BBK9: ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್ & ದೀಪಿಕಾ ದಾಸ್ ರೊಮ್ಯಾಂಟಿಕ್ ಡ್ರಾಮಾ!

ಬಿಗ್ ಬಾಸ್ ಮನೆಯಲ್ಲಿ ಮನರಂಜನೆಗಾಗಿ ಏನಾದರೊಂದು ಮಾಡಬೇಕು. ಇಲ್ಲವಾದರೆ ಅಲ್ಲಿ ಇರುವವರಿಗೆ ಬೇಸರವಾಗುತ್ತದೆ. ಹೀಗಾಗಿ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ಏನೋ ಒಂದು ಕಿತಾಪತಿ ಮಾಡುತ್ತಾ ಎಂಜಾಯ್ ಮಾಡುತ್ತಾರೆ. ಅದರಲ್ಲಿ ಅರುಣ್ ಸಾಗರ್ ಅವರು ನಿಸ್ಸೀಮರು.
ಅರುಣ್ ಸಾಗರ್ ಯಾವುದೋ ಒಂದು ಗೊಂಬೆಗಳನ್ನು ಬಳಸಿಕೊಂಡು ಒಂದಷ್ಟು ಮನರಂಜನೆ ನೀಡುತ್ತಾ ಇರುತ್ತಾರೆ. ಈಗ ಅರುಣ್ ಸಾಗರ್ ಜೊತೆಗೆ ದೀಪಿಕಾ ದಾಸ್ ಕೂಡ ಸೇರ್ಪಡೆಯಾಗಿದ್ದಾರೆ. ಮನರಂಜನೆಗಾಗಿ ಮಾಡಿದ್ದಾದರೂ, ಅದು ಅಳಿದು ಉಳಿದು ಹೋದ ಆಸೆಯನ್ನು ದೀಪಿಕಾ ದಾಸ್ ತೀರಿಸಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್ ಮನೆ ಎಲ್ಲಿದೆ ಗೊತ್ತಾ..?
ದೀಪಿಕಾ ದಾಸ್ ಇವತ್ತು ತುಂಬಾನೇ ಖುಷಿಯಾಗಿದ್ದಾರೆ. ಕಾರಣ ಅವರಿಷ್ಟದ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ. ಅವರಿಷ್ಟದ ಕೆಲಸವನ್ನು ಮಾಡಲು ರೆಡಿಯಾಗಿದ್ದಾರೆ. "ಇಟ್ಸ್ ಎ ಬಿಗ್ ಡೇ ನಂಗೆ" ಅಂತ ಹೇಳಿ ಅರುಣ್ ಸಾಗರ್ ಅವರ ಮನೆಯ ಡೋರ್ ನಾಕ್ ಮಾಡಿದ್ದಾರೆ. ಬಳಿಕ ಅರುಣ್ ಸಾಗರ್ ಬಂದು ಡೋರ್ ತೆಗೆಯುತ್ತಾರೆ. ದೀಪಿಕಾರವರನ್ನು ಕಂಡು ಖುಷಿ ಪಡುತ್ತಾರೆ. ಮನೆಯ ಒಳಗೆ ಕರೆದು ಬಿಸ್ಕೇಟ್ ನೀಡಿ, ಸತ್ಕಾರ ಮಾಡಿದ್ದಾರೆ. ಏನು ನೀವಿಲ್ಲ ಎಂದಾಗ, "ಈ ಕಡೆ ಪಾಸ್ ಆಗುತ್ತಾ ಇದ್ದೆ ನಿಮ್ಮನ್ನ ನೋಡ್ಬೇಕು ಅನ್ನಿಸ್ತು ಅದಕ್ಕೆ ಬಂದೆ" ಅಂತ ದೀಪಿಕಾ ಹೇಳುತ್ತಾರೆ.

