Chitral Rangaswamy: "ವಿನಯ್ ಒಬ್ನೆ ಗಂಡ್ಸು ಎನ್ನುವಂತೆ ಆಡ್ತಾನೆ.. ಬಳೆ ಬಗ್ಗೆ ನಮ್ರತಾ, ಇಶಾನಿ ಯಾಕೆ ಕೇಳಲಿಲ್ಲ?": ಚಿತ್ರಾಲ್
ಬಿಗ್‌ಬಾಸ್ ಕನ್ನಡ ಸೀಸನ್ 10 ಇದೀಗ ನಾಲ್ಕನೇ ವಾರಾಂತ್ಯಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಶೋ ವೀಕ್ಷಕರ ಗಮನ ಸೆಳೆಯುತ್ತಿದೆ. ಆದರೆ ಕೆಲವೊಮ್ಮೆ ಸ್ಪರ್ಧಿಗಳ ಅತಿರೇಕದ ವರ್ತನೆಗಳು ಕಸಿವಿಸಿ ಉಂಟು ಮಾಡುತ್ತಿದೆ. ಇನ್ನು ನಟಿ ಹಾಗೂ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ ಕೊನೆ ಕ್ಷಣದಲ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ವಂಚಿತರಾಗಿದ್ದರು.
ಗ್ರ್ಯಾಂಡ್ ಪ್ರೀಮಿಯರ್ ದಿನ ಚಿತ್ರಾಲ್ ರಂಗಸ್ವಾಮಿ ಅವರನ್ನು ಸುದೀಪ್ ವೇದಿಕೆಗೆ ಕರೆದಿದ್ದರು. ಆದರೆ ಲೈವ್ ಆಡಿಯನ್ಸ್ ವೋಟಿಂಗ್‌ನಲ್ಲಿ 38% ಪಡೆದು ಹೊರ ಬರುವಂತಾಗಿತ್ತು. ಆದರೂ ಬಿಗ್‌ಬಾಸ್ ಶೋ ಫಾಲೋಅಪ್‌ನಲ್ಲಿರುವ ಚಿತ್ರಾಲ್ ಶೋ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಶೋ ಬಿಸಿ ಏರಿರುವಾಗ ತಮ್ಮ ಪ್ರಕಾರ ಯಾರು ಕಳಪೆ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

"ನನ್ನ ಪ್ರಕಾರ 4 ಕಳಪೆಗಳು" ಎಂದು ಬರೆದು ಚಿತ್ರಾಲ್ ರಂಗಸ್ವಾಮಿ ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿದ್ದಾರೆ. ವಿನಯ್ ಕಳಪೆ. ಕಾರಣ "ಬಳೆ ತೊಡುವವರು ಎಂದು ಕೀಳಾಗಿ ಮಾತನಾಡಿದ್ದಕ್ಕೆ. ಇವನೊಬ್ಬನೇ ಗಂಡ್ಸು ಅನ್ನೋ ಹಂಗೆ ಆಡುವುದಕ್ಕೆ"
"ಕಳಪೆ ನಮ್ರತಾ- ಇಂಡ್ಯೂಷಾಲಿಟಿ ಇಲ್ಲ. ಗಂಡಸಾಗಿ ಹೀಗೆ ಕಿರುಚುತ್ತಾರಾ? ಅಂದ್ರೆ ಏನು ಅರ್ಥ. ಕಿರುಚೋದು ಎಲ್ಲರೂ ಒಂದೇ. ಹಾಗೆ ತಾವೊಬ್ಬರೇ ನೀಟ್ ಆಗಿ ಬೆಳೆದಿರೋದು ಅನ್ನೋ ಹಾಗೆ. ಬಳೆ ಬಗ್ಗೆ ವಿನಯ್ ಮಾತನಾಡಿದಾಗ ನಮ್ರತಾ ವಾಯ್ಸ್ ರೈಸ್ ಮಾಡಲಿಲ್ಲ."
"ಕಳಪೆ ಸ್ನೇಹಿತ್- ಕಾರ್ತಿಕ್ ಬಗ್ಗೆ ಏನು ಅನ್ನಿಸುತ್ತದೆ ಅದನ್ನು ಅವನಿಗೆ ಹೇಳುವ ಧೈರ್ಯ ಇಲ್ಲದೇ ಎಲ್ಲದನ್ನೂ ವಿನಯ್‌ಗೆ ಒಪ್ಪಿಸೋದು. ನೋ ಇಂಡ್ಯಯವಿಷಾಲಿಟಿ"

