ಲವೇ ಅತಿರೇಕಕ್ಕೆ ಹೋಗುವ ಜಗಳ ಆಗಿರಬಹುದು. ಅದು ಅಲ್ಲಿಗಲ್ಲಿಗೆ ಸರಿ ಹೋಗುತ್ತದೆ. ಆದರೆ ಜಗಳದ ವೇಳೆ ಒಬ್ಬರಿಗೊಬ್ಬರು ಆಡುವ ಮಾತುಗಳು ಮಾತ್ರ ಅತಿ ಹೆಚ್ಚು ಪರಿಣಾಮ ಬೀರುತ್ತದೆ.
ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್, ಭಾಗ್ಯಶ್ರೀಗೆ ಕಳಪೆ ಪಟ್ಟವನ್ನ ಕೊಟ್ಟಿದ್ದರು. ಭಾಗ್ಯಶ್ರೀಗೆ ಸ್ನೇಹಿತ್ ಕಳಪೆ ಕೊಟ್ಟಿದ್ದಕ್ಕೇನು ಬೇಜಾರು ಇಲ್ಲ. ಆದರೆ ಸ್ನೇಹಿತ್ ಪ್ರತಿ ಬಾರಿಯೂ ಭಾಗ್ಯಶ್ರೀ ಅವರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಾರೆ. ಅದು ಆಕೆಗೆ ಸಾಕಷ್ಟು ನೋವು ಮಾಡಿದೆ.

ಇನ್ನೂ ಭಾಗ್ಯಶ್ರೀ ನೀವು ಏಕೆ ಕಳಪೆ ಪಟ್ಟವನ್ನ ಕೊಟ್ರಿ ಎಂದು ಕೇಳಿದ್ದಕ್ಕೆ ಸ್ನೇಹಿತ್ ಬಹಳ ರೂಡ್ ಆಗಿ ನಡೆದುಕೊಂಡಿದ್ದಾರೆ. ಸ್ನೇಹಿತ್ ಆಡಿದ ಮಾತುಗಳು ಭಾಗ್ಯಶ್ರೀ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದು ಕಣ್ಣೀರು ಹಾಕಿದ್ದಾರೆ. ಭಾಗ್ಯಶ್ರೀ ಮನೆಯಲ್ಲಿ ಹಿರಿಯ ಸದಸ್ಯರಾಗಿದ್ದು ಯಾವ ರೀತಿ ನಡೆದುಕೊಳ್ಳಬೇಕು ಎಂಬುವ ಕನಿಷ್ಠ ಜ್ಞಾನ, ಸ್ನೇಹಿತ್‌ಗೆ ಇಲ್ಲವಾಯಿತಲ್ಲ ಎಂದು ವೀಕ್ಷಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ವಿನಯ್ ಈ ರೀತಿ ಮಾಡುತ್ತಿದ್ದರು. ಈಗ ಆ ಸಾಲಿಗೆ ಸ್ನೇಹಿತ್ ಕೂಡ ಸೇರಿಕೊಳ್ಳುತ್ತಾ ಇದ್ದಾರೆ. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟಂತೆ ಸ್ನೇಹಿತ್ ಕೂಡ ಒಬ್ಬರನ್ನು ನೋಡಿ ಕಲಿಯುತ್ತಾ ಇದ್ದಾರೆ ಎಂದು ವೀಕ್ಷಕರು ಹೇಳಿದ್ದಾರೆ. ಇನ್ನು ಸ್ನೇಹಿತ್‌ಗೆ ಕ್ರೀಡಾ ಮನೋಭಾವವೇ ಇಲ್ಲ, ಯಾವಾಗಲೂ ಪರ್ಸನಲ್ ಆಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಕಳಪೆ ಪಟ್ಟ ಕೊಡುತ್ತಾರೆ ಇಲ್ಲವೇ ನಾಮಿನೇಟ್ ಮಾಡುತ್ತಾರೆ. ಭಾಗ್ಯಶ್ರೀ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸ್ನೇಹಿತ್ ಟಾರ್ಗೆಟ್‌ಗೆ ಗುರಿಯಾಗುತ್ತಲೇ ಇದ್ದಾರೆ. ಸ್ನೇಹಿತ್ ಈ ಬಾರಿ ಭಾಗ್ಯಶ್ರೀ ಬಳಿ ನಡೆದುಕೊಂಡ ರೀತಿಗೆ ಕಣ್ಣೀರು ಹಾಕಿದ್ದಾರೆ.

