ಚಾರ್ಲಿ ಬಿಗ್‌ಬಾಸ್ ಮನೆ ಒಳಗೆ ಹೋಗುತ್ತಾ? ಹೋಗಲ್ವಾ? ತರಬೇತುದಾರ ಪ್ರಮೋದ್ ಹೇಳಿದ್ದಿಷ್ಟು

ಬಿಗ್‌ಬಾಸ್ ಕನ್ನಡ ಸೀಸನ್ 10 ಬರೋಬ್ಬರಿ ಐದು ವಾರ ಪೂರೈಸಿದರೂ ಚಾರ್ಲಿ ಮಾತ್ರ ಮನೆಯೊಳಗೆ ಹೋಗಲೇ ಇಲ್ಲ. ಸಂಥಿಂಗ್ ಸ್ಪೆಷಲ್ ಸೀಸನ್ ಎಂದಿದ್ದ ಆಯೋಜಕರು ಚಾರ್ಲಿ ಶ್ವಾನ ಬಿಗ್‌ಬಾಸ್ ಮನೆಗೆ ಹೋಗುತ್ತದೆ ಎಂದು ಘೋಷಿಸಿದ್ದರು. ಇದನ್ನು ಕೇಳಿ ವೀಕ್ಷಕರು ಖುಷಿಯಾಗಿದ್ದರು. ಆದರೆ ಇಷ್ಟು ದಿನಗಳಾದರೂ ಅದರ ಬಗ್ಗೆ ಮಾತೇಯಿಲ್ಲ.

ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಚಿತ್ರದಲ್ಲಿ ನಟಿಸಿದ್ದ ಲ್ಯಾಬ್ರಡಾರ್ ಹೆಣ್ಣು ನಾಯಿ ಪ್ರೇಕ್ಷಕರ ಮನಗೆದ್ದಿತ್ತು. ಪ್ರಾಣಿ ಪ್ರೇಮಿಗಳಿಗಂತೂ ಬಹಳ ಪ್ರಿಯವಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ '777 ಚಾರ್ಲಿ' ಸಿನಿಮಾ ರಿಲೀಸ್ ಆಗಿತ್ತು. ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹೊರ ರಾಜ್ಯದ ಪ್ರಾಣಿ ಪ್ರೇಮಿಗಳಿಗೆ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಕೆಲವರು ಸಿನಿಮಾ ನೋಡಿ ಭಾವುಕರಾಗಿದ್ದರು.

Bigg Boss Kannada: Coach Pramod BC reacts about Charlie dogs BB House entry delay

ಪ್ರಮೋದ್ ಬಿ.ಸಿ ಚಿತ್ರಕ್ಕಾಗಿ ಚಾರ್ಲಿಗೆ ತರಬೇತಿ ನೀಡಿದ್ದರು. ಸದ್ಯ ಪ್ರಮೋದ್ ಆರೈಕೆಯಲ್ಲೇ ಚಾರ್ಲಿ ಇದ್ದಾಳೆ. ಇದೆಲ್ಲದರ ನಡುವೆ ಚಾರ್ಲಿ ಬಿಗ್‌ಬಾಸ್ ಮನೆಗೆ ಹೋಗುವ ಸುದ್ದಿ ಸಂಚಲನ ಸೃಷ್ಟಿಸಿತ್ತು. ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದ ವೇದಿಕೆಯಲ್ಲಿ ಈ ವಿಚಾರವನ್ನು ಘೋಷಿಸಲಾಗಿತ್ತು. ಗ್ರ್ಯಾಂಡ್ ಪ್ರೀಮಿಯರ್‌ನಲ್ಲೇ ಚಾರ್ಲಿ ಮನೆಯೊಳಗೆ ಹೋಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. 17 ಜನ ಸ್ಪರ್ಧಿಗಳು ಹೋದರೂ ಚಾರ್ಲಿ ಶ್ವಾನ ಹೋಗಲಿಲ್ಲ.

ಸಂಗೀತಾ ಶೃಂಗೇರಿ '777 ಚಾರ್ಲಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಆಕೆ ಬಿಗ್‌ಬಾಸ್ ಮನೆ ಪ್ರವೇಶಿಸಿ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಟಫ್ ಕಾಂಪಿಟೇಟರ್ ಎನಿಸಿಕೊಂಡಿದ್ದಾರೆ. ಗ್ರ್ಯಾಂಡ್ ಪ್ರೀಮಿಯರ್ ವೇದಿಕೆಗೆ ಸಂಗೀತಾ ಹೋದಾಗಲೂ ಚಾರ್ಲಿ ಎಂಟ್ರಿ ಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು. ಚಾರ್ಲಿಯನ್ನು ಕರೆಯುವಂತೆ ಸುದೀಪ್ ಹೇಳಿದ್ದರು. ಸಂಗೀತಾ ಎಷ್ಟೇ ಕರೆದರೂ ಚಾರ್ಲಿ ಮಾತ್ರ ಬರಲಿಲ್ಲ.

