Don't Miss!
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9:ಬಿಗ್ ಬಾಸ್ ಮನೆಗೆ ಬಂದ ಮಂಜುಗೆ ಧಿಕ್ಕಾರ ಕೂಗಿದ ಮನೆ ಮಂದಿ..!
ಬಿಗ್ ಬಾಸ್ ಜರ್ನಿ ಇರುವುದು ಕೇವಲ ಇನ್ನು ಎರಡು ವಾರ ಮಾತ್ರ. ಮುಗಿದರೆ ಎಲ್ಲರೂ ಫೈನಲ್‌ನಲ್ಲಿ ಇರುತ್ತಾರೆ. ಯಾರಾದರೂ ಒಬ್ಬರು ಟ್ರೋಫಿ ತೆಗೆದುಕೊಂಡು ಹೋಗುತ್ತಾ ಇರುತ್ತಾರೆ. ಬಿಗ್ ಬಾಸ್ ಮುಗಿದ ಮೇಲೆ ಅದರ ಫಿಲಿಂಗ್ಸ್ ನಲ್ಲಿ ಒಂದಷ್ಟು ದಿನ ತೇಲಾಡುತ್ತಾ ಉಳಿದವರು ಮುಂದಿನ ಕೆಲಸಗಳನ್ನು ನೋಡುತ್ತಾರೆ.
ಆದರೆ ಈಗಾಗಲೇ 88 ದಿನದತ್ತ ಬಂದಿರುವ ಬಿಗ್ ಬಾಸ್ ಮನೆ ಮಂದಿಗೆ ಈಗ ಒಂದಷ್ಟು ಎಕ್ಸ್ಟ್ರಾ ಬೂಸ್ಟ್ ಬೇಕಾಗಿದೆ. ಆ ಬೂಸ್ಟ್ ನೀಡುವುದಕ್ಕೆ ಬಿಗ್ ಬಾಸ್ ಆಗಾಗ ಪ್ಲ್ಯಾನ್ ಮಾಡುತ್ತಲೇ ಇರುತ್ತದೆ. ಈ ಬಾರಿ ಮಂಜು ಪಾವಗಡ ಎಂಬ ಬೂಸ್ಟ್ ನೀಡಿದ್ದರೂ ಮನೆ ಮಂದಿ ಸೇರಿಕೊಂಡು ಧಿಕ್ಕಾರ ಕೂಗಿದ್ದಾರೆ.
BBK9
:
ಬಿಗ್
ಬಾಸ್‌ನಲ್ಲಿ
ಹಳೆ
ಫರೆಂಡ್
ಕಂಡು
ಫುಲ್
ಖುಷಿಯಾದ
ದಿವ್ಯಾ
ಉರುಡುಗ!

ಒಂದು ಹಾಡನ್ನು ಹೇಳಿಸಿದ ಮಂಜು
ಮನೆಗೆ ಬರುವುದಕ್ಕೂ ಮುನ್ನ ಎಲ್ಲರ ಬಗ್ಗೆಯೂ ಮಂಜು ಚೆನ್ನಾಗಿಯೇ ತಿಳಿದುಕೊಂಡು ಬಂದಿದ್ದರು. ಹೀಗಾಗಿ ಅವರಿಗೆ ಮನೆಗೆ ಬಂದ ಕೂಡಲೇ ಯಾವುದು ಕಷ್ಟವಾಗಲಿಲ್ಲ. ಅದರಲ್ಲೂ ರಾಜಣ್ಣನನ್ನು ಕಂಡು ಅವರ ಹಾಡನ್ನು ನೆನೆಪಿಸಿಕೊಂಡಿದ್ದಾರೆ. "ರಾಜಣ್ಣ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿ ಇದೆ. ಅವತ್ತು ಹಾಡು ಕೇಳಿದಾಗ ತುಂಬಾ ಖುಷಿ ಅನ್ನಿಸಿತ್ತು. ಒಂದು ಹಾಡು ಹೇಳಿ" ಎಂದಾಗ ರಾಜಣ್ಣ ಕೂಡ ಗೀತಾ ಸಿನಿಮಾದ "ಪ್ರೀತಿ ಎಂದರೇನು ಈಗ ಅರಿತೇನು..." ಎಂಬ ಹಾಡನ್ನು ಹಾಡಿದ್ದಾರೆ. ಜೊತೆಗೆ "ಮಂಜಣ್ಣ ಬಿಗ್ ಬಾಸ್‌ಗೆ ಬರುತ್ತಾರೆ ಎಂದರೆ ನಮಗೆ ಖುಷಿಯಾಗದೆ ಇರುವುದಿಲ್ಲ. ನೀವೂ ಇದ್ದಷ್ಟು ದಿನ ನಾವೂ ಖುಷಿಯಾಗಿರುತ್ತೇವೆ. ಒಳ್ಳೆಯದಾಗಲಿ ಮಂಜಣ್ಣ" ಎಂದು ಶಂಕರ್ ನಾಗ್ ಸ್ಟೈಲ್‌ನಲ್ಲಿ ಡೈಲಾಗ್ ಹೊಡೆದಿದ್ದಾರೆ.
BBK9
:
ಅಪ್ಪ
-
ಮಗನ
ಬಾಂಧವ್ಯಕ್ಕೊಂದು
ಟಾಸ್ಕ್
:
ಗುರೂಜಿ
ಕಣ್ಣಲ್ಲಿ
ಬಂತುನೀರು!