ಸರಿಯಾದ ಕಾರಣ ನೀಡಿದ ಸ್ನೇಹಿತ್
ಬಿಗ್ ಬಾಸ್ ಎಂದಿನಂತೆ ಕಳಪೆ ಹಾಗೂ ಉತ್ತಮವನ್ನು ಯಾರಿಗೆ ಕೊಡುತ್ತೀರಾ ಎಂದು ಮನೆಯ ಸದಸ್ಯರಿಗೆ ಕೇಳಿದ್ದರು. ಎಲ್ಲರೂ ತನಿಷಾಗೆ ಕಳಪೆಯನ್ನು ನೀಡಿದರೆ ಸ್ನೇಹಿತ್ ಮಾತ್ರ ಭಾಗ್ಯಶ್ರೀಗೆ ಕೊಟ್ಟರು. ಇದೆ ವೇಳೆ ಭಾಗ್ಯಶ್ರೀ, ಯಾವ ಕಾರಣಕ್ಕೆ ನನಗೆ ಕಳಪೆ ಪಟ್ಟವನ್ನ ಕೊಡ್ರಿ ಎಂದು ಕೇಳಿದ್ದಕ್ಕೆ ಎಲ್ಲಾ ವಿಷಯದಲ್ಲೂ ಭಾಗ್ಯಶ್ರೀ ಮೂಗು ತೂರಿಸುವ ಕೆಲಸ ಮಾಡುತ್ತಾರೆ ಎಂದು ಸ್ನೇಹಿತ್ ಕಾರಣ ನೀಡಿದರು. ಈ ಕಾರಣ ಯಾಕೋ ಭಾಗ್ಯಶ್ರೀಗೆ ಸರಿ ಕಾಣಲಿಲ್ಲ. ಎಲ್ಲಾ ಮುಗಿದ ನಂತರ ಭಾಗ್ಯಶ್ರೀ, ಸ್ನೇಹಿತ್‌ರನ್ನು ಕರೆದು ನಾನು ಯಾರ ವಿಷಯದಲ್ಲಿ ಮೂಗು ತೂರಿಸಿದ್ದೇನೆ ಎಂದು ಕೇಳಿದ್ದಾರೆ. ಸ್ನೇಹಿತ್ ನನ್ನ ವಿಷಯದಲ್ಲಿ ಎಂದು ಹೇಳಿದ್ದಾರೆ.
ಕಣ್ಣೀರು ಹಾಕಿದ ಭಾಗ್ಯಶ್ರೀ
ಭಾಗ್ಯಶ್ರೀ ನೀವು ಪ್ರತ್ಯೇಕವಾಗಿ ನನಗೆ ಎಂದು ಹೇಳಬೇಕಾಗಿತ್ತು. ಅದನ್ನ ಬಿಟ್ಟು ಯಾಕೆ ಆ ರೀತಿ ಮಾತನಾಡಿದ್ರಿ? ಎಂದು ಕೇಳಿದ್ದಕ್ಕೆ ನಾನು ನನಗೆ ಹೇಗೆ ಬೇಕೋ ಹಾಗೆ ಮಾತನಾಡುತ್ತೇನೆ ಎಂದು ಉಡಾಫೆ ಮಾತನಾಡಿದ್ದಾರೆ. ಇದು ಭಾಗ್ಯಶ್ರೀ ಕಣ್ಣೀರಿಗೆ ಕಾರಣವಾಗಿದೆ. ಇನ್ನು ಸ್ನೇಹಿತ್, ಭಾಗ್ಯಶ್ರೀ ಬಳಿ ಇನ್ಮುಂದೆಯೂ ಕೂಡ ನಾನು ಹಾಗೆಯೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಪಾಯಿಂಟ್ ಔಟ್ ಮಾಡಿ ಮಾತನಾಡಬೇಕು ಎಂದುಕೊಂಡಿದ್ದರೆ ದಯವಿಟ್ಟು ಅದನ್ನು ಬಿಟ್ಟು ಬಿಡಿ ಎಂದು ಭಾಗ್ಯಶ್ರೀ ಹೇಳಿದ್ದಾರೆ. ಆದರೆ ಸ್ನೇಹಿತ್ ನಾನು ಹಾಗೆಯೇ ಮಾತನಾಡುತ್ತೇನೆ ಎಂದು ಹೇಳಿ ಭಾಗ್ಯಶ್ರೀ ಕಣ್ಣಲ್ಲಿ ನೀರು ತರಿಸಿದ್ದಾರೆ.
ಸ್ನೇಹಿತ್‌ಗೆ ಕ್ಲಾಸ್ ತೆಗೆದುಕೊಳ್ಳಬೇಕಂತೆ ಕಿಚ್ಚ
'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡಿದ್ದು ಸುದೀಪ್, ವಿನಯ್ ಗೆ ಕ್ಲಾಸ್ ತೆಗೆದುಕೊಂಡಂತೆ ಸ್ನೇಹಿತ್‌ಗೂ ಕ್ಲಾಸ್ ತೆಗೆದುಕೊಳ್ಳಬೇಕು ಎಂಬುದು ವೀಕ್ಷಕರ ಒತ್ತಾಯ. ಇತ್ತೀಚಿನ ದಿನಗಳಲ್ಲಿ ಸ್ನೇಹಿತ್ ಬಾಯಿಗೆ ಬಂದಂತೆ ಮಾತನಾಡುತ್ತಾ ಇದ್ದಾರೆ. ಕೊಡುವ ಕಾರಣಕ್ಕೆ ಏನು ಅರ್ಥವೇ ಇರುವುದಿಲ್ಲ. ಆ ರೀತಿಯಾಗಿ ಭಾಗ್ಯಶ್ರೀ ಬಳಿ ಯಾವಾಗಲೂ ಜಗಳ ಮಾಡುತ್ತಾರೆ ಎನ್ನುವುದು ಕೆಲವರ ವಾದ. ಕಿಚ್ಚ ಯಾರು ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ? ಎಂಬುದನ್ನು ನೋಡಬೇಕಾಗಿದೆ.


Click it and Unblock the Notifications











