ರನ್ನರ್ ಅಪ್ ಡ್ರೋನ್ ಪ್ರತಾಪ್‌ಗೆ ಸಿಕ್ತು ಸಕತ್ ಬುದ್ಧಿವಾದ: ಇದೆಲ್ಲವನ್ನು ಜೀವನದಲ್ಲಿ ಅಳವಡಿಸಿಕೊ ಎಂದ ಜನ!
ಬಿಗ್ ಬಾಸ್ ಸೀಸನ್ 10 ಅದ್ದೂರಿಯಾಗಿ ತೆರೆ ಕಂಡಿದೆ. ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಕಾಲಿಟ್ಟಾಗಿನಿಂದ ಫಿನಾಲೆ ತನಕ ಒಂದಲ್ಲ ಒಂದು ಮಾತುಗಳನ್ನ ಕೇಳುತ್ತಲೇ ಬಂದಿದ್ದರು. ಹೊರಗೂ ಕೂಡ ಒಂದಷ್ಟು ಕಾಂಟ್ರವರ್ಸಿಗಳು ಆಗಿದ್ದವು. ಪ್ರತಾಪ್ ಒಬ್ಬ ಸುಳ್ಳ ಮೋಸಗಾರ ಎಂದು ಅವರನ್ನು ಕರೆಯಲಾಗುತ್ತಿತ್ತು. ಆದರೆ ಪ್ರತಾಪ್ ಅವರು ಮಾತನಾಡುವ ಜಾಗದಲ್ಲಿ ಮಾತನಾಡದೆ ಸೈಲೆಂಟಾಗಿ ಇದ್ದಿದ್ದು ಅವರಿಗೂ ಕೂಡ ಒಂದಷ್ಟು ಮುಜುಗರವನ್ನು ತಂದಿತ್ತು.
ಹೊರಗಡೆ ಕೂಡ ಜನ ಮಾತನಾಡುವಾಗಲೂ ಪ್ರತಾಪ್ ಮಾತನಾಡಿರಲಿಲ್ಲ. ಬಿಗ್ ಬಾಸ್ ಮನೆಗೆ ಬಂದ ಮೇಲೆ ನಾನು ಯಾರಿಗೂ ಮೋಸ ಮಾಡಿಲ್ಲ ನನಗೆ ಒಂದಷ್ಟು ಮಂದಿ ಸಹಾಯ ಮಾಡಿದ್ದಾರೆ ಎಂದು ಮಾತ್ರ ಹೇಳುತ್ತಾ ಇದ್ದರು. ಬಿಗ್ ಬಾಸ್ ಮನೆಗೆ ಪ್ರತಾಪ್ ಎಂಟ್ರಿ ಕೊಟ್ಟಾಗ ಕೆಲವೊಂದಷ್ಟು ಜನರು ಇಂತಹ ಮೋಸಗಾರನಿಗೆ ಯಾಕೆ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಅವಕಾಶವನ್ನ ಕೊಟ್ಟಿದ್ದಾರೆ ಎಂದೆಲ್ಲಾ ಮಾತನಾಡಿದರು.

ಆದರೆ ಮನುಷ್ಯ ತಪ್ಪು ಮಾಡುವುದು ಸಹಜ ಇನ್ನು ಮುಂದೆಯಾದರೂ ಪ್ರತಾಪ್ ಜೀವನದಲ್ಲಿ ಎಚ್ಚೆತ್ತುಕೊಂಡು ಯಾರಿಗೂ ಕೂಡ ಮೋಸ ಮಾಡದೆ ಬದುಕಲಿ ಎಂದು ಒಂದಷ್ಟು ಜನ ಪ್ರತಾಪ್ ಅವರಿಗೆ ಬೆಂಬಲ ನೀಡಿದ್ದರು. ಇದೆಲ್ಲ ನೋಡಿದ ಪ್ರತಾಪ್ ನನಗೆ ಜನ ಬೆಂಬಲ ನೀಡುತ್ತಿದ್ದಾರೆ ಎಂಬುವುದು ತಿಳಿದು ತುಂಬಾನೇ ಸ್ಟ್ರಾಂಗ್ ಆಗಿ, ಫಿನಾಲೆ ಹೊತ್ತಿಗೆ ಎಲ್ಲಾ ಆಟವನ್ನು ಕೂಡ ಆಡಿ ಸಾಮರ್ಥ್ಯವಿದೆ ಎಂಬುದನ್ನು ಸಾಬೀತು ಮಾಡಿದರು.
ಇನ್ನು ಪ್ರತಾಪ್ ಅವರು ಹೊರಗಡೆ ನಡೆದಿರುವ ಒಂದಷ್ಟು ವಿಚಾರಗಳಿಗೆ ಎಲ್ಲರ ಬಳಿ ಕ್ಷಮೆಯನ್ನು ಕೇಳುತ್ತಾರೆ. ತಾವು ಯಾವ ಕಾರಣಕ್ಕಾಗಿ ಆ ರೀತಿಯೆಲ್ಲ ಕಾಂಟ್ರವರ್ಸಿ ವಿಷಯದ ವಸ್ತುವಾದೆ ಎಂಬುದನ್ನು ಮನ ಬಿಚ್ಚಿ ಮಾತನಾಡುತ್ತಾರೆ ಎಂಬ ಪ್ರಶ್ನೆ ಹಲವಾರು ಮಂದಿಯಲ್ಲಿ ಕಾಡುತ್ತಿತ್ತು. ಆದರೆ ಅದ್ಯಾವುದಕ್ಕೂ ಕೂಡ ಸ್ಪಷ್ಟ ಉತ್ತರವನ್ನು ಪ್ರತಾಪ್ ನೀಡಿಲ್ಲ. ಬದಲಾಗಿ ನಾನು ಏನೇ ತಪ್ಪು ಮಾಡಿದ್ದರು ಕೂಡ ಅದನ್ನೆಲ್ಲ ಕ್ಷಮಿಸಿರುವ ಜನತೆಗೆ ನಾನು ಋಣಿಯಾಗಿದ್ದೇನೆ ಎಂದು ಹೇಳಿದರು. ನಾನು ಏನೇ ತಪ್ಪು ಮಾಡಿದ್ದರು ಕೂಡ ಅದೆಲ್ಲವನ್ನು ಕ್ಷಮಿಸಿಬಿಡಿ ಎಂದಷ್ಟೇ ಕೇಳಿಕೊಂಡರು.

