BBK9: ನಾಮಿನೇಷನ್‌ನಿಂದ ರಾಕೇಶ್ ಅಂಡ್ ಅಮೂಲ್ಯ ಈ ವಾರ ಪಾರಾಗಿದ್ದೇಗೆ?
ಈ ವಾರ ಮನೆಯಲ್ಲಿ ಉಳಿದಿರುವುದು ಕೇವಲ 9 ಮಂದಿ ಮಾತ್ರ. ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಮುಂದಿನ ಬಾರಿಯಿಂದ ಎಲ್ಲವೂ ಡಬಲ್ ಎಂಬ ಸೂಚನೆಯನ್ನು ಬೇರೆ ನೀಡಿದ್ದಾರೆ. ಅಂದ್ರೆ ನಾಮಿನೇಷನ್ ಕೂಡ ಡಬಲ್ ಆಗಬಹುದು. ಇನ್ನುಳಿದಿರುವುದು ಮೂರೇ ವಾರಗಳಾದ ಕಾರಣ ಟಫ್ ಕಾಂಪಿಟೇಷನ್ ಶುರುವಾಗಲಿದೆ. ಹೀಗಾಗಿ ಎಲ್ಲರಿಗೂ ಟಾಸ್ಕ್ ನಲ್ಲಿ ಕೂಡ ಕಾಂಪಿಟೇಷನ್ ಕೊಡಬೇಕಾದ ಅವಶ್ಯಕತೆ ಇದೆ.
ಇಂದು ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಮನೆ ಮಂದಿ ಕೂಡ ಕಾರಣವನ್ನು ಇಟ್ಟುಕೊಂಡು, ಆ ಕಾರಣದ ಮೂಲಕ ಮನೆಯವರಲ್ಲಿ ಯಾರು ಈ ವಾರ ಮನೆಯಿಂದ ಹೋಗಬೇಕು ಅಂತ ಯೋಚನೆ ಮಾಡಿ, ನಾಮಿನೇಷನ್ ಮಾಡಿದ್ದಾರೆ. ಆದರೆ ಈ ವಾರ ಲಕ್ ಎಂಬಂತೆ ಅಮೂಲ್ಯ ಹಾಗೂ ರಾಕೇಶ್ ನಾಮಿನೇಷನ್ ನಿಂದ ಪಾರಾಗಿದ್ದಾರೆ.

ಹೆಚ್ಚು ನಾಮಿನೇಷನ್ ಆಗಿದ್ದು ರಾಜಣ್ಣ
ಕ್ಯಾಪ್ಟನ್ ಆಗಿದ್ದಾಗ ರಾಜಣ್ಣ ಇದ್ದ ರೀತಿಯೇ ಬೇರೆ, ಈಗ ನಡೆದುಕೊಳ್ಳುತ್ತಿರುವ ರೀತಿಯೇ ಬೇರೆ. ಹೀಗಾಗಿ ಇವತ್ತಿನ ನಾಮಿನೇಷನ್ ವಿಚಾರ ಬಂದಾಗ ಹೆಚ್ಚು ರಾಜಣ್ಣ ಅವರನ್ನೇ ನಾಮಿನೇಷನ್ ಮಾಡಲಾಗಿದೆ. ದೀಪಿಕಾ, ರಾಕೇಶ್, ಅನುಪಮಾ, ದಿವ್ಯಾ, ಅರುಣ್ ಸಾಗರ್ ರಾಜಣ್ಣ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಒಟ್ಟಾಗಿ ಈ ವಾರದಲ್ಲಿ ಮನೆಯಲ್ಲಿ ರೂಪೇಶ್ ರಾಜಣ್ಣ, ದಿವ್ಯಾ, ಆರ್ಯವರ್ದನ್, ಅನುಪಮಾ ಹಾಗೂ ದೀಪಿಕಾ ದಾಸ್ ನಾಮಿನೇಷನ್ ಆಗಿದ್ದರು. ಬಳಿಕ ಕ್ಯಾಪ್ಟನ್ ಆಗಿದ್ದ ರೂಪೇಶ್ ಶೆಟ್ಟಿ, ಅರುಣ್ ಸಾಗರ್ ನೇರ ನಾಮಿನೇಟ್ ಮಾಡಿದ್ದಾರೆ.