Bigg Boss Kannada: Coach Pramod BC reacts about Charlie dogs BB House entry delay

ಗ್ರ್ಯಾಂಡ್ ಪ್ರೀಮಿಯರ್‌ನಲ್ಲಿ ಚಾರ್ಲಿ ಬರದೇ ಇದ್ದಿದ್ದು ವೀಕ್ಷಕರಿಗೆ ಬೇಸರವಾಗಿತ್ತು. ಚಾರ್ಲಿಗಾಗಿಯೇ ಕಂಪ್ಲೀಟ್ ಎಪಿಸೋಡ್ ನೋಡಿದವರು ಇದ್ದಾರೆ. ಗ್ರ್ಯಾಂಡ್ ಪ್ರೀಮಿಯರ್‌ ಬಳಿಕ ಮೊದಲ ದಿನ ಚಾರ್ಲಿ ಮನೆಗೆ ಎಂಟ್ರಿ ಕೊಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಬಳಿಕ ಮೊದಲ ವೀಕೆಂಡ್, ಬಳಿಕ 2ನೇ ವಾರ, ಆದರೂ ಚಾರ್ಲಿ ಬರಲಿಲ್ಲ. ಇದಕ್ಕೆ ಕಾರಣ ಏನು ಎನ್ನುವುದನ್ನು ತರಬೇತುದಾರ ಪ್ರಮೋದ್‌ ಫಿಲ್ಮಿಬೀಟ್‌ಗೆ ತಿಳಿಸಿದ್ದರು. ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ ಸಿಗದ ಕಾರಣ ಇದು ಸಾಧ್ಯವಾಗಿಲ್ಲ ಎಂದಿದ್ದರು.

ಇದೀಗ ಮತ್ತೆ ಇದೇ ವಿಚಾರದ ಬಗ್ಗೆ ಫಿಲ್ಮಿಬೀಟ್‌ಗೆ ಪ್ರಮೋದ್ ಪ್ರತಿಕ್ರಿಯಿಸಿದ್ದಾರೆ. "ಚಾರ್ಲಿಯನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸೋಕೆ ನಾವು ಸಿದ್ಧರಿದ್ದೇವೆ. ಆದರೆ ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾದಿಂದ ಇನ್ನು ಅನುಮತಿ ಸಿಕ್ಕಿಲ್ಲ. ಅದಕ್ಕಾಗಿ ಎಲ್ಲಾ ಪ್ರಯತ್ನಗಳು ನಡೀತಿದೆ. ಸಾಮಾನ್ಯವಾಗಿ ಈ ರೀತಿ ಅನುಮತಿ ಪಡೆಯಲು 3 ತಿಂಗಳು ಸಮಯ ಬೇಕಾಗುತ್ತದೆ. ಹಾಗಾಗಿ ನಾವು ಕಾಯುತ್ತಿದ್ದೇವೆ"

"ಒಂದೂವರೆ ತಿಂಗಳ ಹಿಂದೆಯೇ ಬಿಗ್‌ಬಾಸ್ ಶೋ ಆಯೋಜಕರು ಅನುಮತಿ ಕೋರಿ ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾವನ್ನು ಸಂಪರ್ಕಿಸಿದ್ದಾರೆ. ಪತ್ರ, ಮೇಲ್ ಮೂಲಕ ಪ್ರಯತ್ನಿಸುತ್ತಿದ್ದಾರೆ. ಇಷ್ಟೊತ್ತಿಗೆ ಅನುಮತಿ ಸಿಗಬೇಕಿತ್ತು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳಲು ಕೂಡ ಅನುಮತಿ ಪಡೆಯಬೇಕು. ಅದಕ್ಕಾಗಿ ಮೂರ್ನಾಲ್ಕು ತಿಂಗಳು ಹಿಡಿಸುತ್ತದೆ. ಈ ವಿಚಾರದಲ್ಲೂ ಅದೇ ಆಗುತ್ತಿದೆ. ಅನುಮತಿ ಸಿಕ್ಕ ಕೂಡಲೇ ಚಾರ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸುವುದು ಖಚಿತ" ಎಂದಿದ್ದಾರೆ.

"ವೀಕ್ಷಕರು ಕೂಡ ಚಾರ್ಲಿಯನ್ನು ಬಿಗ್‌ಬಾಸ್ ಮನೆಯಲ್ಲಿ ನೋಡಲು ಬಯಸುತ್ತಿದ್ದಾರೆ. ನನ್ನನ್ನು ಈ ಬಗ್ಗೆ ಸಾಕಷ್ಟು ಜನ ಕೇಳುತ್ತಿದ್ದಾರೆ. ಆದರೆ ಅನುಮತಿ ಸಿಗದ ಹೊರತು ನಾವು ಏನು ಮಾಡಲು ಸಾಧ್ಯವಿಲ್ಲ. ನೋಡೋಣ, ಇನ್ನು ಶೋ ಮುಗಿಯಲು ಹೆಚ್ಚು ಕಮ್ಮಿ 2 ತಿಂಗಳು ಬಾಕಿಯಿದೆ" ಎಂದು ಪ್ರಮೋದ್ ಹೇಳಿದ್ದಾರೆ.

More from Filmibeat

English summary
Reason Behind Charlie dog's Bigg Boss kannada 10 House entry delay.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X