ಸೀಮಂತ ಸಂಭ್ರಮದಲ್ಲಿ 'ಬಿಗ್ ಬಾಸ್' ಸ್ಪರ್ಧಿ ಧನರಾಜ್ ಪತ್ನಿ ಶಾಲಿನಿ
ಬಿಗ್ ಬಾಸ್ ಕನ್ನಡ ಸೀಸನ್-6 ಸ್ಪರ್ಧಿ ಧನರಾಜ್ ಮನೆಯಲ್ಲಿ ಸಂತಸ, ಸಂಭ್ರಮ ಮನೆಮಾಡಿದೆ. ಧನರಾಜ್ ತಂದೆಯಾಗೋ ಖುಷಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಧನರಾಜ್ ಮನೆಯಲ್ಲಿ ಪತ್ನಿ ಶಾಲಿನಿ ಅವರ ಸೀಮಂತ ಕಾರ್ಯ ಅದ್ದೂರಿಯಾಗಿ ನಡೆದಿದೆ. ಶಾಲಿನಿ ಸೀಮಂತ ಕಾರ್ಯದಲ್ಲಿ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಕವಿತಾ ಗೌಡ ಭಾಗಿಯಾಗಿದ್ದರು.
ಇತ್ತೀಚಿಗೆ ನಡೆದ ಸೀಮಂತ ಕಾರ್ಯದ ಫೋಟೋಗಳನ್ನು ಧನರಾಜ್ ಮತ್ತು ಕವಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಮೂಲಕ ಧನರಾಜ್ ತಂದೆಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಶಾಲಿನಿ ಅವರ ಸೀಮಂತ ಸಮಾಜಿಕ ಸೀಮಂತ ಫೋಟೋಗಳನ್ನು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ...

ಸೀಮತ ಸಂಭ್ರಮದಲ್ಲಿ ಶಾಲಿನಿ
ಸೀಮಂತ ಕಾರ್ಯದಲ್ಲಿ ಕಾರ್ಯದಲ್ಲಿ ಕುಟುಂಬದವರ ಜೊತೆಗೆ ಕವಿತಾ ಗೌಡ ಮತ್ತು ಅವರ ಸಹೋದರಿ ಹಾಗೂ ಧನರಾಜ್ ಸ್ನೇಹಿತರು ಭಾಗಿಯಾಗಿದ್ದಾರೆ ಶುಭಹಾರೈಸಿದ್ದಾರೆ. ಧನರಾಜ್ ಪತ್ನಿ ತುಂಬು ಗರ್ಭಿಣಿ ಶಾಲಿನಿ ಕೆಂಪು ಬಣ್ಣದ ಜರಿ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಈ ಸಂಭ್ರಮದ ಫೋಟೋಗಳನ್ನು ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶುಭಹಾರೈಸುತ್ತಿದ್ದಾರೆ.

ಧನರಾಜ್-ಶಾಲಿನಿ ಅವರದ್ದು ಲವ್ ಮ್ಯಾರೇಜ್
ಧನರಾಜ್ ಮತ್ತು ಶಾಲಿನಿ ಅವರದ್ದು ಲವ್ ಮ್ಯಾರೇಜ್. ಪರಸ್ಪರ ಪ್ರೀತಿಸಿ ಮದುವೆಯಾದವರು. ಬಿಗ್ ಬಾಸ್ ಸೀಸನ್ 6ಗೆ ಎಂಟ್ರಿ ಕೊಟ್ಟ ನಂತರ ಧನರಾಜ್ ಖ್ಯಾತಿಗಳಿಸಿದ್ದಾರೆ. ಬಿಗ್ ಮನೆಗೆ ಧನರಾಜ್ ತನ್ನ ಪ್ರೀತಿಯ ವಿಚಾರವನ್ನು ಆಗಾಗ ಹೇಳಿಕೊಳ್ಳುತ್ತಿದ್ದರು. ಪತ್ನಿ ಶಾಲಿನಿ ಕೂಡ ಬಿಗ್ ಮನೆಯಲ್ಲಿ ಕಾಣಿಸಿಕೊಂಡಿದ್ದರು.

ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಮನೆಗೆ ಎಂಟ್ರಿ
ಧನರಾಜ್ ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಮನೆಯಲ್ಲಿ ಧನರಾಜ್ ಸಹ ಸ್ಪರ್ಧಿಗಳ ಮನಗೆದ್ದಿರುವುದಲ್ಲದೆ, ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಕವಿತಾ ಗೌಡ, ಶಶಿ ಮತ್ತು ಧನರಾಜ್ ಮೂವರು ಉತ್ತಮ ಸ್ನೇಹಿತರಾಗಿದ್ದರು.

ಧನರಾಜ್ ಸಿನಿಮಾಗಳು
ಧನರಾಜ್ ಸದ್ಯ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಧನರಾಜ್ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಆನಂತರ ವಿಜಯ್ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