"ಕಳಪೆ ಇಶಾನಿ- ಆಕೆ ಈವರೆಗೆ ಒಂದೇ ಒಂದು ರ್ಯಾಪ್ ಸಾಂಗ್ ಹಾಡಿಲ್ಲ. ಇನ್ನು ಹೇಳುಕೊಳ್ಳುವಂತಹ ಕಾಂಟ್ರಿಬ್ಯೂಷನ್ ಇಲ್ಲ. ಬಳೆ ಬಗ್ಗೆ ವಿನಯ್ ಮಾತನಾಡಿದಾಗ ಇಶಾನಿ ಕೂಡ ವಾಯ್ಸ್ ರೈಸ್ ಮಾಡಲಿಲ್ಲ. ಇನ್ನು ರಕ್ಷಕ್ ಕೂಡ ಕಳಪೆ. ಆಟಕ್ಕುಂಟು ಲೆಕ್ಕಕ್ಕಿಲ್ಲ" ಎಂದು ಚಿತ್ರಾಲ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಬಿಗ್‌ಬಾಸ್ ಮನೆಗೆ ಪ್ರವೇಶ ಪಡೆಯಲು ಸಾಧ್ಯವಾಗದೇ ರಿಜೆಕ್ಟ್ ಆಗಿದ್ದಂತೆ ಚಿತ್ರಾಲ್ ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದ್ದರು. ಫಿಲ್ಮಿಬೀಟ್ ಸಂದರ್ಶನದಲ್ಲಿ ಮಾತನಾಡಿದ್ದರು. ನನ್ನನ್ನು ಬಿಗ್ ಬಾಸ್‌ಗೆ ಆಯ್ಕೆ ಮಾಡುವಾಗ ಹೇಳಿದ್ದೇ ಒಂದು. ಆ ಮೇಲೆ ನಡೆದುಕೊಂಡಿದ್ದೇ ಒಂದು ಎಂದು ಅಸಮಾಧಾನ ತೋಡಿಕೊಂಡಿದ್ದರು.
"ನನಗೆ 38 ಪರ್ಸೆಂಟ್ ಬಂದ ತಕ್ಷಣ ನನ್ನ ಮೈಂಡ್ ಬ್ಲಾಂಕ್ ಆಯ್ತು. ಅದನ್ನು ನಾನು ಒಪ್ಪಿಕೊಳ್ಳುವುದಕ್ಕೆ ರೆಡಿಯಿರಲಿಲ್ಲ. ಇದರನ್ನು ರಿಜೆಕ್ಷನ್ ಅಂತ ತೆಗೆದುಕೊಳ್ಳುವುದಿಲ್ಲ. ಇದಕ್ಕು ಮುನ್ನ ಹಲವು ಬಾರಿ ನನಗೆ ಇಂತಹ ಅನುಭವ ಆಗಿತ್ತು. ಆದರೆ ಬಿಗ್‌ಬಾಸ್ ವಿಚಾರ ಬೇಸರವಾಯಿತು. ಬರೀ ಆಡಿಷನ್ ಎಂದು ಹೇಳಿದ್ದರು. ಅದು ಟೆಲಿಕಾಸ್ಟ್ ಆಗುತ್ತೆ ಅಂತಾನೂ ಗೊತ್ತಿರಲಿಲ್ಲ. ನಾನು ಸಂಬಂಧಪಟ್ಟ ವ್ಯಕ್ತಿಗೆ ಮೆಸೇಜ್ ಕೂಡ ಹಾಕಿದ್ದೀನಿ. ಆಡಿಷನ್ ರೀತಿ ಅಂತ ಹೇಳಿದ್ದರು ನನಗೆ. ಒಳಗೊಳಗೆ ಆಗೋ ರಿಜೆಕ್ಷನ್ ಅನ್ನು ಎದುರಿಸಬಹುದು. ಆದರೆ, ಇದು ಎಲ್ಲರಿಗೂ ಗೊತ್ತಾಗೋ ಹಾಗೆ ಆಯ್ತು. ಅದು ಸರಿಯಾಗಿದೆಯಾ? ಇಲ್ವಾ? ಅನ್ನೋದನ್ನು ಮಾತಾಡೋಕೆ ಇಷ್ಟ ಪಡಲ್ಲ. ಆದರೆ, ಇದು ನನ್ನ ಮಾನಸಿಕ ಸ್ಥಿತಿಯ ಮೇಲೆ ತುಂಬಾನೇ ಪ್ರಭಾವ ಬೀರಿದೆ" ಎಂದಿದ್ದರು.
ಬಳಿಕ ಬೇರೆ ಸಂದರ್ಶನಗಳಲ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸಿದ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದರು. ಶೋ ಆರಂಭವಾಗಿ ಒಂದು ವಾರದ ಬಳಿಕ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಯಾರು ಚೆನ್ನಾಗಿ ಆಡುತ್ತಿದ್ದಾರೆ? ಯಾರು ಫೇಕ್? ಯಾರು ಫೈನಲ್‌ವರೆಗೂ ಹೋಗಬಹುದು? ಎಂದು ಚಿತ್ರಾಲ್ ರಂಗಸ್ವಾಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.


Click it and Unblock the Notifications