ಇನ್ಮುಂದೆ ಬದಲಾಗಬೇಕಂತೆ ಡ್ರೋಣ್ ಪ್ರತಾಪ್
ಇಷ್ಟು ದಿನ ಮಾಡಿರುವ ಎಲ್ಲಾ ತಪ್ಪನ್ನು ಕೂಡ ಪ್ರತಾಪ್ ಸರಿ ಮಾಡಿಕೊಂಡು ಹೋಗುವ ಕಾಲ ಬಂದಿದೆ. ಇದಕ್ಕಾಗಿ ಮುಂದೆ ಹಿಂದೆ ಮಾಡಿರುವ ಕೆಲಸಗಳನ್ನ ಮಾಡದೆ ಬಹಳ ಶಿಸ್ತಿನಿಂದ ಜೀವನ ನಡೆಸಬೇಕು ಎಂಬುದು ಕರ್ನಾಟಕದ ಜನತೆಯ ಆಶಯವಾಗಿದೆ. ಪ್ರತಾಪ್ ಅವರಿಗೆ ಬಿಗ್ ಬಾಸ್ ವೇದಿಕೆಗೆ ಕರೆಸಿಕೊಂಡಿದ್ದು ಬಹಳಷ್ಟು ಲಾಭವನ್ನೇ ತಂದುಕೊಟ್ಟಿದೆ. ಯಾಕೆಂದರೆ ಜನರ ಕಣ್ಣಿನಲ್ಲಿ ವಿಲ್ಲನ್ ಆಗಿದ್ದ ಪ್ರತಾಪ್‌ಗೆ ಈಗ ಜನರು ಎರಡನೇ ಚಾನ್ಸ್ ಕೊಟ್ಟಿದ್ದಾರೆ. ಇನ್ಮುಂದೆ ನಾನು ಸರಿಯಾದ ಮಾರ್ಗದಲ್ಲಿಯೇ ನಡೆಯುತ್ತೇನೆ ಎಂದು ಪ್ರತಾಪ್ ಹೇಳಿದ್ದಾರೆ ಈ ಮಾತನ್ನ ಈಗ ಪ್ರತಾಪ್ ಉಳಿಸಿಕೊಳ್ಳಬೇಕಾಗಿದೆ.
ಸುಳ್ಳು ಹೇಳೋದನ್ನ ಬಿಟ್ಟು, ಸಾಧನೆಯ ಮೂಲಕ ಉತ್ತರ ಕೊಡಬೇಕಂತೆ ಪ್ರತಾಪ್
ಪ್ರತಾಪ್ ಅವರು ಈ ಹಿಂದೆ ಹೇಳುತ್ತಿದ್ದ ಸುಳ್ಳಿನ ಮಾತುಗಳನ್ನ ಬಿಡಬೇಕು ಎಂದು ಜನರು ಹೇಳುತ್ತಿದ್ದಾರೆ. ಸಾದಸೀದ ಮನುಷ್ಯರಾಗಿ ಪ್ರತಾಪ್ ಅವರು ತಮ್ಮ ಕ್ಷೇತ್ರದಲ್ಲಿ ಸಾಧನೆಯನ್ನ ಮಾಡಿ ತೋರಿಸಬೇಕು. ಅದು ಬಿಟ್ಟು ಬರೀ ಮಾತನ್ನ ಆಡಿಕೊಂಡು ಸಾಧನೆ ಮಾಡುವುದೇ ದೊಡ್ಡದಲ್ಲ ಎಂಬ ಕಿವಿ ಮಾತನ್ನ ಸಾರ್ವಜನಿಕರು ಹೇಳುತ್ತಿದ್ದಾರೆ.
ಪ್ರತಾಪ್ ಸಾಧನೆಯ ಮೂಲಕ ಉತ್ತರ ಕೊಟ್ಟರೆ ಎಲ್ಲರಿಗೂ ಕೂಡ ಖುಷಿಯಾಗುತ್ತದೆ ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನವನ್ನು ಹರಾಜು ಹಾಕಿದ್ದನ್ನು ಮಾತ್ರ ವಾಪಸ್ ತಂದುಕೊಡಲು ಸಾಧ್ಯವಿಲ್ಲ ಎಂಬ ಮಾತನ್ನು ಕೂಡ ಜನರೇ ಹೇಳಿದ್ದಾರೆ. ಈಗ ಎಲ್ಲರೂ ಕೂಡ ಪ್ರತಾಪ್ ಅವರಿಗೆ ಕ್ಷಮೆಯನ್ನು ನೀಡಿದ್ದು ಇನ್ಮುಂದೆ ಆದರೂ ಪ್ರತಾಪ್ ಬದಲಾಗಬೇಕಿದೆಯಂತೆ.


Click it and Unblock the Notifications