ದೀಪಿಕಾ ಪ್ರಪೋಸ್ ಗೆ ಅರುಣ್ ಸಾಗರ್ ಖುಷಿ
ಅರುಣ್ ಸಾಗರ್ ಅವರು ಎಂದರೆ ದೀಪಿಕಾಗೆ ಮೊದಲಿನಿಂದಾನೂ ಇಷ್ಟ. ಅದನ್ನು ಸಾಕಷ್ಟು ಸಲ ದೀಪಿಕಾ ದಾಸ್ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಅದನ್ನು ಇವತ್ತು ಕೂಡ ಹೇಳಿಕೊಂಡಿದ್ದಾರೆ. ಹೂ ಹಿಡಿದು ಬಂದಿದ್ದ ದೀಪಿಕಾ, ಅರುಣ್ ಸಾಗರ್ ಮುಂದೆ ಕೂತು ನಾಚಿ ನೀರಾಗಿದ್ದಾರೆ. "ನಂಗೆ ಭಯ ಭಯ ಆಗುತ್ತಾ ಇದೆ. ಇವತ್ತು ನಾನು ನಿಮಗೆ ಏನೋ ಹೇಳಬೇಕು ಅನ್ನಿಸ್ತಾ ಇದೆ. ಈ ಕಾಫಿ ಅಂದ್ರೆ ತುಂಬಾ ಇಷ್ಟ. ಈ ಮನೆ ಅಂದ್ರೆ ಇಷ್ಟ, ನೀವು ಅಂದ್ರೆ ನಂಗೆ ತುಂಬಾ ಇಷ್ಟ. ಅಂಡ್ ಐ ಲವ್ ಯೂ. ಪ್ಲೀಸ್ ತಗೊಳ್ಳಲೇಬೇಕು. ಇಲ್ಲ ನಂಗೆ ಹಾರ್ಟ್ ಬೀಟ್ ನಿಂತುಹೋಗುತ್ತೆ" ಅಂತ ಪ್ರಪೋಸ್ ಮಾಡಿದ್ದಾರೆ.

ಅರುಣ್ ಸಾಗರ್ ಹೇಳಿದ್ದೇನು..?
ಅರುಣ್ ಸಾಗರ್, ದೀಪಿಕಾ ಅವರು ಹೇಳಿದ್ದೆಲ್ಲವನ್ನು ಖುಷಿಯಲ್ಲಿ ಕೇಳುತ್ತಾ ಇದ್ದರು. ಹೂ ಕೊಟ್ಟು ಪ್ರಪೋಸ್ ಮಾಡಿದ್ದೆ ತಡ, ರೊಮ್ಯಾಂಟಿಕ್ ಲುಕ್ ಕೊಟ್ಟ ಅರುಣ್ ಸಾಗರ್, "ನಾನು ಈ ಹೂ ತೆಗೆದುಕೊಳ್ಳಬೇಕಾ, ಇಲ್ಲ ನಿಮ್ಮ ಪ್ರೀತಿಯನ್ನು ತೆಗೆದುಕೊಳ್ಳಬೇಕಾ" ಎಂದು ಕೇಳಿದ್ದಾರೆ. ಆಗ ದೀಪಿಕಾ ಪಟ್ ಅಂತ ನಕ್ಕಿದ್ದು ಮಾಡಿದ ಡ್ರಾಮಾವೆಲ್ಲಾ ಫೇಲ್ ಆಗಿದೆ. ಆದ್ರೆ ಆ ಮೂಮೆಂಟ್ ನಲ್ಲಿ ನಿಜವಾದ ರೊಮ್ಯಾಂಟಿಕ್ ಪದಗಳು ಹೊರಗೆ ಬರುತ್ತಾ ಇತ್ತು.

ಪಪ್ಪಾಜಿಗೆ ಯಾರ ಮೇಲೆ ಲವ್ವಿದೆ..?
ಇನ್ನು ಅರುಣ್ ಸಾಗರ್ ಬಳಿ ಇರುವ ಪಪ್ಪಾಜಿ ಗೊಂಬೆ ಅನುಪಮಾ ಅವರ ಕೈ ಸೇರಿದೆ. ಅಲ್ಲಿಗೆ ದೀಪಿಕಾ ದಾಸ್ ಹಾಗೂ ಅರುಣ್ ಸಾಗರ್ ಬಂದಿದ್ದಾರೆ. ಅರುಣ್ ಸಾಗರ್ ಮಗನನ್ನು ದೀಪಿಕಾ ಹಾಗೂ ಅನುಪಮಾ ಸೇರಿ ರೇಗಿಸುತ್ತಿದ್ದಾರೆ. "ಜಾಜಿ ಜೊತೆ ಮಾತನಾಡಿದ್ದನ್ನು ನಾನು ನೋಡಿದೆ. ಜಾಜಿ ಬಂದ ಕೂಡಲೇ ನೀನು ಪ್ರಪೋಸ್ ಮಾಡಿ ಬಿಡು ಅಂತ ದೀಪಿಕಾ ದಾಸ್ ಹೇಳಿದ್ದಾರೆ.


Click it and Unblock the Notifications