ರಾಜಣ್ಣನ ನಡವಳಿಕೆಗೆ ಮನೆ ಮಂದಿ ಬೇಸರ..!
ಇನ್ನು ಈ ವಾರ ರೂಪೇಶ್ ರಾಜಣ್ಣರನ್ನು ನಾಮಿನೇಷನ್ ಮಾಡಿದ ಮನೆ ಮಂದಿ ಒಬ್ಬೊಬ್ಬರು ಒಂದೊಂದು ಕಾರಣ ನೀಡಿದ್ದಾರೆ. ಅದರಲ್ಲಿ ಮೊದಲಿಗೆ ದೀಪಿಕಾ ಅವರು ಬಂದಿದ್ದು ರೂಪೇಶ್ ರಾಜಣ್ಣ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಒಂದೊಂದು ಸಲ ಅರ್ಥವಾಗುತ್ತಿದ್ದಾರೆ ಎನ್ನುವಷ್ಟರಲ್ಲಿ ತುಂಬಾ ಎಕ್ಸ್‌ಟ್ರೀಮ್ ಆಗುತ್ತಾರೆ. ಬೇಕು ಬೇಕು ಅಂತ ಮಾಡುತ್ತಿರುವುದು ಅಸಮಾಧಾನಕ್ಕೆ ಕಾರಣವಾಗುತ್ತಿದೆ ಎಂದು ಕಾರಣ ನೀಡಿದ್ದಾರೆ. ಇನ್ನು ರಾಕೇಶ್ ಕೂಡ ರಾಜಣ್ಣ ಅವರ ಹೆಸರನ್ನು ತೆಗೆದುಕೊಂಡಿದ್ದು, ಅವರು ಲವಲವಿಕೆಯಿಂದಾನೇ ಇರಬಹುದು, ಆದರೂ ಸಾಕಷ್ಟು ಗೊಂದಲಗಳು ಕ್ರಿಯೇಟ್ ಆಗುತ್ತಿವೆ ಎಂದಿದ್ದಾರೆ.

ಅನುಪಮಾ, ದಿವ್ಯಾ ಹೇಳಿದ್ದೇನು..?
ಇನ್ನು ಅನುಪಮಾ ಕೂಡ ರಾಜಣ್ಣ ಅವರ ಹೆಸರನ್ನೇ ತೆಗೆದುಕೊಂಡಿದ್ದು, ಕ್ಯಾಪ್ಟನ್ ಆಗಿದ್ದಾಗ ಇದ್ದಂತ ಎಷ್ಟೋ ಜವಾಬ್ದಾರಿಗಳು ಅವರು ಕಂಟೆಸ್ಟೆಂಟ್ ಆಗಿದ್ದಾಗ ನಾನು ಕಂಡಿಲ್ಲ. ಕ್ಯಾಪ್ಟನ್ ಆದಾಗ ಏನು ಯೋಚನೆ ಮಾಡುತ್ತಿದ್ದರೋ ಅದೇ ರೀತಿಯಾದ ಯೋಚನೆಯನ್ನು ಮಾಡುತ್ತಿದ್ದಾರೆ. ಅದು ನನಗೆ ಇಷ್ಟ ಆಗಲಿಲ್ಲ ಎಂದಿದ್ದಾರೆ. ಇನ್ನು ದಿವ್ಯಾ ಕೂಡ ರಾಜಣ್ಣ ಅವರ ಹೆಸರನ್ನು ತೆಗೆದುಕೊಂಡಿದ್ದು, ಟಾಸ್ಕ್ ನ ನೀಟಾಗಿ ಅರ್ಥ ಮಾಡಿಕೊಂಡು ಬೇರೆಯವರಿಗೆ ಹೇಳಬೇಕಿತ್ತು. ಇನ್ನು ಟೋನ್ ವಿಚಾರಕ್ಕೆ, ಅವರು ನಡೆದುಕೊಳ್ಳುತ್ತಿರುವ ನಡವಳಿಕೆ ಮನೆ ಸದಸ್ಯರಿಗೆಬೇಡವಾಗಿತ್ತು ಎಂದಿದ್ದಾರೆ. ಅರುಣ್ ಸಾಗರ್ ಕೂಡ ರಾಜಣ್ಣ ಅವರ ಹೆಸರನ್ನು ತೆಗೆದುಕೊಂಡಿದ್ದು, ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಅವರು ಮಾತನಾಡಿದ ರೀತಿ ಸರಿಯಿರಲಿಲ್ಲ ಎಂದಿದ್ದಾರೆ.

ಮನೆ ಮಂದಿಯ ಟಾರ್ಗೆಟ್ ಯಾರು..?
ರಾಜಣ್ಣ ಆದಮೇಲೆ ನೆಕ್ಸ್ಟ್ ಟಾರ್ಗೆಟ್ ಆಗಿದ್ದು, ದಿವ್ಯಾ ಉರುಡುಗ. ಕಳೆದ ಕೆಲವು ವಾರಗಳಿಂದಾನೂ ದಿವ್ಯಾ ಉರುಡುಗ ಪ್ರತಿವಾರ ನಾಮಿನೇಟಾಗಿದ್ದಾರೆ. ಎಂಡ್ ಮೂಮೆಂಟ್ ನಲ್ಲಿ ಕುಳಿತುಕೊಂಡು ಹೇಗೆ ಬಚಾವ್ ಆಗಿ ಬರುತ್ತಾರೆ. ಈ ವಾರವೂ ದಿವ್ಯಾ ಅವರನ್ನು ಮೂರು ಜನ ನಾಮಿನೇಟ್ ಮಾಡಿದ್ದಾರೆ. ಆರ್ಯವರ್ದನ್, ರಾಜಣ್ಣ, ಅರುಣ್ ಸಾಗರ್ ಅವರು ದಿವ್ಯಾ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.


Click it and Unblock the Notifications











