»   » ಬಿಗ್ ಬಾಸ್ ಮನೆಯಲ್ಲಿ ರೊಮ್ಯಾಂಟಿಕ್ ಜೋಡಿ ಪ್ರತ್ಯಕ್ಷ

ಬಿಗ್ ಬಾಸ್ ಮನೆಯಲ್ಲಿ ರೊಮ್ಯಾಂಟಿಕ್ ಜೋಡಿ ಪ್ರತ್ಯಕ್ಷ

Posted By:
Subscribe to Filmibeat Kannada
<ul id="pagination-digg"><li class="next"><a href="/tv/shweta-pandit-tilak-romantic-pair-bigg-boss-kannada-075232.html">Next »</a></li></ul>

ಕಳೆದ ಹದಿಮೂರು ವಾರಗಳ ಅವಿಸ್ಮರಣೀಯ ಘಟನೆಗಳನ್ನು ಈ ಬಾರಿ 'ಬಿಗ್ ಬಾಸ್' ಮನೆಯ ನಾಲ್ಕು ಸದಸ್ಯರಿಗೆ ನೆನಪಿಸಿದರು. ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಅರುಣ್ ಸಾಗರ್, ವಿಜಯ್ ರಾಘವೇಂದ್ರ, ನಿಕಿತಾ ಹಾಗೂ ನರೇಂದ್ರ ಬಾಬು ಶರ್ಮಾ ಇವರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಬಗ್ಗೆ ತೀವ್ರ ಕುತೂಹಲ ನೆಲೆಸಿದೆ.

ತೊಂಬತ್ತ ಮೂರನೇ ದಿನದ ಹೈಲೈಟ್ಸ್ ಇಲ್ಲಿವೆ. ಶ್ವೇತಾ ಪಂಡಿತ್ ಹಾಗೂ ತಿಲಕ್ ಜೋಡಿ ಮತ್ತೆ ಮನೆಗೆ ಆಗಮಿಸಿ ಉಳಿದ ಸದಸ್ಯರಲ್ಲಿ ಮಿಂಚಿನ ಸಂಚಾರ ಉಂಟು ಮಾಡಿದರು. ಇವರಿಬ್ಬರನ್ನು ಮನೆಯ ಸದಸ್ಯರು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಅರುಣ್ ಅವರಂತೂ ಶ್ವೇತಾರನ್ನು ಅಪ್ಪಿ ಮುದ್ದಾಡಿ ಬರಮಾಡಿಕೊಂಡರು.

Bigg Boss day 93rd highlights

ಬಳಿಕ ತಿಲಕ್ ಅವರನ್ನೂ ಎಲ್ಲರೂ ಸ್ವಾಗತಿಸಿದರು. ಟಚಿಂಗ್ ಸ್ಟಾರ್ ತಿಲಕ್ ಅವರನ್ನು ಕಂಡು ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರ ಕಣ್ಣಲ್ಲಿ ನೀರು ಬಂತು. ನಾನು ಕನ್ನಡ ಕಲಿಯುತ್ತಿದ್ದೀನಿ, ಧನ್ಯವಾದಗಳು ಎಂದು ಬರೆದಿದ್ದನ್ನು ತಿಲಕ್ ಅವರಿಗೆ ನಿಕಿತಾ ತೋರಿಸಿದರು.

ಅರುಣ್ ಅವರಂತೂ ಶ್ವೇತಾ ಅವರನ್ನು ಎತ್ತಿಕೊಂಡು ಐ ಲವ್ ಯೂ ಸೋ ಮಚ್ ಎಂದು ಕುಣಿದಾಡಿದರು. ತುಂಬಾ ತೆಳ್ಳಗಾಗಿದ್ದೀರಿ ಯಾಕೆ ಎಂದು ಅರುಣ್ ಅವರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರುಣ್ ನಿನ್ನನ್ನು ಎತ್ತುವಷ್ಟರ ಮಟ್ಟಿಗೆ ಶಕ್ತಿ ಇದೆ ಎಂದರು. ಒಟ್ಟಾರೆಯಾಗಿ ಮನೆಯಲ್ಲಿ ಮತ್ತೆ ಸಂಭ್ರಮದ ವಾತಾವರಣ ನೆಲೆಸಿತು.

ಬಳಿಕ ಬ್ರಹ್ಮಾಂಡ ಶರ್ಮಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ಶ್ವೇತಾ ಪಂಡಿತ್, ನಿಮ್ಮನ್ನು ಜನ ತುಂಬಾ ತುಂಬಾ ಪ್ರೀತಿಸುತ್ತಿದಾರೆ ಎಂದು ವರದಿ ಕೊಟ್ಟರು. ಇದರಿಂದ ನರೇಂದ್ರ ಬಾಬು ಶರ್ಮಾ ಅವರ ಮುಖ ಊರಗಳ ಅರಳಿತು.

<ul id="pagination-digg"><li class="next"><a href="/tv/shweta-pandit-tilak-romantic-pair-bigg-boss-kannada-075232.html">Next »</a></li></ul>
English summary
Bigg Boss Kannada shows romantic pair actor Shweta Pandit and Tilak re-enters the house on day 93rd. Both are spent a day in house and make it memorable. Both Shares time with inmates and experience life together.
Please Wait while comments are loading...