ರಾಜಣ್ಣನದ್ದೇ ಲಕ್ ಗುರು
ಕೆಲವೊಬ್ಬರಿಗೆ ಲಕ್ ಎಂಬುದು ಎಲ್ಲಾ ಕಡೆಯಲ್ಲೂ ಇರುತ್ತದೆ. ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತೆ ಅಂತಾರಲ್ಲ ಹಾಗೇ. ಇಲ್ಲಿ ರಾಜಣ್ಣನದ್ದು ಅದೇ ರೀತಿಯಾದಂತಹ ಲಕ್. ಹಾಡಿದ್ದು ಮಂಜಣ್ಣನೇ ಆದರೂ ಗೆದ್ದಿದ್ದು ಮಾತ್ರ ರಾಜಣ್ಣ. ಯಾವುದೇ ಕಾಯಿ ಹಾಕಿದರೂ ರಾಜಣ್ಣ ಸೋಲಲೇ ಇಲ್ಲ. ಇದು ಮನೆಯವರಿಗೆ ಶಾಕಿಂಗ್ ಆಗಿತ್ತು. ಆದರೂ ಕಡೆಗೆ ಗೆದ್ದಿದ್ದು ಮಾತ್ರ ರಾಜಣ್ಣ.

ರಾಜಣ್ಣನ ಗೆಲುವಿಗೆ ಮನೆ ಮಂದಿ ಶಾಕ್
ಹಾವು ಏಣಿ ಆಟದಲ್ಲಿ ರಾಜಣ್ಣ ಆಟವಾಡುತ್ತಿದ್ದರೆ ಆ ಕಡೆ ಮಂಜಣ್ಣ ಕಾಯಿ ನಡೆಸುತ್ತಾ ಇದ್ದರು. ಈ ಕಡೆ ಮನೆ ಮಂದಿ ರಾಜಣ್ಣ ಒಂದು ಸಲವೂ ವಾಪಾಸ್ ಆಗದೆ, ಸೋಲದೆ ಮುನ್ನಡೆಯುತ್ತಿದ್ದನ್ನು ಗಮನಿಸಿ ಶಾಕ್ ಆಗಿದ್ದರು. ರಾಜಣ್ಣನ ಅದೃಷ್ಟ ಹೇಗಿತ್ತು ಎಂದರೆ ಮಂಜು ಹಾಕಿದ ಪ್ರತಿಯೊಂದು ಕಾಯಿ ಕೂಡ ಗೆಲುವಿಗೆ ಹತ್ತಿರ ತಂದಿತ್ತು. ಫಸ್ಟ್ ವಿನ್ ಆಗಿದ್ದು ರಾಜಣ್ಣ ಅನ್ನೋದು ವಿಶೇಷ.

ಮಂಜುಗೆ ಧಿಕ್ಕಾರ ಕೂಗಿದ ಮನೆಯವರು
ಅತ್ತ ಮಂಜು ಹಾಕುತ್ತಿದ್ದ ಒಂದೊಂದು ಕಾಯಿಯಿಂದ ರಾಜಣ್ಣ ಮುಂದೆ ಹೋಗುತ್ತಾ ಇದ್ದರು. ಅದನ್ನು ಕಂಡು ಮನೆಯವರು ಹೌಹಾರುತ್ತಿದ್ದರು. "ಮಂಜ ಈ ನಂಬರ್ ಹಾಕಬೇಡ, ಆ ನಂಬರ್ ಹಾಕಬೇಡ" ಅಂತ ದಿವ್ಯಾ ಕಿರುಚುತ್ತಾ ಇದ್ದರು. ಆದರೂ ರಾಜಣ್ಣ ಫಸ್ಟ್ 100 ಪರ್ಸೆಂಟ್‌ಗೆ ತಲುಪಿ ಗೆದ್ದು ಹೊರಗೆ ಬಂದರು. ಗೆದ್ದ ಖುಷಿ ರಾಜಣ್ಣ ಮತ್ತು ಮಂಜಣ್ಣ ಇಬ್ಬರಲ್ಲೂ ಇತ್ತು. ಆದರೆ ಮನೆಯವರೆಲ್ಲಾ ಮಂಜನಿಗೆ ಧಿಕ್ಕಾರ, ಧಿಕ್ಕಾರ ಅಂತ ಕೂಗುತ್ತಾ ಇದ್ದರು.