'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಸುದೀಪ್ ಜೂನಿಯರ್

Recommended Video

Bigg Boss Kannada 7 Anchor Chaitra Vasudevan enters Bigg Boss house

ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆ ಬಗ್ಗೆ ಕಿಚ್ಚ ಸುದೀಪ್ ಅವರು ಯಾವುದೇ ಮಧ್ಯಸ್ಥಿಕೆ ಹಾಗೂ ಸಲಹೆಗಳನ್ನ ನೀಡುವುದಿಲ್ಲ. ಇದು ಸಂಪೂರ್ಣವಾಗಿ ಆಯೋಜಕರಿಗೆ ಬಿಟ್ಟಿರುತ್ತೆ. ಇದನ್ನ ಸ್ವತಃ ಕಿಚ್ಚ ಸುದೀಪ್ ಅವರೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆಯೊಮ್ಮೆ ಸ್ಪರ್ಧಿಯೊಬ್ಬರು ಕೈಕೊಟ್ಟ ವೇಳೆ ಕ್ರಿಕೆಟಿಗ ಅಯ್ಯಪ್ಪ ಅವರ ಹೆಸರನ್ನ ಸೂಚಿಸಿದ್ದನ್ನ ಬಿಟ್ಟರೆ, ಬೇರೆ ಯಾರನ್ನು ಸುದೀಪ್ ಸೂಚಿಸಿಲ್ಲ. ಈಗ ಏಳನೇ ಆವೃತ್ತಿ ಆರಂಭವಾಗಿದೆ. ಒಟ್ಟು 18 ಜನ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ.

ಇದರಲ್ಲಿ ಒಬ್ಬರು ಸುದೀಪ್ ಅವರ ಜೂನಿಯರ್ ಇದ್ದಾರೆ. ಕಿಚ್ಚನ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಯಾರದು? ಮುಂದೆ ಓದಿ....

ಸುದೀಪ್ ಜೂನಿಯರ್ ಈಕೆ

ಸುದೀಪ್ ಜೂನಿಯರ್ ಈಕೆ

ಬೆಂಗಳೂರಿನ ದಯಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಿಚ್ಚ ಸುದೀಪ್ ವಿದ್ಯಾಬ್ಯಾಸ ಮಾಡಿದ್ದಾರೆ. ವಿಶೇಷ ಅಂದ್ರೆ, ಅದೇ ಕಾಲೇಜಿನಲ್ಲಿ, ಸುದೀಪ್ ಅವರು ಓದಿದ ತರಗತಿಯಲ್ಲೇ ಚೈತ್ರಾ ವಾಸುದೇವನ್ ಕೂಡ ಓದಿದ್ದಾರಂತೆ. ಹಾಗಾಗಿ, ಸುದೀಪ್ ಅವರಿಗೆ ಚೈತ್ರಾ ಜೂನಿಯರ್ ಎಂದು ಹೇಳಿಕೊಂಡಿದ್ದಾರೆ.

ಸುದೀಪ್ ಸಿನಿಮಾದಲ್ಲಿ ನಟನೆ

ಸುದೀಪ್ ಸಿನಿಮಾದಲ್ಲಿ ನಟನೆ

ಸಿನಿಮಾದಲ್ಲಿ ನಟಿಸುವ ಆಸಕ್ತಿ ಇಲ್ಲದ ಚೈತ್ರಾ ವಾಸುದೇವನ್ ಅವರು, ಕಿಚ್ಚ ಸುದೀಪ್ ಅಭಿನಯದ ಚಿತ್ರದಲ್ಲಿ ಮೊದಲ ಸಲ ಬಣ್ಣ ಹಚ್ಚಿದ್ದರು. ಸುದೀಪ್ ಅವರ ಪೈಲ್ವಾನ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ನಡೆಯುವ ಬಾಕ್ಸಿಂಗ್ ದೃಶ್ಯದಲ್ಲಿ ಆಂಕರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಷಯವನ್ನ ಚೈತ್ರಾ ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡರು.

ಸುದೀಪ್ ಮೊದಲ ಸಂದರ್ಶನ

ಸುದೀಪ್ ಮೊದಲ ಸಂದರ್ಶನ

ನಿರೂಪಕಿಯಾಗಿ ಮೊದಲ ಸಲ ಸಂದರ್ಶನ ಮಾಡಿದ್ದು ಕೂಡ ಕಿಚ್ಚ ಸುದೀಪ್ ಅವರಂತೆ. ಸಿಸಿಎಲ್ ಕ್ರಿಕೆಟ್ ನಡೆಯುತ್ತಿರುವ ವೇಳೆ ಚೈತ್ರಾ ಅವರು, ಸುದೀಪ್ ಅವರ ಸಂದರ್ಶನ ಮಾಡಿದ್ದರಂತೆ.

ಹಲವು ಶೋ ನಿರೂಪಣೆ ಮಾಡಿದ್ದಾರೆ

ಹಲವು ಶೋ ನಿರೂಪಣೆ ಮಾಡಿದ್ದಾರೆ

ಕಲರ್ಸ್ ಕನ್ನಡ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ 'ಒಂದು ಸಿನಿಮಾ ಕಥೆ' ಕಾರ್ಯಕ್ರಮವನ್ನ ಚೈತ್ರಾ ನಿರೂಪಣೆ ಮಾಡುತ್ತಿದ್ದರು. ಹಲವು ಖಾಸಗಿ ಕಾರ್ಯಕ್ರಮಗಳನ್ನ ಆಂಕರಿಂಗ್ ಮಾಡಿದ್ದಾರೆ.

More from Filmibeat

English summary
Bigg Boss Kannada: Sudeep's junior anchor Chaitra Vasudevan is one of the participate in bigg boss kannada season 7.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X