For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟರನ್ನ ಭೇಟಿ ಮಾಡಿದ 'ಬಿಗ್ ಬಾಸ್' ಸ್ಪರ್ಧಿಗಳು

  By Bharath Kumar
  |
  ಸ್ಟಾರ್ ನಟರನ್ನ ಭೇಟಿ ಮಾಡಿದ 'ಬಿಗ್ ಬಾಸ್' ಸ್ಪರ್ಧಿಗಳು | Filmibeat Kannada

  ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಸೆಲೆಬ್ರಿಟಿ ಸ್ಪರ್ಧಿಗಳು ಗೆಟ್ ಟು ಗೆದರ್ ಪಾರ್ಟಿ ಮಾಡಿದ್ದರು. ಎಲ್ಲ ಸೆಲೆಬ್ರಿಟಿ ಸ್ಪರ್ಧಿಗಳು ಒಂದೆಡೆ ಸೇರಿ ಹಾಡಿ ಕುಣಿದಿದ್ದರು.

  ಬಿಗ್ ಬಾಸ್ ಫಿನಾಲೆ ಮುಗಿದ ನಂತರ ಕಾಮನ್ ಮ್ಯಾನ್ ಸ್ಪರ್ಧಿಗಳು ಟಿವಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದರು. ಇದಾದ ನಂತರ ಬಿಗ್ ಮನೆಯ ಸದಸ್ಯರು ಸ್ಯಾಂಡಲ್ ವುಡ್ ಸ್ಟಾರ್ ನಟರನ್ನ ಭೇಟಿ ಮಾಡಿದ್ದಾರೆ.

  ಬಿಗ್ ಬಾಸ್ 5ನೇ ಸ್ಪರ್ಧಿ ಸಮೀರಾಚಾರ್ಯ ಮತ್ತು ದಿವಾಕರ್ ಕನ್ನಡದ ಸ್ಟಾರ್ ನಟರನ್ನ ಭೇಟಿ ಮಾಡಿ ಸಂತಸಗೊಂಡಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನ ದಂಪತಿ ಸಮೇತ ಭೇಟಿ ಮಾಡಿದ್ದಾರೆ. ಮುಂದೆ ಓದಿ.....

  ಶಿವಣ್ಣನನ್ನ ಭೇಟಿ ಮಾಡಿದ ಸಮೀರ್

  ಶಿವಣ್ಣನನ್ನ ಭೇಟಿ ಮಾಡಿದ ಸಮೀರ್

  ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯ ಸಮೀರಾಚಾರ್ಯ ಹಾಗೂ ಅವರ ಪತ್ನಿ ಶ್ರಾವಣಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆಗೆ ಭೇಟಿ ಕೊಟ್ಟ ಶಿವಣ್ಣ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

  'ಮಾಸ್ಟರ್ ಡ್ಯಾನ್ಸರ್' ಶೋಗೆ ಚಂದನ್ ಶೆಟ್ಟಿ ಜಡ್ಜ್ ಆಗಿರೋದು ಈ ಕಾರಣಕ್ಕೆ.!'ಮಾಸ್ಟರ್ ಡ್ಯಾನ್ಸರ್' ಶೋಗೆ ಚಂದನ್ ಶೆಟ್ಟಿ ಜಡ್ಜ್ ಆಗಿರೋದು ಈ ಕಾರಣಕ್ಕೆ.!

  ಬಿಗ್ ಬಾಸ್ ಮನೆಗೆ ದಿವಾಕರ್

  ಬಿಗ್ ಬಾಸ್ ಮನೆಗೆ ದಿವಾಕರ್

  ಇನ್ನು ಮತ್ತೊಂದೆಡೆ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಸುದೀಪ್ ಅವರ ಮನೆಗೆ ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯ ರನ್ನರ್ ಅಪ್ ಸ್ಪರ್ಧಿ ದಿವಾಕರ್ ಪತ್ನಿ ಸಮೇತ ಆಗಮಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

  ಪ್ರಥಮ್ ಜೊತೆ ಸಮೀರ್

  ಪ್ರಥಮ್ ಜೊತೆ ಸಮೀರ್

  ಬಿಗ್ ಬಾಸ್ ಕನ್ನಡ 4ನೇ ಆವೃತ್ತಿಯ ವಿನ್ನರ್ ಪ್ರಥಮ್ ಅವರನ್ನ ಕೂಡ ಸಮೀರಾಚಾರ್ಯ ಮತ್ತು ಪತ್ನಿ ಶ್ರಾವಣಿ ಭೇಟಿ ಮಾಡಿದ್ದಾರೆ.

  ಈ ಜೂನಿಯರ್ ನಿವೇದಿತಾ ಗೌಡ ಅವರ ಪ್ರತಿಭೆ ನೋಡಿದ್ರೆ ಬೆರಗಾಗ್ತೀರಾ.!ಈ ಜೂನಿಯರ್ ನಿವೇದಿತಾ ಗೌಡ ಅವರ ಪ್ರತಿಭೆ ನೋಡಿದ್ರೆ ಬೆರಗಾಗ್ತೀರಾ.!

  ಚಂದನ್ ಶೆಟ್ಟಿ ಜೊತೆ ಹಾಡಿ, ಕುಣಿದ ಸಮೀರ್

  ಚಂದನ್ ಶೆಟ್ಟಿ ಜೊತೆ ಹಾಡಿ, ಕುಣಿದ ಸಮೀರ್

  ಇನ್ನು ಈ ಆವೃತ್ತಿಯ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರ ಜೊತೆ ಸಮೀರಾಚಾರ್ಯ ಮತ್ತು ಪತ್ನಿ ಶ್ರಾವಣಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಚಂದನ್ ಶೆಟ್ಟಿ, ಸಮೀರಾಚಾರ್ಯ ಹಾಗೂ ಶ್ರಾವಣಿ ಅವ್ರ ಬಗ್ಗೆ ಒಂದು ಹಾಡು ರಚಿಸಿದ್ದರು. ಈ ಹಾಡಿಗೆ ಇಬ್ಬರು ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ.

  ನಿವೇದಿತಾ ಗೌಡಗೆ ಬಂದಿದೆ ಎರಡು ಹೊಸ ಸಿನಿಮಾ ಆಫರ್!ನಿವೇದಿತಾ ಗೌಡಗೆ ಬಂದಿದೆ ಎರಡು ಹೊಸ ಸಿನಿಮಾ ಆಫರ್!

  English summary
  Bigg boss kannada 5 contestant sameer acharya has meet dr shiva rajkumar and another contestant Diwakar met Kiccha sudeep family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X