BBK10: ಸಿರಿ ಬಿಗ್ ಬಾಸ್‌ಗೆ ಹೋಗಿ ಗಳಿಸಿದ್ದಾದರೂ ಏನು..? ಸಿರಿ ಬದಲಾವಣೆಗೆ ಫ್ಯಾನ್ಸ್ ಅಂದ್ರು ಉಘೇ ಉಘೇ..!

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 10 ಮುಗಿಯುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ 85ನೇ ದಿನಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ನಡುವೆ ಸ್ಪರ್ಧೆ ಟಫ್ ಆಗುವುದರ ಜೊತೆಗೆ ಮನಸ್ತಾಪ, ಜಗಳ, ಆಕ್ರೋಶ ಮುಂದುವರೆದಿದೆ. ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಎಲ್ಲವನ್ನು ಸರಿ ಮಾಡಿ ಹೋಗಿರುತ್ತಾರೆ. ಆದರೆ ಮತ್ತೆ ಸ್ಪರ್ಧಿಗಳು ಅದೇ ತಪ್ಪನ್ನೇ ಮಾಡುತ್ತಾರೆ. ಈ ಎಲ್ಲಾ ಬೆಳವಣಿಗೆಯ ನಡುವೆ ಜೋರು ಮಾಡದೆ, ಜಗಳ ಮಾಡದೆ ಇದ್ದಿದ್ದು ಸಿರಿ ಮಾತ್ರ.

ಮನೆಯೊಳಗೆ ಇದ್ದಾಗ ನಾಮಿನೇಟ್ ಅಂತ ಬಂದಾಗ ಸಿರಿ ಅವರನ್ನೇ ನಾಮಿನೇಟ್ ಮಾಡುತ್ತಿದ್ದರು. ಯಾಕಂದ್ರೆ ಸಿರಿ ಅವರ ಗ್ರಾಫ್ ಏರಿಕೆಯಾಗುತ್ತಲೆ ಇಲ್ಲ ಎಂಬ ಕಾರಣ ನೀಡಿ ನಾಮಿನೇಟ್ ಮಾಡುತ್ತಾ ಇದ್ದರು. ಆದರೂ ಸಿರಿ ಮಾತ್ರ ಯಾವತ್ತಿಗೂ ಜೋರು ಜಗಳ ಮಾಡಿದವರೇ ಅಲ್ಲ. 84ನೇ ದಿನಕ್ಕೆ ಮನೆಯಿಂದ ಹೊರಗೆ ಬಂದಿದ್ದಾರೆ. ಹೊರ ಬಂದ ಮೇಲೆ ತಮ್ಮ ಅನುಭವವನ್ನ ತಿಳಿಸಿದ್ದಾರೆ.

Bigg Boss Kannada contestant Siri thanks fans after the elimination

ಬಿಗ್ ಬಾಸ್‌ಗೆ ಹೋಗಿ ಗಳಿಸಿದ್ದೇನು ಸಿರಿ..?

'ಬಿಗ್ ಬಾಸ್ ಗೆ ಹೋಗುವುದಕ್ಕೂ ಮುನ್ನ ಸಾಕಷ್ಟು‌ ಯೋಚನೆ ಮಾಡಿದೆ‌. ಅಲ್ಲಿ ಹೋಗಿ ಹೇಗೆ ಇರುವುದು, ಏನು ಮಾಡುವುದು, ಇರುವುದಕ್ಕೆ ಸಾಧ್ಯನಾ ಎಂಬೆಲ್ಲಾ ವಿಚಾರವಾಗಿ ಯೋಚನೆ ಮಾಡಿದೆ. ಆದರೂ ಧೈರ್ಯ ಮಾಡಿ ಬಿಗ್ ಬಾಸ್ ಮನೆಗೆ ಹೋದೆ. ಅಲ್ಲಿ ಸಾಕಷ್ಟು ಕಲಿತೆ. ಅಲ್ಲಿಂದ ಹೊರಗೆ ಬಂದ ಮೇಲೆ ಯೋಚನೆ ಮಾಡಿದೆ. ಬಿಗ್ ಬಾಸ್ ಗೆ ಹೋಗಿ ಗಳಿಸಿದ್ದು ಏನು ಅಂತ. ಆಮೇಲೆ ಅರ್ಥ ಆಯ್ತು ನಿಮ್ಮೆಲ್ಲರ ಪ್ರೀತಿ ಗಳಿಸಿದೆ' ಎಂದಿದ್ದಾರೆ.

