ಚೈತ್ರಾಗೆ ಸಿಕ್ಕ ವಿಶೇಷ ಅಧಿಕಾರದಿಂದ ವಾಸುಕಿ ವೈಭವ್ ಗೆ ಸಂಕಷ್ಟ

ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ ಎರಡನೇ ವಾರ ಚೈತ್ರ ವಾಸುದೇವನ್ ಎಲಿಮಿನೇಟ್ ಆಗಿದ್ದಾರೆ. ಎರಡು ವಾರದ ಆಟ ಮುಗಿಸಿ ಗಂಟುಮೂಟೆ ಜೊತೆ ದೊಡ್ಮನೆಯಿಂದ ಹೊರಬಂದ ಚೈತ್ರಾ ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ನೀಡಿದ್ದರು.

ಚೈತ್ರಾ ಅವರಿಗೆ ಸಿಕ್ಕ ವಿಶೇಷ ಅಧಿಕಾರದಿಂದ ಗಾಯಕ ವಾಸುಕಿ ವೈಭವ್ ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಾಯಿತು. ಹೌದು, ಈ ವಾರ ಮನೆಯಿಂದ ಎಲಿಮಿನೇಟ್ ಆದ ಚೈತ್ರಾ ಅವರಿಗೆ ಯಾರನ್ನಾದರೂ ಒಬ್ಬರನ್ನ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವಿತ್ತು.

ಈ ಅಧಿಕಾರ ಬಳಸಿ ಮನೆಯಲ್ಲಿ ಹೆಚ್ಚು ವಿರೋಧ ಕಟ್ಟಿಕೊಂಡಿದ್ದ ಚೈತ್ರಾ ಕೋಟೂರ್ ಅವರನ್ನ ನಾಮಿನೇಟ್ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಸರ್ಪ್ರೈಸ್ ಎಂಬಂತೆ ಗಾಯಕ ವಾಸುಕಿ ವೈಭವ್ ಅವರನ್ನ ಟಾರ್ಗೆಟ್ ಮಾಡಿದರು.

Bigg Boss kannada: Chaitra Vasudevan Nominated Vasuki Vaibhav

ವಾಸುಕಿ ವೈಭವ್ ಅವರನ್ನು ಟಾರ್ಗೆಟ್ ಮಾಡಿದ ಕಾರಣ ತಿಳಿಸಿದ ಚೈತ್ರಾ ಅವರ ಜಾಣ್ಮೆ ನಿಜಕ್ಕೂ ಮೆಚ್ಚುವಂತಹದ್ದು. ''ವಾಸುಕಿ ಅವರು ಸ್ಟ್ರಾಂಗ್ ಸ್ಪರ್ಧಿಯಾಗಿದ್ದಾರೆ. ಅವರನ್ನ ನಾಮಿನೇಟ್ ಮಾಡಿದರೂ ವೀಕ್ಷಕರು ಅವರನ್ನ ಉಳಿಸಿಕೊಳ್ಳುತ್ತಾರೆ. ಅವರ ಬದಲು ಬೇರೆ ಯಾರನ್ನಾದರೂ ನಾಮಿನೇಟ್ ಮಾಡಿ, ಅವರು ಹೊರಗೆ ಹೋದರೆ ಅವರನ್ನ ಎಲಿಮಿನೇಟ್ ಮಾಡಿದ ಪಾಪಪ್ರಜ್ಞೆ ನನ್ನನ್ನು ಕಾಡುತ್ತೆ'' ಎಂದರು.

ಎರಡನೇ ವಾರ ಆಟದ ಮುಕ್ತಾಯವಾಗಿದ್ದು, ಸೋಮವಾರದಿಂದ ಮೂರನೇ ವಾರ ಆರಂಭವಾಗಲಿದೆ. ಈ ವಾರದ ನಾಮಿನೇಷನ್ ಬಹುಶಃ ಇಂದಿನ ಸಂಚಿಕೆಯಲ್ಲೆ ನಡೆಯಬಹುದು. ಸದ್ಯಕ್ಕೆ ವಾಸುಕಿ ವೈಭವ್ ಒಬ್ಬರು ನಾಮಿನೇಟ್ ಆಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಬಳಿಕ ಮತ್ತೆ ಯಾರೆಲ್ಲಾ ಈ ಪಟ್ಟಿ ಸೇರುತ್ತಾರೆ ಎಂದು ಕಾದುನೋಡಬೇಕಿದೆ.

More from Filmibeat

English summary
Bigg boss kannada 7: Chaitra vasudevan nominated vasuki vaibhav in sunday special episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X