ಅಭಿಮಾನಿಗಳ ಜೊತೆಗೆ ಮಾತನಾಡಲು ಸಿದ್ಧತೆ, ಲೈವ್‌ನಲ್ಲಿ ಸಿಗಲಿದ್ದಾರೆ ಸಿರಿ ಮೇಡಂ

'ನಾನು ಬಿಗ್ ಬಾಸ್ ಮನೆಗೆ ಹೋದ ಮೇಲೆ ಇಷ್ಟೊಂದು ಪ್ರೀತಿ ಕೊಡುತ್ತೀರ, ಇಷ್ಟೊಂದು ಸಪೋರ್ಟ್ ಮಾಡುತ್ತೀರಾ ಅಂತ ನಿಜಕ್ಕೂ ಗೊತ್ತಿರಲಿಲ್ಲ. ಆದರೆ ನನಗೆ ಇಷ್ಟೊಂದು ಬೆಂಬಲ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಜೊತೆಗೆ ಮಾತನಾಡಬೇಕು ಎನಿಸಿದೆ. ನಿಮಗೂ ಗೊತ್ತು, ನಾನು ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆಕ್ಟೀವ್ ಆಗಿಲ್ಲ ಅಂತ. ಆದರೆ ಆದಷ್ಟು ಬೇಗ ಲೈವ್ ಗೆ ಬಂದು ನಿಮ್ಮಗಳ ಜೊತೆಗೆ ಮಾತನಾಡುತ್ತೇನೆ' ಎಂದಿದ್ದಾರೆ.

Bigg Boss Kannada contestant Siri thanks fans after the elimination

ಈ ಲೈಫ್‌ಗೆ ಹೊಂದಿಕೊಳ್ಳುವುದು ಕಷ್ಟವಾಗ್ತಾ ಇದೆಯಾ..?

ಬಿಗ್ ಬಾಸ್ ಮನೆಯಲ್ಲಿ ಹೊರಗಿನ ಪ್ರಪಂಚವೇ ಗೊತ್ತಿರಲ್ಲ. ಊಟ-ತಿಂಡಿ ಸರಿ ಇರಲ್ಲ. ನಿದ್ದೆಯಿರುವುದಿಲ್ಲ. ಆಟ, ಜಗಳ, ಮನಸ್ತಾಪಗಳ ನಡುವೆಯೇ ಇದ್ದ ಸಿರಿ ಈಗ ಹೊರಗೆ ಬಂದಿದ್ದಾರೆ. 83 ದಿನ ಅದೇ ಜೀವನ ನೋಡಿದ್ದ ಸಿರಿಗೆ ಈಗ ಹೊಸ ಜೀವನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿದೆಯಂತೆ.

ಸಿರಿಗೆ ಜೈ ಎಂದ ಫ್ಯಾನ್ಸ್, ಆಗ ಸಿರಿ.. ಈಗ ಮೇಡಂ ಎಂದ ಫ್ಯಾನ್ಸ್!

ಸಿರಿಗೆ ಬಿಗ್ ಬಾಸ್‌ ನಿಂದ ಬಂದ ಮೇಲೆ ಅಭಿಮಾನಿಗಳು ಜಾಸ್ತಿಯಾಗಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಪಾಸಿಟಿವ್ ಆಗಿ ಕಮೆಂಟ್ ಹಾಕಿದ್ದಾರೆ‌. 'ಹೋಗುವಾಗ ಸಿರಿಯಾಗಿದ್ರಿ, ಈಗ ಸಿರಿ ಮೇಡಂ ಆಗಿದ್ದಾರೆ, ಸಿರಿ ಮೇಡಂ ಇನ್ನು ಮುಂದೆ ಧಾರಾವಾಹಿ, ಸಿನಿಮಾ ಜಾಸ್ತಿ‌ ಮಾಡಿ. ನಾವೂ ಚಿಕ್ಕವರಿದ್ದಾಗ ರಂಗೋಲಿ ಧಾರಾವಾಹಿ ನೋಡುವುದಕ್ಕೆ ಬೇರೆ ಮನೆಗೆ ಹೋಗುತ್ತಾ ಇದ್ವಿ, ಸಿರಿ ಮೇಡಂ ಆರಾಮವಾಗಿರಿ' ಅಂತೆಲ್ಲ ಕಮೆಂಟ್ಸ್ ಹಾಕುತ್ತಿದ್ದಾರೆ.

More from Filmibeat

English summary
BBK 10: Siri thanks the fans after the elimination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X